Nipah virus Fear:ನಿಫಾಗೆ ಇಬ್ಬರು ಬಲಿ: ಗಡಿಭಾಗದಲ್ಲಿ ಜನರಲ್ಲಿ ಆತಂಕ


Team Udayavani, Sep 14, 2023, 1:20 PM IST

tdy-12

ಎಚ್‌.ಡಿ.ಕೋಟೆ: ನೆರೆ ರಾಜ್ಯ ಕೇರಳದ ಕಲ್ಲಿಕೋಟೆ ಜಿಲ್ಲೆಯಲ್ಲಿ ಮಾರಣಾಂತಿಕ ರೋಗ ನಿಫಾ ವೈರಸ್‌ ಕಾಣಿಸಿಕೊಂಡಿದ್ದು, ತಾಲೂಕಿನ ಗಡಿಭಾಗದ ಜನರಲ್ಲಿ ಆತಂಕ ಮನೆ ಮಾಡಿದೆ.

ಕಳೆದ 2019ರ ಜೂನ್‌ನಲ್ಲಿ ಕೇರಳದಲ್ಲಿ ಕಾಣಿಸಿಕೊಂಡು ಜನರಲ್ಲಿ ಭಯ ಸೃಷ್ಟಿಸಿ ಮಾಯವಾಗಿದ್ದ ನಿಫಾ ವೈರಸ್‌, ಮತ್ತೆ ಕೇರಳ ಕಲ್ಲಿಕೋಟೆ ಜಿಲ್ಲೆಯಲ್ಲಿ ಕಾಣಿಸಿಕೊಂಡಿದೆ.

ಈಗಾಗಲೇ ಸೋಂಕು ಕಾಣಿಸಿಕೊಂಡು ಕಲ್ಲಿಕೋಟೆಯ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ಮಂಗಳವಾರ ಮೃತಪಟ್ಟಿದ್ದಾರೆ. ಹೀಗಾಗಿ ಕೇರಳ ರಾಜ್ಯಾದ್ಯಂತ ಹೈ ಅಲರ್ಟ್‌ ಘೋಷಿಸಲಾಗಿದೆ. ಅದರೆ, ಕೇರಳ ರಾಜ್ಯದ ಗಡಿ ಹಂಚಿಕೊಂಡಿರುವ ಬಾವಲಿ ಮಾರ್ಗವಾಗಿ ಪ್ರತಿದಿನ ಕೇರಳ ರಾಜ್ಯದಿಂದ ನೂರಾರು ವಾಹನಗಳಲ್ಲಿ ಸರಕು ಸಾಮಾನು ಸೇರಿದಂತೆ ಸಾವಿರಾರು ಜನರು ರಾಜ್ಯಕ್ಕೆ ಬಂದು ಹೋಗುತ್ತಾರೆ. ಇಷ್ಟಾದರೂ ತಾಲೂಕು ಆರೋಗ್ಯ ಇಲಾಖೆ, ತಾಲೂಕು ಆಡಳಿತ ಹಾಗೂ ಜಿಲ್ಲಾಡಳಿತದಿಂದ ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿಲ್ಲ.

ತಾಲೂಕಿನ ಗಡಿ ಭಾಗಕ್ಕೆ ಕಾಲಿಡದಂತೆ ವಾಹನಗಳ ತಪಾಸಣೆ ಮಾಡುವುದರ ಜತೆಗೆ ನಿಫಾ ವೈರಸ್‌ ಕಾಣಿಸಿಕೊಂಡರೇ ಯಾವ ಕ್ರಮಗಳನ್ನು ಕೈಗೊಳ್ಳಬೇಕು, ಸೋಂಕಿನ ರೋಗ ಲಕ್ಷಣಗಳು ಏನು, ವೈರಾಣು ದೇಹ ದಲ್ಲಿ ಕಾಣಿಸಿಕೊಂಡರೆ ಮನುಷ್ಯನ ದೇಹದಲ್ಲಿ ಆಗುವ ಬದಲಾವಣೆಗಳು ಏನು, ಎಂಬಿತ್ಯಾದಿ ಸಲಹೆ ಸೂಚನೆಗಳನ್ನು ನೀಡಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುವತ್ತ ಗಮನ ಹರಿಸಿಲ್ಲ.

