Udayavni Special

6 ಕೋಟಿ ರೂ. ವೆಚ್ಚದಲ್ಲಿ ಶಾಲೆಗಳ ಅಭಿವೃದ್ಧಿ

ತಡಗವಾಡಿ, ದೊಡ್ಡಪಾಳ್ಯ ಶಾಲೆಗಳಿಗೆ ಬೇಕಿದೆಕಾಯಕಲ್ಪ

Team Udayavani, Dec 9, 2020, 5:21 PM IST

6 ಕೋಟಿ ರೂ. ವೆಚ್ಚದಲ್ಲಿ ಶಾಲೆಗಳ ಅಭಿವೃದ್ಧಿ

ದೊಡ್ಡಪಾಳ್ಯ ಶಾಲೆಯನ್ನು ತೆರವು ಮಾಡಿರುವ ದೃಶ್ಯ

ಮಂಡ್ಯ: ಶ್ರೀರಂಗಪಟ್ಟಣ ತಾಲೂಕಿನ ದೊಡ್ಡಪಾಳ್ಯ, ಅರೆಕೆರೆ ಹಾಗೂ ತಡಗವಾಡಿ ಗ್ರಾಮದ ಸರ್ಕಾರಿ ಶಾಲೆಗಳನ್ನು ಶಾಸಕ ರವೀಂದ್ರ ಶ್ರೀಕಂಠಯ್ಯ ಅವರು ದತ್ತು ಪಡೆದಿದ್ದು, ಸುಮಾರು 6 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಮಾದರಿ ಶಾಲೆ ಮಾಡಲು ಪಣತೊಟ್ಟಿದ್ದಾರೆ.

2020-21ನೇ ಸಾಲಿನ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ಅರೆಕೆರೆ ಗ್ರಾಮದ ಕರ್ನಾಟಕ ಪಬ್ಲಿಕ್‌ ಶಾಲೆಗೆ3.70ಕೋಟಿ ರೂ., ತಡಗವಾಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 1.45 ಕೋಟಿ ರೂ ‌ . ಹಾಗೂ ದೊಡ್ಡಪಾಳ್ಯದಸರ್ಕಾರಿ ಹಿರಿಯಪ್ರಾಥಮಿಕ ಶಾಲೆಯನ್ನು2.50 ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ.

886 ವಿದ್ಯಾರ್ಥಿಗಳು: ಮೂರು ಶಾಲೆಗಳಲ್ಲಿ ಸುಮಾರು 886 ವಿದ್ಯಾರ್ಥಿಗಳು ವ್ಯಾಸಂಗಮಾಡುತ್ತಿದ್ದಾರೆ. ಅರಕೆರೆ ಶಾಲೆಯಲ್ಲಿ 1ರಿಂದ 12ನೇ ತರಗತಿವರೆಗೆ 576, ತಡಗವಾಡಿ ಶಾಲೆಯಲ್ಲಿ 1ರಿಂದ7ನೇ ತರಗತಿವರೆಗೆ 127 ಹಾಗೂ ದೊಡ್ಡಪಾಳ್ಯ ಶಾಲೆಯಲ್ಲಿ1ರಿಂದ8ನೇ ತರಗತಿವರೆಗೆ186 ಮಕ್ಕಳು ದಾಖಲಾಗಿದ್ದಾರೆ.

ದೊಡ್ಡಪಾಳ್ಯ ಶಾಲೆಗೆಬೇಕಿದೆ ನೂತನ ಕಟ್ಟಡ: ಮೂರು ಶಾಲೆಗಳ ಪೈಕಿ ದೊಡ್ಡಪಾಳ್ಯದ ಶಾಲೆಯ ಕಟ್ಟಡ ಹಳೆಯದಾಗಿದ್ದರಿಂದ ಈಗಾಗಲೇ ನೆಲಸಮಗೊಳಿಸಿ ನೂತನ ಕಟ್ಟಡ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಗಿದೆ. ಸುಮಾರು 10 ಕೊಠಡಿಗಳ ಅಗತ್ಯವಿದೆ. ಶಾಲೆಯನ್ನು ಪ್ರೌಢಶಾಲೆಗೆ ಸ್ಥಳಾಂತರಗೊಂಡಿದೆ. ತಡಗವಾಡಿ ಶಾಲೆಯ ಎಲ್ಲ ಕೊಠಡಿಗಳು ಶಿಥಿಲಗೊಂಡಿದ್ದು, ದುರಸ್ತಿ ಯಾಗಬೇಕಿದೆ.ಹೆಂಚಿನಕಟ್ಟಡವಾಗಿರುವುದರಿಂದ ಮಳೆ ಬಂದರೆ ನೀರು ಸೋರುತ್ತದೆ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಅರೆಕೆರೆ ಗ್ರಾಮದ ಶಾಲೆಯಕಟ್ಟಡ ಉತ್ತಮವಾಗಿದೆ.

