Kushtagi: ಮದ್ಯರಾತ್ರಿ ಬಿಟ್ಟುಹೋದ ಅನ್ಯರಾಜ್ಯದ ಒಬ್ಬಂಟಿ ಮಹಿಳೆಗೆ ರಕ್ಷಣೆ
ಮದ್ಯರಾತ್ರಿ ಆಕೆಯನ್ನು ಯಾಕೆ ಬಿಟ್ಟು ಹೋದರು ಎಂಬುದು ಕುತೂಹಲ
Team Udayavani, Nov 9, 2023, 8:55 AM IST
ಕುಷ್ಟಗಿ: ಟ್ರಕ್ ಚಾಲಕನೋರ್ವ ಮದ್ಯವಯಸ್ಕ ಓಡಿಸ್ಸಾ ಮೂಲದ ಮಹಿಳೆಯನ್ನು ತಡರಾತ್ರಿ ಇಳಿಸಿ ಹೋದ ಪ್ರಕರಣ ಬೆಳಕಿಗೆ ಬಂದಿದೆ.
ಕುಷ್ಟಗಿ ಮಾರುತಿ ವೃತ್ತದಲ್ಲಿ ನ.8ರ ಬುಧವಾರ ತಡರಾತ್ರಿ ಟ್ರಕ್ ನಿಂದ ಮಹಿಳೆಗೆ ಶೌಚಕ್ಕೆ ಇಳಿಸಿ, ಪುನಃ ಹತ್ತಿಸಿಕೊಳ್ಳದೇ ಆಕೆಯನ್ನು ಬಿಟ್ಟು ಹೋಗಿದ್ದಾನೆ. ಕೆಲ ಹೊತ್ತಿನಲ್ಲಿ ಒಬ್ಬಂಟಿ ಮಹಿಳೆ ಚಡಪಡಿಸುತ್ತಾ ನಿಂತಿರುವುದನ್ನು ಗಮನಿಸಿದ ಸ್ಥಳೀಯರಾದ ಮರಸಣ್ಣ ತಾಳದ್, ಮಲ್ಲು ದೇಸಾಯಿ ಅವರು ಮಹಿಳೆಯನ್ನು ವಿಚಾರಿಸಿದಾಗ ಓಡಿಸ್ಸಾ ಮೂಲದ ಮಹಿಳೆ ಸಂಗೀತಾ ಎಂಬುವುದನ್ನು ಹೇಳಿಕೊಂಡಿದ್ದು, ಆಕೆ, ಪತಿಯೊಂದಿಗೆ ಟ್ರಕ್ ನಲ್ಲಿ ಪ್ರಯಾಣಿಸುತ್ತಿದ್ದಾಗ ಶೌಚಕ್ಕೆ ಇಳಿಸಿ, ಚಾಲಕ ಹಾಗೂ ಪತಿ ಬಿಟ್ಟು ಹೋಗಿದ್ದಾಗಿ ತಿಳಿಸಿದ್ದಾರೆ.
ಮದ್ಯರಾತ್ರಿ ಒಬ್ಬಂಟಿ ಸಂಗೀತಾಳ ರಕ್ಷಣೆಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ತಾತ್ಕಾಲಿಕ ಆಶ್ರಯ ನೀಡಲಾಗಿದೆ. ಈ ಮಹಿಳೆಯನ್ನು ಮದ್ಯರಾತ್ರಿ ಆಕೆಯ ಪತಿ ಯಾಕೆ ಬಿಟ್ಟು ಹೋದ? ಎಂಬುದು ಕುತೂಹಲ ಮೂಡಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ
ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್
April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