ವಲಸಿಗರ ಥರ್ಮಲ್ ಸ್ಕ್ರೀನಿಂಗ್
Team Udayavani, Jun 12, 2020, 6:58 AM IST
ಕಾರಟಗಿ: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರು ತಮಿಳುನಾಡಿನಿಂದ ಆಗಮಿಸಿದ 16 ಜನ ವಲಸಿಗರ ಥರ್ಮಲ್ ಸ್ಕ್ರೀನಿಂಗ್ ನಡೆಸಿ ಹೋಮ್ ಕ್ವಾರಂಟೈನ್ಗೆ ಆದೇಶಿಸಿದರು.
ಉಡುಪಿಯಿಂದ 7 ಜನ, ಬೆಂಗಳೂರಿನಿಂದ 9 ಜನ, ಕಲಬುರ್ಗಿಯಿಂದ ಇಬ್ಬರು ತಾಲೂಕಿಗೆ ಆಗಮಿಸಿದ್ದು, ಸ್ವಯಂ ಪ್ರೇರಿತರಾಗಿ ಎಲ್ಲರೂ ಕಾರಟಗಿಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಆಗಮಿಸಿ ತಪಾಸಣೆಗೆ ಒಳಪಟ್ಟರು. ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ವಲಸಿಗರ ತಪಾಸಣೆಗೆ ವ್ಯವಸ್ಥೆ ಮಾಡಲಾಗಿದ್ದು, ಆರೋಗ್ಯ ಕೇಂದ್ರದ ವೈದ್ಯೆ ಡಾ| ಪ್ರಿಯಂಕಾ ಎಲ್ಲ ಥರ್ಮಲ್ ಸ್ಕ್ರೀನಿಂಗ್ ನಡೆಸಿ, ಕೋವಿಡ್ ವೈರಸ್ ನಿಯಂತ್ರಣಕ್ಕೆ ಅಗತ್ಯವಾಗಿ ಕೈಗೊಳ್ಳಬೇಕಾದ ಮುಂಜಾಗ್ರತೆಗಳ ಬಗ್ಗೆ ತಿಳಿಹೇಳಿ ಹೋಮ್ ಕ್ವಾರಂಟೈನ್ಲ್ಲಿರುವಂತೆ ಆದೇಶಿಸಿದರು.
ಅಲ್ಲದೇ ವಲಸಿಗರಲ್ಲಿ ಜತೆಗೆ ಹೆಚ್ಚಿನ ಸಂಖ್ಯೆಯ ಮಕ್ಕಳು ಇದ್ದು, ಅವರ ಮೇಲೆ ಹೆಚ್ಚಿನ ನಿಗಾವಹಿಸುವಂತೆಯೂ ಪಾಲಕರಿಗೆ ಸೂಚಿಸಿದರು.