ಗಂಗಾವತಿ : ಹುಲಿಹೈದರ್ ನಲ್ಲಿ ರಂಗನಾಥಪ್ಪ ನಾಯಕನ ವಾಸ್ತುಶಿಲ್ಪ ಶಿಲೆ ಪತ್ತೆ

Team Udayavani, Nov 11, 2019, 3:50 PM IST

ಗಂಗಾವತಿ: ಹುಲಿಹೈದರ್ ಸಂಸ್ಥಾನದ ರಂಗನಾಥಪ್ಪ ನಾಯಕ (ಗಡ್ಡಪ್ಪದೊರೆ) ಇವರ ಬೇಟೆಯಾಡುವ ಸ್ಥಿತಿಯಲ್ಲಿರುವ ವಾಸ್ತು ಶಿಲ್ಪ ಶಿಲೆಯು ತಾಲ್ಲೂಕಿನ ರಾಮದುರ್ಗಾದಲ್ಲಿ ಇತಿಹಾಸ ಸಂಶೋಧಕ ಡಾ.ಶರಣಬಸಪ್ಪ ಕೋಲ್ಕಾರ್ ಹಾಗೂ ತಂಡ ಪತ್ತೆ ಮಾಡಿದ್ದಾರೆ.

ರಾಮದುರ್ಗಾ ಗ್ರಾಮದ ಮಧ್ಯೆ ಭಾಗದ ಕಟ್ಟೆಯಲ್ಲಿ ಹಲವು‌ ವರ್ಷಗಳಿಂದ ಇದ್ದು 4.74 ಪೀಟ್ ಉದ್ದ 2.24 ಪೀಟ್ ಎತ್ತರವಿದೆ. ಶಿಲೆಯ ಮಧ್ಯೆಭಾಗದಲ್ಲಿ ಅರಸನು ರಾಜೋಚಿತ ವೇಷದಲ್ಲಿ ಕೈಯಲ್ಲಿ ಬೇಟೆಯಾಡುವ ಭರ್ಚಿ ಹಿಡಿದ್ದಾನೆ. ಸೈನಿಕನೊಬ್ಬ ಕುದುರೆಯನ್ನು ಹಿಡಿದಿದ್ದು ಉಳಿದ ಸೈನಿಕರು ದೀವಿಗೆ ಚತ್ರಿ ಚಾಮರ ಹಿಡಿದಿರುವರು. ಅರಸನು ಬೇಟೆಗೆ ಹೊರಟಿದ್ದಾನೆ ಎಂದು ಘೋಚರವಾಗುತ್ತದೆ. ಸ್ಥಳೀಯರು ಈ ಶಿಲ್ಪಕ್ಕೆ ಗಡ್ಡಪ್ಪನಾಯಕ ದೊರೆ ಮೂರ್ತಿ ಎಂದು ವಾಡಿಕೆಯಿಂದ ಕರೆಯುತ್ತಾರೆ. ಕನಕಗಿರಿ ಸಂಸ್ಥಾನದ ಮೊದಲ ದೊರೆ ಹಿರೇ ರಂಗಪ್ಪ ನಾಯಕ 1833ರಲ್ಲಿ ಪಟ್ಟಾಭಿಷೇಕನಾಗುತ್ತಾನೆ. ಹೈದ್ರಾಬಾದಿನ ನಿಜಾಮ ಸುರುಪೂರ ದೊರೆಗಳ ಮೂಲಕ‌ ಹಿರೇರಂಗಪ್ಪ ನಾಯಕನನ್ನು ಎಮ್ಮಿಗುಡ್ಡ (ಹೇಮಗುಡ್ಡ)ದಲ್ಲಿ ಹತ್ಯೆ ಮಾಡಿಸುತ್ತಾನೆ. ತಂದೆಯ ಹತ್ಯೆಯನ್ನು ಪ್ರಬಲವಾಗಿ ವಿರೋಧಿಸಿದ ಹಿರೇರಂಗಪ್ಪ ನಾಯಕನ ಮಗ ರಂಗನಾಥಪ್ಪ ನಾಯಕ(ಗಡ್ಡಪ್ಪದೊರೆ) ಗೆ ಕನಕಗಿರಿ ಹೊರತುಪಡಿಸಿ ಹುಲಿಹೈದರ್ ಸೇರಿ16 ಹಳ್ಳಿಗಳನ್ನೊಳಗೊಂಡ ಸಂಸ್ಥಾನಕ್ಕೆ ಒಡೆಯನಾಗಿದ್ದ ಎಂದು ಇತಿಹಾಸದಲ್ಲಿ ಉಲ್ಲೇಖಿಸಲಾಗಿದೆ.

ಇನ್ನಷ್ಟು ಬೆಳಕು:ಕನಕಗಿರಿ ಹುಲಿಹೈದರ್ ಹೇಮಗುಡ್ಡ ಪ್ರದೇಶದಲ್ಲಿ ಆಡಳಿತವನ್ನು ನಡೆಸಿದ ಹುಲಿಹೈದರ್ ನಾಯಕ ದೊರೆಗಳ ಆಡಳಿತ ಹಾಗು ಇತಿಹಾಸ ತಿಳಿಯಲು ರಾಮದುರ್ಗಾದಲ್ಲಿ ದೊರೆತ ಶಿಲ್ಪಕಲಾ ಕಪ್ಪುಕಲ್ಲಿನಶಿಲೆ ಸಹಾಯಕವಾಗಿದ್ದು ಸಹಕಾರ ನೀಡಿದ ರಾಮದುರ್ಗಾದ ಜನರು ಹಾಗೂ ಇತಿಹಾಸ ಪ್ರಾಧ್ಯಾಪಕರಾದ ಪ್ರೋ.ಭಜರಂಗಬಲಿ.ಬಸವರಾಜ ಪೂಜಾರ್.ಕೃಷ್ಣ ದೇವರಾಜ ಇವರುಗಳ ಸಹಕಾರದಿಂದ ಶಿಲ್ಪಕಲಾ ಶಿಲೆ ಪತ್ತೆಯಾಗಿದೆ ಎಂದು ಇತಿಹಾಸ ಸಂಶೋಧಕ ಡಾ.ಶರಣಬಸಪ್ಪ ಕೋಲ್ಕರ್ ಉದಯವಾಣಿ ಗೆ ತಿಳಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