ಸುಮಲತಾ ಅಂಬರೀಷ್‌ ಗೆಲುವು ಸಾಧಿಸುತ್ತಾರೆ: ಯಶ್‌

Team Udayavani, May 16, 2019, 11:16 AM IST

ಮದ್ದೂರು: ಮಂಡ್ಯ ಲೋಕಸಭಾ ಕ್ಷೇತ್ರದ ಫ‌ಲಿತಾಂಶ ಕುರಿತಾಗಿ ಸ್ಪಷ್ಟವಾಗಿ ಹೇಳದೆ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್‌ ಗೆಲುವು ಸಾಧಿಸಲಿದ್ದಾರೆ ಎಂದಷ್ಟೇ ಚಿತ್ರನಟ ಯಶ್‌ ತಿಳಿಸಿದರು.

ಮದ್ದೂರು ತಾಲೂಕಿನ ಕೆರೆಮೇಗಲದೊಡ್ಡಿ ಗ್ರಾಮ ದಲ್ಲಿ ಖಾಸಗಿ ಕಾರ್ಯಕ್ರಮ ಹಿನ್ನೆಲೆಯಲ್ಲಿ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು.

ಸುಮಲತಾ ಅಂಬರೀಷ್‌ ಪರ ಉತ್ತಮ ವಾತಾವರಣ ವಿದ್ದು ಈಗಾಗಲೇ ಗೆಲುವಿನ ಅಂತರ ಹೇಳಿದರೆ ನಾವೇ ಕೊಚ್ಚಿ ಕೊಂಡಂತಾಗುತ್ತದೆ ಎಂದರು. ಮಂಡ್ಯದ ಫ‌ಲಿತಾಂಶವನ್ನು ನಿರ್ದಿಷ್ಠವಾಗಿ ಹೇಳ್ಳೋದಕ್ಕೆ ಆಗುವು ದಿಲ್ಲ. ಜಿಲ್ಲೆಯ ಮತದಾರರು ಯಾರನ್ನು ಕೈಹಿಡಿಯಲಿ ದ್ದಾರೆ ಎಂಬುದು ಮೇ 23ರ ಬಳಿಕವೇ ನಿರ್ಧಾರವಾಗಲಿದೆ ಎಂದು ಹೇಳಿದರು.

ಜನತೆ ಪರ:ಚುನಾವಣೆ ಮುಗಿದ ಬಳಿಕ ಜೋಡೆತ್ತುಗಳು ಮಂಡ್ಯದಲ್ಲಿ ಕಾಣಿಸದಿರುವ ಬಗ್ಗೆ ಎದುರಾಳಿಗಳು ಟೀಕೆ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಮಂಡ್ಯಕ್ಕೆ ಹಲವಾರು ಬಾರಿ ಆಗಮಿಸಿದ್ದು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್‌ ಹಲವಾರು ಗ್ರಾಮ ಗಳಿಗೆ ಭೇಟಿ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಜನರ ಜತೆ ನಿಲ್ಲುವುದಾಗಿ ತಿಳಿಸಿದರು.

ತಾವು ಮಂಡ್ಯ ರಾಜಕಾರಣಕ್ಕೆ ಬರುವುದಿಲ್ಲವೆಂದ ರಲ್ಲದೇ ತಾವು ಸ್ಪರ್ಧೆ ಮಾಡುವ ಬಗ್ಗೆ ಯಾವುದೇ ಆಲೋಚನೆ ಮಾಡಿಲ್ಲ. ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್‌ ಗೆಲುವು ಕಂಡಲ್ಲಿ ಉತ್ತಮ ಕೆಲಸ ಕಾರ್ಯ ಕೈಗೊಂಡು ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಲಿದ್ದಾರೆಂದರು.

ಜೋಡೆತ್ತು ಸಿನಿಮಾ: ಜೋಡೆತ್ತು ಟೈಟಲ್ ನೋಂದಣಿ ಆಗಿದ್ದು ತಾನು ಆ ಸಿನಿಮಾದಲ್ಲಿ ನಟಿಸುತ್ತಿಲ್ಲ. ದರ್ಶನ್‌ ಪ್ರೀತಿಯಿಂದ ಜೋಡೆತ್ತೆಂದು ಬಣ್ಣಿಸಿದ್ದರು. ತನಗಿಂತ ಹಿರಿಯ ನಟರಾದ ದರ್ಶನ್‌ ಹೇಳಿದ ಟೈಟಲ್ ಎಲ್ಲೆಡೆ ಫೇಮಸ್‌ ಆಯಿತು. ದರ್ಶನ್‌ ಅವರಂತಹ ದೊಡ್ಡ ಸ್ಟಾರ್‌ ಜತೆ ಸಿನಿಮಾ ಮಾಡಬೇಕೆಂದರೆ ಒಳ್ಳೆ ಕಥೆ ಸಿಗಬೇಕಿದೆ. ಕಥೆ ಬಂದರೆ ದರ್ಶನ್‌ರ ಜತೆ ಸಿನಿಮಾ ಮಾಡುತ್ತೇನೆಂದರು. ಇನ್ನು ನಿಖೀಲ್ ಎಲ್ಲಿದಿಯಪ್ಪಾ…ಸಿನಿಮಾಗೆ ಈಗಲೇ ಶುಭ ಕೋರಿದ ಅವರು ಕೆಜಿಎಫ್-2 ಸಿನಿಮಾ ಚಿತ್ರೀಕರಣ ಶುರುವಾಗುತ್ತಿದೆ ಎಂದರು.

ಅಭಿನಂದನೆ: ಕೆರೆಮೇಗಲದೊಡ್ಡಿಗೆ ತೆರಳುವ ಮಾರ್ಗಮಧ್ಯೆ ಶಿವಪುರದಲ್ಲಿ ಅಭಿಮಾನಿಗಳಿಂದ ಅಭಿನಂದನೆ ಸ್ವೀಕರಿಸಿದ ಬಳಿಕ ರಾಧಿಕ, ಹಾಲಪ್ಪ ದಂಪತಿಗಳ ಪುತ್ರಿ ಲಹರಿ ಅವರ 3ನೇ ವರ್ಷದ ಹುಟ್ಟು ಹಬ್ಬದ ವೇಳೆ ಪಾಲ್ಗೊಂಡು ಕೇಕ್‌ ಕತ್ತರಿಸಿ ಶುಭ ಹಾರೈಸಿದರು. ಸ್ಥಳದಲ್ಲಿದ್ದ ನಟ ಯಶ್‌ ಅವರ ನೂರಾರು ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದ್ದರು.

ಈ ವೇಳೆ ಪುರಸಭೆ ಸದಸ್ಯರಾದ ಸಚಿನ್‌, ನಂದೀಶ್‌, ಮಾಜಿ ಅಧ್ಯಕ್ಷ ಎಂ.ಪಿ.ಅಮರ್‌ಬಾಬು, ಮುಖಂಡರಾದ ಇಂಡುವಾಳ ಸಚ್ಚಿದಾನಂದ, ನಾಗೇಶ್‌, ಎಪಿಎಂಸಿ ಮಾಜಿ ನಿರ್ದೇಶಕ ಮಹೇಂದ್ರ ಇದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