Udayavni Special

ಕಾಯ್ದಿಟ ಅರಣ್ಯದಲ್ಲಿ ತ್ಯಾಜ್ಯ ವಿಲೇವಾರಿ ಘಟಕ

ಜಿಲ್ಲಾಧಿಕಾರಿಗಳಿಂದ ಜಮೀನು ಮಂಜೂರು , ಪ್ರಾದೇಶಿಕ ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ

Team Udayavani, Nov 3, 2020, 4:26 PM IST

ಕಾಯ್ದಿಟ ಅರಣ್ಯದಲ್ಲಿ ತ್ಯಾಜ್ಯ ವಿಲೇವಾರಿ ಘಟಕ

ಮುಳಬಾಗಿಲು: ಪ್ರಾದೇಶಿಕ ಅರಣ್ಯ ಇಲಾಖೆ ಒಡೆತನದಲ್ಲಿರುವ ಕಾಯ್ದಿಟ್ಟ ಅರಣ್ಯದಲ್ಲಿನ 5 ಎಕರೆ ಗೋಮಾಳ ಜಮೀನನ್ನು ಜಿಲ್ಲಾಧಿಕಾರಿಗಳು ಗ್ರಾಮ ಪಂಚಾಯತಿ ಒಂದರ ಘನ ಮತ್ತು ದ್ರವ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಮಂಜೂರು ಮಾಡಿದ್ದರನ್ವಯ ಘಟಕ ಸ್ಥಾಪನೆಗೊಂಡರೆ ವನ್ಯ ಜೀವಿಗಳಿಗೆ ತೊಂದರೆಯಾಗಲಿದ್ದರೂ ವಲಯಾರಣ್ಯಾಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ತಾಲೂಕಿನ ಪ್ರಾದೇಶಿಕ ಅರಣ್ಯ ಇಲಾಖೆ ವ್ಯಾಪ್ತಿಗೆ ಸೇರಿದ ಕಾಶೀಪುರ ಕಾಯ್ದಿಟ್ಟಅರಣ್ಯದಲ್ಲಿ 450 ಎಕರೆ ಜಮೀನಿದ್ದು, ಅದರ ಪೈಕಿ 73 ಹೆಕ್ಟೇರ್‌ ಜಮೀನನ್ನು ಕೆಎಸ್‌ಎಫ್ ಐಸಿಗೆ ಹಸ್ತಾಂತರ ಮಾಡಿದ್ದು ಅವರು ಸದರಿ ಜಮೀನಿನಲ್ಲಿ ನೀಲಗಿರಿ ಬೆಳೆಸಿರುತ್ತಾರೆ.

ವಿವಿಧ ಮರ, ಪ್ರಾಣಿ, ಪಕ್ಷಿ ಸಂಕುಲ: ಉಳಿದ ಶೆಟ್ಟಿಬಣಕನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳ ಸರ್ವೆ ನಂಬರ್‌ಗಳ ವಿಸ್ತೀರ್ಣದಲ್ಲಿರುವ ಅರಣ್ಯದಲ್ಲಿ ಪ್ರಾದೇಶಿಕ ಅರಣ್ಯ ಇಲಾಖೆಯು ಹಲವಾರು ದಶಕಗಳ ಹಿಂದೆ ವಿವಿಧ ಅಕೇಶಿಯಾ, ಬಿದಿರು, ತೇಗ, ಶ್ರೀಗಂಧ, ಬೆಟ್ಟದ ನೆಲ್ಲಿ, ಮುತ್ತಗ, ಸೀತಾಫ‌ಲ, ನೇರಳೆ, ಮತ್ತಿ, ಬೇವು, ಹೊಂಗೆ, ಹುಣಸೆ, ನೀಲಗಿರಿ, ಮ್ಯಾಂಜಿಯಂ ಬಗೆಯ ಮರಗಳನ್ನು ಬೆಳೆಸಿ ಫೆನ್ಸಿಂಗ್‌ ಹಾಕಿಕೊಂಡಿರುತ್ತಾರೆ. ಅದರಲ್ಲಿ ಸಾವಿರಾರು ನವಿಲು, ಜಿಂಕೆ, ನರಿ, ಕಾಡು ಹಂದಿ, ಕಾಡು ಕೋಳಿ, ಮೊಲ, ಕೃಷ್ಣ ಮೃಗ, ಹಾವು, ಕೌಜುಗ, ಗಿಳಿ ಸೇರಿದಂತೆ ವಿವಿಧ ಬಗೆಯ ವನ್ಯ ಮೃಗಗಳು ಮತ್ತು ಸಾವಿರಾರು ಪಕ್ಷಿಗಳು ಸಸ್ಯ ಸಂಕುಲದಲ್ಲಿ ವಾಸವಾಗಿರುತ್ತವೆ.

