ಗೆಳೆಯನ ಅಗಲಿಕೆ ಅರಗಿಸಿಕೊಳ್ಳಲಾಗದ ನೋವಿನಲ್ಲಿ ಸ್ನೇಹಿತರು


Team Udayavani, Feb 16, 2019, 7:26 AM IST

geleyan.jpg

ಮಂಡ್ಯ: ತನ್ನ ವಿಶೇಷ ಗುಣದಿಂದಲೇ ಎಲ್ಲರ ಮೆಚ್ಚುಗೆ ಗಳಿಸಿದ್ದ ಯೋಧ ಗುರು ಅವರ ಅಗಲಿಕೆಯನ್ನು ಕುಟುಂಬದವರು ಮತ್ತು ಸ್ನೇಹಿತರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದೇ ಕಾರಣಕ್ಕೆ ಗುರುವನ್ನು ಬಲಿ ತೆಗೆದುಕೊಂಡ ಉಗ್ರರಿಗೆ ತಕ್ಕ ಶಿಕ್ಷೆ ಆಗಲೇಬೇಕೆಂಬ ಒತ್ತಾಯ ಮಾಡುತ್ತಿದ್ದಾರೆ.

ಗುರು ಪ್ರೀತಿ, ವಿಶ್ವಾಸ, ಆತ್ಮೀಯತೆಗೆ ಕಾಲೋನಿಯ ಜನರು ಮರುಳಾಗಿದ್ದರು. ಊರಿನ ತುಂಬೆಲ್ಲಾ ಇವನನ್ನು ಪ್ರೀತಿಸುವ ಜನರಿದ್ದರು, ಆತ್ಮೀಯ ಗೆಳೆಯರೂ ಇದ್ದರು. ಅವರ್ಯಾರು ಗುರು ಉಗ್ರರ ದಾಳಿಗೆ ಬಲಿಯಾಗಿರುವುದನ್ನು ಈಗಲೂ ನಂಬುವ ಸ್ಥಿತಿಯಲ್ಲಿಲ್ಲ.

ಗುರುವಾರ ಸಂಜೆ ಉಗ್ರರ ದಾಳಿಗೆ ಯೋಧರು ವೀರ ಮರಣವನ್ನಪ್ಪಿದ್ದಾರೆಂಬ ಮಾಹಿತಿ ಪ್ರಸಾರವಾಗುತ್ತಿದ್ದಂತೆ ಅದಾಗಲೇ ಗುಡಿಗೆರೆ ಕಾಲೋನಿಯೊಳಗೆ ಆತಂಕ ಮಡುಗಟ್ಟಿತ್ತು. ಆದರೆ, ಈ ವಿಷಯವನ್ನು ಕುಟುಂಬದವರಿಗೆ ತಿಳಿಸಿರಲಿಲ್ಲ. ಬಳಿಕ ಒಬ್ಬರಿಂದ ಒಬ್ಬೊಬ್ಬರಿಗೆ ವಿಷಯ ಹರಡಿ ಕುಟುಂಬದವರಿಗೂ ಮಾಹಿತಿ ಸಿಕ್ಕಿದ ಕೂಡಲೇ ಕಾಲೋನಿಯ ವಾತಾವರಣವೇ ಬದಲಾಯಿತು. ಸಂಬಂಧಿಕರು, ಸ್ನೇಹಿತರು, ಅಕ್ಕಪಕ್ಕದ ಮನೆಯವರೆಲ್ಲ ಗುರು ಅವರ ಮನೆ ಎದುರು ಜಮಾಯಿಸಿದ್ದರು.

