ಔಷಧಿ ಖರೀದಿ ಹಗರಣ ವಿರುದ್ಧ ಧರಣಿ

ಸಂಘಟನೆಯಿಂದ ಮಾಜಿ ಸಭಾಧ್ಯಕ್ಷ ರಮೇಶ್‌ಕುಮಾರ್‌ ವಿರುದ್ಧ ಸಿಬಿಐ ತನಿಖೆಗೆ ಒತ್ತಾಯ

Team Udayavani, Aug 22, 2019, 5:05 PM IST

ಕೋಲಾರ ನಗರದ ಮೆಕ್ಕೆ ವೃತ್ತದಲ್ಲಿ ಭಾರತೀಯ ದಲಿತ ಸೇನೆ ಪ್ರತಿಭಟನೆ ನಡೆಸಿ ರಮೇಶ್‌ಕುಮಾರ್‌ ಮೇಲಿರುವ ಹಗರಣವನ್ನು ಸಿಬಿಐ ತನಿಖೆಗೊಪ್ಪಿಸಬೇಕೆಂದು ಆಗ್ರಹಿಸಿದರು.

ಕೋಲಾರ: ಮಾಜಿ ಆರೋಗ್ಯ ಸಚಿವ ಕೆ.ಆರ್‌. ರಮೇಶ್‌ ಕುಮಾರ್‌ ಔಷಧಿ ಖರೀದಿಯಲ್ಲಿ 535 ಕೋಟಿ ವಂಚಿಸಿದ್ದಾರೆ, ವೈದ್ಯಕೀಯ ಕೋರ್ಸ್‌ ಗಳಿಗೆ ಅಕ್ರಮ ಪ್ರವೇಶ ಅವಕಾಶ ಕೊಟ್ಟಿದ್ದಾರೆ ಎಂದು ಭಾರತೀಯ ದಲಿತಸೇನೆಯು ನಗರದ ಮೆಕ್ಕೆ ವೃತ್ತದಲ್ಲಿ ಪ್ರತಿಭಟನೆ ನಡೆಸಿತು.

ಬಳಿಕ ಲೋಕಾಯುಕ್ತ ಕಚೇರಿಗೆ ತೆರಳಿ ದೂರು ಸಲ್ಲಿಸಿ, ರಾಜ್ಯ ಸರ್ಕಾರವು ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಒತ್ತಾಯಿಸಿತು.

ವೈದ್ಯಕೀಯ ಕೋರ್ಸ್‌ಗಳಿಗೆ ಅಕ್ರಮ ಪ್ರವೇಶ: ರಾಜ್ಯ ರಾಜಕಾರಣದಲ್ಲಿ ಸತ್ಯ, ನಿಷ್ಠೆ ಮತ್ತು ಪ್ರಾಮಾಣಿಕತೆಗೆ ಹೆಸರುವಾಸಿಯಾಗಿರುವ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಶಾಸಕ ಮಾಜಿ ಸಭಾಧ್ಯಕ್ಷ ಕೆ.ಆರ್‌. ರಮೇಶ್‌ ಕುಮಾರ್‌ 2013-14ನೇ ನಕಲಿ ಅಂಕಪಟ್ಟಿ, ನಕಲಿ ಹಾಜ ರಾತಿ ಸೃಷ್ಟಿಸಿ ಹೊರರಾಜ್ಯದ ವಿದ್ಯಾರ್ಥಿಗಳಿಗೆ ಬೆಂಗಳೂರು ಸರ್ಕಾರಿ ಯುನಾನಿ ವೈದ್ಯಕೀಯ ವಿದ್ಯಾಲಯದಲ್ಲಿ ವೈದ್ಯಕೀಯ ಕೋರ್ಸುಗಳಿಗೆ ಅಕ್ರಮವಾಗಿ ಪ್ರವೇಶ ನೀಡಿದ್ದರು. ಇದರ ಬಗ್ಗೆ ಸಿಐಡಿ ತನಿಖೆ ನಡೆಸಲು ಮುಂದಾಗಿದ್ದ ಸಮಯದಲ್ಲಿ (2017)ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿದ್ದ ರಮೇಶ್‌ ಕುಮಾರ್‌ ಅಕ್ರಮದ ಸಿಐಡಿ ತನಿಖೆಯನ್ನು ಕೈಬಿಡುವಂತೆ ಒಳಾಡಳಿತ ಇಲಾಖೆಯ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿದ್ದರು. ಈ ವಂಚನೆ ಪ್ರಕರಣವನ್ನು ಮರು ತನಿಖೆ ಮಾಡಬೇಕೆಂದು ಭಾರತೀಯ ದಲಿತ ಸೇನೆ ರಾಜ್ಯಧ್ಯಕ್ಷ ದಲಿತ ನಾರಾಯಣಸ್ವಾಮಿ ಮುಖ್ಯಮಂತ್ರಿ ಯಡಿಯೂರಪ್ಪರನ್ನು ಒತ್ತಾಯಿಸಿದರು.

ಲೋಕಯುಕ್ತದಲ್ಲಿ ದೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವ್ಯಾಪ್ತಿಯೊಳಗಿರುವ ಕರ್ನಾಟಕ ಡ್ರಗ್ಸ್‌ ಅಂಡ್‌ ಲಾಜಿಸ್ಟಿಕ್ಸ್‌ ನಿಂದ ಕಳಪೆ ಗುಣಮಟ್ಟದ ಔಷಧಿ ಖರೀದಿ ಕುರಿತು ಸಿಎಜಿ ನೀಡಿದ್ದ ವರದಿ ಆಧರಿಸಿ ರಮೇಶ್‌ ಕುಮಾರ್‌ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಕೆಯಾಗಿದೆ.

