ನಗರಸಭೆ ಅಧ್ಯಕ್ಷೆ, ಉಪಾಧ್ಯಕ್ಷರಿಂದ ಅಧಿಕಾರ ಸ್ವೀಕಾರ
Team Udayavani, Dec 3, 2020, 7:34 PM IST
ಕೋಲಾರ: ಕೋಲಾರ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಫಲಿತಾಂಶ ಘೋಷಣೆಗೆ ಮಂಗಳವಾರ ನ್ಯಾಯಾಲಯವು ಸಮ್ಮತಿ ನೀಡಿದ್ದರಿಂದಾಗಿ ಬುಧವಾರ ಶ್ವೇತಾ ಶಬರೀಶ್ ಅಧ್ಯಕ್ಷರಾಗಿ, ಎನ್.ಎಸ್.ಪ್ರವೀಣ್‌ಗೌಡ ಉಪಾಧ್ಯಕ್ಷರಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಚ್. ನಾಗೇಶ್, ಶಾಸಕ ಕೆ.ಶ್ರೀನಿವಾಸಗೌಡ ಸಮ್ಮುಖದಲ್ಲಿ ಅಧಿಕಾರ ಸ್ವೀಕರಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಮಾತನಾಡಿ, ರಾಜ್ಯದ 6 ನಗರಸಭೆಗಳದ್ದು ಇದೇರೀತಿಯ ಸಮಸ್ಯೆಯಿದ್ದು, ಮಂಗಳವಾರ ರಾತ್ರಿನ್ಯಾಯಾಲಯವು ತೀಪುì ನೀಡಿದ ಹಿನ್ನೆಲೆಯಲ್ಲಿಅಧ್ಯಕ್ಷ, ಉಪಾಧ್ಯಕ್ಷ ಅಧಿಕಾರ ಸ್ವೀಕಾರ ನೆರವೇರಿರುವುದಾಗಿ ತಿಳಿಸಿದರು.
ಜಿಲ್ಲೆಯ 3 ತಾಲೂಕುಗಳಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸಲಿರುವ ಯರಗೋಳ್ ಕಾಮಗಾರಿ ಸದ್ಯದಲ್ಲೇ ಪೂರ್ಣಗೊಳ್ಳಲಿದ್ದು, ಜನವರಿಯಲ್ಲಿ ಸಿಎಂ ಉದ್ಘಾಟಿಸಲಿದ್ದಾರೆ. ಕೋಲಾರ ನಗರದಲ್ಲಿ ಯೋಜನೆಗೆ ಸಂಬಂಧಿಸಿದಂತೆ ಇನ್ನೂ 3 ಓವರ್ ಹೆಡ್ ಟ್ಯಾಂಕ್‌ಗಳ ನಿರ್ಮಾಣವಾಗಬೇಕಾಗಿದೆ. ರಸ್ತೆಗಳ ಅಗಲೀಕರಣ, ಎಪಿಎಂಸಿ ಸೇರಿದಂತೆ ಸಮಗ್ರ ಅಭಿವೃದ್ಧಿಗೆ ಆಡಳಿತ ಮಂಡಳಿಯು ಅಗತ್ಯವಿದ್ದು, ತಾವೆಲ್ಲರೂ ಜತೆಗಿದ್ದು ಸಂಪೂರ್ಣ ಸಹಕಾರ ನೀಡುವ ಭರವಸೆ ನೀಡಿದರು.
ಸಿಎಂ ಬಳಿಗೆ ನಿಯೋಗ: ಕೋಲಾರವು ರಾಜಧಾನಿಗೆ 60 ಕಿಮೀ ದೂರದಲ್ಲಿದ್ದು, ಕೈಗಾರಿಕೆಗಳು ಹೆಚ್ಚಾಗಿವೆ. ಎಲ್ಲದಕ್ಕೂ ಮುಖ್ಯವಾಗಿ ರಿಂಗ್ ರಸ್ತೆ ಅವಶ್ಯವಾಗಿ ಬೇಕಾಗಿದೆ. ಶಾಸಕರು, ಎಂಎಲ್ ಸಿಗಳು, ನಗರಸಭೆ ಆಡಳಿತ ಮಂಡಳಿಯು ಸಿಎಂ ಬಳಿಗೆ ನಿಯೋಗ ತೆರಳಿ ಮನವಿ ಸಲ್ಲಿಸಲು ಶೀಘ್ರಕ್ರಮ ಕೈಗೊಳ್ಳುವುದಾಗಿ ಹೇಳಿದರು. ಜಿಲ್ಲೆಯಕೆರೆಗಳನ್ನು ಅಭಿವೃದ್ಧಿಪಡಿಸಿ ಪ್ರವಾಸಿ ತಾಣಗಳ ನ್ನಾಗಿಸಲು ಶ್ರಮಿಸುತ್ತಿರುವುದಾಗಿ ತಿಳಿಸಿದರು.
