70 ಗಣಿ ಬಾಧಿತ ಗ್ರಾಮಗಳ ಗುರುತು

Team Udayavani, Dec 6, 2019, 12:46 PM IST

kopala-tdy-2

ಕೊಪ್ಪಳ: ಜಿಲ್ಲೆಯಲ್ಲಿ ಕಲ್ಲು ಗಣಿಗಾರಿಕೆ ಸೇರಿದಂತೆ ಕಲ್ಲುಕ್ವಾರಿಗಳ ಉದ್ಯಮದಿಂದ 70 ಗ್ರಾಮಗಳು ಬಾಧಿತ ಪ್ರದೇಶ ವ್ಯಾಪ್ತಿಯಲ್ಲಿ ಬರುವುದನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಗುರುತು ಮಾಡಿದೆ.

ಜಿಲ್ಲಾಡಳಿತ, ಸರ್ಕಾರ, ಜನನಾಯಕರು ಬಾಧಿತ ಗ್ರಾಮಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡಬೇಕಿದೆ. ಜಿಲ್ಲೆಯನ್ನು ಖನಿಜ ಪ್ರದೇಶಎಂದೇ ಹೆಸರಿಸಲಾಗಿದೆ. ಈ ಭಾಗದಲ್ಲಿ ಹಲವು ಗುಡ್ಡಗಾಡು ಪ್ರದೇಶಗಳು ಇರುವುದರಿಂದ ಕಲ್ಲು ಗಣಿಗಾರಿಕೆ ಉದ್ಯಮವೂ ಹಲವು ವರ್ಷಗಳಿಂದ ಇಲ್ಲಿ ತಲೆ ಎತ್ತಿ ನಿಂತಿವೆ.

ಜಿಲ್ಲೆಯ ವಿವಿಧ ಭಾಗದಲ್ಲಿ ಕಲ್ಲುಗಳನ್ನು ಪುಡಿ ಮಾಡುವ ಯಂತ್ರಗಳನ್ನು ಅಳವಡಿಸಿದ್ದರಿಂದ ಆಯಾ ಗ್ರಾಮಗಳ ವ್ಯಾಪ್ತಿಯಲ್ಲಿ ಧೂಳು ಸೇರಿದಂತೆ ಕಲ್ಲಿನ ಅತ್ಯಂತ ಚಿಕ್ಕ ಕಣಗಳು ಗ್ರಾಮದ ತುಂಬೆಲ್ಲ ಆವರಿಸಿ ಜನರನ್ನು ಬಾಧಿತರನ್ನಾಗಿ ಮಾಡುತ್ತಿವೆ. ಇಲ್ಲಿ ಜಿಲ್ಲಾಡಳಿತ, ಸರ್ಕಾರ ಹಾಗೂ ಜನಪ್ರತಿನಿಧಿಗಳು ವಿಶೇಷವಾಗಿ ಇಂತಹ ಗ್ರಾಮಗಳಿಗೆ ಒತ್ತು ನೀಡುವುದು ಅವಶ್ಯವಾಗಿದೆ. ಉದ್ಯಮ ನಡೆಸುವ ವ್ಯಕ್ತಿಗಳಿಂದ ಸರ್ಕಾರ ರಾಯಲ್ಟಿ ಪಡೆಯುತ್ತಿದ್ದು

ಈ ವೇಳೆ ಡಿಎಂಎಫ್‌ (ಗಣಿ ಬಾಧಿತ)ಕ್ಕೂ ರಾಯಲ್ಟಿಯಲ್ಲಿ ಶೇ.30 ಹಣ ಪಡೆಯುತ್ತಿವೆ. ಈ ಹಣವನ್ನು ಬಾಧಿತ ಪ್ರದೇಶಗಳ ಅಭಿವೃದ್ಧಿ ಕೆಲಸಕ್ಕೆ ವಿನಿಯೋಗ ಮಾಡಿಕೊಳ್ಳಬೇಕಿದೆ.

