ಮಂಡ್ಯ ಜಿಲ್ಲೆಯಲ್ಲಿ ಚೇತರಿಕೆ ಕಾಣದ ಚಿತ್ರಮಂದಿರಗಳು


Team Udayavani, Feb 14, 2021, 10:00 PM IST

Mandya movie

ಮಂಡ್ಯ: ಅತಿ ಹೆಚ್ಚು ಕನ್ನಡ ಮಾತನಾಡುವ ಜಿಲ್ಲೆ ಎಂದೇ ರಾಜ್ಯದಲ್ಲಿ ಹೆಸರು ವಾಸಿಯಾಗಿರುವ ಮಂಡ್ಯದಲ್ಲೂ ಚಿತ್ರ ಮಂದಿರಗಳ ಸ್ಥಿತಿ ಶೋಚನೀಯವಾಗಿದೆ. ಕೊರೊನಾ ಸಂಕಷ್ಟದಿಂದ ಪಾರಾಗುವ ಪ್ರಯತ್ನದಲ್ಲಿದ್ದರೂ ಚಿತ್ರಮಂದಿರಗಳಿಗೆ ಪ್ರೇಕ್ಷಕರು ಬರುತ್ತಿಲ್ಲ.

ಚಿತ್ರಮಂದಿರಗಳು ವಿವಿಧ ಸಮಸ್ಯೆಗಳಲ್ಲಿ ಸಿಲುಕಿವೆ. ಸರ್ಕಾರ ಚಿತ್ರಮಂದಿರಗಳ ಚೇತರಿಕೆಗೆ ಪ್ರೋತ್ಸಾಹಕ್ಕಾಗಿ ಮಾಲೀಕರು ಕಾದು ಕುಳಿತಿದ್ದಾರೆ. ಸರ್ಕಾರ ಚಿತ್ರಮಂದಿರಗಳಿಗೆ ಶೇ.100ರಷ್ಟು ಪ್ರೇಕ್ಷಕರ ಭರ್ತಿಗೆ ವಿನಾಯಿತಿ ನೀಡಿದ್ದರೂ ಪ್ರೇಕ್ಷಕರು ಮಾತ್ರ ಸುಳಿಯುತ್ತಿಲ್ಲ. ಮಂಡ್ಯ ನಗರದ ಎಲ್ಲ ಚಿತ್ರಮಂದಿರಗಳಲ್ಲೂ ಕನ್ನಡ, ತೆಲುಗು, ತಮಿಳು ಚಿತ್ರಗಳು ತೆರೆ ಕಂಡಿವೆ. ಆದರೆ, ಪ್ರೇಕ್ಷಕರು ಮಾತ್ರ ಬೆರಳೆಣಿಕೆಯಷ್ಟು ಮಂದಿ ಬರುತ್ತಿದ್ದಾರೆ. ಕುಟುಂಬ ಸಮೇತ ಬಂದು ನೋಡುವ ವಾತಾವರಣ ಇನ್ನೂ ನಿರ್ಮಾಣವಾಗಿಲ್ಲ.

ಮಂಡ್ಯ ಜಿಲ್ಲೆಯಲ್ಲಿ ಚೇತರಿಕೆ ಕಾಣದ ಚಿತ್ರಮಂದಿರಗಳು

ಕೊರೊನಾದಿಂದ ಸಂಕಷ್ಟ: ಈಗಾಗಲೇ ಕೊರೊನಾದಿಂದ ಬಡವರು, ಕಾರ್ಮಿಕರು, ಮಧ್ಯಮ  ವರ್ಗದವರು ಸೇರಿದಂತೆ ವಿವಿಧ ವರ್ಗದ ಜನರು ತೊಂದರೆ ಅನುಭವಿಸಿದ್ದು, ಸದ್ಯ ಚೇತರಿಸಿ ಕೊಳ್ಳುತ್ತಿದ್ದಾರೆ. ಸಾಕಷ್ಟು ಮಂದಿ ಯುವಕ- ಯುವತಿಯರು ಉದ್ಯೋಗ ಕಳೆದು ಕೊಂಡು ಅತಂತ್ರ ರಾಗಿದ್ದರು. ಇದು ಸಹ ಚಿತ್ರಮಂದಿರಗಳು ಪ್ರೇಕ್ಷಕರ ಕೊರತೆ ಎದುರಿಸಲು ಕಾರಣವಾಗಿದೆ. ಸ್ಟಾರ್‌ ನಟ ತಮಿಳಿನ ವಿಜಯ್‌ ನಟನೆಯ ಮಾಸ್ಟರ್‌ ಚಿತ್ರ ಬಿಡುಗಡೆಯಾಗಿದೆ. ಆದರೂ, ಚಿತ್ರ ಮಂದಿರಗಳು ಖಾಲಿಯಾಗಿವೆ.