ಪಹಣಿ ದಾಖಲೆಯಲ್ಲಿ “ಗೋಮಾಳ’ ನಮೂದು: ಈ ಕಾಯ್ದಿಟ್ಟ ಅರಣ್ಯದ ಮಧ್ಯದಲ್ಲಿಯೇ ಇರುವ ಶೆಟ್ಟಿಬಣಕನ ಹಳ್ಳಿ ಗ್ರಾಮಕ್ಕೆ ಸೇರಿದ ಸರ್ವೆ ನಂಬರ್‌ 76ರಲ್ಲಿನ36 ಎಕರೆ ಜಮೀನಿದ್ದು, ಸದರಿ ಜಮೀನನ್ನು ಸಹ ಹಲವಾರು ದಶಕಗಳ ಹಿಂದೆಯೇ ಅರಣ್ಯಾಧಿಕಾರಿ ಗಳುಅರಣ್ಯಕ್ಕೆ ಸೇರಿಸಿಕೊಂಡು ಮರಗಳನ್ನು ಬೆಳೆಸಿ ಫೆನ್ಸಿಂಗ್‌ ಹಾಕಿಕೊಂಡಿರುತ್ತಾರೆ. ಆದರೆ ಸ.ನಂ.76ರ ಪಹಣಿ ದಾಖಲೆಯಲ್ಲಿ ಗೋಮಾಳ ಎಂದು ನಮೂದಿ ಸಿದ್ದು, ಅದರ ಪೈಕಿ 10 ಎಕರೆ ಜಮೀನು ಅರಣ್ಯ ಇಲಾಖೆಗೆ ಮೀಸಲು ಎಂದು ನಮೂದಾಗಿದೆ.ಇದರ ಆಧಾರದ ಅನ್ವಯ ಶೆಟ್ಟಿಬಣಕನಹಳ್ಳಿ ಗ್ರಾಮಕ್ಕೆ ಸೇರಿದ ಸರ್ವೇ ನಂಬರ್‌ 76ರಲ್ಲಿನ 36 ಎಕರೆ ಗೋಮಾಳ ಜಮೀನು ಕಂದಾಯ ಇಲಾಖೆಗೆ ಸೇರಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ನಿರ್ಧರಿಸಿದ್ದಾರೆ.

ಜಮೀನು ಮಂಜೂರಿಗೆ ಜಿಪಂ ಸಿಇಒ ಕೋರಿಕೆ: ಇದೇ ಸಂದರ್ಭದಲ್ಲಿ ಘನ ತ್ಯಾಜ್ಯ ನಿರ್ವಹಣೆ ನಿಯಮಗಳು 2016ರಂತೆ ಹಾಗೂ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಯ (ನ್ಯಾಷನಲ್‌ ಗ್ರೀನ್‌ ಟ್ರಿಬ್ಯುನಲ್‌)  ನಿರ್ದೇಶನದಂತೆ ಎಲ್ಲಾ ಗ್ರಾಪಂಗಳಲ್ಲಿ ಘನ ತ್ಯಾಜ್ಯ ನಿರ್ವಹಣೆಯನ್ನು ಸಮರ್ಪಕ ವಾಗಿ ಅನುಷ್ಠಾನಗೊಳಿಸ ಬೇಕಾಗಿರುವುದರಿಂದ ಸ್ವಚ್ಛ ಭಾರತ್‌ ಮಿಷನ್‌ ಯೋಜನೆಯಡಿಯಲ್ಲಿ ಸಮರ್ಪಕವಾಗಿ ತ್ಯಾಜ್ಯ ನಿರ್ವ ಹಣೆಯನ್ನು ಅನುಷ್ಠಾನಗೊಳಿಸಲು ಸಮರ್ಪಕ ಜಾಗ ಅವಶ್ಯವಿರುವುದರಿಂದ ಬಲ್ಲ ಗ್ರಾಪಂಗೆ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗಾಗಿ ಸರ್ಕಾರಿ ಜಮೀನು ಮಂಜೂರು ಮಾಡುವಂತೆ ಕೋಲಾರ ಜಿ.ಪಂ ಸಿಇಒ ಕೋರಿರುತ್ತಾರೆ.