ಗಣಿ ಬಾಧಿತ ಪ್ರದೇಶಗಳಾವವು?: ಕೊಪ್ಪಳ ತಾಲೂಕಿ  ನಲ್ಲಿ ಹೂವಿನಹಾಳ, ಹಾಲವರ್ತಿ, ಬಹದ್ದೂರಬಂಡಿ, ಕೆರೆಹಳ್ಳಿ, ಸುಲ್ತಾನಪುರ, ಚಂದ್ರಗಿರಿ, ಅಚಲಾಪೂರ, ನಾಗೇಶನಹಳ್ಳಿ, ಅತ್ತಿವಟ್ಟಿ, ಡಿ. ಹೊಸಳ್ಳಿ, ಹುಸೇನಪುರ ಇನ್ನೂ ಕುಷ್ಟಗಿ ತಾಲೂಕಿನಲ್ಲಿ ಹೂಲಗೇರಿ, ಬಂಡರಗಲ್‌, ಪುರ್ತಗೇರಿ, ಅಂತರಠಾಣಾ, ಕಡೂರು, ಕಲ್ಲ ಗೋನಾಳ, ಯರಿಗೋನಾಳ, ಕಾಟಾಪುರ, ಸೇಬನಕಟ್ಟಿ, ಹಚನೂರು, ಯಲಬುರ್ಗಾ ತಾಲೂಕಿನಲ್ಲಿ ಗೌರಾಳ, ಕುಕನೂರು, ಕಕ್ಕಿಹಳ್ಳಿ, ಗೊರ್ಲೆಕೊಪ್ಪ, ಹರಿಶಂಕರಬಂಡಿ, ಚನ್ನಪ್ಪನಹಳ್ಳಿ, ತಿಪ್ಪರಸನಾಳ, ಯಡಿಯಾಪೂರ, ಕಲ್ಲೂರು, ಬೆಣಕಲ್ಲ, ಗಂಗಾವತಿ ತಾಲೂಕಿನಲ್ಲಿ ವೆಂಕಟಗಿರಿ, ದಾಸನಾಳ, ಉಡಮಕಲ್ಲ, ಮಲ್ಲಾಪುರ ಗ್ರಾಮಗಳು ಕಲ್ಲು ಕ್ವಾರಿ, ಕ್ರಷರ್‌ ಉದ್ಯಮದಿಂದ ನೇರ ಬಾಧಿತ ಪ್ರದೇಶಗಳಾಗಿವೆ.

ಪರೋಕ್ಷ ಬಾಧಿತ ಗ್ರಾಮಗಳು: ಕಲ್ಲು ಕ್ವಾರಿ ಹಾಗೂ ಕ್ರಷರ್‌ ಇರುವ ಹಳ್ಳಿಗಳಲ್ಲಿ ಉದ್ಯಮದಿಂದ ಕುಡಿಯುವ ನೀರು, ರಸ್ತೆ ಸೇರಿ ಪರಿಸರಕ್ಕೆ ನೇರವಾಗಿ ಹಾನಿಯಾಗುತ್ತದೆ. ಅಂತಹ ಹಳ್ಳಿಗಳು ಜಿಲ್ಲೆಯಲ್ಲಿ 35 ಇವೆ. ಅವುಗಳನ್ನು ನೇರ ಬಾಧಿತ ಗ್ರಾಮಗಳೆಂದು ಗುರುತಿಸಿದ್ದರೆ, ಇನ್ನೂ ಆ ಹಳ್ಳಿಗಳ ಅಕ್ಕಪಕ್ಕ ಕಡಿಮೆ ಪ್ರಮಾಣದಲ್ಲಿ ಹಾನಿಯಾಗುವ ಹಳ್ಳಿಗಳನ್ನು

ಪರೋಕ್ಷ ಗಣಿ ಬಾಧಿತ ಪ್ರದೇಶಗಳೆಂದು ಇಲಾಖೆ ಗುರುತಿಸಿದ್ದು, ಅಂತಹ 35 ಹಳ್ಳಿಗಳು ಇವೆ.

ವಿಶೇಷ ಅಭಿವೃದ್ಧಿ ಅವಶ್ಯ: ಗಣಿ ಬಾಧಿತ 70 ಹಳ್ಳಿಗಳಲ್ಲಿ ಉದ್ಯಮದಿಂದ ಕುಡಿಯುವ ನೀರು, ಪರಿಸರ, ರಸ್ತೆ ಸೇರಿದಂತೆ ಪ್ರತಿಯೊಂದಕ್ಕೂ ಹಾನಿಯಾಗುತ್ತದೆ. ಜನತೆಯ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತವೆ. ಇಲ್ಲಿ ಸರ್ಕಾರವೇ ಗಣಿ ಬಾಧಿತ ಪ್ರದೇಶದಲ್ಲಿ ವಿಶೇಷ ಅನುದಾನ ನೀಡಿ ಅಭಿವೃದ್ಧಿ ಕೆಲಸ ಆರಂಭಿಸಬೇಕಿದೆ. ಅಲ್ಲದೇ ಸರ್ಕಾರ

ಈಗಾಗಲೇ ಬಾಧಿತ ಪ್ರದೇಶದಲ್ಲಿ ಪಡೆಯುವ ಶೇ.30 ಪಡೆಯುವ ರಾಯಲ್ಟಿ ಹಣವು ಇಂತಹ ಗ್ರಾಮಗಳಿಗೆ ವಿನಿಯೋಗ ಮಾಡಬೇಕಿದೆ. ಇಂಥ ಹಳ್ಳಿಗಳ ಬಗ್ಗೆ ಸರ್ಕಾರ, ಜಿಲ್ಲಾಡಳಿತ, ಜನಪ್ರತಿನಿಧಿಗಳು ಕಾಳಜಿ ವಹಿಸುವುದು ಅವಶ್ಯವಾಗಿದೆ.

-ದತ್ತು ಕಮ್ಮಾ

ಟಾಪ್ ನ್ಯೂಸ್

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್‌ ಕಾಸ್ಟಿಂಗ್‌ ಜಾರಿಯಾಗಲಿ

ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್‌ ಕಾಸ್ಟಿಂಗ್‌ ಜಾರಿಯಾಗಲಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.