ವಾಹನ ತಪಾಸಣೆಗೆ ಸಿಬ್ಬಂದಿ ನಿಯೋಜನೆ: ಒಂದು ದಿನ ತಡವಾಗಿ ಜ್ಞಾನೋದಯವಾದಂತೆ ಎಚ್ಚೆತ್ತುಕೊಂಡಿರುವ ಆರೋಗ್ಯ ಇಲಾಖೆ ಅಧಿಕಾರಿಗಳು ಗಡಿಭಾಗದ ಬಾವಲಿ ಚೆಕ್‌ ಪೋಸ್ಟ್‌ನಲ್ಲಿ ಗುರುವಾರದಿಂದ ಕೆಲ ಅಧಿಕಾರಿಗಳು ಮತ್ತು ವೈದ್ಯರನ್ನು ಗಡಿಭಾಗಕ್ಕೆ ನಿಯೋಜಿಸಿ ಅಧಿಕೃತ ಜ್ಞಾಪನ ಪತ್ರ ಹೊರಡಿಸಿದ್ದಾರೆ. ನಿಯೋಜನೆಗೊಂಡಿರುವ ಸಿಬ್ಬಂದಿ ಕಡ್ಡಾಯವಾಗಿ ಹಾಜರಿದ್ದು, ನೆರೆ ರಾಜ್ಯದಿಂದ ಬರುವ ವಾಹನಗಳ ತಪಾಸಣೆ ಸೇರಿದಂತೆ ಕೇರಳ ರಾಜ್ಯ ಮತ್ತು ಕರ್ನಾಟಕದಿಂದ ಬರುವ ಹೋಗುವ ಜನರಲ್ಲಿ ನಿಫಾ ವೈರಸ್‌ ಸೋಂಕಿನ ಬಗ್ಗೆ ಆರೋಗ್ಯ ಶಿಕ್ಷಣ ಮತ್ತು ಅರಿವು ಮೂಡಿಸಲು ಸೂಚಿಸಲಾಗಿದೆ.

ಗಡಿಭಾಗದ ಚೆಕ್‌ಪೋಸ್ಟ್‌ನಲ್ಲಿ ಈಗಾಗಲೇ ಅಲ್ಲಿ ಒಬ್ಬರನ್ನು ನಿಯೋಜಿಸಿ ಅಲ್ಲಿನ ಕಾರ್ಯಚಟುವಟಿಕೆಗಳನ್ನು ಗಮನಿಸುತ್ತಿದ್ದೇವೆ. ಗುರುವಾರ ಬೆಳಗ್ಗೆ ನಾನು, ತಹಶೀಲ್ದಾರ್‌, ತಾಲೂಕು ಪಂಚಾಯ್ತಿ ಇಒ ಎಲ್ಲರೂ ಚೆಕ್‌ಪೋಸ್ಟ್‌ಗೆ ತೆರಳಿ ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳುತ್ತೇವೆ. – ಡಾ.ಟಿ.ರವಿಕುಮಾರ್‌.ಟಿಎಚ್‌ಒ, ಆರೋಗ್ಯ ಇಲಾಖೆ, ಎಚ್‌.ಡಿ.ಕೋಟೆ

Ad

ಟಾಪ್ ನ್ಯೂಸ್

Mangaluru: ಅತ್ಯಾಚಾರ ಆರೋಪದಡಿ ಪೊಲೀಸ್ ಸಿಬ್ಬಂದಿ ಬಂಧನ

Mangaluru: ಅತ್ಯಾಚಾರ ಆರೋಪದಡಿ ಪೊಲೀಸ್ ಸಿಬ್ಬಂದಿ ಬಂಧನ

1-aa-aa-bll

Bollywood;ಮೊದಲ ಮಗುವಿನ ಸಂಭ್ರಮದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ-ಕಿಯಾರಾ ಅಡ್ವಾಣಿ ದಂಪತಿ

baby 2

Shocking; ಸ್ಲೀಪರ್ ಕೋಚ್ ಬಸ್ ನಲ್ಲೆ ಹೆರಿಗೆ: ಹೊರಗೆಸೆದ ನವಜಾತ ಶಿಶು ಸಾ*ವು!