ಮಂಡ್ಯದಲ್ಲಿ ಕನ್ನಡ ಚಿತ್ರಗಳಿಗೆ ಹೆಚ್ಚು ಮನ್ನಣೆ ಇರುವುದರಿಂದ ಬೇರೆ ಭಾಷೆಯ ಚಿತ್ರಗಳು ನಿರೀಕ್ಷಿತ ಮಟ್ಟದಲ್ಲಿ ಸದ್ದು ಮಾಡುತ್ತಿಲ್ಲ. ಬಿಡುಗಡೆಯಾದ ಎರಡೇ ವಾರ ಪ್ರದರ್ಶನ ಕಂಡಿದ್ದು, ಒಂದು ಚಿತ್ರಮಂದಿರದಿಂದ ಮತ್ತೂಂದು ಚಿತ್ರಮಂದಿರಕ್ಕೆ ಬಿಡುಗಡೆ ಮಾಡಲಾಗುತ್ತಿದೆ.

ಮಂಡ್ಯ ಜಿಲ್ಲೆಯಲ್ಲಿ ಚೇತರಿಕೆ ಕಾಣದ ಚಿತ್ರಮಂದಿರಗಳು

ಮಾಲೀಕರ ನಿರೀಕ್ಷೆ ಹುಸಿ: ಕನ್ನಡ ಚಿತ್ರಗಳನ್ನು ಬಿಡುಗಡೆ ಮಾಡಿದರೆ ಜನರು ಬರಬಹುದು ಎಂಬ ಹಿನ್ನೆಲೆ ಯಲ್ಲಿ ಈಗಾಗಲೇ ನಗರದ ಸಂಜಯ, ಗುರುಶ್ರೀ, ಮಹಾವೀರ, ಸಿದ್ಧಾರ್ಥ, ನಂದ, ಜಯಲಕ್ಷ್ಮೀ ಸಾತನೂರಿನ ವೆಂಕಟೇಶ್ವರ ಚಿತ್ರಮಂದಿರಗಳಲ್ಲಿ ಕನ್ನಡ ಸಿನಿಮಾಗಳನ್ನು ಬಿಡುಗಡೆ ಮಾಡಲಾಗಿದೆ. ಆದರೂ, ಪ್ರೇಕ್ಷಕರು ಬರುತ್ತಿಲ್ಲ. ಪ್ರತಿದಿನ ಒಂದು ಪ್ರದರ್ಶನಕ್ಕೆ ಕೇವಲ 10ರಿಂದ 15 ಮಂದಿ ಮಾತ್ರ ಬರುತ್ತಿದ್ದಾರೆ. ಇದ ರಿಂದ ಒಂದು ಪ್ರದರ್ಶನಕ್ಕೆ ಸೀಮಿತಗೊಳಿಸಲಾಗುತ್ತಿದೆ. ಕೆಲವು ಚಿತ್ರ ಮಂದಿರಗಳ ಮಾಲೀಕರು ಚೇತರಿಕೆ ಕಾಣುವ ನಿರೀಕ್ಷೆಯಲ್ಲಿ ನಾಲ್ಕು ಪ್ರದರ್ಶನ ಮಾಡುತ್ತಿದ್ದಾರೆ.

