ಸೂರು, ನೀರು,ರಸ್ತೆ, ಚರಂಡಿ ನಿರ್ಮಾಣಕ್ಕೆ ಬೇಡಿಕೆ

Team Udayavani, Feb 22, 2022, 1:54 PM IST

ಸೂರು, ನೀರು,ರಸ್ತೆ, ಚರಂಡಿ ನಿರ್ಮಾಣಕ್ಕೆ  ಬೇಡಿಕೆ

ಮೈಸೂರು: ಸೂರು, ಕುಡಿಯುವ ನೀರು, ರಸ್ತೆ, ಚರಂಡಿ ನಿರ್ಮಾಣ ಬೇಡಿಕೆವಿ, ಕೆರೆ ಒತ್ತುವರಿ ತೆರವು ಸೇರಿಹಲವು ಸಮಸ್ಯೆಗಳು ಜಿಲ್ಲಾ ಮಟ್ಟದ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಕೇಳಿಬಂದವು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರನಡೆದ ಜಿಲ್ಲಾ ಮಟ್ಟದ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಿಂದ ಕರೆ ಮಾಡಿದಗ್ರಾಮೀಣ ಭಾಗದ ಜನರ ಸಮಸ್ಯೆಗಳನ್ನು ಜಿಪಂ ಸಿಇಒ ಎ.ಎಂ.ಯೋಗೇಶ್‌ ಆಲಿಸಿದರು.

ಎಚ್‌.ಡಿ.ಕೋಟೆ ತಾಲೂಕಿನ ಕಂಚಮಹಳ್ಳಿಯ ವ್ಯಕ್ತಿಯೊಬ್ಬರು ಮನೆ ಕೊಡುವಂತೆ ಮನವಿಗೆ ಸ್ಪಂದಿಸಿದಉಪ ಕಾರ್ಯದರ್ಶಿ, ಮುಂದಿನ ಆರ್ಥಿಕ ವರ್ಷದಲ್ಲಿಮನೆ ನೀಡುವಂತೆ ಗ್ರಾಪಂಗೆ ಸೂಚಿಸುವುದಾಗಿ ತಿಳಿಸಿದರು.

ಪಿರಿಯಾಪಟ್ಟಣ ತಾಲೂಕು ನಂದಿಪುರದ ಚಂದ್ರು ಹೊಸದಾಗಿ ಚರಂಡಿ ನಿರ್ಮಿಸುವಂತೆ ಮನವಿ ಮಾಡಿದರೆ, ನಂಜನಗೂಡು ತಾಲೂಕು ನವಿಲೂರಿನಮಹೇಶ್‌ ರಸ್ತೆ ಅಗಲೀಕರಣಕ್ಕೆ ಮನವಿ ಮಾಡಿದರು. ಬನ್ನೂರು ಹೋಬಳಿ ಕೊಡಗಳ್ಳಿದ ರಾಮಕೃಷ್ಣ ,ಪಿತ್ರಾರ್ಜಿತ ಆಸ್ತಿಯನ್ನು ತಮ್ಮ ಹೆಸರಿಗೆ ಖಾತೆ ಮಾಡಲುಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ ಎಂದುದೂರಿದರು. ತಿ.ನರಸೀಪುರ ಇಒ ಕೃಷ್ಣ ಅವರಿಗೆ ನಿಮ್ಮಸಮಸ್ಯೆ ಬಗೆಹರಿಸಲು ಸೂಚಿಸುವುದಾಗಿ ಉಪ ಕಾರ್ಯದರ್ಶಿ ಭರವಸೆ ನೀಡಿದರು.