ಈ ವೇಳೆಗೆ ವಿಷಯವನ್ನು ಗುರು ವೀರ ಮರಣದ ಸುದ್ದಿ ತಿಳಿದು ಸಹೋದರರು, ತಂದೆ, ತಾಯಿಯ ಆಕ್ರಂದನ ಮುಗಿಲುಮುಟ್ಟಿತ್ತು. ಇವರ ರೋಧನೆ ಕಂಡು ಸ್ಥಳದಲ್ಲಿದ್ದವರ ಕಣ್ಣಾಲಿಗಳೂ ಒದ್ದೆಯಾದವು. ಇನ್ನು ಪತ್ನಿಗೆ ಸುಮಾರು ಸಮಯ ಮಾಹಿತಿ ನೀಡಿರಲಿಲ್ಲ. ಬಳಿಕ ಸಮಾಧಾನಪಡಿಸಿ ಗುಡಿಗೆರೆ ಕಾಲೋನಿಗೆ ಕರೆದುಕೊಂಡು ಬರಲಾಯಿತು.  

ತಂದೆಯ ರೋದನ: ಮಗನನ್ನು ಕೊಂದವರಿಗೆ ಘೋರ ಶಿಕ್ಷೆಯಾಗಬೇಕು. ನಿನ್ನೆ ರಾತ್ರಿ ನನ್ನ ಮಗನ ಜತೆ ಫೋನ್‌ನಲ್ಲಿ ಮಾತನಾಡಿ¨ªೆ. ಮಗನಿಗಾಗಿ ಹೊಸ ಮನೆ ಕಟ್ಟಿಸಿ, ಈಗಷ್ಟೇ ಮದುವೆ ಮಾಡಿದ್ದೆ. ಆದ್ರೆ, ಈಗ ನನ್ನ ಮಗ ನಮ್ಮ ಜತೆಯಿಲ್ಲ. ನನ್ನ ಮಗ ಎಲ್ಲರ ಮೇಲೂ ಪ್ರೀತಿ ಇಟ್ಟುಕೊಂಡಿದ್ದ. ಅವನನ್ನ ಕೊಂದ ದುಷ್ಟರನ್ನು ಬಿಡಬಾರದು ಎಂದು ಗುರು ತಂದೆ ಹೊನ್ನಯ್ಯ ಕಣ್ಣೀರಾದರು. 

ಪ್ರೀತಿಯ ಕರಿಯ: ಹುತಾತ್ಮ ಯೋಧ ಗುರುವನ್ನು ಪ್ರೀತಿಯಿಂದ ಕರಿಯ ಎಂದು ಸ್ನೇಹಿತರು ಕರೆಯುತ್ತಿದ್ದರು. ಜತೆಯಲ್ಲಿ ಟ್ರೈನಿಂಗ್‌ ಮಾಡಿದ ಮತ್ತು ಕೆಲಸ ಮಾಡುತ್ತಿದ್ದ ಗೆಳೆಯರು ಕರಿಯ ಎಂದು ಕರೆಯುತ್ತಿದ್ದರು. ಆದರೆ, ಏನೇ ತಮಾಷೆ ಮಾಡಿದ್ರು ನಗುತ್ತಲೇ ಮಾತನಾಡುತ್ತಿದ್ದರು.  

ಚುರುಕಿನ ಗುರು: ಗೆಳೆಯನ ಬಗ್ಗೆ ಮಾತನಾಡಿದ ಮತ್ತೂಬ್ಬ ಸಿಆರ್‌ಪಿಎಫ್ ಯೋಧ ಮಹದೇವ್‌, ಗುರು ತುಂಬಾ ಚುರುಕಿನವನಾಗಿದ್ದನು. ಆಟೋಟ ಎಲ್ಲದ್ದರಲ್ಲೂ ಮುಂದಿದ್ದ, ಬೆಂಗಳೂರಿನ ತರಾಳು ಟ್ರೈನಿಂಗ್‌ ಸೆಂಟರ್‌ನಲ್ಲಿ ಒಟ್ಟಿಗೆ ತರಬೇತಿ ಮುಗಿಸಿದ್ದೆವು. ಆದ್ರೆ ಇದೀಗ ಗುರು ಹುತಾತ್ಮರಾಗಿದ್ದು, ಇದಕ್ಕೆಲ್ಲ ತಕ್ಕ ಉತ್ತರ ಕೊಡುತ್ತೇವೆ ಎಂದು ಮೈಸೂರು ಮೂಲದ ಯೋಧ ಬಾವುಕರಾದರು.

