ರೈತರ ಜಮೀನಿಗೆ ಸೂಕ್ತ ಪರಿಹಾರ: ಡೀಸಿ ಭರವಸೆ


Team Udayavani, Sep 21, 2019, 12:54 PM IST

mandya-tdy-2

ನಾಗಮಂಗಲ: ತಾಲೂಕಿನ ದೇವಲಾಪುರ ಮತ್ತು ಬೋಗಾದಿ ಮಾರ್ಗವಾಗಿ ಮಾಗಡಿಯಿಂದ ಮಡಿಕೇರಿಯ ಸೋಮವಾರಪೇಟೆವರೆಗೆ ನಿರ್ಮಿಸುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕಳೆದುಕೊಳ್ಳುವ ರೈತರಿಗೆ ಸೂಕ್ತ ಪರಿಹಾರ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಭರವಸೆ ನೀಡಿದರು.

ತಾಲೂಕಿನ ಕಾಂತಾಪುರ ಗ್ರಾಮಕ್ಕೆ ಪಾಂಡವಪುರ ಉಪ ವಿಭಾಗಾಧಿಕಾರಿ ಶಿವಾನಂದ್‌ ಮತ್ತು ತಹಶೀಲ್ದಾರ್‌ ಎಂ.ವಿ.ರೂಪಾ ಮತ್ತು ಹೆದ್ದಾರಿ ಎಂಜಿನಿಯರ್‌ಗಳ ತಂಡದೊಂದಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ರೈತರೊಂದಿಗೆ ಸಮಾಲೋಚಿಸಿದರು. ಕೆಶಿಪ್‌ ಯೋಜನೆಯಿಂದ ಹೆದ್ದಾರಿ ಅಕ್ಕಪಕ್ಕದಲ್ಲಿನ ಜಮೀನಿನ ಬೆಲೆ ಹೆಚ್ಚಾಗುವ ಜೊತೆಗೆ ರಸ್ತೆ ಪಕ್ಕದ ಗ್ರಾಮಗಳು ಅಭಿವೃದ್ಧಿ ಹೊಂದುತ್ತವೆ. ರೈತರು ಆರ್ಥಿಕವಾಗಿ ಸದೃಢರಾಗಬಹುದು. ಕೆಶಿಪ್‌ ಯೋಜನೆಯಡಿ ಗುರುತಿಸ ಲಾಗಿರುವ ಜಮೀನಿಗೆ ಸರ್ಕಾರ ಸೂಕ್ತ ಬೆಲೆ ನೀಡುತ್ತಿದೆ. ರೈತರಿಗೆ ನಷ್ಟವಾಗುವುದಿಲ್ಲ. ಸರ್ಕಾರ ನೀಡುವ ಹಣದಲ್ಲಿ ಮತ್ತೂಂದೆಡೆ ಜಮೀನು ಖರೀದಿಸಬಹುದು. ರೈತರು ಆತಂಕಕ್ಕೆ ಒಳಗಾಗಬೇಡಿ. ಕೆಶಿಪ್‌ ಯೋಜನೆಯಡಿ ಕಾಮಗಾರಿ ಪ್ರಾರಂಭಿಸಲು ತೊಂದರೆ ಮಾಡದೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕಾಂತಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಮೀನು ಕಳೆದುಕೊಳ್ಳುತ್ತಿರುವ ವಿವಿಧ ಗ್ರಾಮಗಳ ರೈತರು ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿ ಗೊಂದಲ ಬಗೆಹರಿಸಿಕೊಂಡರು. ಜಿಲ್ಲಾಧಿಕಾರಿಗಳು ರೈತರ ಸಮಸ್ಯೆಗಳನ್ನು ಸಮಾಧಾನದಿಂದ ಆಲಿಸಿ ರೈತರಿಗೆ ಧೈರ್ಯ ತುಂಬಿದರು.

ಕಣ್ಣೀರಿಟ್ಟ ಮಹಿಳೆ: ಹೆದ್ದಾರಿ ನಿರ್ಮಾಣದಿಂದ ಕಾಂತಾಪುರ ಗ್ರಾಮದ ಶಾರದಮ್ಮ ತಾನು ಮನೆ ಕಳೆದುಕೊಳ್ಳುತ್ತಿದ್ದೇನೆ. ಇದರಿಂದ ನನಗೆ ಯಾವುದೇ ಪರಿಹಾರ ಸಿಕ್ಕಿಲ್ಲ. ನನ್ನ ಪತಿ ಅನಾರೋಗ್ಯದಿಂದ ಬಳಲುತ್ತಿದ್ದು, ಮನೆ ಕಳೆದುಕೊಳ್ಳುವ ವಿಚಾರ ತಿಳಿದರೆ ಅನಾಹುತವಾಗಲಿದೆ ಎಂದು ಜಿಲ್ಲಾಧಿಕಾರಿಗಳ ಮುಂದೆ ಕಣ್ಣೀರಿಟ್ಟು ಗೋಳಾಡಿದರು.