ಸರ್ಕಾರದತ್ತ ಮಾಲೀಕರ ಚಿತ್ತ : ಚಿತ್ರಮಂದಿರಗಳ ಮಾಲೀಕರು ಕೊರೊನಾ ಲಾಕ್‌ಡೌನ್‌ನಿಂದ ಸಾಕಷ್ಟು ಸಂಕಷ್ಟ ಅನುಭವಿಸಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ಚಿತ್ರಮಂದಿರಗಳ ವಿದ್ಯುತ್‌ ಬಿಲ್‌ ಮನ್ನಾ, ತೆರಿಗೆ ವಿನಾಯಿತಿ ನೀಡಿದರೆ ಅನುಕೂಲವಾಗಲಿದೆ. ಅಲ್ಲದೆ, ಚಿತ್ರಮಂದಿರಗಳ ಕಾರ್ಮಿಕರ ಸಮಸ್ಯೆಗಳಿಗೂ ಸ್ಪಂದಿಸ‌ಬೇಕಾಗಿದೆ. ಕಾರ್ಮಿಕರು ಕೆಲಸವಿಲ್ಲದೆ, ಜೀವನ ನಿರ್ವಹಣೆ ಕಷ್ಟವಾಗಿದ್ದು, ಸರ್ಕಾರ ಇತ್ತ ಗಮನಹರಿಸಬೇಕು ಎಂಬುದು ಚಿತ್ರಮಂದಿರ ಕಾರ್ಮಿಕರ ಅಳಲಾಗಿದೆ.

ಮಂಡ್ಯ ಜಿಲ್ಲೆಯಲ್ಲಿ ಚೇತರಿಕೆ ಕಾಣದ ಚಿತ್ರಮಂದಿರಗಳು

ಸ್ಟಾರ್‌ ನಟರ ಚಿತ್ರ ಬಿಡುಗಡೆ ನಿರೀಕ್ಷೆ : ಕನ್ನಡದ ದೊಡ್ಡ ದೊಡ್ಡ ಸ್ಟಾರ್‌ ನಟರ ಅಭಿನಯದ ಚಿತ್ರಗಳು ಬಿಡುಗಡೆಯಾದರೆ, ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಬರಲಿದ್ದಾರೆ. ಆಗ ಚಿತ್ರಮಂದಿರಗಳು ಚೇತರಿಕೆ ಕಾಣಲಿವೆ ಎಂಬ ನಿರೀಕ್ಷೆಯಲ್ಲಿ ಮಾಲೀಕರು ಕಾಯುತ್ತಿದ್ದಾರೆ.

ಸುದೀಪ್‌ ಅಭಿನಯದ ಕೋಟಿಗೊಬ್ಬ-3, ದರ್ಶನ್‌ ಅಭಿನಯದ ರಾಬರ್ಟ್‌, ಪುನೀತ್‌ ನಟನೆಯ ಯುವರತ್ನ, ಯಶ್‌ ನಟನೆಯ ಕೆಜಿಎಫ್‌-2, ಧ್ರುವಸರ್ಜಾ ನಟನೆಯ ಪೊಗರು ಸೇರಿದಂತೆ ಮೂರ್‍ನಾಲ್ಕು ತಿಂಗಳಲ್ಲಿ ಒಂದೊಂದಾಗಿ ಬಿಡುಗಡೆಯಾದರೆ ಸ್ವಲ್ಪ ಮಟ್ಟಿಗೆ ಮಾಲೀಕರು ನಿಟ್ಟುಸಿರು ಬಿಡಲಿದ್ದಾರೆ.

8 ವರ್ಷಗಳ  ಬಳಿಕ ಜಯಲಕ್ಷ್ಮೀಗೆ ಮತ್ತೆ ಸಂಕಷ್ಟ : ಕಳೆದ ಎಂಟು ವರ್ಷಗಳ ಹಿಂದೆ ಪ್ರದರ್ಶನ ನಿಲ್ಲಿಸಿದ್ದ ನಗರದ ಜಯಲಕ್ಷ್ಮೀ ಚಿತ್ರಮಂದಿರ ಮತ್ತೆ ಪ್ರದರ್ಶನ ಶುರು ಮಾಡಿ ಒಂದು ವರ್ಷವಾಗಿತ್ತು. ಅಷ್ಟರಲ್ಲೇ ಕೊರೊನಾ ಲಾಕ್‌ಡೌನ್‌ನಿಂದ ಮತ್ತೆ ಪ್ರದರ್ಶನ ನಿಲ್ಲಿಸಿತ್ತು.

