ವಿಶ್ವನಾಥ್ ಎಂದಿಗೂ ಒಂದ್ ಒಳ್ಳೆ ಸಲಹೆ ನೀಡಿಲ್ಲ
Team Udayavani, Jun 6, 2021, 6:38 PM IST
ಹುಣಸೂರು: ಮೈಸೂರಿನ ಇಬ್ಬರು ಐಎಎಸ್‌ಅಧಿಕಾರಿಗಳ ತಿಕ್ಕಾಟದ ಪರಿಸ್ಥಿತಿಯನ್ನು ಕೆಲವುಮೇಧಾವಿಗಳು, ಮಹಾನ್ ಬುದ್ಧಿವಂತರುತಿರುಚಲು ಯತ್ನಿಸುತ್ತಿದ್ದಾರೆ ಎಂದು ಜಿಲ್ಲಾಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್‌ಬೇಸರ ವ್ಯಕ್ತಪಡಿಸಿದರು.
ತಾಲೂಕಿನ ಅರಸು ಕಲ್ಲಹಳ್ಳಿಗೆ ಶನಿವಾರ ಭೇಟಿನೀಡಿದ್ದ ವೇಳೆ ಈ ವಿವಾದದ ಹಿಂದೆ ಭೂಮಾμಯಾದವರ ಚಿತಾವಣೆ ಇದೆ ಎಂಬಆರೋಪವಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದಸಚಿವರು, ಇದುವರೆಗೆ ಆ ಮಹಾನುಭಾವ ಒಂದೇಒಂದು ಒಳ್ಳೆಯ ಸಲಹೆ ಕೊಟ್ಟಿದ್ದನ್ನು ನೋಡಿದ್ದೀರಾಎಂದು ಎಚ್. ವಿಶ್ವನಾಥ್‌ಗೆ ಪರೋಕ್ಷವಾಗಿತಿರುಗೇಟು ನೀಡಿದರು.
ಈ ವಿವಾದವೀಗ ಮುಖ್ಯಮಂತ್ರಿಗಳಅಂಗಳದಲ್ಲಿದ್ದು, ಸರ್ಕಾರ ಮುಖ್ಯ ಕಾರ್ಯದರ್ಶಿಗಳಿಂದ ಎಲ್ಲ ಮಾಹಿತಿ ಪಡೆದುಕೊಂಡಿದ್ದು, ಸೂಕ್ತತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು.ವಿವಾದಕ್ಕೆ ಸಂಬಂಧಿಸಿದಂತೆ ಮಠದಲ್ಲಿ ಚರ್ಚೆಯಾಗಿರುವುದು ಸರಿಯೇ ಎಂಬ ಪ್ರಶ್ನೆಗೆ ಉತ್ತರಿಸಿದಸಚಿವರು, ಮಠದಲ್ಲಿ ಮೈಸೂರು ನಾಗರೀಕಸಮಿತಿಯವರ ಕಿಟ್ ವಿತರಣೆ ಕಾರ್ಯಕ್ರಮದಲ್ಲಿಭಾಗಿಯಾಗಿದ್ದೆ. ಅಲ್ಲಿ ಯಾವುದೇ ಚರ್ಚೆಯಾಗಿಲ್ಲಎಂದು ಸ್ಪಷ್ಟನೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗೂಡ್ಸ್ ವಾಹನ ಢಿಕ್ಕಿ ಹೊಡೆದು ಬೈಕ್ ಸವಾರ ಸಾವು, ಇನ್ನೋರ್ವನಿಗೆ ಗಾಯ
ಎಸ್.ಎಸ್.ಎಲ್.ಸಿ.ಪರೀಕ್ಷೆಯಲ್ಲಿ ಅನುತ್ತೀರ್ಣ : ಮನನೊಂದ ವಿದ್ಯಾರ್ಥಿ ನೇಣಿಗೆ ಶರಣು
ಬ್ರ್ಯಾಂಡ್ ಬೆಂಗಳೂರು ಬಂದಿದ್ದು ದೇವೇಗೌಡರ ಕಾಲದಲ್ಲಿ: ಎಸ್ಎಂಕೆ ಗೆ ಹೆಚ್ ಡಿಕೆ ಟಾಂಗ್
ನಾನು ರಾಜ್ಯ ರಾಜಕಾರಣಕ್ಕೆ ಮರಳುತ್ತಿಲ್ಲ: ಶೋಭಾ ಕರಂದ್ಲಾಜೆ ಸ್ಪಷ್ಟನೆ
ನಾಲ್ವಡಿ ಕೃಷ್ಣ ರಾಜ್ ಒಡೆಯರ್ ಅವರೇ ಮೈಸೂರು ಹುಲಿ, ಟಿಪ್ಪುವಲ್ಲ: ಪ್ರತಾಪ್ ಸಿಂಹ