ಫೋಟೋ, ಸೆಲ್ಫಿ ವಿಡಿಯೋ ವೈರಲ್‌: ಇನ್ನು ಗುರು, ಕರ್ತವ್ಯದಲ್ಲಿದ್ದ ವೇಳೆ ತೆಗೆಸಿಕೊಂಡಿದ್ದ ಪೋಟೋ ಮತ್ತು ಸೆಲ್ಫಿ ವಿಡಿಯೋಗಳನ್ನು ಕಂಡು ಕುಟುಂಬದವರು, ಸ್ನೇಹಿತರು ಕಣ್ಣೀರು ಹಾಕುತ್ತಿರುವ ದೃಶ್ಯ ಕಂಡುಬಂದಿತು. ಇನ್ನು ಕೆಲ ದಿನದ ಹಿಂದೆ ಗುರು ಜಮ್ಮುವಿನಿಂದ ಸೆಲ್ಫಿ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ  ವೈರಲ್‌ ಆಗಿದೆ. 

ಟಾಪ್ ನ್ಯೂಸ್

ಕಿತ್ತೂರಿನಲ್ಲಿ ಮೋಡಿ ಮಾಡಿದ ವಿಜಯಪ್ರಕಾಶ ಹಾಡು

ಕಿತ್ತೂರಿನಲ್ಲಿ ಮೋಡಿ ಮಾಡಿದ ವಿಜಯಪ್ರಕಾಶ ಹಾಡು

ಪಾಕ್‌ ಪ್ರಚಂಡ ಪ್ರದರ್ಶನ; ಭಾರತ ಪರಾಭವ

ಪಾಕ್‌ ಪ್ರಚಂಡ ಪ್ರದರ್ಶನ; ಭಾರತ ಪರಾಭವ

ಅ.29-ನ.2ರ ವರೆಗೆ ಪ್ರಧಾನಿ ವಿದೇಶ ಪ್ರವಾಸ

ಅ.29-ನ.2ರ ವರೆಗೆ ಪ್ರಧಾನಿ ವಿದೇಶ ಪ್ರವಾಸ

ಬಿಜೆಪಿ-ಜೆಡಿಎಸ್‌ಗೆ ನಾನೇ ಟಾರ್ಗೆಟ್‌: ಸಿದ್ದರಾಮಯ್ಯ

ಬಿಜೆಪಿ-ಜೆಡಿಎಸ್‌ಗೆ ನಾನೇ ಟಾರ್ಗೆಟ್‌: ಸಿದ್ದರಾಮಯ್ಯ

ಸಾಕು ನಾಯಿಗೆ ಸಸ್ಯಹಾರಿ ಊಟ ಕೊಟ್ಟರೆ ಜೈಲು!

ಸಾಕು ನಾಯಿಗೆ ಸಸ್ಯಹಾರಿ ಊಟ ಕೊಟ್ಟರೆ ಜೈಲು!

ಸಿಡಿದ ಅಸಲಂಕ; ಘರ್ಜಿಸಿದ ಶ್ರೀಲಂಕಾ

ಸಿಡಿದ ಅಸಲಂಕ; ಘರ್ಜಿಸಿದ ಶ್ರೀಲಂಕಾ

Untitled-1

ಕನ್ನಡದಲ್ಲೇ ಸಹಿ ಮಾಡುವ ಅಭ್ಯಾಸ ಬೆಳೆಸಿ ಕೊಳ್ಳೋಣ: ಸಚಿವ ಸುನಿಲ್‌ ಕುಮಾರ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗ್ರಾಮಸ್ಥರು

