ದೋಟಿಹಾಳ: ಸೂಕ್ತ ಕಟ್ಟಡದ ಕೊರತೆ; ಶಾಲಾ ವರಾಂಡದಲ್ಲಿ ಮಕ್ಕಳಿಗೆ ಪಾಠ ಹೇಳುವ ಶಿಕ್ಷಕರು

Team Udayavani, Dec 16, 2021, 4:58 PM IST

ದೋಟಿಹಾಳ: ಸೂಕ್ತ ಕಟ್ಟಡದ ಕೊರತೆ; ಶಾಲಾ ವರಾಂಡದಲ್ಲಿ ಮಕ್ಕಳಿಗೆ ಪಾಠ ಕೇಳುವ ಶಿಕ್ಷಕರು

ದೋಟಿಹಾಳ: ಶಾಲಾ ಮಕ್ಕಳು ಸಾಮಾನ್ಯವಾಗಿ ಕೊಠಡಿಗಳಲ್ಲಿ ಶಾಲಾ ಮಕ್ಕಳು ಕುಳಿತು ವಿದ್ಯಾಭ್ಯಾಸ ಮಾಡುವುದು ನೋಡಿದ್ದೇವೆ. ಆದರೆ ಈ ಶಾಲಾ ಮಕ್ಕಳಿಗೆ ಕೊಠಡಿಯ ಒಳಗೆ ಕುಳಿತು ವಿದ್ಯಾಭ್ಯಾಸ ಮಾಡುವ ಅದೃಷ್ಟ ಇಲ್ಲ.

ಇದು ತಾಲೂಕು ಕೇಂದ್ರದಿಂದ ಕೇವಲ 6 ಕಿ.ಮೀ ದೂರದಲ್ಲಿ ಇರುವು ಬಿಜಕಲ್ ಗ್ರಾಮದ ಜನತಾ ಬಡವಾಣಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಸ್ಥಿತಿ. ಕಳೆದ 2-3 ವರ್ಷಗಳಿಂದ ಶಾಲಾ ಮಕ್ಕಳು ಸೂಕ್ತ ಕಟ್ಟಡವೂ ಇಲ್ಲದೆ ಮಕ್ಕಳು ಪರದಾಡುವಂತಾಗಿದೆ.

ಈ ಶಾಲೆ 1ರಿಂದ 5ನೇ ತರಗತಿಯ ವರಗೆ ಸುಮಾರು 104 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಾರೆ. ಶಾಲೆಯಲ್ಲಿ ಒಟ್ಟು ನಾಲ್ಕು ಕೊಠಡಿಗಳು ಇದು. ಇದರಲ್ಲಿ ಒಂದು ಕೊಠಡಿಯನ್ನು ಕಾರ್ಯಲಯ ಮಾಡಿಮಾಡಿಕೊಂಡಿದ್ದಾರೆ. ಉಳಿದ ಮೂರು ಕೊಠಡಿಗಳಲ್ಲಿ ಎರಡು ಕೊಠಡಿಗಳು ಶಾಲಾ ಕಾಂಪೌಂಡ್  ಮತ್ತು ಬಿಸಿಯೂಟದ ಕೊಠಡಿಯ ಕಾಮಗಾರಿಗಳ ಸಾಮಗ್ರಿಗಳು ಇಟ್ಟಿರುವುದರಿಂದ ಕೇವಲ ಒಂದು ಕೊಠಡಿಯಲ್ಲಿ ಮಾತ್ರ 1 ಮತ್ತು 2ನೇ ತರಗತಿಯ ಮಕ್ಕಳಿಗೆ ಪಾಠ ನಡೆಯುತ್ತಿದೆ. ಉಳಿದ 3,4 ಮತ್ತು 5ನೇ ತರಗತಿಯ ಮಕ್ಕಳಿಗೆ ಕೊಠಡಿಯ ಕೊರತೆಯಿಂದ ಮಕ್ಕಳು ಬಿಸಿಲು, ಗಾಳಿ, ಚಳಿಯಲ್ಲಿ ಶಾಲಾ ವರಾಂಡದಲ್ಲಿ ಕುಳಿತು ಪಾಠ ಕೇಳುವ ಪರಿಸ್ಥಿತಿ ತಲೆದೋರಿದೆ.