ತಕರಾರಿಲ್ಲ ಎಂದು ಪ್ರಸ್ತಾವನೆ: ತಹಶೀಲ್ದಾರ್‌ ಬಲ್ಲ ಗ್ರಾಪಂಗೆ ತ್ಯಾಜ್ಯ ವಿಲೇವಾರಿ ಘಟಕ

ಸ್ಥಾಪನೆಗಾಗಿ ಶೆಟ್ಟಿಬಣಕನಹಳ್ಳಿ ಗ್ರಾಮದ ಸ.ನಂ.76ರ ವಿಸ್ತೀರ್ಣ 5.00 ಎಕರೆ ಅರಣ್ಯದಲ್ಲಿರುವ ಜಮೀ ನನ್ನು ಗುರುತಿಸಿ ಸದರಿ ಜಮೀ ನನ್ನು ಗೋಮಾಳ ಎಂಬುದಾಗಿ ವರ್ಗೀಕರಿಸಲಾಗಿದೆ. ಈ ಜಮೀನಿನಲ್ಲಿ ಯಾರೂ ಬಗರ್‌ಹುಕುಂ ಸಾಗುವಳಿ ಇರುವುದಿಲ್ಲ. ಈ ಜಮೀನು ಮಂಜೂರಾತಿ ಕೋರಿ ಯಾರೂ ನಮೂನೆ-50, 53 ಅರ್ಜಿ ಸಲ್ಲಿಸಿಕೊಂಡಿರುವುದಿಲ್ಲ. ಈ ಜಮೀನಿಗೆ ಸಂಪರ್ಕ ರಸ್ತೆ ಇರುತ್ತದೆ. ಈ ಜಮೀನಿನ ಸಂಬಂಧ ಯಾವುದೇ ಸಿವಿಲ್‌ ನ್ಯಾಯಾಲಯ ಪ್ರಕರಣಗಳು ಬಾಕಿ ಇರುವುದಿಲ್ಲ,

ಈ ಜಮೀನು ಅರಣ್ಯ ಇಲಾಖೆ ವ್ಯಾಪ್ತಿಗೆ ಒಳಪಟ್ಟಿರುವುದಿಲ್ಲ ಹಾಗೂ ಉದ್ದೇಶಿತ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಮಂಜೂರು ಮಾಡಲು ಗ್ರಾಮಸ್ಥರ ತಂಟೆ-ತಕರಾರು ಇರುವುದಿಲ್ಲ ಎಂದು ತಹಶೀಲ್ದಾರ್‌ ಸಹಾಯಕ ಕಮೀಷನರ್‌ಗೆ ಪ್ರಸ್ತಾವನೆ ಸಲ್ಲಿಸಿರುತ್ತಾರೆ.

ಜಮೀನು ಮಂಜೂರಿಗೆ ಶಿಫಾರಸು: ತಹಶೀಲ್ದಾರ್‌ ವರದಿ ಅನ್ವಯ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಜಮೀನನ್ನು ಮಂಜೂರು ಮಾಡಬಹುದೆಂದು ಸಹಾಯಕ ಕಮಿಷನರ್‌ ಶಿಫಾರಸು ಮಾಡಿರುತ್ತಾರೆ. ಪ್ರಸ್ತಾವನೆಯನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಗಳು ಸರ್ಕಾರದ ಸುತ್ತೋಲೆ ಸಂ.ಆರ್‌.ಡಿ 70 ಎಲ್‌ಜಿಪಿ 2008 ದಿನಾಂಕ 08.08.2020 ರ ನಿರ್ದೇಶನದಂತೆ 5 ಎಕರೆ ಜಮೀನನ್ನು ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಮಂಜೂರು ಮಾಡಿರುತ್ತಾರೆ.