ಮೂರು ಶಾಲೆಗಳಿಗಿಲ್ಲ ಕಾಂಪೌಂಡ್‌: ಮೂರು ಶಾಲೆಗಳಿಗೆ ಕಾಂಪೌಂಡ್‌ಗಳಿಲ್ಲ.ಕಾಂಪೌಂಡ್‌ ನಿರ್ಮಾಣಕ್ಕಾಗಿ ಅನುದಾನದಅಗತ್ಯವಿದೆ. ಕುಡಿಯುವ ನೀರಿನ ಸೌಲಭ್ಯವಿದ್ದು, ದೊಡ್ಡಪಾಳ್ಯ ಶಾಲೆಗೆ ಯಾವುದೇ ಶೌಚಾಲಯವಿಲ್ಲ.ಹೈಟೆಕ್‌ ಶೌಚಾಲಯ ಅಗತ್ಯವಿದೆ. ದೊಡ್ಡಪಾಳ್ಯ ಹಾಗೂತಡಗವಾಡಿ ಶಾಲೆಗೆ ಸಂಪೂರ್ಣವಾಗಿ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕಾಗಿದೆ.

ಶಿಕ್ಷಕರ ಕೊರತೆ: ತಡಗವಾಡಿ ಗ್ರಾಮದ ಶಾಲೆಗೆ ಶಿಕ್ಷಕರಕೊರತೆ ಇದೆ. 5 ಮಂದಿ ಇದ್ದರು. ಅದರಲ್ಲಿ ಇಬ್ಬರುಶಿಕ್ಷಕರು ವರ್ಗಾವಣೆಯಾಗಿದ್ದಾರೆ. ಕೊರೊನಾ ಸಂದರ್ಭದಲ್ಲಿ ಶಾಲೆಗಳು ತೆರೆಯದಹಿ ನ್ನೆಲೆಯಲ್ಲಿ ತೊಂದರೆಯಾಗಿಲ್ಲ.ಇಲ್ಲದಿದ್ದರೆತೊಂ ದರೆಯಾಗುತ್ತಿತ್ತು. ಅರೆಕೆರೆ ಹಾಗೂ ದೊಡ್ಡಪಾಳ್ಯ ಶಾಲೆಗಳಿಗೆ ಶಿಕ್ಷಕರಕೊರತೆ ಇಲ್ಲ. ಮೂರು ಶಾಲೆಗಳಲ್ಲಿ ಗುಣಮಟ್ಟದಶಿಕ್ಷಣಕ್ಕೆ ಒತ್ತು ನೀಡಲಾಗುತ್ತಿದೆ. ಅದರಂತೆ ಅರೆಕೆರೆಕರ್ನಾಟಕ ಪಬ್ಲಿಕ್‌ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮವಾಗಿದೆ.

ಕ್ರೀಡಾಂಗಣ ಅಭಿವೃದ್ಧಿ ಅಗತ್ಯ: ದೊಡ್ಡಪಾಳ್ಯ ಹಾಗೂ ತಡಗವಾಡಿಶಾಲೆಗಳಿಗೆ ಕ್ರೀಡಾಂಗಣದ ಕೊರತೆಇದೆ. ಇದರಿಂದ ಮಕ್ಕಳ ಕ್ರೀಡಾಚಟುವಟಿಕೆಗಳಿಗೆ ತೊಂದರೆಯಾಗಿದೆ. ಕ್ರೀಡಾಂಗಣ ಇದ್ದರೂ ಅಭಿವೃದ್ಧಿಯಾಗಿಲ್ಲ. ತಡಗವಾಡಿ ಶಾಲೆಗೆದೈಹಿಕ ಶಿಕ್ಷಕರಿಲ್ಲ. ದೊಡ್ಡಪಾಳ್ಯ ಶಾಲೆಗೆದೈಹಿಕ ಶಿಕ್ಷಕರಿದ್ದರೂ ಕ್ರೀಡಾಂಗಣವಿಲ್ಲ. ಅರಕೆರೆಕರ್ನಾಟಕ ಪಬ್ಲಿಕ್‌ ಶಾಲೆಯಲ್ಲಿ ಗ್ರಂಥಾಲಯವಿದ್ದರೆ, ತಡಗವಾಡಿ ಹಾಗೂ ದೊಡ್ಡಪಾಳ್ಯ ಶಾಲೆಗಳಿಗೆಯಾವುದೇ ಗ್ರಂಥಾಲಯವಿಲ್ಲ. ಈ ಎರಡು ಶಾಲೆಗಳಿಗೆ ಗ್ರಂಥಾಲಯ ಅಗತ್ಯವಾಗಿದೆ.

