ಸವಾರರಿಂದ 9 ದಿನದಲಿ 12.30 ಕೋಟಿ ರೂ. ದಂಡ ಸಂಗ್ರಹ

Team Udayavani, Feb 13, 2023, 3:40 PM IST

tdy-11

ಮೈಸೂರು: ಸಂಚಾರ ನಿಯಮ ಉಲ್ಲಂಘಿಸಿ ದಂಡ ಬಾಕಿ ಉಳಿಸಿಕೊಂಡಿದ್ದ ವಾಹನ ಚಾಲಕರು, ಸವಾರರಿಗೆ ಶೇ.50 ರಿಯಾಯಿತಿಯೊಂದಿಗೆ ದಂಡ ಪಾವತಿ ಸಲು ಸರ್ಕಾರ ಇತ್ತೀಚೆಗೆ ನೀಡಿದ್ದ ಆಫ‌ರ್‌ಗೆ ನಗರ ದಲ್ಲಿ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕಳೆದ ಫೆ.3ರಿಂದ 11ರವರೆಗೆ 9 ದಿನಗಳ ಅವಧಿ ಯಲ್ಲಿ 4,98,265 ಪ್ರಕರಣ ವಿಲೇವಾರಿ ಯಾಗುವ ಮೂಲಕ 12,30,58,650 ರೂ. ದಂಡ ಸಂಗ್ರಹವಾಗಿದೆ. ಇಷ್ಟು ದಿನ ರಸ್ತೆ ಬದಿ ನಿಂತು ವಾಹನ ತಪಾಸಣೆ ಮಾಡುತ್ತಿದ್ದ ಸಂಚಾರ ಪೊಲೀಸರನ್ನು ಕಂಡು ಬಿಧ್ದೋಡುತ್ತಿದ್ದ ಜನ, ಕಳೆದ ವಾರದಲ್ಲಿ ಪೊಲೀಸರನ್ನೇ ಬೆನ್ನತ್ತಿ, ದಂಡ ಕಟ್ಟಿದ ಪ್ರಸಂಗ ಸಾಮಾ ನ್ಯವಾಗಿತ್ತು. ಕೆಲವರು ರಸ್ತೆ ಬದಿ ವಾಹನ ತಪಾಸಣೆ ನಡೆಸುತ್ತಿದ್ದ ಪೊಲೀಸ್‌ ಅಧಿಕಾರಿಗಳು, ಸಿಬ್ಬಂದಿಯನ್ನು ಹಿಡಿದರೆ, ಇನ್ನೂ ಕೆಲವರು ಸಂಚಾರ ಠಾಣೆಗಳಿಗೆ ತೆರಳಿ ತಮ್ಮ ವಾಹನಗಳಿಗೆ ವಿಧಿಸಲಾಗಿದ್ದ ದಂಡ ಪಾವತಿಸಿದರು.

ದಾಖಲೆ ಪ್ರಮಾಣದ ದಂಡ ಸಂಗ್ರಹ: ಕಳೆದ ವರ್ಷ ಪೂರ್ತಿ 8 ಕೋಟಿ ರೂ. ದಂಡ ವಸೂಲಿ ಮಾಡಿದ್ದ ಮೈಸೂರು ನಗರ ಸಂಚಾರ ಪೊಲೀಸರು, ರಿಯಾಯ್ತಿ ನೀಡಿದ್ದರಿಂದ ಸಾರ್ವಜನಿಕರೇ ಸ್ವಯಂ ಪ್ರೇರಿತವಾಗಿ ಬಂದು ಸಂಚಾರ ಠಾಣೆ ಮತ್ತು ಆನ್‌ ಲೈನ್‌ ಮೂಲಕ ದಂಡದ ಹಣ ಪಾವತಿ ಮಾಡಿದ್ದರಿಂದ 4,98,265 ಪ್ರಕರಣ ವಿಲೇವಾರಿಯಾಗಿ 12,30,58,650 ಕೋಟಿ ರೂ. ಸಂಗ್ರಹವಾಗಿದೆ ಎಂದು ಮೈಸೂರು ನಗರ ಸಂಚಾರ ವಿಭಾಗದ ಎಸಿಪಿ ಪರಶುರಾಮಪ್ಪ ತಿಳಿಸಿದ್ದಾರೆ.

ನಗರದ ಜನತೆ ಮೈಸೂರು ನಗರದ ದೇವರಾಜ, ಕೃಷ್ಣರಾಜ, ವಿವಿ ಪುರಂ, ಸಿದ್ದಾರ್ಥ ನಗರ, ನರಸಿಂಹರಾಜ ಸಂಚಾರ ಠಾಣೆ, ಮೈಸೂರು ನಗರ ಸಂಚಾರ ಎಸಿಪಿ ಕಚೇರಿ, ನಗರ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ಆಟೋ ಮೇಷನ್‌ ಸೆಂಟರ್‌ಗಳಲ್ಲಿ ತೆರಳಿ 9 ದಿನಗಳಲ್ಲೂ ನಿತ್ಯ ಮುಂಜಾನೆಯಿಂದ ಸಂಜೆವರೆಗೂ ದಂಡ ಪಾವತಿ ಮಾಡಿದರು.