ಕಳೆದ ಡಿಸೆಂಬರ್‌ನಿಂದ ಮತ್ತೆ ಪ್ರದರ್ಶನ ನೀಡುತ್ತಿರುವ ಚಿತ್ರಮಂದಿರದಲ್ಲಿ ತೆಲುಗಿನ ರವಿತೇಜ ನಟನೆಯ ಕ್ರಾಕ್‌ ಹಾಗೂ ಕನ್ನಡದ ನಿಮ್ಮೂರು ಚಿತ್ರಗಳು ಪ್ರದರ್ಶನ ಕಾಣುತ್ತಿವೆ. ನಾಲ್ಕು ಶೋಗಳಿಂದ ಕೇವಲ 30ರಿಂದ 40 ಮಂದಿ ಪ್ರೇಕ್ಷಕರು ಬರುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸ್ಟಾರ್‌ ನಟರ ಚಿತ್ರಗಳ ಬಿಡುಗಡೆಗೆ ಸಿದ್ಧತೆ ಮಾಡಿಕೊಂಡಿದ್ದು, ಚೇತರಿಸಿಕೊಳ್ಳುವ ನಿರೀಕ್ಷೆಯಲ್ಲಿದೆ.

ಸಿದ್ಧಾರ್ಥ, ಮಹಾವೀರ, ನಂದದಲ್ಲಿ ಪ್ರೇಕ್ಷಕರ ಕೊರತೆ : ನಗರದ ಸಿದ್ಧಾರ್ಥ, ನಂದ ಹಾಗೂ  ಮಹಾವೀರ ಚಿತ್ರಮಂದಿರಗಳು ಪ್ರೇಕ್ಷಕರ ಕೊರತೆ ಎದುರಿಸುತ್ತಿವೆ. ಸಿದ್ಧಾರ್ಥ ಚಿತ್ರಮಂದಿರದಲ್ಲಿ ಅಣ್‌ತಮ್ಮ, ನಂದ ಚಿತ್ರಮಂದಿರದಲ್ಲಿ ಮಾಸ್ಟರ್‌ ಹಾಗೂ ಮಹಾವೀರ ಚಿತ್ರಮಂದಿರದಲ್ಲಿ ಮಂಗಳವಾರ ರಜಾದಿನ ಚಿತ್ರಗಳು ಪ್ರದರ್ಶನ ಕಾಣುತ್ತಿವೆ. ಆದರೆ, ಪ್ರೇಕ್ಷಕರು ಮಾತ್ರ ಚಿತ್ರಮಂದಿರಗಳಿಗೆ ಬರುತ್ತಿಲ್ಲ.

ಪೊಗರು ಬಿಡುಗಡೆ ಸಿದ್ಧತೆಯಲ್ಲಿ ಸಂಜಯ ಚಿತ್ರಮಂದಿರ : ನಗರದ ಹೃದಯ ಭಾಗದಲ್ಲಿರುವ ಸಂಜಯ ಚಿತ್ರಮಂದಿರದಲ್ಲಿ ಫೆ.19ರಂದು ಧ್ರುವ ಸರ್ಜಾ ನಟನೆಯ ಪೊಗರು ಸಿನಿಮಾ ಬಿಡುಗಡೆಗೆ ಸಿದ್ಧತೆ ನಡೆಸಿದೆ. ಈಗಾಗಲೇ ಚಿತ್ರಮಂದಿರ ತೆರೆದಿದ್ದು, ಹಲವು ಕನ್ನಡ ಸಿನಿಮಾಗಳನ್ನು ಬಿಡುಗಡೆ ಮಾಡಲಾಗಿತ್ತು. ಆದರೆ, ಪ್ರೇಕ್ಷಕರ ಕೊರತೆ ಎದುರಿಸಿದೆ. ಶುಕ್ರವಾರವೂ ಹೊಸ ಕನ್ನಡ ಸಿನಿಮಾ ಬಿಡುಗಡೆ ಮಾಡಿತ್ತು. ಆದರೆ ಪ್ರೇಕ್ಷಕರು ಬರದಿದ್ದ ಕಾರಣ ಪ್ರದರ್ಶನ ನಿಲ್ಲಿಸಲಾಗಿದೆ

