ಹಳ್ಳಿ ಫೈಟ್‌: ಸಂಸದೆ ಸುಮಲತಾ ಮೌನ

1.25 ಲಕ್ಷ ಮತಗಳಿಂದ ಗೆಲ್ಲಿಸಿದ್ದ ಕಾರ್ಯಕರ್ತರಿಗೆ ಬೆಂಬಲವಿಲ್ಲ

Team Udayavani, Dec 20, 2020, 6:44 PM IST

ಹಳ್ಳಿ ಫೈಟ್‌: ಸಂಸದೆ ಸುಮಲತಾ ಮೌನ

ಮಂಡ್ಯ: ಜಿಲ್ಲೆಯಲ್ಲಿ ಸ್ವಾಭಿಮಾನದ ರಣಕಹಳೆ ಊದಿ ಕಳೆದ ಬಾರಿ ಲೋಕಸಭೆಸಾರ್ವತ್ರಿಕ ಚುನಾವಣೆಯಲ್ಲಿ ಭರ್ಜರಿಗೆಲುವು ದಾಖಲಿಸಿದ್ದ ಸಂಸದೆ ಸುಮಲತಾ ಅಂಬರೀಶ್‌ ಕಾರ್ಯಕರ್ತರಿಗೆ ಬೆಂಬಲ ನೀಡದೆ ತಟಸ್ಥರಾಗಿ ಉಳಿದಿರುವುದು ಕಾರ್ಯಕರ್ತರಲ್ಲಿ ಬೇಸರ ತರಿಸಿದೆ.

ಬಿಜೆಪಿ, ಕಾಂಗ್ರೆಸ್‌ ಹಾಗೂ ರೈತಸಂಘದ ಕಾರ್ಯಕರ್ತರು ಸುಮಲತಾ ಅವರನ್ನು ಸುಮಾರು 1.25 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿದ್ದರು. ಆದರೆ ಗ್ರಾಪಂ ಚುನಾವಣೆ ಕಾರ್ಯಕರ್ತರ ಚುನಾವಣೆಯಾಗಿದ್ದು, ಗೆಲ್ಲಿಸಿದ್ದಕಾರ್ಯಕರ್ತರಿಗೆ ಬೆಂಬಲ ನೀಡದೆ ದೂರ ಉಳಿದಿದ್ದಾರೆ. ಮಂಡ್ಯ ಲೋಕಸಭೆ ವ್ಯಾಪ್ತಿಯ 8 ಕ್ಷೇತ್ರಗಳಲ್ಲಿ ಸಂಸದೆ ಸುಮಲತಾ ಅವರ ಗೆಲುವಿಗೆಕಾರ್ಯಕರ್ತರು ಸ್ವಾಭಿಮಾನಿಗಳಂತೆ ದುಡಿದಿದ್ದರು. ನಾಗಮಂಗಲ ಹೊರತುಪಡಿಸಿ ಉಳಿದ 7 ಕ್ಷೇತ್ರಗಳಲ್ಲೂ ಮುನ್ನಡೆ ‌ ತಂದುಕೊಟ್ಟಿದ್ದರು.

ಮೈತ್ರಿಗೂ ಬಗ್ಗದ ಕಾರ್ಯಕರ್ತರು: ಸುಮಲತಾ ಗೆಲುವಿಗೆ ಬಿಜೆಪಿ ಪ್ರತ್ಯಕ್ಷವಾಗಿಬೆಂಬಲ ಘೋಷಿಸಿತ್ತು. ಇತ್ತ ರೈತಸಂಘವೂ ಬೆಂಬಲ ನೀಡಿತ್ತು. ಆದರೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷದ ಮೈತ್ರಿ ಅಭ್ಯರ್ಥಿ ಇದ್ದರೂ ಕಾಂಗ್ರೆಸ್‌ ಕಾರ್ಯಕರ್ತರು ಮಾತ್ರ ಮೈತ್ರಿಯನ್ನು ಮುರಿದು ಸುಮಲತಾ ಅವರನ್ನುಗೆಲ್ಲಿಸಿದ್ದರು.

ಸ್ಪಷ್ಟ ನಿಲುವು ತಿಳಿಸದ ಸುಮಲತಾ:

ಬಿಜೆಪಿ, ಕಾಂಗ್ರೆಸ್‌ ಹಾಗೂ ರೈತ ಸಂಘದ ಕಾರ್ಯಕರ್ತರೇ ಗ್ರಾಪಂ ಚುನಾವಣೆಯಲ್ಲಿ ಎದುರಾಳಿಗಳಾಗಿರುವುದರಿಂದ ಯಾರಿಗೆ ಬೆಂಬಲ ನೀಡಬೇಕು ಎಂಬ ಗೊಂದಲವೂ ಇದೆ. ಆದರೆ ಇದುವರೆಗೂ ಯಾವುದೇ ಸ್ಪಷ್ಟ ‌ ನಿಲುವು ತಿಳಿಸಿಲ್ಲ. ಇದರಿಂದ ಕಾರ್ಯಕರ್ತರು ಅತಂತ್ರರಾಗಿದ್ದಾರೆ.

