ನಿಖೀಲ್ ಗೆಲುವಿನ ವಿಡಿಯೋ ಹರಿಬಿಟ್ಟ ಜೆಡಿಎಸ್‌

Team Udayavani, May 16, 2019, 11:25 AM IST

ಭಾರತೀನಗರ: ದೇಶದ ಗಮನ ಸೆಳೆದಿರುವ ಮಂಡ್ಯ ಲೋಕಸಭಾ ಕ್ಷೇತ್ರದ ಫಲಿತಾಂಶದ ಬಗ್ಗೆ ವಿವಿಧ ಸಮೀಕ್ಷೆಗಳ ಜತೆಗೆ ದೇವರು ಹೂ ನೀಡಿ ಸುಮಲತಾ ಗೆಲ್ಲುತ್ತಾರೆ ಎಂದ ವಿಡಿಯೋ ವೈರಲ್ ಆದ ಬೆನ್ನಲ್ಲೇ ನಿಖೀಲ್ ಗೆಲ್ಲಲಿದ್ದಾರೆ ಎಂಬುದಕ್ಕೆ ಜೆಡಿಎಸ್‌ ಕಾರ್ಯಕರ್ತರು ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

ವೈರಲ್: ಇಲ್ಲಿಗೆ ಸಮೀಪದ ಹೊನ್ನಾಯಕನಹಳ್ಳಿ ಮಠದ ಸುಪ್ರಸಿದ್ಧ ಬಸವಣ್ಣ ಮೈತ್ರಿ ಅಭ್ಯರ್ಥಿ ನಿಖೀಲ್ಕುಮಾರಸ್ವಾಮಿಗೆ ಚುನಾವಣಾ ಪ್ರಚಾರದ ವೇಳೆ ಪಾದ ನೀಡಿತ್ತು. ತಮ್ಮ ಇಷ್ಟಾರ್ಥ ನೆರವೇರುವುದಾದರೆ ಮಾತ್ರ ಬಸವಣ್ಣ ಪಾದ ನೀಡುತ್ತಾನೆ. ಹೀಗಾಗಿ ಚುನಾವಣೆ ಪ್ರಚಾರದ ವೇಳೆಯೇ ಬಸವಣ್ಣ ನಿಖೀಲ್ಗೆ ಆಶೀರ್ವಾದ ಮಾಡಿದ್ದಾನೆ. ಜೆಡಿಎಸ್‌-ಕಾಂಗ್ರೆಸ್‌ ದೋಸ್ತಿ ಅಭ್ಯರ್ಥಿ ಗೆಲುವು ಖಚಿತ ಎಂದು ಜೆಡಿಎಸ್‌ ಕಾರ್ಯಕರ್ತರು ಹೇಳುತ್ತಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾ ಣದಲ್ಲಿ ವೈರಲ್ ಆಗಿದ್ದು, ಬಸವಣ್ಣನ ಭಕ್ತರು ನಿಖೀಲ್ ಪರವಾಗಿ ಹೆಚ್ಚು ಬೆಟ್ಟಿಂಗ್‌ ಕಟ್ಟಲು ಮುಂದಾಗಿದ್ದಾರೆ. ಬಸವ ಪಾದ ಕೊಟ್ಟಿರುವ ವಿಡಿಯೋ ಗಮನಿಸಿದ ಸುಮಲತಾ ಕಡೆಯವರು ಬೆಟ್ಟಿಂಗ್‌ ಕಟ್ಟಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ.

ಒಟ್ಟಾರೆ, ಫಲಿತಾಂಶ ಕುರಿತು ದಿನೇ ದಿನೆ ಕುತೂಹಲ ಹೆಚ್ಚುತ್ತಿದ್ದು, ಸಿಎಂ ಕುಮಾರಸ್ವಾಮಿ ದೇವರ ಮೊರೆ ಹೋಗಿರುವಂತೆಯೇ ಜೆಡಿಎಸ್‌ ಹಾಗೂ ಸುಮಲತಾ ಬೆಂಬಲಿಗರು ತಮ್ಮ ಇಷ್ಟದ ದೈವಗಳ ಬಳಿ ಭವಿಷ್ಯ ಕೇಳಲು ಮುಗಿಬೀಳುತ್ತಿದ್ದಾರೆ.

ಹೊನ್ನಾಯಕನಹಳ್ಳಿ ದೇವರ ಬಸವಣ್ಣ ಪ್ರಸಿದ್ಧವಾಗಿದ್ದು, ಯಾರಿಗೆ ಪಾದ ಕೊಡುತ್ತದೋ ಅಂತಹವರು ಗೆಲ್ಲುತ್ತಾರೆ
ಎಂಬುದು ಜನರ ನಂಬಿಕೆ. ನಿಖೀಲ್‌ ಅವರು ಪ್ರಚಾರಕ್ಕೆ ಬಂದಾಗ ಬೆಂಬಲಿಗರು ದೇವಾಲಯಕ್ಕೆ ಕರೆದೊಯ್ದು, ಪೂಜೆ ಸಲ್ಲಿಸಿದ ನಂತರ ನಿಖೀಲ್‌ ಚುನಾವಣೆಯ ಗೆಲುವಿಗಾಗಿ ಕೇಳಿದ್ದರಿಂದ ಬಸವಣ್ಣ ಪಾದ ನೀಡಿತ್ತು.
● ಶಿವಶಂಕರ್‌, ಗ್ರಾಮದ ಮುಖಂಡ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