Udayavni Special

ಪಾಂಡವಪುರ ತಾಲೂಕಲ್ಲಿ ನಾಲ್ಕು ಗ್ರಾಮ ಸೀಲ್‌ಡೌನ್‌


Team Udayavani, May 1, 2021, 2:45 PM IST

ಪಾಂಡವಪುರ ತಾಲೂಕಲ್ಲಿ ನಾಲ್ಕು ಗ್ರಾಮ ಸೀಲ್‌ಡೌನ್‌

ಪಾಂಡವಪುರ: ಕೋವಿಡ್ ಹಿನ್ನೆಲೆಯಲ್ಲಿ ತಾಲೂಕಿನ 4 ಗ್ರಾಮಗಳನ್ನು ಸೀಲ್‌ಡೌನ್‌ ಮಾಡಲಾಗಿದ್ದು, 10 ಮಂದಿ ಬಲಿಯಾಗಿದ್ದಾರೆ. ಜತೆಗೆ112 ಮಂದಿಗೆ ಪಾಸಿಟಿವ್‌ ಕಾಣಿಸಿಕೊಂಡಿದ್ದು ಸೋಂಕಿತರ ಸಂಖ್ಯೆ 754ಕ್ಕೇರಿದೆ.

ಗ್ರಾಮಗಳು: ತಾಲೂಕಿನ ಮಾಣಿಕ್ಯನಹಳ್ಳಿ ಗ್ರಾಪಂಗೆ ಸೇರಿದ ಎಂ.ಶೆಟ್ಟಹಳ್ಳಿ ಹಾಗೂ ನಾರಾಯಣಪುರ ಗ್ರಾಪಂಗೆ ಸೇರಿದ ವಳಗೆರೆದೇವರಹಳ್ಳಿ, ಕೋಡಾಲ ಗ್ರಾಮ ಹಾಗೂ ಹೊನಗಾನಹಳ್ಳಿ ಗ್ರಾಪಂಗೆ ಸೇರಿದಕಣಿವೆಕೊಪ್ಪಲು ಗ್ರಾಮದಲ್ಲಿ ಒಂದೇ ದಿನದಲ್ಲಿ 25ಕ್ಕೂ ಹೆಚ್ಚು ಮಂದಿಗೆ ಸೋಂಕು ದೃಢಪಟ್ಟ ಹಿನ್ನೆಲೆ ತಾಲೂಕು ಆಡಳಿತದ ಸೂಚನೆ ಮೇರೆಗೆ ಗ್ರಾಪಂ ಆಡಳಿತ ಸೀಲ್‌ಡೌನ್‌ ಮಾಡಿದೆ.

ಸೀಲ್‌ಡೌನ್‌ ಗ್ರಾಮಗಳು: ವಳಗೆರೆದೇವರಹಳ್ಳಿ, ಕೋಡಾಲ, ಎಂ.ಶೆಟ್ಟಹಳ್ಳಿ ಹಾಗೂ ಕಣಿವೆಕೊಪ್ಪಲು ಗ್ರಾಮದಲ್ಲಿ 25ಕ್ಕೂ ಮಂದಿಗೆ ಕೋವಿಡ್ ಪಾಸಿಟಿವ್‌ ಪತ್ತೆಯಾಗಿರುವುದರಿಂದ ತಹಶೀಲ್ದಾರ್‌ ಪ್ರಮೋದ್‌ ಎಲ್‌.ಪಾಟೀಲ್‌ ಹಾಗೂ ತಾಲೂಕು ಆರೋಗ್ಯಾಧಿಕಾರಿ ಡಾ.ಸಿ.ಎ.ಅರವಿಂದ್‌ ಮಾರ್ಗ ದರ್ಶನದಲ್ಲಿ ಸೀಲ್‌ಡೌನ್‌ ಮಾಡಿ ಎಚ್ಚರಿಕೆ ನಾಮಫ‌ಲಕ ಪ್ರಕಟಿಸಿ ನಾಕಾಬಂದಿ ಹಾಕಲಾಗಿದೆ.

ಕಳೆದ 3 ದಿನಗಳ ಹಿಂದೆ ತಾಲೂಕಿನ ವಳಗೆರೆ ದೇವರ ಹಳ್ಳಿ ಗ್ರಾಮವನ್ನು ಸೀಲ್‌ಡೌನ್‌ ಮಾಡಲಾಗಿತ್ತು.