ತಿ.ನರಸೀಪುರ ಸೋಸಲೆ ಮಹದೇವಶೆಟ್ಟಿ, ಜನನ ಮರಣ ಪ್ರಮಾಣಪತ್ರವನ್ನು ಗ್ರಾಪಂಗಳಲ್ಲಿಯೇನೀಡಿದರೆ ಅನುಕೂಲ ಎಂದರು. ಇದೇ ತಾಲೂಕಿನಹಿರಿಯೂರು ಗ್ರಾಮದ ವೀರಪ್ಪಸ್ವಾಮಿ ಅವರುಹಿರಿಯೂರು-ಕೊತ್ತೇಗಾಲ ರಸ್ತೆ ಅಭಿವೃದ್ಧಪಡಿಸಿ ಮತ್ತುಸರ್ವೆ ನಂ.9ರ ಕೆರೆ ಏರಿ ಒತ್ತುವರಿಯಾಗಿದ್ದು, ತೆರವು ಮಾಡಿಸುವಂತೆ ಕೋರಿದರು.

ಧನಗಳ್ಳಿಯಲ್ಲಿ ನಿವೇಶನದ 11 ಬಿ ಪಡೆಯುಲು ನನ್ನ ಬಳಿ ಲಂಚ ಪಡೆದರು. ಬಡವರನ್ನು ಈ ಪರಿ ಗೋಳಾಡಿಸುವುದು ನ್ಯಾಯವೇ? ಬಡವರಿಗೆಅನ್ಯಾಯವಾಗದಂತೆ ಕ್ರಮ ಕೈಗೊಳ್ಳಬೇಕೆಂದು ಅನುಪಮಾ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಪಂ ಉಪ ಕಾರ್ಯರ್ದಶಿ ದೇವರಾಜೇಗೌಡ ಪ್ರತಿಕ್ರಿಯಿಸಿ, ಲಂಚ ಸ್ವೀಕರಿಸುವುದು ಹೇಗೆ ಅಪರಾಧದವೋ ಲಂಚ ನೀಡುವುದು ಅಪರಾಧ. ನಿಮಗೆ ಅನ್ಯಾಯವಾಗಿದ್ದರೆ ಮೇಲಿನ ಸಂಸ್ಥೆಗಳಿಗೆ ದೂರು ನೀಡಬಹುದು. ನಿಮ್ಮ ಸಮಸ್ಯೆಯನ್ನುಸಂಬಂಧಪಟ್ಟವರ ಗಮನಕ್ಕೆ ತರಲಿದೆ ಎಂದರು.  ಮಾನಸಿನಗರದ ನಿವಾಸಿ ವಿಜಯ್‌ ಕುಮಾರ್‌, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿ, ಟೆರೇಷಿಯನ್‌ ಕಾಲೇಜಿಂದ ಮಾನಸಿನಗರಕ್ಕೆ ಬಸ್‌ ಬಿಡುವಂತೆಕೋರಿದರೆ, ಮೈಸೂರಿನ ಶ್ರೀನಗರದ ರಸ್ತೆಗಳನ್ನುಅಭಿವೃದ್ಧಿಪಡಿಸಬೇಕೆಂಬ ವಾಣಿ ಎಂಬವರು ಮನವಿಗೆಸ್ಪಂದಿಸಿದ ಅಧಿಕಾರಿಗಳು, ನಿಮ್ಮ ಬಡಾವಣೆ ಮುಡಾವ್ಯಾಪ್ತಿಗೆ ಬರುತ್ತದೆ. ಮುಡಾಗೆ ಮನವಿ ಸಲ್ಲಿಸುವಂತೆ ಸಲಹೆ ನೀಡಿದರು.

ಮೈಸೂರು ತಾಲೂಕು ದಡದಹಳ್ಳಿಯ ಸುನಿಲ್‌ ಅವರು ಸಿಂಧುವಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ 5 ವರ್ಷದ ಹಿಂದೆ 20×30 ನಿವೇಶನ ಖರೀದಿಸಿದ್ದೇವೆ. ಆ ಜಾಗ ಸರ್ವೆ ನಂಬರ್‌ನಲ್ಲಿದೆ. ಅಕ್ರಮ ಸಕ್ರಮದಲ್ಲಿಬದಲಾಯಿಸಿಕೊಳ್ಳಬಹುದೇ? ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ಉಪ ಕಾರ್ಯದರ್ಶಿ ಸರ್ವೆನಂಬರ್‌ನಲ್ಲಿರುವ ಆಸ್ತಿ ಕ್ರಮಬದ್ಧವಲ್ಲ. ಸರ್ಕಾರ ಅಕ್ರಮ ಸಕ್ರಮಕ್ಕೆ ಅರ್ಜಿ ಕರೆದಾಗ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಿದರು.