ಮಾನವೀಯತೆ ಮೆರೆದ ಡೀಸಿ: ಶಾರದಮ್ಮನ ಗೋಳಾಟ ಕಂಡು ಮರುಗಿದ ಜಿಲ್ಲಾಧಿಕಾರಿ, ನೀವು ಅಳಬೇಡಿ. ನಿಮಗೆ ಅನ್ಯಾಯವಾಗದಂತೆ ನೋಡಿಕೊಳ್ಳುತ್ತೇವೆ. ನೀವು ವಾಸಿಸುತ್ತಿರುವುದು ಗೋಮಾಳದಲ್ಲಿ. ಆ ಸ್ಥಳಕ್ಕೆ ಹಕ್ಕುಪತ್ರ ನೀಡಲು ಬರುವುದಿಲ್ಲ. ಆದ್ದರಿಂದ ಇದಕ್ಕೆ ಸರ್ಕಾರದ ಪರಿಹಾರವೂ ಸಿಗುವುದಿಲ್ಲ. ನಿಮಗೆ ಗ್ರಾಪಂ ವತಿಯಿಂದ ನಿವೇಶನ ಕಲ್ಪಿಸಲಾಗುವುದು ಎಂದು ಸ್ಥಳದಲ್ಲಿದ್ದ ಉಪವಿಭಾಗಾಧಿಕಾರಿ ಮತ್ತು ತಹಶೀಲ್ದಾರ್‌ ಅವರಿಗೆ ಗ್ರಾಪಂ ನಿವೇಶನ ನೀಡಿ, ಆಶ್ರಯ ಯೋಜನೆಯಡಿ ಮನೆ ಕಟ್ಟಿಕೊಳ್ಳಲು ವ್ಯವಸ್ಥೆ ಮಾಡುವಂತೆ ಆದೇಶಿಸಿದರು.

ಟಾಪ್ ನ್ಯೂಸ್

Sam Sung Galaxy M52 5G: Slim and Power Full – tech

ಸ್ಯಾಮ್‍ ಸಂಗ್‍ ಗೆಲಾಕ್ಸಿ ಎಂ52 5ಜಿ: ಸ್ಲಿಮ್‍ ಮತ್ತು ಪವರ್ ಫುಲ್‍

7454

ರಾಜ್ಯ ಸರಕಾರಿ ನೌಕರರಿಗೆ ದೀಪಾವಳಿ ಗಿಫ್ಟ್ : ತುಟ್ಟಿಭತ್ಯೆ ಹೆಚ್ಚಳ

ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 207 ಅಂಕ ಕುಸಿತ, 18,250ಕ್ಕಿಂತ ಕೆಳಕ್ಕೆ ಕುಸಿದ ನಿಫ್ಟಿ

ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 207 ಅಂಕ ಕುಸಿತ, 18,250ಕ್ಕಿಂತ ಕೆಳಕ್ಕೆ ಕುಸಿದ ನಿಫ್ಟಿ

arya-khan

ಆರ್ಯನ್‌ ಖಾನ್‌ ಜಾಮೀನು ಅರ್ಜಿ ವಿಚಾರಣೆ ಇಂದೂ ಮುಂದೂಡಿಕೆ

b-c-nagesh

ಕಲ್ಯಾಣ ಕರ್ನಾಟಕದಲ್ಲಿ ಶಿಕ್ಷಕರ ಕೊರತೆ ನೀಗಿಸಲು ಕ್ರಮ: ಸಚಿವ ಬಿ.ಸಿ.ನಾಗೇಶ್

bhagavanth-kubha

ರಸಗೊಬ್ಬರ ಕೊರತೆ; ಕಾಂಗ್ರೆಸ್ ಸುಳ್ಳಿನಿಂದ ಆತಂಕ ಸೃಷ್ಟಿ : ಭಗವಂತ್ ಖೂಬಾ

21school

ಊಟಕ್ಕಾಗಿ 1ಕಿ.ಮೀ ನಡೆಯುತ್ತಿದ್ದ ಮಕ್ಕಳು: ಕೊನೆಗೂ ಬಂತು ಬಿಸಿಯೂಟ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಶಾಲೆ, ಟೀಸಿ, TC, udayavanipaper, kannadanews,