ಯೋಜನೆ ರದ್ದುಗೆ ಪ್ರಸ್ತಾವನೆ  ಸಲ್ಲಿಸಿಲ್ಲ  :   ಕಾಶೀಪುರ ಕಾಯ್ದಿಟ್ಟ ಅರಣ್ಯದಲ್ಲಿ ತ್ಯಾಜ್ಯ ಸಂಸ್ಕರಣೆ ಘಟಕ ಪ್ರಾರಂಭಗೊಂಡಲ್ಲಿ ವಾಹನಗಳ ಓಡಾಟ ಮತ್ತು ಉಂಟಾಗುವ ಮಾಲಿನ್ಯದಿಂದ ಪ್ರಾಣಿ ಮತ್ತು ಪಕ್ಷಿಸಂಕುಲಕ್ಕೆ ತೊಂದರೆ ಉಂಟಾಗಲಿದೆ. ಜಿಲ್ಲಾಧಿಕಾರಿಗಳು ತ್ಯಾಜ್ಯ ವಿಲೇವಾರಿ ಘಟಕಕ್ಕೆ ಜಮೀನು ಮಂಜೂರು ಮಾಡಿ 5 ತಿಂಗಳು ಕಳೆದರೂ ಸದರಿ ಯೋಜನೆಯನ್ನು ರದ್ದುಗೊಳಿಸಿ ಅರಣ್ಯ ಮತ್ತು ಅರಣ್ಯದಲ್ಲಿರುವ ಸಸ್ಯ ಸಂಪತ್ತು ಹಾಗೂ ವನ್ಯ ಜೀವಿಗಳನ್ನು ಉಳಿಸಬೇಕೆಂದುಕೋರಿ ಇದುವರೆಗೂ ವಲಯಾರಣ್ಯಾಧಿಕಾರಿ ರವಿಕೀರ್ತಿ ಅಥವಾ ಸಹಾಯಕ ವಲಯಾರಣ್ಯಧಿಕಾರಿ ಕೃಷ್ಣಮೂರ್ತಿ ಯಾರೊಬ್ಬರೂ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸದೇ ಇರುವುದಕ್ಕೆ ಅಚ್ಚರಿಗೆ ಕಾರಣವಾಗಿದೆ.

ಪ್ರಾಣಿ-ಪಕ್ಷಿ, ಸಸ್ಯಸಂಕುಲ ನಾಶ ಒಟ್ಟಿನಲ್ಲಿ ಈ ಜಮೀನು ಅರಣ್ಯ  ಇಲಾಖೆ ವ್ಯಾಪ್ತಿಗೆ ಒಳಪಟ್ಟಿರುವುದಿಲ್ಲ ವೆಂದು ಕಾಯ್ದಿಟ್ಟ ಅರಣ್ಯದ ಮಧ್ಯದಲ್ಲಿರುವ ಗೋಮಾಳ ಜಮೀನು ಪೈಕಿ 5 ಎಕರೆ ಪ್ರದೇಶವನ್ನು ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಮಂಜೂರಾತಿಗಾಗಿ ತಹಶೀಲ್ದಾರ್‌ ರಾಜಶೇಖರ್‌ ಪ್ರಸ್ತಾವನೆ ಸಲ್ಲಿಸಿದ್ದು, ಸದರಿ ಅರಣ್ಯ ಪ್ರದೇಶದಲ್ಲಿ ತ್ಯಾಜ್ಯ ಘಟಕ ನಿರ್ಮಾಣ ಗೊಂಡಲ್ಲಿ ಹಲವಾರು ದಶಕಗಳ ಹಿಂದೆ ಬೆಳೆಸಿರುವ ಸಸ್ಯ ಸಂಪತ್ತು ನಾಶವಾಗುವುದಲ್ಲದೇ ವನ್ಯ ಜೀವಿಗಳ ವಾಸಕ್ಕೆ ಸಂಚಕಾರ ಬರಬಹುದು.