ಸಹಾಯಕ ಕಾರ್ಯದರ್ಶಿ ಕುಲದೀಪ್‌, ಡಿಎಚ್‌ಒ ಡಾ.ಕೆ.ಎಚ್‌.ಪ್ರಸಾದ್‌, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರುದ್ರೇಶ್‌ ಸೇರಿದಂತೆ ಇತರೆ ಅಧಿಕಾರಿಗಳಿದ್ದರು.

ಅರ್ಧ ಗಂಟೆಗೆ ಫೋನ್‌ ಇನ್‌ ಮುಕ್ತಾಯ: ಸಾರ್ವಜನಿಕರ ಆಹವಾಲು ಆಲಿಸಿ ಪರಿಹರಿಸುವಮಹತ್ವಾಕಾಂಕ್ಷೆಯ ಜಿಲ್ಲಾ ಮಟ್ಟದ ಫೋನ್‌ ಇನ್‌ಕಾರ್ಯಕ್ರಮ ಅರ್ಧ ಗಂಟೆಗೆ ಸೀಮಿತವಾಯಿತು.ವಿವಿಧ ಭಾಗಗಳಿಂದ 15 ಕರೆಗಳು ಬಂದವು. ಸಮಸ್ಯೆಆಲಿಸಿದ ಅಧಿಕಾರಿಗಳು ಶೀಘ್ರ ಬಗೆಹರಿಸುವ ಭರವಸೆ ನೀಡಿದರು.

15 ಇಲಾಖೆಗಳಂತೆ ಸೇರಿ 15 ದಿನಕ್ಕೊಮ್ಮೆ ಫೋನ್‌ ಇನ್‌ ಕಾರ್ಯಕ್ರಮ ನಡೆಸಬೇಕು. ಕಡ್ಡಾಯವಾಗಿಜಿಲ್ಲಾ ಮಟ್ಟದ ಅಧಿಕಾರಿ ಇರಬೇಕು. ಸಮಸ್ಯೆಗಳನ್ನು ಬಗೆಹರಿಸಲು ನಿರ್ಲಕ್ಷಿಸಬಾರದುಎ.ಎಂ. ಯೋಗೇಶ್‌, ಸಿಇಒ, ಜಿಪಂ

ಟಾಪ್ ನ್ಯೂಸ್

Kodaikanal – Ooty ಪ್ರವಾಸಕ್ಕೆ ಇ-ಪಾಸ್‌ ಕಡ್ಡಾಯ: ಹೈಕೋರ್ಟ್‌

Kodaikanal – Ooty ಪ್ರವಾಸಕ್ಕೆ ಇ-ಪಾಸ್‌ ಕಡ್ಡಾಯ: ಹೈಕೋರ್ಟ್‌

Implementation of secular law for Muslim succession: Supreme Court debate

Muslim ಉತ್ತರಾಧಿಕಾರಕ್ಕೆ ಜಾತ್ಯತೀತ ಕಾಯ್ದೆ ಜಾರಿ: ಸುಪ್ರೀಂಕೋರ್ಟ್‌ ಚರ್ಚೆ

“Siddaramaiah- H.D. Revanna ನಡುವೆ ಒಪ್ಪಂದಕ್ಕೆ ಎಫ್‌ಐಆರ್‌ ಹಾಕಲಿಲ್ಲವೇ?’

“Siddaramaiah- H.D. Revanna ನಡುವೆ ಒಪ್ಪಂದಕ್ಕೆ ಎಫ್‌ಐಆರ್‌ ಹಾಕಲಿಲ್ಲವೇ?’