ಬೇರೆ ಶಾಲೆಗೆ ಸೇರಲು ಟೀಸಿ ನೀಡದ ಶಾಲೆ

ಮಿಮ್ಸ್‌ನ ಹೆರಿಗೆ ವಾರ್ಡ್‌ನಲ್ಲಿ ಹಾಸಿಗೆ ಹೆಚ್ಚಳ

ಮಿಮ್ಸ್‌ನ ಹೆರಿಗೆ ವಾರ್ಡ್‌ನಲ್ಲಿ ಹಾಸಿಗೆ ಹೆಚ್ಚಳ

ಗ್ರಾಮಸ್ಥರು

2 ಗ್ರಾಮಸ್ಥರಿಂದ ಪರಸ್ಪರ ಬಡಿದಾಟ

krs

ಕೆಆರ್‌ಎಸ್‌ ಜಲಾಶಯ ಭರ್ತಿಗೆ 3 ಅಡಿ ಬಾಕಿ

28

ಅಪಪ್ರಚಾರ ಮಾಡಿದವರ ಬಾಯಿ ಮುಚ್ಚಿಸಿದ್ದೇವೆ

MUST WATCH

udayavani youtube

ಸಾವಯವ ಕೃಷಿಯಲ್ಲಿ ಅನುಸರಿಸಬೇಕಿರುವ ಪ್ರಮುಖ ಅಂಶಗಳ ಬಗ್ಗೆ ನಿಮಗೆ ಗೊತ್ತೇ?

udayavani youtube

ಶಾಲೆಗೆ ಬಂತು ಬಿಸಿಯೂಟ : ದೋಟಿಹಾಳ ಶಾಲಾ ಮಕ್ಕಳ ಒಂದು ಕಿಲೋಮೀಟರ್ ಪಾದಯಾತ್ರೆಗೆ ಬ್ರೇಕ್

udayavani youtube

ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯನ್ನು ಉಳಿಸಬೇಕಾಗಿದೆ : ಆರ್. ಅಶೋಕ್

udayavani youtube

ಆಧುನಿಕ ಪದ್ಧತಿಯೊಂದಿಗೆ ಬ್ಯಾಡಗಿ ಮೆಣಸಿನಕಾಯಿ ಕೃಷಿಗೆ ಮುಂದಾದ ಅಡಕೆ ಕೃಷಿಕ

udayavani youtube

ಬಸ್ ಕಂಡಕ್ಟರ್‌ನಿಂದ ಸೂಪರ್ ಸ್ಟಾರ್ ಆದ ರಜನಿಕಾಂತ್ ಕಥೆ

ಹೊಸ ಸೇರ್ಪಡೆ

Sam Sung Galaxy M52 5G: Slim and Power Full – tech

ಸ್ಯಾಮ್‍ ಸಂಗ್‍ ಗೆಲಾಕ್ಸಿ ಎಂ52 5ಜಿ: ಸ್ಲಿಮ್‍ ಮತ್ತು ಪವರ್ ಫುಲ್‍

7454

ರಾಜ್ಯ ಸರಕಾರಿ ನೌಕರರಿಗೆ ದೀಪಾವಳಿ ಗಿಫ್ಟ್ : ತುಟ್ಟಿಭತ್ಯೆ ಹೆಚ್ಚಳ

ಪ್ರತಿಮೆ ಅನಾವರಣಕ್ಕೆ ಡಿ.26ರ ಗಡುವು

ಪ್ರತಿಮೆ ಅನಾವರಣಕ್ಕೆ ಡಿ.26ರ ಗಡುವು

ಶಾಲೆ, ಟೀಸಿ, TC, udayavanipaper, kannadanews,

ಬೇರೆ ಶಾಲೆಗೆ ಸೇರಲು ಟೀಸಿ ನೀಡದ ಶಾಲೆ

ಆಂಗ್ಲ ಭಾಷಾ ವ್ಯಾಮೋಹದಿಂದ ಹೊರ ಬನ್ನಿ; ಬೀಳಗಿ

ಆಂಗ್ಲ ಭಾಷಾ ವ್ಯಾಮೋಹದಿಂದ ಹೊರ ಬನ್ನಿ; ಬೀಳಗಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.