ಸಿನಿಮಾ ವೀಕ್ಷಣೆಗೆ ಜನರೇ ಬರುತ್ತಿಲ್ಲ : ಪಾಂಡವಪುರ: ಕೊರೊನಾ ನಿಯಂತ್ರಣಕ್ಕಾಗಿ ಸರ್ಕಾರ ಮುಂಜಾಗೃತಾ ಕ್ರಮವಾಗಿ ಚಿತ್ರ ಮಂದಿರಗಳನ್ನು ಬಂದ್‌ ಮಾಡಿತ್ತು. ಸರ್ಕಾರ ಸಿನಿಮಾ ಮಂದಿರಗಳಿಗೆ ಅವಕಾಶ ನೀಡಿದೆ. ಆದರೂ, ಸಿನಿಮಾ  ಮಂದಿರಗಳಲ್ಲಿ ಕೆಲಸ ನಿರ್ವಹಿಸಿ, ಬದುಕು ಕಟ್ಟಿಕೊಂಡಿದ್ದ ಕಾರ್ಮಿಕರು, ಮಾಲೀಕರ ಬದುಕು ಇಂದಿಗೂ ದುಸ್ತರವಾಗಿದೆ.

ತಾಲೂಕಿನಲ್ಲಿ ನಾಲ್ಕು ಚಿತ್ರ ಮಂಂದಿರಗಳಿದ್ದು, ಅದನ್ನೇ ನಂಬಿಕೊಂಡು ಜೀವನ ನಿರ್ವಹಿಸುತ್ತಿದ್ದ ಕಾರ್ಮಿಕರು, ಮಾಲೀಕರು ಇಂದು ಬೀದಿ ಪಾಲಾಗಿದ್ದಾರೆ. ಪಟ್ಟಣದಲ್ಲಿರುವ ಮೂರು ಚಿತ್ರಮಂದಿರಗಳಲ್ಲಿ ಎರಡು ಮಾತ್ರ ಪ್ರಾರಂಭವಾಗಿದ್ದು, ಬೆರಳೆಣಿಕೆಯಷ್ಟು ಜನರು ಮಾತ್ರ ಬರುತ್ತಿದ್ದಾರೆ. ಸಾಕಷ್ಟು ಸಂಖ್ಯೆಯಲ್ಲಿ ಪ್ರೇಕ್ಷಕರು ಆಗಮಿಸದ ಕಾರಣ ಚಿತ್ರಮಂದಿರಗಳು ಬಿಕೋ ಎನ್ನುತ್ತಿದ್ದು, ಇದು ಮಾಲೀಕರನ್ನು ಚಿಂತೆಗಿಡು ಮಾಡಿದೆ.

ಬಿಕೋ ಎನ್ನುತ್ತಿರುವ ಚಿತ್ರ ಮಂದಿರ: ಶೇ.100ರಷ್ಟು ಚಿತ್ರಮಂದಿರಗಳ ಭರ್ತಿಗೆ ಸರ್ಕಾರ ಅನುಮತಿ ನೀಡಿದ್ದರೂ, ಜನ ಸಿನಿಮಾ ವೀಕಣೆಗೆ ಬಾರದಿರುವುದು ಚಿತ್ರಮಂದಿರ ಮಾಲೀಕರನ್ನು ಚಿಂತೆಗೀಡು ಮಾಡಿದೆ. ಸಿನಿಮಾ ವೀಕ್ಷಣೆಗೆ ಸರ್ಕಾರ ವಿಧಿಸಿದ್ದ ನಿಯಮಗಳು ತೆರವುಗೊಂಡರು ಜನ ಮಾತ್ರ

ಸಿನಿಮಾ ಮಂದಿರದ ಕಡೆ ಮುಖ ಮಾಡುತ್ತಿಲ್ಲ. ಇದಕ್ಕೆ ಕೊರೊನಾ ಮೇಲಿನ ಭೀತಿಯೋ ಅಥವಾ ಕೊರೊನಾ ಆರ್ಥಿಕ ಸಂಕಷ್ಟಕ್ಕೀಡಾಗಿದ್ದ ಜನರ ಪರಿಸ್ಥಿತಿಯೋ ಗೊತ್ತಿಲ್ಲ. ಆದರೆ, ತಾಲೂಕಿನಲ್ಲಿ ಪ್ರಾರಂಭವಾದ ಚಿತ್ರಮಂದಿರಗಳು ಖಾಲಿ ಹೊಡೆಯುತ್ತಿದ್ದು, ಇದರ ಮೇಲೆ ಜೀವನ ಸಾಗಿಸುತ್ತಿರುವವರ ಬದುಕು ಮೂರಾ ಬಟ್ಟೆಯಾಗಿರುವುದು ವಾಸ್ತವದ ಸಂಗತಿ.

