ರಡ್ಡಿ ಸಮಾಜ ಬಾಂಧವರಲ್ಲಿದೆ ಒಗ್ಗಟ್ಟು

ಹೇಮರಡ್ಡಿ ಮಲ್ಲಮ್ಮ ಕಾಯಕ-ದಾನ ಸಮಾಜಕ್ಕೆ ಮಾದರಿ•ಆದರ್ಶವನ್ನೇ ಭ‌ಜನೆ ಪದವನ್ನಾಗಿಸಿ ಎಲ್ಲರಿಗೂ ಮಾರ್ಗದರ್ಶಿ

Team Udayavani, May 11, 2019, 2:13 PM IST

kopala-4-tdy..

ಕೊಪ್ಪಳ: ಕಿನ್ನಾಳ ರಸ್ತೆಯ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದಲ್ಲಿ ಆಯೋಜಿಸಲಾಗಿದ್ದ ಹೇಮರಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದಲ್ಲಿ ಇತಿಹಾಸ ಉಪನ್ಯಾಸಕ ಶಂಕರ ಮಾಳೇಕೊಪ್ಪ ಮಾತನಾಡಿದರು.

ಕೊಪ್ಪಳ: ಕಾಯಕ ನಿಷ್ಠೆ, ದಾನ ಮೈಗೂಡಿಸಿಕೊಂಡಿದ್ದ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಅವರ ಆದರ್ಶಗಳು ರಡ್ಡಿ ಸಮಾಜಕ್ಕೆ ಆಲದ ಮರವಿದ್ದಂತೆ ಎಂದು ಇತಿಹಾಸ ಉಪನ್ಯಾಸಕ ಶಂಕರ ಮಾಳೆಕೊಪ್ಪ ಹೇಳಿದರು.

ನಗರದ ಕಿನ್ನಾಳ ರಸ್ತೆಯಲ್ಲಿನ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಹೇಮರಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

ಕಾಯಕ ನಿಷ್ಠೆ, ಆದರ್ಶ ಜೀವನ, ಜೀವನದಲ್ಲಿ ಸಮಾಧಾನ ಹೊಂದಿ ವೈರಾಗ್ಯ ಮೂರ್ತಿಗಳಾಗಬೇಕು. ಸಂಸ್ಕಾರದಿಂದ ಸದ್ಗತಿ ದೊರೆಯುತ್ತದೆ. ಪತಿವ್ರತ ಧರ್ಮ ಪಾಲಿಸಬೇಕು ಎಂಬುದನ್ನು ಮಲ್ಲಮ್ಮನವರು ನಿರೂಪಿಸಿದ್ದಾರೆ. ಮಲ್ಲಮ್ಮನ ಆದರ್ಶವನ್ನು ರಡ್ಡಿ ಸಮಾಜ ಬೆಳೆಸಿಕೊಂಡಿದ್ದು, ಅದರಲ್ಲೂ ಇಲ್ಲಿಯ ರಡ್ಡಿ ಬಾಂಧವರ ಒಗ್ಗಟ್ಟು ನಿಜಕ್ಕೂ ಸಂತಸದ ಸಂಗತಿ ಎಂದು ಹೇಳಿದರು.

ಮಲ್ಲಮ್ಮನವರು ನಾಗರಡ್ಡಿ ಮಗಳಾಗಿ ಸಿದ್ದಾಪುರದ ರಾಜಕುಮಾರ ವೇಮರೆಡ್ಡಿಗೆ ಸತಿಯಾಗಿದ್ದಳು. ಎಸ್‌. ಸೌಂದರ್ಯರಾಜ ಅವರು ಗುಬ್ಬಿ ವೀರಣ್ಣ ನಿರ್ದೇಶನದಲ್ಲಿ ಮಲ್ಲಮ್ಮನ ಚಲನಚಿತ್ರ ನಿರ್ಮಾಣ ಮಾಡಿದ್ದಾರೆ. ಅವರ ಸಂಪೂರ್ಣ ಜೀವನಗಾಥೆ ಆ ಚಿತ್ರದಲ್ಲಿದೆ. ಪ್ರಮುಖವಾಗಿ ಮಲ್ಲಮ್ಮ ಯಾವುದೇ ವಚನ ಬರೆದಿಲ್ಲ. ಭಜನೆ ಪದ ಹಾಡಿಲ್ಲ. ತನ್ನ ಬದುಕನ್ನೆ ವಚನವನ್ನಾಗಿಸಿ ಆದರ್ಶವನ್ನೇ ಭ‌ಜನೆ ಪದವನ್ನಾಗಿಸಿ ಎಲ್ಲರಿಗೂ ಮಾರ್ಗದರ್ಶಿಯಾಗಿದ್ದಾರೆ ಎಂದು ಬಣ್ಣಿಸಿದರು.