ದೂಳು ಮುಕ್ತ ನಗರ: ಶಾಸಕ ಕೆ.ಶ್ರೀನಿವಾಸಗೌಡ ಮಾತನಾಡಿ, ನೂತನ ಆಡಳಿತ ಮಂಡಳಿಯಿಂದಾಗಿ ಕೋಲಾರ ನಗರಕ್ಕೆ ಕಳೆ ಬಂದಿದೆ. ನಗರದಲ್ಲಿ ನಡೆಯುತ್ತಿರುವ ರಸ್ತೆಗಳ ಅಗಲೀಕರಣ, ಮತ್ತಿತರರ ಕಾಮಗಾರಿಗಳಿಗೆ ಎಲ್ಲರೂಸಹಕಾರ ನೀಡುವ ಮೂಲಕ ಸುಂದರ ಮತ್ತುದೂಳು ಮುಕ್ತ ನಗರವನ್ನಾಗಿಸಬೇಕು ಎಂದು ತಿಳಿಸಿದರು. ಕೆ.ಸಿ.ವ್ಯಾಲಿ ಯೋಜನೆಯಿಂದಾಗಿ ಈಗಾಗಲೇ ಬೋರ್‌ವೆಲ್‌ಗಳು ರೀಚಾರ್ಜ್ ಆಗುತ್ತಿವೆ. ರಾಜಕಾರಣ ಚುನಾವಣೆಗಳಿಗೆ ಮಾತ್ರಸೀಮಿತವಾಗಬೇಕು ಎಂದು ಹೇಳಿದರು.ನಗರಸಭೆ ಪೌರಾಯುಕ್ತ ಶ್ರೀಕಾಂತ್, ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.
ಎಲ್ಲ ಜನಪ್ರತಿನಿಧಿಗಳು, ಅಧಿಕಾರಿಗಳನ್ನು ವಿಶ್ವಾಸಕ್ಕೆ ಪಡೆದು ಜನತೆಗೆ ನೀರು, ರಸ್ತೆ ಸೇರಿದಂತೆ ಎಲ್ಲ ಸೌಕರ್ಯ ಕಲ್ಪಿಸಿ ಕೋಲಾರ ನಗರ ಅಭಿವೃದ್ಧಿಗೆ ಶ್ರಮಿಸುವೆ. –ಆರ್.ಶ್ವೇತಾ ಶಬರೀಶ್, ನಗರಸಭೆ ನೂತನ ಅಧ್ಯಕ್ಷ
ಚುನಾಯಿತರಾದ ವರ್ಷದಬಳಿಕ ಆಡಳಿತ ಮಂಡಳಿ ರಚನೆಯಾಗಿದೆ. ಎಲ್ಲರ ಸಹಕಾರ ಪಡೆದು ಪಕ್ಷಾತೀತವಾಗಿ ಕೋಲಾರ ನಗರದಲ್ಲಿ ಅಭಿವೃದ್ಧಿ ಕೆಲಸ ಮಾಡುತ್ತೇವೆ. – ಎನ್.ಎಸ್.ಪ್ರವೀಣ್‌ಗೌಡ, ನಗರಸಭೆ ನೂತನ ಉಪಾಧ್ಯಕ್ಷ
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಸ್ ನೊಳಗೆ ಯುವತಿಗೆ ಕಿರುಕುಳ: ಘಟನೆ ಬಗ್ಗೆ ಯುವತಿ ಹೇಳಿದ್ದೇನು?
ಬಸ್ ನಲ್ಲಿ ಕಿರುಕುಳ ಪೋಸ್ಟ್: ಆರೋಪಿಯ ಬಂಧನ, ಪೊಲೀಸರೆದುರೇ ಕಪಾಳ ಮೋಕ್ಷ ಮಾಡಿದ ಯುವತಿ
PLASTIC ನಿಂದ ತಯಾರಾದ ECHO BRICKS ನ ಉಪಯೋಗಗಳು ಹಾಗೂ ಪ್ರಯೋಜನಗಳು
Manipalದ Auto Rickshaw ಚಾಲಕನಿಂದ Battery ಚಾಲಿತ Yamaha R15 ನೂತನ ಆವಿಷ್ಕಾರ
ಸರ್ವಿಸ್ ಆನ್ ವೀಲ್ಸ್ : ಮನೆ ಬಾಗಿಲಿಗೆ ಸರಕಾರಿ ಸೇವೆ
ಹೊಸ ಸೇರ್ಪಡೆ
ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್: ಪಿ.ವಿ. ಸಿಂಧು, ಸಮೀರ್, ಕ್ವಾರ್ಟರ್ ಫೈನಲ್ ಪ್ರವೇಶ
ಶಿವಮೊಗ್ಗದಲ್ಲಿ ಭಾರಿ ಕಂಪನ: ಭದ್ರಾ ಜಲಾಶಯದ ಸ್ಥಿತಿಗತಿ ಪರಿಶೀಲಿಸಿದ ಪ್ರಾಧಿಕಾರದ ಅಧ್ಯಕ್ಷೆ
ಚೀನ ಗ್ರಾಮ ನಿರ್ಮಾಣದ ವಿರುದ್ಧ ಪ್ರತಿಭಟನೆ
ಕಲ್ಲು ಗಣಿಗಾರಿಕೆಯಲ್ಲಿ ಡೈನಾಮೈಟ್ ಸ್ಫೋಟ 7ಕ್ಕೂ ಹೆಚ್ಚು ಕಾರ್ಮಿಕರು ಬಲಿ
ಮಲೆನಾಡಿನಲ್ಲಿ ಭಾರೀ ಶಬ್ದ; ಕಂಗಾಲಾಗಿ ಹೊರ ಬಂದ ಜನ