Rcb-highcourt

ಐಪಿಎಲ್‌ ಕಾಲ್ತುಳಿತ ಪ್ರಕರಣ: ಸ್ಥಿತಿಗತಿ ವರದಿ ಆರ್‌ಸಿಬಿ, ಕೆಎಸ್‌ಸಿಎ ಜತೆ ಹಂಚಲು ನಿರ್ದೇಶನ

Surya-Tejasvi-MP

ರಾಜ್ಯ ಸರ್ಕಾರ ಭೂಸ್ವಾಧೀನ ಕೈ ಬಿಟ್ಟಿದ್ದಕ್ಕೆ ಸಂಸದ ತೇಜಸ್ವಿ ಸೂರ್ಯ ಅಸಮಾಧಾನ 

drowned

ಗಂಗೊಳ್ಳಿ ದೋಣಿ ದುರಂತ; ಓರ್ವ ಮೀನುಗಾರನ ಶ*ವ ಪತ್ತೆ: ಮುಂದುವರಿದ ಹುಡುಕಾಟ

ಮೋದಿ, ಆರ್‌ಎಸ್‌ಎಸ್‌ ಟೀಕೆ: ವ್ಯಂಗ್ಯಚಿತ್ರಕಾರನಿಗೆ ಮಧ್ಯಂತರ ಜಾಮೀನು

Hemant Malviya: ಮೋದಿ, ಆರ್‌ಎಸ್‌ಎಸ್‌ ಟೀಕೆ: ವ್ಯಂಗ್ಯಚಿತ್ರಕಾರನಿಗೆ ಮಧ್ಯಂತರ ಜಾಮೀನು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mys-deer-Attack

ಗಸ್ತು ತಿರುಗುವಾಗ ಅರಣ್ಯ ವೀಕ್ಷಕನ ಮೇಲೆ ಕರಡಿ ದಾಳಿ; ಸಿಬ್ಬಂದಿಗೆ ಗಂಭೀರ ಗಾಯ

11-hunsur

Hunsur: ಕೋಳಿ ಫಾರಂ ರೈಟರ್ ನಾಪತ್ತೆ; ದೂರು ದಾಖಲು

Ramalinga-reddy

ಹೊಸ ಬಸ್‌ಗಳಲ್ಲಿ ಧ್ವನಿ ಸ್ಪಂದನ ಉಪಕರಣ ಅಳವಡಿಕೆ: ಸಚಿವ ರಾಮಲಿಂಗಾ ರೆಡ್ಡಿ

Mysur-Dasara-Aane

ಮೈಸೂರು ದಸರೆಗೆ ಈ ಬಾರಿ ಶ್ರೀಕಂಠದತ್ತ ಒಡೆಯರ್‌ ಮೆರುಗು!

Hunsur: ಹುಲಿ ಪತ್ತೆಗೆ ಸಿಸಿ ಕ್ಯಾಮೆರಾ ಅಳವಡಿಕೆ, ಕೂಂಬಿಂಗ್‌ ಕಾರ್ಯಾಚರಣೆ ಚುರುಕು

Hunsur: ಹುಲಿ ಪತ್ತೆಗೆ ಸಿಸಿ ಕ್ಯಾಮೆರಾ ಅಳವಡಿಕೆ, ಕೂಂಬಿಂಗ್‌ ಕಾರ್ಯಾಚರಣೆ

MUST WATCH

udayavani youtube

ಕೃಷಿಯಲ್ಲಿ ತಂತ್ರಜ್ಞಾನದ ಕುರಿತು ರೈತರಿಗೆ ಅಗತ್ಯ ಮಾಹಿತಿ

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

ಹೊಸ ಸೇರ್ಪಡೆ

Mangaluru: ಅತ್ಯಾಚಾರ ಆರೋಪದಡಿ ಪೊಲೀಸ್ ಸಿಬ್ಬಂದಿ ಬಂಧನ

Mangaluru: ಅತ್ಯಾಚಾರ ಆರೋಪದಡಿ ಪೊಲೀಸ್ ಸಿಬ್ಬಂದಿ ಬಂಧನ

1-aa-aa-bll

Bollywood;ಮೊದಲ ಮಗುವಿನ ಸಂಭ್ರಮದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ-ಕಿಯಾರಾ ಅಡ್ವಾಣಿ ದಂಪತಿ

baby 2

Shocking; ಸ್ಲೀಪರ್ ಕೋಚ್ ಬಸ್ ನಲ್ಲೆ ಹೆರಿಗೆ: ಹೊರಗೆಸೆದ ನವಜಾತ ಶಿಶು ಸಾ*ವು!

police

Bengaluru;ವಿಮಾನ, ಬಸ್‌ನಲ್ಲಿ ಮಾದಕ ವಸ್ತು ತರಿಸುತ್ತಿದ್ದ 3 ಮಹಿಳೆಯರ ಬಂಧನ

Madhu-Bangarappa

ಶಿಕ್ಷಣ ಇಲಾಖೆ ಸಾಧನೆ ಕೇಳಿ ಸುರ್ಜೇವಾಲ ಖುಷ್‌: ಸಚಿವ ಮಧು ಬಂಗಾರಪ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.