ಮಂಗಳೂರು: ಪ್ರಕೃತಿ ವಿಕೋಪದ ಪರಿಹಾರ ಚೆಕ್ ವಿತರಣೆ
Team Udayavani, Oct 20, 2019, 4:45 PM IST
ಮಂಗಳೂರು : ಪ್ರಕೃತಿ ವಿಕೋಪದಿಂದ ಹಾನಿಗೊಳಗಾದ ಕುಟುಂಬಗಳಿಗೆ ಶಾಸಕ ವೇದವ್ಯಾಸ್ ಕಾಮತ್ ಅವರು ಪರಿಹಾರ ಚೆಕ್ಕನ್ನು ವಿತರಿಸಿದರು.
ಈ ವೇಳೆ ಮಾತನಾಡಿದ ಶಾಸಕ ಕಾಮತ್, ಪ್ರಕೃತಿ ವಿಕೋಪದಿಂದ ಹಾನಿಗೊಳಗಾದ ಕುಟುಂಬಗಳಿಗೆ ಇಂದು ಸರಕಾರದಿಂದ ಸಿಗುವ ಪರಿಹಾರ ಧನದ ಚೆಕ್ಕನ್ನು ವಿತರಿಸಿದ್ದೇವೆ. 25 ಜನರಿಗೆ ಪರಿಹಾರ ಧನವನ್ನು ವಿತರಿಸಿದ್ದೇವೆ ಎಂದರು. ಮಳೆಹಾನಿಯಿಂದ ನಗರ ಪ್ರದೇಶದಲ್ಲಿ ಅನೇಕ ಮನೆಗಳಿಗೆ ಹಾನಿಯಾಗಿದೆ. ಈಗಾಗಲೇ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪೂರ್ಣ ಪ್ರಮಾಣದಲ್ಲಿ ಹಾನಿಯಾದ ಕಡೆಗೆ ಹಿಂದೆಂದಿಗಿಂತಲೂ ಹೆಚ್ಚಿನ ಮೊತ್ತವನ್ನು ಕೊಟ್ಟಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ರೂಪಾ ಡಿ ಬಂಗೇರ, ರಾಮಚಂದ್ರ ಚೌಟ, ಕಿಶೋರ್ ಕೊಟ್ಟಾರಿ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.