ಜಮೀನು ಸರ್ವೆ ಮಾಡಿಸಿ ಗ್ರಾಪಂ ವಶಕ್ಕೆ‌ :  ಹಲವಾರು ವರ್ಷಗಳ ಹಿಂದೆ ಪ್ರಾದೇಶಿಕ ಅರಣ್ಯ ಇಲಾಖೆ ಅಧಿಕಾರಿಗಳು ಅರಣ್ಯದ ಅಂಚಿನಲ್ಲಿರುವ ಸರ್ವೆ ನಂಬರ್‌ 76ರ ಗೋಮಾಳ ಜಮೀನನ್ನು ತಮ್ಮದೆಂದು ಕಾಯ್ದಿಟ್ಟ ಅರಣ್ಯಕ್ಕೆ ಸೇರಿಸಿಕೊಂಡು ಅನಧಿಕೃತವಾಗಿ ಫೆನ್ಸಿಂಗ್‌ ಹಾಕಿಕೊಂಡಿದ್ದರು. ಆದರೆ ಜಿಲ್ಲಾಧಿಕಾರಿಗಳ ಆದೇಶದಂತೆ ಶೀಘ್ರದಲ್ಲಿಯೇ ನಿಗದಿತ ಜಮೀನನ್ನು ಸರ್ವೆ ಮಾಡಿಸಿ ವಶಕ್ಕೆ ಪಡೆದು ಗ್ರಾಪಂಗೆ ನೀಡಲಾಗುವುದು ಎಂದು ತಹಶೀಲ್ದಾರ್‌ ರಾಜಶೇಖರ್‌ ಉದಯವಾಣಿಗೆ ತಿಳಿಸಿದರು.

ಅರಣ್ಯದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಕುರಿತಂತೆ ತಮಗೆ ಇದುವರೆಗೂ ಮಾಹಿತಿಯೇ ಇಲ್ಲ. ಈ ಕುರಿತು ವಲಯಾರಣ್ಯ ಧಿಕಾರಿ ರವಿಕೀರ್ತಿ ಮೂಲಕ ಮೇಲಾಧಿಕಾರಿ ಗಳಿಗೆ ವರದಿ ಸಲ್ಲಿಸಲಾಗುವುದು. ಕೃಷ್ಣಮೂರ್ತಿ, ಸಹಾಯಕ ವಲಯಾರಣ್ಯಧಿಕಾರಿ

ಅರಣ್ಯದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಕುರಿತಂತೆ ತಮಗೆ ಇದುವರೆಗೂ ಮಾಹಿತಿ ಇಲ್ಲ. ಸ್ಥಳೀಯ ವಲಯಾರಣ್ಯಧಿಕಾರಿಯಿಂದ ಮಾಹಿತಿ ತರಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು. ಶಿವಶಂಕರ್‌, ಕೋಲಾರ ಉಪ ಅರಣ್ಯ ಸಂರಕ್ಷಣಾಧಿಕಾರಿ

 

ಎಂ.ನಾಗರಾಜಯ್ಯ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕೊಡಾಜೆ ಬಳಿ ಭೀಕರ ಅಪಘಾತ: ಚಾಲಕ ಗಂಭೀರ, ಮಹಿಳೆ ಹಾಗೂ ಮಗುವಿಗೆ ಗಾಯ