ಪ್ರೇಕ್ಷಕರಿಲ್ಲದೇ ಚಿತ್ರ ಮಂದಿರಗಳು ಕಂಗಾಲು

ಕೆ.ಆರ್‌.ಪೇಟೆ: ಸದಾ ಪ್ರೇಕ್ಷಕರಿಂದ ತುಂಬಿ ತುಳುಕುತ್ತಿದ್ದ ಚಿತ್ರ ಮಂದಿರಗಳು ಕಳೆದ ಒಂದು ವರ್ಷದಿಂದ ಅತಂತ್ರ ಸ್ಥಿತಿಗೆ ತಲುಪಿದೆ. ಅಲ್ಲಿದೆ, ಇಲ್ಲಿನ ನೌಕರರ ಜೀವನ ಕಷ್ಟಕರವಾಗಿದೆ.

ಕೆ.ಆರ್‌.ಪೇಟೆ ಪಟ್ಟಣದಲ್ಲಿ ಶ್ರೀರಂಗ, ಬಸವೇಶ್ವರ, ಕೆ.ಜೆ.ಬಿ. ಚಿತ್ರ ಮಂದಿರಗಳಿವೆ. ಕನ್ನಡ ಚಿತ್ರಗಳಲ್ಲದೇ ಪರಭಾಷಾ ಚಿತ್ರಗಳೂ ಇಲ್ಲಿ ಪ್ರದರ್ಶನ ನೀಡಿ, ಖ್ಯಾತ ನಾಯಕರ ಚಿತ್ರಗಳು ಇಲ್ಲಿ ಶತದಿನೋತ್ಸವ ಕಂಡಿದೆ. ಚಿತ್ರ ಮಂದಿರದ ಮಾಲೀಕರು ಹೆಚ್ಚು ಹೊಸ ಚಲನಚಿತ್ರಗಳು ತೆರೆಕಾಣಬೇಕೆಂದು ಮೂರು ಚಿತ್ರ ಮಂದಿರದ ಮಾಲೀಕರು ಸ್ಪರ್ಧೆಗೆ ಇಳಿದು ಹೊಸ ಸಿನಿಮಾಗಳು ತೆರೆಕಾಣುವಂತೆ ಮಾಡುತ್ತಿದ್ದರು. ಆದರೆ, ಈಗ ಚಿತ್ರ ಮಂದಿರದಲ್ಲಿ ಪ್ರೇಕ್ಷಕರೇ ಇಲ್ಲದೆ ಪಾಳುಕೊಂಪೆಯಂತಾಗಿವೆ.