ಹೆಚ್ಚುವರಿ ಕೌಂಟರ್‌: ಠಾಣೆಗಳಲ್ಲಿ ದಂಡ ಪಾವತಿಗೆ ಒಂದೆರಡು ಕೌಂಟರ್‌ ತೆರೆದು ದಂಡದ ಹಣ ಸಂಗ್ರಹಿಸುತ್ತಿದ್ದ ಸಂಚಾರ ಪೊಲೀಸರು, ಸಾರ್ವಜನಿಕರ ಕ್ಯೂ ಹೆಚ್ಚಾದಂತೆ ಹೆಚ್ಚುವರಿ ಕೌಂಟರ್‌ ತೆರೆದು ದಂಡ ಪಾವತಿಗೆ ಅವಕಾಶ ಕಲ್ಪಿಸಲಾಗಿತ್ತು. ಪರಿಣಾಮ ಸಾರ್ವಜನಿಕರಿಗೆ ಯಾವುದೇ ಗೊಂದಲ ಉಂಟಾಗಲಿಲ್ಲ.

ಅವಧಿ ವಿಸ್ತರಣೆಗೆ ಒತ್ತಾಯ: ವಾಹನಗಳ ಸವಾರರಿಂದ ಶೇ.50 ರಷ್ಟು ರಿಯಾಯ್ತಿಯಲ್ಲಿ ಸರ್ಕಾರ ದಂಡ ಪಾವತಿ ಮಾಡಿಕೊಟ್ಟಿರುವುದು ಒಳ್ಳೆಯ ಬೆಳವಣಿಗೆ. ಆದರೆ, ಕಡಿಮೆ ಅವಧಿ ಇರುವುದರಿಂದ ಇನ್ನೂ ಸಾಕಷ್ಟು ಮಂದಿಗೆ ದಂಡ ಪಾವತಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ದಂಡ ಪಾವತಿ ಇರುವ ಕಾಲಾವಧಿಯನ್ನು ಮತ್ತೆ ಒಂದು ವಾರಕ್ಕೆ ವಿಸ್ತರಿಸಬೇಕೆಂದು ಮನವಿ ಮಾಡಿದ್ದಾರೆ. ‌

ಕಳೆದ 9 ದಿನದಲ್ಲಿ ನಗರದ ವಿವಿಧ ಸಂಚಾರ ಠಾಣೆ, ವಾಹನ ತಪಾಸಣೆ ಮಾಡುವ ಪೊಲೀಸರ ಬಳಿ ಹಾಗೂ ಆಟೋ ಮೇಷನ್‌ ಸೆಂಟರ್‌ಗೆ ಸಾವಿರಾರು ಜನ ತೆರಳಿ ದಂಡ ಪಾವತಿಸಿ ದ್ದಾರೆ. ಈ ಮೂಲಕ 12.30 ಕೋಟಿ ರೂ. ದಂಡ ಸಂಗ್ರಹವಾಗಿದೆ. – ಪರುಶುರಾಮಪ್ಪ, ಎಸಿಪಿ ಸಂಚಾರ ವಿಭಾಗ ಮೈಸೂರು ನಗರ

-ಸತೀಶ್‌ ದೇಪುರ

ಟಾಪ್ ನ್ಯೂಸ್

Supreme Court slams IMA

Supreme Court; ಪತಂಜಲಿ ಆಯ್ತು, ಈಗ ಐಎಂಎ ವಿರುದ್ಧ ಸುಪ್ರೀಂ ಕೋರ್ಟ್‌ ಗರಂ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Sullia ಮನೆಯಿಂದ ನಗ, ನಗದು ಕಳವು

Sullia ಮನೆಯಿಂದ ನಗ, ನಗದು ಕಳವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-hunsur

Hunsur: ಕುಡಿತದ ಚಟಕ್ಕೆ ಯುವಕ ಬಲಿ

14

Hunsur: ಅಪರಿಚಿತ ವಾಹನ ಡಿಕ್ಕಿಯಾಗಿ ಪಾದಚಾರಿ ಸಾವು

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

1-aaweewq

Nagarahole; ಹುಲಿ ಶವ ಪತ್ತೆ: ದುಷ್ಕರ್ಮಿಗಳ ಕೃತ್ಯಕ್ಕೆ ತಿಂಗಳೊಳಗೆ 3 ಕಾಡುಕೋಣ ಬಲಿ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Supreme Court slams IMA

Supreme Court; ಪತಂಜಲಿ ಆಯ್ತು, ಈಗ ಐಎಂಎ ವಿರುದ್ಧ ಸುಪ್ರೀಂ ಕೋರ್ಟ್‌ ಗರಂ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.