2 ಗ್ರಾಮಸ್ಥರಿಂದ ಪರಸ್ಪರ ಬಡಿದಾಟ

krs

ಕೆಆರ್‌ಎಸ್‌ ಜಲಾಶಯ ಭರ್ತಿಗೆ 3 ಅಡಿ ಬಾಕಿ

28

ಅಪಪ್ರಚಾರ ಮಾಡಿದವರ ಬಾಯಿ ಮುಚ್ಚಿಸಿದ್ದೇವೆ

ದೇಶಕ್ಕಾಗಿ ಪ್ರಾಣತೆತ್ತ ವೀರರನ್ನು ಸ್ಮರಿಸೋಣ

ದೇಶಕ್ಕಾಗಿ ಪ್ರಾಣತೆತ್ತ ವೀರರನ್ನು ಸ್ಮರಿಸೋಣ

Mysugar needs modern touches

ಮೈಷುಗರ್‌ಗೆ ಬೇಕಿದೆ ಆಧುನಿಕ ಸ್ಪರ್ಶ

MUST WATCH

udayavani youtube

ದಾಂಡೇಲಿ ನಗರದಲ್ಲಿ ಸಕ್ರೀಯಗೊಳ್ಳುತ್ತಿದೆ ಪೆಟ್ರೋಲ್ ಕಳ್ಳರ ಹಾವಳಿ

udayavani youtube

ಕಾಳಿ ನದಿ ದಂಡೆಯಿಂದ ಬಾಲಕನನ್ನು ಎಳೆದೊಯ್ದ ಮೊಸಳೆ : ಆತಂಕದಲ್ಲಿ ಸ್ಥಳೀಯರು

udayavani youtube

ರಸ್ತೆ ಬದಿ ಮಲಗಿದ್ದ ಗೋವು ಕಳ್ಳತನ : ಘಟನೆ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಬಯಲು

udayavani youtube

ಶಾರುಖ್ ಖಾನ್ ಬಿಜೆಪಿ ಸೇರಿದರೆ ಡ್ರಗ್ಸ್ ಪೌಡರ್ ಶುಗರ್ ಪೌಡರ್ ಆಗಿ ಬದಲಾಗಲಿದೆ

udayavani youtube

ಕುಮ್ಕಿ ಹಕ್ಕು ಅಂದ್ರೇನು?

ಹೊಸ ಸೇರ್ಪಡೆ

ಐಪಿಎಲ್‌: ಇಂದು ಹೊಸ ತಂಡಗಳ ಖರೀದಿಗೆ ಸ್ಪರ್ಧೆ

ಐಪಿಎಲ್‌: ಇಂದು ಹೊಸ ತಂಡಗಳ ಖರೀದಿಗೆ ಸ್ಪರ್ಧೆ

ಹೊಸ್ಮಾರು ಜಂಕ್ಷನ್‌ನಲ್ಲೆ ಇದೆ ಸಮಸ್ಯೆ ಹತ್ತಾರು!

ಹೊಸ್ಮಾರು ಜಂಕ್ಷನ್‌ನಲ್ಲೆ ಇದೆ ಸಮಸ್ಯೆ ಹತ್ತಾರು!

ಇಂದಿನಿಂದ ಶಾಲೆಯಂಗಳದಲ್ಲಿ ಚಿಣ್ಣರ ಕಲರವ

ಇಂದಿನಿಂದ ಶಾಲೆಯಂಗಳದಲ್ಲಿ ಚಿಣ್ಣರ ಕಲರವ

veerendra heggade

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸಡಗರ; ಡಾ| ಹೆಗ್ಗಡೆ ಪಟ್ಟಾಭಿಷೇಕ ವರ್ಧಂತಿ

ಕಿತ್ತೂರಿನಲ್ಲಿ ಮೋಡಿ ಮಾಡಿದ ವಿಜಯಪ್ರಕಾಶ ಹಾಡು

ಕಿತ್ತೂರಿನಲ್ಲಿ ಮೋಡಿ ಮಾಡಿದ ವಿಜಯಪ್ರಕಾಶ ಹಾಡು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.