ಕೊಡಾಜೆ ಬಳಿ ಭೀಕರ ಅಪಘಾತ: ಚಾಲಕ ಗಂಭೀರ, ಮಹಿಳೆ ಹಾಗೂ ಮಗುವಿಗೆ ಗಾಯ

ಮಲೆ ಮಹದೇಶ್ವರ ಬೆಟ್ಟದ ಬೆಳ್ಳಿ ರಥ ನಿರ್ಮಾಣಕ್ಕೆ 450 ಕೆಜಿ ಶುದ್ಧ ಬೆಳ್ಳಿ ಅಗತ್ಯ

ಮಲೆ ಮಹದೇಶ್ವರ ಬೆಟ್ಟದ ಬೆಳ್ಳಿ ರಥ ನಿರ್ಮಾಣಕ್ಕೆ 450 ಕೆಜಿ ಶುದ್ಧ ಬೆಳ್ಳಿ ಅಗತ್ಯ

ಶಿಸ್ತು ಸಮಿತಿ ಸ್ಪಂದಿಸದಿದ್ದರೆ ಎಐಸಿಸಿಗೆ ಪತ್ರ ಬರೆಯುತ್ತೇನೆ: ಅಖಂಡ ಶ್ರೀನಿವಾಸ ಮೂರ್ತಿ

ಶಿಸ್ತು ಸಮಿತಿ ಸ್ಪಂದಿಸದಿದ್ದರೆ ಎಐಸಿಸಿಗೆ ಪತ್ರ ಬರೆಯುತ್ತೇನೆ: ಅಖಂಡ ಶ್ರೀನಿವಾಸ ಮೂರ್ತಿ

ನಮ್ಮ ದೇಶೀ ಸಂಸ್ಕೃತಿ: ಅಚ್ಚುಮೆಚ್ಚಿನ ಉಡುಗೆ…ಉದಾರ ಉಡುಗೆ ಚೂಡಿದಾರ

ನಮ್ಮ ದೇಶೀ ಸಂಸ್ಕೃತಿ: ಅಚ್ಚುಮೆಚ್ಚಿನ …ಉದಾರ ಉಡುಗೆ ಚೂಡಿದಾರ

ರೈತರ ಪ್ರತಿಭಟನೆ; ಪ್ರತಿಷ್ಠಿತ ಪದ್ಮ ಪ್ರಶಸ್ತಿ ಮರಳಿಸಿದ ಪಂಜಾಬ್ ಮಾಜಿ ಸಿಎಂ ಬಾದಲ್

ರೈತರ ಪ್ರತಿಭಟನೆ; ಪ್ರತಿಷ್ಠಿತ ಪದ್ಮ ಪ್ರಶಸ್ತಿ ಮರಳಿಸಿದ ಪಂಜಾಬ್ ಮಾಜಿ ಸಿಎಂ ಬಾದಲ್

ಸಚಿವರಾಗುವ ಆಸೆ ಆಕಾಂಕ್ಷೆ ಎಲ್ಲರಿಗೂ ಇರುತ್ತೆ, ಆದರೆ.. ವಿಶ್ವನಾಥ್ ಗೆ ಸವದಿ ಕಿವಿಮಾತು

ಸಚಿವರಾಗುವ ಆಸೆ ಆಕಾಂಕ್ಷೆ ಎಲ್ಲರಿಗೂ ಇರುತ್ತೆ, ಆದರೆ.. ವಿಶ್ವನಾಥ್ ಗೆ ಸವದಿ ಕಿವಿಮಾತು

ಯೋಗ ಮಾಡಲು ಯಾವ ಸಮಯ ಬೆಸ್ಟ್‌?

ಯೋಗ ಮಾಡಲು ಯಾವ ಸಮಯ ಬೆಸ್ಟ್‌?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಎಚ್‌ಐವಿ ಸೋಂಕಿತರಿಗೆ ಸರ್ಕಾರಿ ಸೌಲಭ್ಯ ತಲುಪಿಸಿ