ಎಸ್‌ಡಿಎಂಸಿ ಸಕ್ರಿಯ: ಮೂರು ಶಾಲೆಗಳಲ್ಲಿ ಎಸ್‌ ಡಿಎಂಸಿ ಇದ್ದು, ಸಕ್ರಿಯವಾಗಿವೆ. ಶಾಲೆಯ ಮಕ್ಕಳ ಶಾಲೆಯ ಪ್ರತಿಯೊಂದು ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಸಹಕಾರ ನೀಡುತ್ತಿದ್ದಾರೆ.ಮೂರು ಶಾಲೆಗಳಲ್ಲಿ ಬಿಸಿಯೂಟದ ವ್ಯವಸ್ಥೆಉತ್ತಮವಾಗಿದೆ. ಆದರೆ, ಮಕ್ಕಳ ಊಟ ತಯಾರಿಕೆಗೆ ಅಡುಗೆಗೆ ಪ್ರತ್ಯೇಕ ಕೊಠಡಿಗಳ ಅಗತ್ಯವಿದೆ. ಪ್ರತಿ ದಿನ ಮಕ್ಕಳಿಗೆ ಗುಣಮಟ್ಟದ ಊಟ ನೀಡಲಾಗುತ್ತಿದೆ.

ಮಾದರಿ ಶಾಲೆಯಾಗಿ ಅಭಿವೃದ್ಧಿಗೆ ಕ್ರಮ :  ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ಮೂರುಶಾಲೆಗಳನ್ನು ಅಭಿವೃದ್ಧಿಪಡಿಸಲು ಅನುದಾನದ ಅಂದಾಜು ಮೊತ್ತದಪಟ್ಟಿ ತಯಾರಿಸಿ, ಸರ್ಕಾರಕ್ಕೆ ಸಲ್ಲಿಸಲಾಗಿದೆ. ಸರ್ಕಾರ ಶೀಘ್ರ ಅನುದಾನ ಮಂಜೂರು ಮಾಡಿದರೆ ಶಾಲೆಗಳ ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು. ಮೂರು ಶಾಲೆಗಳಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಮಾದರಿ ಶಾಲೆ ಮಾಡಲು ಪಣತೊಟ್ಟಿದ್ದೇವೆ ಎಂದು ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕ ರವೀಂದ್ರ ಶ್ರೀಕಂಠಯ್ಯ ತಿಳಿಸಿದ್ದಾರೆ.

 

ಎಚ್‌.ಶಿವರಾಜು

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

tdy-02

8 ವರ್ಷಗಳಲ್ಲಿ ದ.ಕ.ದ ಹಳ್ಳಿಗಳಿಗೂ ಸಿಎನ್‌ಜಿ

tdy-2

ಬೆಳಗಾವಿಯಲ್ಲಿ ಐಟಿ ಪಾರ್ಕ್‌ ಯೋಜನೆ ಕಾರ್ಯಗತವಾದರೆ 60 ಲಕ್ಷ ಉದ್ಯೋಗ ಸೃಷ್ಟಿ

ಬಿಜೆಪಿ ಶಾಸಕರಿಂದಲೇ ಸಿಡಿ ಆರೋಪ ತನಿಖೆಯಾಗಲಿ-ಎಸ್‍ಆರ್.ಪಾಟೀಲ

ಬಿಜೆಪಿ ಶಾಸಕರಿಂದಲೇ ಸಿಡಿ ಆರೋಪ ತನಿಖೆಯಾಗಲಿ-ಎಸ್‍ಆರ್.ಪಾಟೀಲ

00

51ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಮೊದಲ ಬಾರಿಗೆ ಕನ್ನಡದ ನಟನಿಗೆ ಉದ್ಘಾಟನಾ ಗೌರವ

Principal’s insistence on starting Frist PUC: Suresh Kumar

ಪ್ರಥಮ ಪಿಯುಸಿ ಆರಂಭಕ್ಕೆ ಪ್ರಿನ್ಸಿಪಾಲರ ಒತ್ತಾಯ: ಸುರೇಶ್ ಕುಮಾರ್

Landline users must add zero before making calls to mobile numbers from today

ಲ್ಯಾಂಡ್ ಲೈನ್ ಬಳಕೆದಾರರ ಗಮನಕ್ಕೆ: ಇನ್ನು ಮುಂದೆ ಮೊಬೈಲ್ ಗೆ ಕರೆಮಾಡುವ ಮುನ್ನ ‘0’ ಕಡ್ಡಾಯ

If we don’t stop this now, it will continue to happen in other sectors too, says Rahul Gandhi on new farm laws