ಬಿಜೆಪಿ ರಾಷ್ಟ್ರೀಯ ಪರಿಷತ್‌ ಸದಸ್ಯ ಸಿ.ವಿ.ಚಂದ್ರಶೇಖರ ಮಾತನಾಡಿ, ವಿದ್ಯಾರ್ಥಿಗಳಿಗೆ ಶಿಕ್ಷ‌ಣ ಕೊಡಿಸುವುದು ಬಹಳ ಮುಖ್ಯ. ಅದರಂತೆ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಕಾರ್ಯಕ್ರಮದಲ್ಲಿ ಸನ್ಮಾನಿಸಿರುವುದು ಸಂತಸದ ಸಂಗತಿ. ಮಲ್ಲಮ್ಮನ ಜೀವನ ಆದರ್ಶ ಯುವಜನರಿಗೆ ದಾರಿ ದೀಪ. ಮಲ್ಲಮ್ಮ ಚಿಕ್ಕವಳಾಗಿದ್ದಾಗ ತಾಯಿಯನ್ನು ಕಳೆದುಕೊಂಡಳು. ಮದುವೆಯಾದಾಗ ಅತ್ತೆ, ನಾದನಿ ಕಾಟ. ಹೀಗೆ ಲೌಕಿಕ ಜೀವನಕ್ಕೆ ಮುಕ್ತಿ ಹೊಂದಿ ಆಧ್ಯಾತ್ಮದತ್ತ ಹೊರಳಿದಳು. ಅವರ ಆದರ್ಶವನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಂಡು ಜೀವನದಲ್ಲಿ ಮುನ್ನಡೆಯಬೇಕು ಎಂದು ಹೇಳಿದರು.

ಈ ವೇಳೆ ಎಸ್‌ಎಸ್‌ಎಲ್ಸಿ, ಪಿಯುಸಿಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಪಡೆದ ರಡ್ಡಿ ಸಮಾಜದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಮುಖಂಡ ಕೃಷ್ಣರಡ್ಡಿ ಗಲಿಬಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಪಂ ಮಾಜಿ ಅಧ್ಯಕ್ಷ ಎಸ್‌.ಬಿ. ನಾಗರಳ್ಳಿ, ಮುಖಂಡರಾದ ಸುರೇಶ ಭೂಮರಡ್ಡಿ, ವೆಂಕನಗೌಡ ಹಿರೇಗೌಡ್ರ, ಪ್ರಭು ಹೆಬ್ಟಾಳ, ವಕೀಲ ವೆಂಕರಡ್ಡಿ,

ಗುತ್ತಿಗೆದಾರ ಬಸವರಾಜ ಪುರದ, ಎಪಿಎಂಸಿ ಮಾಜಿ ಅಧ್ಯಕ್ಷ ಹನುಮರಡ್ಡಿ ಹಂಗನಕಟ್ಟಿ, ಹೇಮರಡ್ಡಿ ಬಿಸರಳ್ಳಿ, ಜೆಡಿಎಸ್‌ ರಾಜ್ಯ ಉಪಾಧ್ಯಕ್ಷ ಪ್ರದೀಪಗೌಡ ಮಾಲಿಪಾಟೀಲ, ಸಂಗಪ್ಪ ವಕ್ಕಳದ, ಕೇಶವರಡ್ಡಿ ಮಾದಿನೂರು ಇದ್ದರು.

ಟಾಪ್ ನ್ಯೂಸ್

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್‌ ಕಾಸ್ಟಿಂಗ್‌ ಜಾರಿಯಾಗಲಿ

ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್‌ ಕಾಸ್ಟಿಂಗ್‌ ಜಾರಿಯಾಗಲಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.