ಎಚ್‌ಐವಿ ಸೋಂಕಿತರಿಗೆ ಸರ್ಕಾರಿ ಸೌಲಭ್ಯ ತಲುಪಿಸಿ

ದೆಹಲಿ ರೈತರ ಹೋರಾಟಕ್ಕೆ ಸಂಘಟನೆಗಳ ಬೆಂಬಲ

ದೆಹಲಿ ರೈತರ ಹೋರಾಟಕ್ಕೆ ಸಂಘಟನೆಗಳ ಬೆಂಬಲ

ಕೋಲಾರ: 156 ಗ್ರಾಪಂಗಳ ಸ್ಪರ್ಧೆ

ಕೋಲಾರ: 156 ಗ್ರಾಪಂಗಳ ಸ್ಪರ್ಧೆ

kolar-tdy-1

ರಾಗಿ ಬೆಳೆದ ರೈತರನ್ನು ಕಾಡುತ್ತಿದೆ ನಿವಾರ್‌

300 ಎಕರೆ ಪ್ರದೇಶದಲ್ಲಿ ಟೆಕ್ಸ್‌ಟೈಲ್‌ ಪಾರ್ಕ್‌

300 ಎಕರೆ ಪ್ರದೇಶದಲ್ಲಿ ಟೆಕ್ಸ್‌ಟೈಲ್‌ ಪಾರ್ಕ್‌

MUST WATCH

udayavani youtube

ಉಗ್ರಪರ ಗೋಡೆ ಬರಹ ಪ್ರಕರಣದ ಆರೋಪಿಗಳ ಶೀಘ್ರ ಬಂಧನ: ಗೃಹ ಸಚಿವ ಬೊಮ್ಮಾಯಿ

udayavani youtube

Meal of Bakasur | ತುಳುನಾಡಿನ 14ಖಾದ್ಯಗಳನ್ನು ಉಣಬಡಿಸುವ ಬಕಾಸುರನ ಬಾಡೂಟ | FishCampus

udayavani youtube

ಸ್ವಂತ ಉದ್ಯಮ ಪ್ರಾರಂಭಿಸುವ ಮುನ್ನ ಇಲ್ಲೊಮ್ಮೆ ನೋಡಿ

udayavani youtube

ಸರಕಾರ ನಿಮ್ಮ ಜೊತೆಯಿದೆ: ಮೀನುಗಾರರ ಕುಟುಂಬಕ್ಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಭಯ

udayavani youtube

ಮಂಗಳೂರು ಬೋಟ್ ದುರಂತ: ಮತ್ತೋರ್ವ ಮೀನುಗಾರನ ಮೃತದೇಹ ಪತ್ತೆ

ಹೊಸ ಸೇರ್ಪಡೆ

ಗಂಗಾವತಿ ನಗರಸಭೆ ಆದಾಯ ಕುಸಿತ

ಗಂಗಾವತಿ ನಗರಸಭೆ ಆದಾಯ ಕುಸಿತ

ಕೊಡಾಜೆ ಬಳಿ ಭೀಕರ ಅಪಘಾತ: ಚಾಲಕ ಗಂಭೀರ, ಮಹಿಳೆ ಹಾಗೂ ಮಗುವಿಗೆ ಗಾಯ

ಕೊಡಾಜೆ ಬಳಿ ಭೀಕರ ಅಪಘಾತ: ಚಾಲಕ ಗಂಭೀರ, ಮಹಿಳೆ ಹಾಗೂ ಮಗುವಿಗೆ ಗಾಯ

ಮತಗಟ್ಟೆವಾರು ವೈಯಕ್ತಿಕ ಗಮನ ಹರಿಸಿ

ಮತಗಟ್ಟೆವಾರು ವೈಯಕ್ತಿಕ ಗಮನ ಹರಿಸಿ

ಪಟ್ಟಿ  ಪರಿಷ್ಕರಣೆ ನಿಖರವಾಗಿರಲಿ

ಪಟ್ಟಿ ಪರಿಷ್ಕರಣೆ ನಿಖರವಾಗಿರಲಿ

vಪಕ್ಷದಲ್ಲಿ ಭಿನ್ನಾಭಿಪ್ರಾಯ:ಗಿರೀಶ್ ಉಪ್ಪಾರರಿಂದ ನಿಗಮ ಅಧ್ಯಕ್ಷ ಸ್ಥಾನ ವಾಪಾಸ್ ಪಡೆದ ಸರ್ಕಾರ

ಪಕ್ಷದಲ್ಲಿ ಭಿನ್ನಾಭಿಪ್ರಾಯ:ಗಿರೀಶ್ ಉಪ್ಪಾರರಿಂದ ನಿಗಮ ಅಧ್ಯಕ್ಷ ಸ್ಥಾನ ವಾಪಾಸ್ ಪಡೆದ ಸರ್ಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.