ಕಹಳೆ ಊದುವ ರೈತ ಚಿಹ್ನೆಗೆ ಬೇಡಿಕೆ: 2019ರಲ್ಲಿ ನಡೆದ ಸಾರ್ವತ್ರಿಕ ಲೋಕಸಭೆಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸಂಸದೆ ಸುಮಲತಾ ಅಂಬರೀಶ್‌ ಅವರು ಪಡೆದಿದ್ದ ಕಹಳೆ ಊದುವ ರೈತ ಚಿಹ್ನೆ ಪಡೆದು ಗೆಲುವು ಸಾಧಿಸಿದ್ದರು. ಈಗ ಆ ಚಿಹ್ನೆಗೆ ಹೆಚ್ಚು ಬೇಡಿಕೆ ಬಂದಿದೆ. ಮತದಾರರ ಮನದಲ್ಲಿ ಚಿಹ್ನೆ ಉಳಿದುಕೊಂಡಿರುವ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ದುಂಬಾಲು ಬಿದ್ದಿದ್ದಾರೆ.

ಮೊದಲ ಹಂತದಲ್ಲಿ ನಡೆಯುವ ಮಂಡ್ಯ, ಮದ್ದೂರು ಹಾಗೂ ಮಳವಳ್ಳಿ ತಾಲೂಕುಗಳ ಗ್ರಾಪಂ ಚುನಾವಣೆಯಲ್ಲಿ ಸ್ಪರ್ಧಿಸಿರುವ ಬಹುತೇಕ ಅಭ್ಯರ್ಥಿಗಳು ಇದೇ ಚಿಹ್ನೆಗೆ ಬೇಡಿಕೆ ಇಟ್ಟಿದ್ದರು. ಅದರಂತೆ ಹಲವು ಅಭ್ಯರ್ಥಿಗಳಿಗೆ ಚಿಹ್ನೆ ಸಿಕ್ಕಿದೆ. ಎರಡನೇ ಹಂತದಲ್ಲಿ ನಡೆಯಲಿರುವ ಪಾಂಡವಪುರ, ಶ್ರೀರಂಗಪಟ್ಟಣ, ಕೆ.ಆರ್‌.ಪೇಟೆ ಹಾಗೂ ನಾಗಮಂಗಲ ತಾಲೂಕುಗಳಲ್ಲಿಯೂ ಚಿಹ್ನೆಗೆ ಬೇಡಿಕೆ ಹೆಚ್ಚಾಗಿದೆ.

ಗೊಂದಲದಲ್ಲಿರುವ ಅಭ್ಯರ್ಥಿಗಳು :

ತಳಮಟ್ಟದಲ್ಲಿ ಸುಮಲತಾ ಗೆಲುವಿಗೆ ಶ್ರಮಿಸಿದ್ದ ಕಾರ್ಯಕರ್ತರು ಈಗಾಗಲೇ ಗ್ರಾಪಂ ಚುನಾವಣೆ ಅಭ್ಯರ್ಥಿಗಳಾಗಿದ್ದಾರೆ. ಜಿಲ್ಲೆಯ ಮಂಡ್ಯ, ಮದ್ದೂರು, ಶ್ರೀರಂಗಪಟ್ಟಣ,ಕೆ.ಆರ್‌.ಪೇಟೆ, ನಾಗಮಂಗಲ ಹಾಗೂ ಮಳವಳ್ಳಿ ತಾಲೂಕುಗಳಲ್ಲಿರುವ ಕೆಲವು ಅಭ್ಯರ್ಥಿಗಳು ಪಕ್ಷೇತರರಾಗಿ ಸ್ಪರ್ಧಿಸಿದ್ದರೆ,ಕೆಲವರುಕಾಂಗ್ರೆಸ್‌,ಬಿಜೆಪಿಹಾಗೂ ರೈತಸಂಘದ ಬೆಂಬಲಿತರಾಗಿ ಚುನಾವಣೆ ಎದುರಿಸಲು ಸಜ್ಜಾಗಿದ್ದಾರೆ.