ಪೂರ್ಣಗೊಳ್ಳದ ಕಟ್ಟಡ: ಈ ಶಾಲೆಯಲ್ಲಿ ಸುಮಾರು 6-7 ವರ್ಷಗಳಿಂದ ನಿರ್ಮಾಣ ಹಂತಲ್ಲಿರುವ ಕಟ್ಟಡವೂ ಪೂರ್ಣಗೊಳ್ಳದೆ ನೆನೆಗುದಿಗೆ ಬಿದ್ದಿದೆ. ಇದರಿಂದಾಗಿ ಶಾಲಾ ಮಕ್ಕಳಿಗೆ ಕೊಠಡಿಗಳ ಕೊರತೆ ಕಾಣುತ್ತದೆ ಜೊತಗೆ ಇದ ಎರಡು ಕೊಠಡಿಗಳಲ್ಲಿ ಕಾಮಗಾರಿಗಳ ನೆಪದಲ್ಲಿ ಕಾಮಗಾರಿಯ ಸಾಮಗ್ರಿಗಳು ಶಾಲೆಯ ಕೊಠಡಿಗಳಲ್ಲಿ ಇಟ್ಟುರುವುದು ಸದ್ಯ ಮಕ್ಕಳಿಗೆ ಕೊಠಡಿಯಲ್ಲಿ ಕೊರತೆಗೆ ಕಾರಣವಾಗಿದೆ.

ಮೂಲ ಸೌಲಭ್ಯವಿಲ್ಲ: ಶಾಲೆ ಸ್ಥಾಪನೆಯಾಗಿ ದಶಕಗಳೇ ಗತಿಸಿದರೂ, ಮೂಲ ಸೌಲಭ್ಯ ಕೊರತೆ ಕಾಣುತ್ತಿದೆ. ಮಕ್ಕಳಿಗೆ ಶುದ್ಧ ಕುಡಿಯುವ  ನೀರೂ, ಶಾಲಾ ಮಕ್ಕಳಿಗೆ ಶೌಚಾಲಯದ, ಸರಿಯಾದ ಆಟದ ಮೈದಾನ. ಬಿಸಿಯೂಟದ ಕೊಠಡಿ ಸೇರಿದಂತೆ ಇತರ ಮೂಲಭೂತ ಸೌಲಭ್ಯಗಳ ಕೊರತೆ ಕಾಣುತ್ತಿದೆ.

ಶಾಲೆಗೆ ಹೆಚ್ಚುವರಿ ಕೊಠಡಿ ನೀಡಿದರೆ ಮಕ್ಕಳನ್ನು ಪ್ರತ್ಯೆಕ ತರಗತಿಗಳನ್ನಾಗಿ ಮಾಡಿದರೆ ಕಲಿಯಲು ಇನ್ನೂ ಉತ್ಸಾಹ ಮೂಡುತ್ತದೆ ಎಂಬುದು ಶಿಕ್ಷಕರ ಬೇಡಿಕೆ. ಹಾಗೂ  ಶಾಲಾ ಕಾಂಪೌಂಡ್  ಮತ್ತು ಬಿಸಿಯೂಟದ ಕೊಠಡಿಯ ಕಾಮಗಾರಿಗಳ ಸಾಮಗ್ರಿಗಳು ಕೊಠಡಿಗಳಲ್ಲಿ ಇಟ್ಟಿರುವುದರಿಂದ ಮಕ್ಕಳಿಗೆ ಕೊಠಡಿಯ ಕೊರತೆಯಾಗಿದೆ. ಕಾಮಗಾರಿ ಕೆಲಸ ಮಾಡುವರಿಗೆ 3-4 ಬಾರಿ ಕೊಠಡಿಗಳಲ್ಲಿ ಇರುವ ಸಾಮಗ್ರಿಗಳನ್ನು ಖಾಲಿ ಮಾಡಿ ಎಂದು ಹೇಳಿದರು ಇನ್ನೂ ಮಾಡಿಲ್ಲ- ರುದ್ರಮ್ಮ, ಗುತ್ತೂರು  ಶಾಲಾ ಮುಖ್ಯಶಿಕ್ಷಕಿ.

ಬಿಜಕಲ್ ಜನತಾ ಬಡಾವಣೆಯ ಶಾಲೆಗೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಶಾಲಾ ಕಾಂಪೌಂಡ್ ಮತ್ತು ಬಿಸಿಯೂಟದ ಕೊಠಡಿಯ ಕಾಮಗಾರಿಗಳು ನಡೆದ್ದಿದೆ ಹಾಗೂ ಒಂದು ಶೌಚಾಲಯವನ್ನು ನಿರ್ಮಾಣ ಮಾಡುತ್ತೇವೆ.ಆನಂದರಾವ್ ಕುಲಕರ್ಣಿ,  ಗ್ರಾಪಂ ಪಿಡಿಒ ಬಿಜಕಲ್

-ಮಲ್ಲಿಕಾರ್ಜುನ ಮೆದಿಕೇರಿ

ಟಾಪ್ ನ್ಯೂಸ್

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್‌ ಕಾಸ್ಟಿಂಗ್‌ ಜಾರಿಯಾಗಲಿ

ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್‌ ಕಾಸ್ಟಿಂಗ್‌ ಜಾರಿಯಾಗಲಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.