ಇದು ಬಹುಕೋಟಿ ಹಗರಣದ ಆರೋಪವಾ ಗಿದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ವೈದ್ಯಕೀಯ ಕೋರ್ಸುಗಳಿಗೆ ಸಂಬಂಧಿಸಿದಂತೆ ನಕಲಿ ಅಂಕಪಟ್ಟಿ, ನಕಲಿ ಹಾಜರಾತಿ ಸೃಷ್ಟಿಸಿ ದಾಖಲಾತಿ ಪ್ರಕರಣ ಕುರಿತು 2016ರಲ್ಲಿ ಬೆಂಗಳೂರಿನ ಕಾಮಾಕ್ಷಿಪಾಳ್ಯದ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ ಇದು ಕ್ರಿಮಿನಲ್ ಮೊಕದ್ದಮೆಯಾಗಿದೆ ಎಂದು ಸ್ಪಷ್ಟಪಡಿಸಿತು.

ಸಿಐಡಿಗೆ ತಡೆ: ಈ ಪ್ರಕರಣ ಇಡೀ ರಾಜ್ಯಾದ್ಯಂತ ವ್ಯಾಪಿಸಿರಬಹುದು ಎಂದು ಶಂಕಿಸಿ, ಉನ್ನತ ಮಟ್ಟದ ತನಿಖೆಗೆ ಸಿಐಡಿ ಮುಂದಾದಾಗ ತನಿಖೆಯನ್ನು ಕೈಬಿಡಲು ಸೂಚಿಸಿರುವುದರ ಹಿಂದೆ ಹಲವು ಅನುಮಾನಗಳು ಸಾರ್ವಜನಿಕರಲ್ಲಿ ಹುಟ್ಟು ಹಾಕಿರುವುದು ಸತ್ಯ.

ಪ್ರತಿಭಟನೆಯಲ್ಲಿ ಎಂ.ಆರ್‌. ಚೇತನ್‌ ಬಾಬು, ದಿಂಬಚಾಮನಹಳ್ಳಿ ಅಂಬರೀಶ್‌, ಖಾದ್ರಿಪುರ ಬಾಬು, ಸುರೇಶ್‌ ಕುಮಾರ್‌, ನಾಗೇಶ್‌, ಮಾಹಿತಿ ಮಂಜುನಾಥ್‌, ಸಂಜಯ್‌, ಅನಿಲ್ ಕುಮಾರ್‌, ಕಲ್ಯಾಣ್‌ ಕುಮಾರ್‌, ರವಿಕುಮಾರ್‌ ಮುಂತಾದವರಿದ್ದರು.


ಈ ವಿಭಾಗದಿಂದ ಇನ್ನಷ್ಟು

  • ಶಿವಮೊಗ್ಗ:ತೀರ್ಥಹಳ್ಳಿಯ ಬಳಿಯ ತುಂಗಾನದಿ ಸೇತುವೆ ಬಳಿ ಫುಡ್ ಇನ್ಸ್ ಪೆಕ್ಟರ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ನಡೆದಿದೆ. ಹೊಸನಗರದ ಫುಡ್ ಇನ್ಸ್...

  • ಶಿವಮೊಗ್ಗ: ನೂತನವಾಗಿ ರೂಪಿಸಲಾಗಿರುವ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾದಲ್ಲಿ, ಈಗಿನ ಏಕಶಿಸ್ತೀಯ ಉನ್ನತ ಶಿಕ್ಷಣ ತೆರೆಮರಿಗೆ ಸರಿದು, ಬಹುಶಿಸ್ತೀಯ ಶಿಕ್ಷಣ...

  • ವೆಂಕೋಬಿ ಸಂಗನಕಲ್ಲು ಬಳ್ಳಾರಿ: ವಿಜಯನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಮತಸಮರ ಗುರುವಾರ ಮುಗಿದಿದ್ದು, ಕ್ಷೇತ್ರದ ಜನರ ಚಿತ್ತ ಡಿ.9 ರ ಮತ ಎಣಿಕೆಯತ್ತ ನೆಟ್ಟಿದೆ. ಚುನಾವಣೆಯಲ್ಲಿ...

  • ಶ್ರೀರಂಗಪಟ್ಟಣ: ಕೂಡಲಕುಪ್ಪೆ ಹಾಗೂ ಕಿರಂಗೂರು ಗ್ರಾಮದ ಎಲ್ಲೆಗೆ ಸೇರಿದ ಎರೆಮಣೆ ನಾಲೆಯ ಏರಿ ಮೇಲಿರುವ ರಸ್ತೆ ಒತ್ತುವರಿ ಮಾಡಿಕೊಂಡಿದ್ದು, ಇದರಿಂದ ಸುತ್ತಮುತ್ತಲ...

  • ಮಂಡ್ಯ: ರೈತರು ಹಾಗೂ ಯುವ ಸಮುದಾಯ ಕೃಷಿಯನ್ನು ಅವಲಂಬಿಸಲು ಹಾಗೂ ಬೇಸಾಯವನ್ನು ಲಾಭದಾ ಯಕ ಮಾಡಿಕೊಳ್ಳುವುದಕ್ಕೆ ಕೃಷಿ ಮೇಳ ಹೆಚ್ಚು ಸಹಕಾರಿಯಾಗಿದೆ ಎಂದು ಜಿಲ್ಲಾಧಿಕಾರಿ...

ಹೊಸ ಸೇರ್ಪಡೆ