10 ಮಂದಿ ಕೋವಿಡ್ ಗೆ ಬಲಿ: ಶುಕ್ರವಾರ ದಿನದಂದೇ ತಾಲೂಕಿನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ 10 ಮಂದಿ ಶ್ವಾಸಕೋಶ ಮತ್ತು ಉಸಿರಾಟದ ತೊಂದರೆಯಿಂದ ಕೊರೊನಾಗೆ ಬಲಿಯಾಗಿದ್ದಾರೆ.ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ತಾಲೂಕಿನ ಹಿರೇಮರಳಿ ಗ್ರಾಮದ ಯಶೋಧಮ್ಮ (75), ಕ್ಯಾತನಹಳ್ಳಿ ಗ್ರಾಮದ ಶಂಕರ್‌ (55), ಬಳೇಅತ್ತಿಗುಪ್ಪೆ ಗ್ರಾಮದ ಮಹೇಶ್‌ (37), ಪಾಂಡವಪುರ ಸರ್ಕಾರಿಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬನ್ನಂಗಾಡಿಗ್ರಾಮದ ಮಹದೇವಮ್ಮ (48), ಹರವು ಗ್ರಾಮದ ರಾಜು (35),ಹೋಂ ಐಸೋಲೇಷನ್‌ ಕ್ವಾರಂಟೈನ್‌ ನಲ್ಲಿದ್ದ ಮಾರ್ಮಳ್ಳಿಯ ತಾಯಮ್ಮ (40), ವದೇಸಮುದ್ರ ಗ್ರಾಮದ ಈರಣ್ಣಚಾರಿ (54),ಚಿಕ್ಕ ಬ್ಯಾಡರಹಳ್ಳಿ ಗ್ರಾಮದ ಕೃಷ್ಣೇಗೌಡ (30), ಡಾಮಡಹಳ್ಳಿ ಗ್ರಾಮದ ಭಾಗ್ಯಾ (35), ಡಿಂಕಾ ಶೆಟ್ಟಹಳ್ಳಿಯ ಚಂದ್ರೇಗೌಡ (50), ಶ್ಯಾದನಹಳ್ಳಿ ಯ ದೇವಮ್ಮ (75) ಬಲಿಯಾಗಿದ್ದಾರೆ. ಸ್ವಯಂ ಪ್ರೇರಿತ ಬಂದ್‌: ತಾಲೂಕಿನ ಚಿನಕುರಳಿಗ್ರಾಮ ದಲ್ಲಿ ಸ್ವಯಂ ಪ್ರೇರಿತವಾಗಿ ಅಂಗಡಿಮುಂಗಟ್ಟು ಮುಚ್ಚಿ ಮುಂದಿನ 5 ದಿನಗಳ ಕಾಲ ಸಂಪೂರ್ಣ ಬಂದ್‌ ಮಾಡಲು ತೀರ್ಮಾನಿಸಿ ಲಾಕ್‌ಡೌನ್‌ ಮಾಡಿದರು.

 

ಟಾಪ್ ನ್ಯೂಸ್

covid Task Force Committee Meeting

ಮೂಡುಬಿದಿರೆ: ಕೋವಿಡ್ ಟಾಸ್ಕ್ ಫೊರ್ಸ್ ಸಮಿತಿ ಸಭೆ

ಚಂದ್ರನಲ್ಲಿ ಉಂಟಾಗಿದೆ ಭೂಕುಸಿತ : ನಾಸಾ ಸಂಶೋಧನೆಯಲ್ಲಿ ಕಂಡು ಬಂದಿದೆ ಅಚ್ಚರಿ ಅಂಶ

ಚಂದ್ರನಲ್ಲಿ ಉಂಟಾಗಿದೆ ಭೂಕುಸಿತ : ನಾಸಾ ಸಂಶೋಧನೆಯಲ್ಲಿ ಕಂಡು ಬಂದಿದೆ ಅಚ್ಚರಿ ಅಂಶ

Parul Yadav Positive Talk

ಪಾರುಲ್‌ ಯಾದವ್‌ ಪಾಸಿಟಿವ್‌ ಟಾಕ್‌

m

ಕೋವಿಡ್ ರೋಗಿಯ ಮೇಲೆ ಅತ್ಯಾಚಾರ-ಸಂತ್ರಸ್ತೆ ಸಾವು : ತಿಂಗಳ ನಂತರ ಪ್ರಕರಣ ಬೆಳಕಿಗೆ

ಒಂದೇ ಕುಟುಂಬದ 11 ಮಂದಿ ಮನೆಯಲ್ಲೇ ಇದ್ದು ಕೋವಿಡ್ -19 ಗೆದ್ದರು!