Maulana Fazlur Rahman praises India in Pakistan

Fazal ur Rehman; ಭಾರತ ಸೂಪರ್‌ಪವರ್‌, ನಾವು ಭಿಕ್ಷೆ ಬೇಡುತ್ತಿದ್ದೇವೆ: ಪಾಕಿಸ್ಥಾನ ಸಂಸದ

Home Minister ಅಮಿತ್‌ ಶಾಗೆ ವಕೀಲ ದೇವರಾಜೇಗೌಡ ಪತ್ರ: ವೈರಲ್‌

Home Minister ಅಮಿತ್‌ ಶಾಗೆ ವಕೀಲ ದೇವರಾಜೇಗೌಡ ಪತ್ರ: ವೈರಲ್‌

H. D. Kumaraswamy ನನ್ನ ಬಳಿ ಇರುವುದು ಡಿಕೆಶಿ ಭ್ರಷ್ಟಾಚಾರದ ಮಾಹಿತಿ

H. D. Kumaraswamy ನನ್ನ ಬಳಿ ಇರುವುದು ಡಿಕೆಶಿ ಭ್ರಷ್ಟಾಚಾರದ ಮಾಹಿತಿ

uber cup badminton; India lost against china

Uber Cup Badminton: ಚೀನಾ ವಿರುದ್ಧ ಭಾರತಕ್ಕೆ 5-0 ಸೋಲು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-hunsur

Hunsur: ಕುಡಿತದ ಚಟಕ್ಕೆ ಯುವಕ ಬಲಿ

14

Hunsur: ಅಪರಿಚಿತ ವಾಹನ ಡಿಕ್ಕಿಯಾಗಿ ಪಾದಚಾರಿ ಸಾವು

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

1-aaweewq

Nagarahole; ಹುಲಿ ಶವ ಪತ್ತೆ: ದುಷ್ಕರ್ಮಿಗಳ ಕೃತ್ಯಕ್ಕೆ ತಿಂಗಳೊಳಗೆ 3 ಕಾಡುಕೋಣ ಬಲಿ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kodaikanal – Ooty ಪ್ರವಾಸಕ್ಕೆ ಇ-ಪಾಸ್‌ ಕಡ್ಡಾಯ: ಹೈಕೋರ್ಟ್‌

Kodaikanal – Ooty ಪ್ರವಾಸಕ್ಕೆ ಇ-ಪಾಸ್‌ ಕಡ್ಡಾಯ: ಹೈಕೋರ್ಟ್‌

Implementation of secular law for Muslim succession: Supreme Court debate

Muslim ಉತ್ತರಾಧಿಕಾರಕ್ಕೆ ಜಾತ್ಯತೀತ ಕಾಯ್ದೆ ಜಾರಿ: ಸುಪ್ರೀಂಕೋರ್ಟ್‌ ಚರ್ಚೆ

“Siddaramaiah- H.D. Revanna ನಡುವೆ ಒಪ್ಪಂದಕ್ಕೆ ಎಫ್‌ಐಆರ್‌ ಹಾಕಲಿಲ್ಲವೇ?’

“Siddaramaiah- H.D. Revanna ನಡುವೆ ಒಪ್ಪಂದಕ್ಕೆ ಎಫ್‌ಐಆರ್‌ ಹಾಕಲಿಲ್ಲವೇ?’

Maulana Fazlur Rahman praises India in Pakistan

Fazal ur Rehman; ಭಾರತ ಸೂಪರ್‌ಪವರ್‌, ನಾವು ಭಿಕ್ಷೆ ಬೇಡುತ್ತಿದ್ದೇವೆ: ಪಾಕಿಸ್ಥಾನ ಸಂಸದ

Home Minister ಅಮಿತ್‌ ಶಾಗೆ ವಕೀಲ ದೇವರಾಜೇಗೌಡ ಪತ್ರ: ವೈರಲ್‌

Home Minister ಅಮಿತ್‌ ಶಾಗೆ ವಕೀಲ ದೇವರಾಜೇಗೌಡ ಪತ್ರ: ವೈರಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.