ಕ್ಷೇತ್ರಕ್ಕೆ ಬಾರದ ಸಂಸದೆ :  ಕಳೆದ ನವೆಂಬರ್‌ ತಿಂಗಳಲ್ಲಿ ಅಂಬರೀಶ್‌ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಜಿಲ್ಲೆಗೆ ಆಗಮಿಸಿದ್ದ ಸಂಸದೆ ಸುಮಲತಾ ಅವರು, ಗ್ರಾಪಂ ಚುನಾವಣೆ ಘೋಷಣೆಯಾದ ಬಳಿಕ ಕ್ಷೇತ್ರಕ್ಕೆ ಬಂದಿಲ್ಲ. ಇದರಿಂದ ಕಾರ್ಯಕರ್ತರು ಸಂಸದೆಯ ಆಗಮನದ ನಿರೀಕ್ಷೆಯಲ್ಲಿದ್ದಾರೆ.

ಟಾಪ್ ನ್ಯೂಸ್

1-dsfsdf

ಹಿಮಾಚಲದಲ್ಲಿ ಕಾಂಗ್ರೆಸ್ ಗೆ ಭಾರಿ ಶಾಕ್: ಕಾರ್ಯಾಧ್ಯಕ್ಷ ಮಹಾಜನ್ ಬಿಜೆಪಿಗೆ ಸೇರ್ಪಡೆ

ಪಿಎಫ್ ಐ ನಿಷೇಧ: ದೇಶದಲ್ಲಿ ಅಘೋಷಿತ ತುರ್ತುಪರಿಸ್ಥಿತಿ ಜಾರಿಯಾಗಿದೆ: ಎಸ್ ಡಿಪಿಐ

ಪಿಎಫ್ ಐ ನಿಷೇಧ: ದೇಶದಲ್ಲಿ ಅಘೋಷಿತ ತುರ್ತುಪರಿಸ್ಥಿತಿ ಜಾರಿಯಾಗಿದೆ: ಎಸ್ ಡಿಪಿಐ

10

ಸವಣೂರು: ವಿ.ಎ. ಕಚೇರಿಗೆ ನುಗ್ಗಿ ದಾಂಧಲೆ, ಕೊಲೆ ಯತ್ನ

ಚಾಮರಾಜನಗರ: ತಾಳಿಕಟ್ಟಿದವನಿಗೆ 3 ವರ್ಷ, ಕಟ್ಟಿಸಿದ ಶಾಸ್ತ್ರಿಗೆ 1 ವರ್ಷ ಜೈಲು ಶಿಕ್ಷೆ

ಚಾಮರಾಜನಗರ: ತಾಳಿಕಟ್ಟಿದವನಿಗೆ 3 ವರ್ಷ, ಕಟ್ಟಿಸಿದ ಶಾಸ್ತ್ರಿಗೆ 1 ವರ್ಷ ಜೈಲು ಶಿಕ್ಷೆ

ಆರ್ಡರ್‌ ಮಾಡಿದ್ದು ದುಬಾರಿ ಲ್ಯಾಪ್‌ ಟಾಪ್‌ .., ಬದಲಿಗೆ ಬಂದದ್ದು.. ಇದೆಂಥಾ ಮೋಸ.!

ಇದೆಂಥಾ ಮೋಸ! ಆರ್ಡರ್‌ ಮಾಡಿದ್ದು ದುಬಾರಿ ಲ್ಯಾಪ್‌ ಟಾಪ್‌ , ಬದಲಿಗೆ ಬಂದದ್ದು…

ಬಳ್ಳಾರಿ: ಮಟ್ಕಾ ಬುಕ್ಕಿ, ಅಕ್ಕಿ ವ್ಯಾಪಾರಿಯನ್ನು ಅಟ್ಟಾಡಿಸಿಕೊಂಡು ಹತ್ಯೆಗೈದ ದುಷ್ಕರ್ಮಿಗಳು

ಬಳ್ಳಾರಿ: ಮಟ್ಕಾ ಬುಕ್ಕಿ, ಅಕ್ಕಿ ವ್ಯಾಪಾರಿಯನ್ನು ಅಟ್ಟಾಡಿಸಿಕೊಂಡು ಹತ್ಯೆಗೈದ ದುಷ್ಕರ್ಮಿಗಳು

ಟಾಲಿವುಡ್ ಸೂಪರ್ ಸ್ಟಾರ್ ʻಮಹೇಶ್ ಬಾಬುʼಗೆ ಮಾತೃ ವಿಯೋಗ

ಟಾಲಿವುಡ್ ಸೂಪರ್ ಸ್ಟಾರ್ ʻಮಹೇಶ್ ಬಾಬುʼಗೆ ಮಾತೃ ವಿಯೋಗಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪಘಾತದ ಹೆದ್ದಾರಿಯಾದ ಹಲಗೂರು ರಸ್ತೆ