ಒಂದೇ ಕುಟುಂಬದ 11 ಮಂದಿ ಮನೆಯಲ್ಲೇ ಇದ್ದು ಕೋವಿಡ್ -19 ಗೆದ್ದರು!

bವಚಷಸದ್ಗವ

ಗೋವಾದಲ್ಲಿ ಮತ್ತೊಂದು ದುರಂತ : ಆಕ್ಸಿಜನ್ ಕೊರತೆಯಿಂದ 15 ಮಂದಿ ಸಾವು

ಎರಡನೇ ಡೋಸ್‌ ಯಾವಾಗ? ಆಗದಿದ್ದರೆ ಹಾಗೇ ಹೇಳಿ : ಸರಕಾರದ ವಿರುದ್ಧ ಹೈಕೋರ್ಟ್‌ ಗರಂ

ಎರಡನೇ ಡೋಸ್‌ ಯಾವಾಗ? ಆಗದಿದ್ದರೆ ಹಾಗೇ ಹೇಳಿ : ಸರಕಾರದ ವಿರುದ್ಧ ಹೈಕೋರ್ಟ್‌ ಗರಂಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12mnd_3_1205bg_2

ಆಕ್ಸಿಜನ್‌ ಪ್ಲಾಂಟ್‌ ನಿರ್ಮಾಣಕ್ಕೆ ಚಾಲನೆ

ಮದ್ದೂರು: ಕೋವಿಡ್ ಸೋಂಕಿತ ಮಹಿಳೆ ಆತ್ಮಹತ್ಯೆ

ಮದ್ದೂರು: ಕೋವಿಡ್ ಸೋಂಕಿತ ಮಹಿಳೆ ಆತ್ಮಹತ್ಯೆ

Accident on Highway

ಹೈವೇಯಲ್ಲಿ ಅಪಘಾತ: ಚಾಲಕರು ಪಾರು

ರಾಜ್ಯದಲ್ಲಿಯೇ ಮೊದಲ ಆಕ್ಸಿಜನ್ ಪ್ಲಾಂಟ್ ಮಂಜೂರು: ನಾರಾಯಣಗೌಡ

ಮಂಡ್ಯದಲ್ಲಿ ರಾಜ್ಯದ ಮೊದಲ ಆಕ್ಸಿಜನ್ ಪ್ಲಾಂಟ್ ನಿರ್ಮಾಣ : ಸಚಿವ ನಾರಾಯಣ ಗೌಡ

Penalties for riders

ಅನಗತ್ಯ ಸಂಚಾರ: ಸವಾರರಿಗೆ ದಂಡ

MUST WATCH

udayavani youtube

ತನ್ನ ಮದುವೆಗೆ ತಾನೇ ಬ್ಯಾಂಡ್ ಬಾರಿಸಿದ ಮದುಮಗ

udayavani youtube

ಸರ್ವಾಧಿಕಾರಿ ಧೋರಣೆಗೆ ಆಕ್ರೋಶ : ಉನ್ನಾವ್ನಲ್ಲಿ ವೈದ್ಯರಿಂದ ಸಾಮೂಹಿಕ ರಾಜೀನಾಮೆ

udayavani youtube

ಬೆಂಗಳೂರು: ಮನೆ ಬಾಗಿಲಿಗೆ ಬರಲಿದೆ ಆಕ್ಸಿಜನ್‌ ಬಸ್‌

udayavani youtube

18 ರಿಂದ 44 ವರ್ಷ ವಯೋಮಾನದವರಿಗೆ ಸದ್ಯಕ್ಕಿಲ್ಲ ಲಸಿಕೆ

udayavani youtube

ಕರಾವಳಿಯಲ್ಲಿ ಚಂಡಮಾರುತ ವಾರ್ನಿಂಗ್!

ಹೊಸ ಸೇರ್ಪಡೆ

covid Task Force Committee Meeting

ಮೂಡುಬಿದಿರೆ: ಕೋವಿಡ್ ಟಾಸ್ಕ್ ಫೊರ್ಸ್ ಸಮಿತಿ ಸಭೆ

The only hope is light

ಭರವಸೆಯೊಂದೇ ಬೆಳಕು

ಚಂದ್ರನಲ್ಲಿ ಉಂಟಾಗಿದೆ ಭೂಕುಸಿತ : ನಾಸಾ ಸಂಶೋಧನೆಯಲ್ಲಿ ಕಂಡು ಬಂದಿದೆ ಅಚ್ಚರಿ ಅಂಶ

ಚಂದ್ರನಲ್ಲಿ ಉಂಟಾಗಿದೆ ಭೂಕುಸಿತ : ನಾಸಾ ಸಂಶೋಧನೆಯಲ್ಲಿ ಕಂಡು ಬಂದಿದೆ ಅಚ್ಚರಿ ಅಂಶ

Parul Yadav Positive Talk

ಪಾರುಲ್‌ ಯಾದವ್‌ ಪಾಸಿಟಿವ್‌ ಟಾಕ್‌

m

ಕೋವಿಡ್ ರೋಗಿಯ ಮೇಲೆ ಅತ್ಯಾಚಾರ-ಸಂತ್ರಸ್ತೆ ಸಾವು : ತಿಂಗಳ ನಂತರ ಪ್ರಕರಣ ಬೆಳಕಿಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.