ಮೋದಿ ಸರ್ಕಾರ ರೈತರನ್ನು ಗೌರವಿಸುತ್ತಿಲ್ಲ, ಬದಲಾಗಿ ಕಡೆಗಣಿಸುತ್ತಿದೆ: ರಾಹುಲ್ ಗಾಂಧಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

The farmer commits suicide by holding an electric wire

ಸಾಲಬಾಧೆ: ವಿದ್ಯುತ್ ಪ್ರವಹಿಸುತ್ತಿದ್ದ ತಂತಿ ಹಿಡಿದು ರೈತ ಆತ್ಮಹತ್ಯೆ

abhishek

ಅಭಿಷೇಕ್ ನಟನೆಯ ‘ಬ್ಯಾಡ್ ಮ್ಯಾನರ್ಸ್’ ಚಿತ್ರತಂಡಕ್ಕೆ ಶುಭ ಕೋರಿದ ನಟ ದರ್ಶನ್

bike

ಮಂಡ್ಯ: ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳ ಬಂಧನ

ram-mandir

ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿದ ಸುಮಲತಾ ಅಂಬರೀಶ್

mandya-2

ಮಂಡ್ಯ: ದರೋಡೆಗೆ ಹೊಂಚು ಹಾಕುತ್ತಿದ್ದ 10 ಮಂದಿಯ ಬಂಧನ

MUST WATCH

udayavani youtube

ಪಾಕ್ ಪರ ಘೋಷಣೆ ವಿಚಾರ: ಮಂಗಳೂರಿನಲ್ಲಿ ಎಸ್‌ಡಿಪಿಐನಿಂದ ‘SP ಕಚೇರಿ ಚಲೋ’ ಪ್ರತಿಭಟನೆ

udayavani youtube

ದಕ್ಷಿಣಕನ್ನಡ ಜಿಲ್ಲೆಯ 6 ಕೇಂದ್ರಗಳಲ್ಲಿ ನಾಳೆಯಿಂದ ಲಸಿಕೆ ವಿತರಣೆ: ಡಾ. ಕೆ.ವಿ. ರಾಜೇಂದ್ರ

udayavani youtube

ಸಚಿವ ಸಂಪುಟ ಅಸಮಾಧಾನ: ಮಾರ್ಗದಲ್ಲಿ ನಿಂತು ಅಪಸ್ವರ ತೆಗೆಯೋ ಅವಶ್ಯಕತೆ ಇಲ್ಲ ಎಂದ ನಳಿನ್

udayavani youtube

ಕತ್ತಲೆ ಕವಿದ ಬದುಕಿನಲ್ಲಿ ಬೆಳಕು ಮೂಡಿಸಿದ ಸ್ವ ಉದ್ಯೋಗ | Udayavani

udayavani youtube

ಭಾರತ ಆತ್ಮನಿರ್ಭರವಾಗಲು ಗ್ರಾಹಕರು ಸ್ಥಳೀಯ ವ್ಯಾಪಾರಿಗಳನ್ನು ಬೆಂಬಲಿಸಬೇಕು

ಹೊಸ ಸೇರ್ಪಡೆ

tdy-02

8 ವರ್ಷಗಳಲ್ಲಿ ದ.ಕ.ದ ಹಳ್ಳಿಗಳಿಗೂ ಸಿಎನ್‌ಜಿ

ಅರ್ಜುನ್‌ ತೆಂಡುಲ್ಕರ್‌ ಪದಾರ್ಪಣೆ

ಅರ್ಜುನ್‌ ತೆಂಡುಲ್ಕರ್‌ ಪದಾರ್ಪಣೆ

ನೆಟ್‌ ಬೌಲರ್‌’ ನಟರಾಜನ್‌ ದಾಖಲೆ : 44 ದಿನಗಳಲ್ಲಿ ಮೂರರಲ್ಲೂ ಪದಾರ್ಪಣೆ

ನೆಟ್‌ ಬೌಲರ್‌’ ನಟರಾಜನ್‌ ದಾಖಲೆ : 44 ದಿನಗಳಲ್ಲಿ ಮೂರರಲ್ಲೂ ಪದಾರ್ಪಣೆ

ಸ್ವಯಂಪ್ರೇರಿತ ನಿಯಂತ್ರಣ ಅಗತ್ಯಕ್ಕೆ  ವಿಜ್ಞಾನಿಗಳ ಸಲಹೆ

ಸ್ವಯಂಪ್ರೇರಿತ ನಿಯಂತ್ರಣ ಅಗತ್ಯಕ್ಕೆ ವಿಜ್ಞಾನಿಗಳ ಸಲಹೆ

ಜಿಲ್ಲೆಯಲ್ಲಿ ಡಿಪಿಆರ್‌ ಸಿದ್ಧ

ಜಿಲ್ಲೆಯಲ್ಲಿ ಡಿಪಿಆರ್‌ ಸಿದ್ಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.