ಅಪಘಾತದ ಹೆದ್ದಾರಿಯಾದ ಹಲಗೂರು ರಸ್ತೆ

ಪಾದಯಾತ್ರೆಗೆ ಆಗಮಿಸಿ “ಕೈ’ ಬಲಪಡಿಸಿ

ಪಾದಯಾತ್ರೆಗೆ ಆಗಮಿಸಿ “ಕೈ’ ಬಲಪಡಿಸಿ

ರಸ್ತೆಗಳಲ್ಲಿನ ಗುಂಡಿ ಮುಚ್ಚಲು ಸಚಿವರು ನಿರ್ಲಕ್ಷ್ಯ

ರಸ್ತೆಗಳಲ್ಲಿನ ಗುಂಡಿ ಮುಚ್ಚಲು ಸಚಿವರು ನಿರ್ಲಕ್ಷ್ಯ

20-death

ಮಗಳ ಪ್ರೇಮ ವಿವಾಹ: ಮನನೊಂದು ತಂದೆ ಆತ್ಮಹತ್ಯೆ

9-arrest

ಶಾಂತಂ ಪಾಪಂ‌ ಸೀರಿಯಲ್ ನೋಡಿ ಪತಿಯನ್ನು ಹತ್ಯೆಗೈದ ಮಹಿಳೆ: ಪತ್ನಿ, ಪ್ರಿಯಕರ ಬಂಧನ

MUST WATCH

udayavani youtube

ಬಿಜೆಪಿ ಸರಕಾರ ಇರೋವರೆಗೆ ದೇಶ ದ್ರೋಹಿಗಳಿಗೆ ವಿಜೃಂಭಿಸಲು ಅವಕಾಶವಿಲ್ಲ

udayavani youtube

ಉಚ್ಚಿಲ ದಸರಾ ವೈಭವಕ್ಕೆ ಅದ್ದೂರಿಯ ಚಾಲನೆ

udayavani youtube

ಓದಿನ ಜೊತೆ ಕೃಷಿ : ಮಕ್ಕಳೇ ನಿರ್ಮಿಸಿದ ‘ಆರೋಗ್ಯವನ’ !

udayavani youtube

ಕ್ರಿಯೇಟಿವ್ ಪಿಯು ಕಾಲೇಜು ಮೂಡಬಿದ್ರಿ

udayavani youtube

ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಕಾಂಗ್ರೆಸ್ ನ ಟಾಪ್ ಲೀಡರ್ ಗಳೇ ಬೇಲ್ ನಲ್ಲಿ‌ ಇದ್ದಾರೆ

ಹೊಸ ಸೇರ್ಪಡೆ

1-dsfsdf

ಹಿಮಾಚಲದಲ್ಲಿ ಕಾಂಗ್ರೆಸ್ ಗೆ ಭಾರಿ ಶಾಕ್: ಕಾರ್ಯಾಧ್ಯಕ್ಷ ಮಹಾಜನ್ ಬಿಜೆಪಿಗೆ ಸೇರ್ಪಡೆ

ಪಿಎಫ್ ಐ ನಿಷೇಧ: ದೇಶದಲ್ಲಿ ಅಘೋಷಿತ ತುರ್ತುಪರಿಸ್ಥಿತಿ ಜಾರಿಯಾಗಿದೆ: ಎಸ್ ಡಿಪಿಐ

ಪಿಎಫ್ ಐ ನಿಷೇಧ: ದೇಶದಲ್ಲಿ ಅಘೋಷಿತ ತುರ್ತುಪರಿಸ್ಥಿತಿ ಜಾರಿಯಾಗಿದೆ: ಎಸ್ ಡಿಪಿಐ

10

ಸವಣೂರು: ವಿ.ಎ. ಕಚೇರಿಗೆ ನುಗ್ಗಿ ದಾಂಧಲೆ, ಕೊಲೆ ಯತ್ನ

ಜೆ.ಕೆ.ಮೈದಾನದಲ್ಲಿ ರಂಗೇರಿದ ಮಹಿಳಾ, ಮಕ್ಕಳ ದಸರಾ

ಜೆ.ಕೆ.ಮೈದಾನದಲ್ಲಿ ರಂಗೇರಿದ ಮಹಿಳಾ, ಮಕ್ಕಳ ದಸರಾ

ಚಾಮರಾಜನಗರ: ತಾಳಿಕಟ್ಟಿದವನಿಗೆ 3 ವರ್ಷ, ಕಟ್ಟಿಸಿದ ಶಾಸ್ತ್ರಿಗೆ 1 ವರ್ಷ ಜೈಲು ಶಿಕ್ಷೆ

ಚಾಮರಾಜನಗರ: ತಾಳಿಕಟ್ಟಿದವನಿಗೆ 3 ವರ್ಷ, ಕಟ್ಟಿಸಿದ ಶಾಸ್ತ್ರಿಗೆ 1 ವರ್ಷ ಜೈಲು ಶಿಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.