ಕೊರೊನಾದಿಂದ ಸಂಕಷ್ಟ: ಸುಮಾರು 36ವರ್ಷಗಳ ಹಿಂದೆ ಪ್ರಾರಂಭವಾದ ಬಸವೇಶ್ವರ ಚಿತ್ರಮಂದಿರ ಪಟ್ಟಣದ ಹೃದಯ ಭಾಗದಲ್ಲಿದೆ. ಯಾವುದೇ ಚಿತ್ರ ಪ್ರದರ್ಶನಗೊಂಡರು ಚಿತ್ರಮಂದಿರವು ತುಂಬಿರುತ್ತಿತ್ತು. ಆದರೆ, ಇಂದು ಒಂದು ಪ್ರದರ್ಶನದಲ್ಲಿ 40ಕ್ಕಿಂತ ಕಡಿಮೆ ಪ್ರೇಕ್ಷಕರು ಬರುತ್ತಿದ್ದಾರೆ. ಅದೇ ರೀತಿ ಕೆ.ಜೆ.ಬಿ. ಚಿತ್ರಮಂದಿರದಲ್ಲಿ ಆಧುನಿಕ ಸೌಲಭ್ಯವಿದ್ದು, ಸಿನಿಮಾಗಳು ಪೈಪೋಟಿಗೆ ಬಿದ್ದಂತೆ ಜನರನ್ನು ಆಕರ್ಷಿಸಿಕೊಂಡಿದ್ದು, ಹೆಚ್ಚು ಸಿನಿಮಾ ಪ್ರದರ್ಶನಗೊಳ್ಳುತ್ತಿತ್ತು. ಕೊರೊನಾ ಪರಿಣಾಮ ಈ ಚಿತ್ರಮಂದಿರ ಸಂಕ್ರಾಂತಿ ಹಬ್ಬದಿಂದ ಪುನರಾರಂಭಗೊಂಡಿದ್ದು, ಪ್ರೇಕ್ಷಕರ ನಿರೀಕ್ಷೆಯಲ್ಲಿದೆ. ಇನ್ನೂ ಶ್ರೀರಂಗ ಚಿತ್ರ ಮಂದಿರವು ಹೊಸ ತಂತ್ರಜ್ಞಾನದ ಪರಿಣಾಮದಿಂದ ಹಿಂದೆ ಸರಿದಿದ್ದು, ಇನ್ನೂ ಪ್ರಾರಂಭವಾಗದೇ ಮುಚ್ಚುವ ಹಂತ ತಲುಪಿದೆ ಎನ್ನಬಹುದು.

ಇನ್ಸ್‌ಪೆಕ್ಟರ್‌ ವಿಕ್ರಂಗೆ ಸ್ವಲ್ಪಮಟ್ಟಿಗೆ ರೆಸ್ಪಾನ್ಸ್‌ : ನಗರದ ಗುರುಶ್ರೀ ಚಿತ್ರಮಂದಿರದಲ್ಲಿ ಪ್ರಜ್ವಲ್‌ ದೇವರಾಜ್‌ ನಟನೆಯ ಇನ್ಸ್‌ಪೆಕ್ಟರ್‌ ವಿಕ್ರಂ ಚಿತ್ರ ಬಿಡುಗಡೆಯಾಗಿದೆ. ಚಿತ್ರದಲ್ಲಿ ನಟ ದರ್ಶನ್‌ ಅಭಿನಯಿಸಿರುವುದರಿಂದ ತಕ್ಕಮಟ್ಟಿಗೆ ಅಭಿಮಾನಿಗಳು ಬಂದು ಚಿತ್ರ ನೋಡುತ್ತಿದ್ದಾರೆ. ಫೆ.19ರಿಂದ ಅಲ್ಲಿಯೂ ಪೊಗರು ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ.

ನವೀಕರಣದೊಂದಿಗೆ ವೆಂಕಟೇಶ್ವರ ನಗರದ ಎರಡು ಕಿ.ಮೀ ದೂರದಲ್ಲಿರುವ ಸಾತನೂರಿನ  ವೆಂಕಟೇಶ್ವರ ಚಿತ್ರಮಂದಿರವನ್ನು ನವೀಕರಣ ಮಾಡಲಾಗಿದೆ. ಲಾಕ್‌ಡೌನ್‌ನಿದ್ದರೂ ಮಾಲೀಕರು ಚಿತ್ರಮಂದಿರವನ್ನು ಹೊಸದಾಗಿ ನವೀಕರಿಸಿದ್ದಾರೆ. ಪರದೆ, ಸೌಂಡ್‌ ಸಿಸ್ಟಂ, ಆಸನಗಳು ಸೇರಿದಂತೆ ಇಡೀ ಚಿತ್ರಮಂದಿರವನ್ನು ನವೀಕರಿಸಿ ಕನ್ನಡ ಚಿತ್ರಗಳನ್ನು ಬಿಡುಗಡೆ ಮಾಡುತ್ತಿದ್ದಾರೆ. ಆದರೆ, ಪ್ರೇಕ್ಷಕರು ಚಿತ್ರಮಂದಿರದತ್ತ ಬರುತ್ತಿಲ್ಲ.

ಟಾಪ್ ನ್ಯೂಸ್

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು

ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.