“ಮೋಸ್ಟ್ ಪಾಪ್ಯುಲರ್ ಪೊಲಿಟೀಶಿಯನ್ ನಾನು’
Team Udayavani, Sep 18, 2018, 6:05 AM IST
ಮೈಸೂರು: “ಕೊಡಗಿನಲ್ಲಿ ಮೋಸ್ಟ್ ಪಾಪ್ಯುಲರ್ ಪೊಲಿಟೀಶಿಯನ್ ಯಾರು ಅಂತಾ ಕೇಳಿ ಆಗ ನಿಮಗೆ ನನ್ನ ಕೆಲಸದ ಬಗ್ಗೆ ಗೊತ್ತಾಗುತ್ತೆ’ ಎಂದು ತಮ್ಮ ವಿರುದಟಛಿ ಹೇಳಿಕೆ ನೀಡಿದ್ದ ಸ್ವಪಕ್ಷೀಯರ ವಿರುದ್ಧ ಸಂಸದ ಪ್ರತಾಪಸಿಂಹ ಕಿಡಿಕಾರಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಡಗಿನ ಜನಕ್ಕೆ ನಾನು ಏನು ಅಂತ ಗೊತ್ತಿದೆ. ಕೊಡಗಿನಲ್ಲಿ ಮೋಸ್ಟ್ ಪಾಪ್ಯುಲರ್ ಪೊಲಿಟೀಶಿಯನ್ ಯಾರು ಅಂತಾ ಕೇಳಿ ಆಗ ನಿಮಗೆ ನನ್ನ ಕೆಲಸದ ಬಗ್ಗೆ ಗೊತ್ತಾಗುತ್ತೆ. ಬಿಜೆಪಿ ಮುಖಂಡ ದೇವಯ್ಯ ಆಡಿರುವ ಮಾತುಗಳು ಅಪ್ರಸ್ತುತ ವ್ಯಕ್ತಿಗಳ ವ್ಯರ್ಥ ಆಲಾಪವಾಗಿದೆ. ಹೀಗಾಗಿ ಇಂತಹ ವಿಷಯಗಳಿಗೆ ನಾನು ಉತ್ತರ ಕೊಡೋದಿಲ್ಲ ಎಂದು ತಮ್ಮ ಮೇಲೆ ಬಿಜೆಪಿ ದೇವಯ್ಯ ನೀಡಿದ್ದ ಹೇಳಿಕೆಗೆ ತಿರುಗೇಟು ನೀಡಿದರು.