ಪೆಟ್ಟಿಗೆ ಅಂಗಡಿಗಳಲ್ಲಿ ಸರಣಿ ಕಳ್ಳತನ
Team Udayavani, May 15, 2018, 1:57 PM IST
ಹುಣಸೂರು: ನಗರದ ಸೇತುವೆಯ ಚಿತ್ರಮಂದಿರದ ಪಕ್ಕದಲ್ಲಿರುವ ಆರು ಪೆಟ್ಟಿಗೆ ಅಂಗಡಿಗಳಲ್ಲಿ ಸರಣಿ ಕಳ್ಳತನವಾಗಿದೆ.
ಸಣ್ಣ-ಪುಟ್ಟ ವ್ಯಾಪಾರ ನಡೆಸುತ್ತಿದ್ದ ಗೋವಿಂದರಾಜು, ಜಯಮ್ಮ, ಹೊಂಬಮ್ಮ, ಹಸಿನಾಬಾನುಗೆ ಸೇರಿದ ಪೆಟ್ಟಿಗೆ ಅಂಗಡಿಗಳಲ್ಲಿ ಬೀಡಿ, ಸಿಗರೆಟ್ ಪ್ಯಾಕೆಟ್ ಸೇರಿದಂತೆ ಹತ್ತು ಸಾವಿರಕ್ಕೂ ಹೆಚ್ಚು ಹಣ ದೋಚಿದ್ದಾರೆ. ಜಗಣ್ಣರಿಗೆ ಸೇರಿದ ಸೈಕಲ್ ಶಾಪ್ ಹಾಗೂ ಪಕ್ಕದ ಈಶ್ವರಿಗೆ ಸೇರಿದ ಚಿಲ್ಲರೆ ಅಂಗಡಿ ಬಾಗಿಲು ಮುರಿದು ಬಿಸಾಡಿದ್ದಾರೆ.
ಭಾನುವಾರ ರಾತ್ರಿ ಅಂಗಡಿಗಳ ಬೀಗ ಒಡೆದು ಅಂಗಡಿಯಲ್ಲಿದ್ದ ವಸ್ತುಗಳನ್ನು ಹೊರ ಬಿಸಾಡಿದ್ದು, ಬೀಡಿ, ಸಿಗರೆಟ್ ಪ್ಯಾಕೆಟ್ಗಳನ್ನು ಹಾಗೂ ಹಣವನ್ನು ಹೊತ್ತೂಯ್ದಿದ್ದಾರೆ. ಈ ಅಂಗಡಿ ಮಾಲಿಕರೆಲ್ಲರೂ ಖಾಸಗಿ ಪೈನಾನ್ಸ್ಗಳಲ್ಲಿ ಸಾಲ ಪಡೆದು ಅಂಗಡಿ ವ್ಯಾಪಾರ ಮಾಡುತ್ತಿದ್ದರೆನ್ನಲಾಗಿದೆ. ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.