Udayavni Special

ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಕಾರಜೋಳ! ಪ್ರಗತಿ ಪರಿಶೀಲನಾ ಸಭೆಯಲ್ಲಿ ಖಡಕ್‌ ವಾರ್ನಿಂಗ್‌

Team Udayavani, Feb 25, 2020, 7:39 PM IST

karjol

ರಾಯಚೂರು: ಭೂ ಒಡೆತನ ಯೋಜನೆಯಡಿ ಸಲ್ಲಿಕೆಯಾದ 3,800 ಅರ್ಜಿಗಳನ್ನು ವಿಲೇವಾರಿ ಮಾಡದೆ ಬಾಕಿ ಉಳಿಸಿಕೊಂಡಿದ್ದ ವಾಲ್ಮೀಕಿ ಅಭಿವೃದ್ಧಿ ನಿಗಮ ಜಿಲ್ಲಾ ವ್ಯವಸ್ಥಾಪಕ ವೈ.ಎ.ಕಾಳೆ ಅಮಾನತಿಗೆ ಸೂಚಿಸುವ ಮೂಲಕ ಸಮಾಜ ಕಲ್ಯಾಣ ಇಲಾಖೆ ಸಚಿವ ಡಿಸಿಎಂ ಗೋವಿಂದ ಕಾರಜೋಳ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಸಮಾಜ ಕಲ್ಯಾಣ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಇಲಾಖೆ ಕಾರ್ಯದರ್ಶಿಗೆ ಕರೆ ಮಾಡಿದ ಸಚಿವರು, ಸಂಜೆ ಐದು ಗಂಟೆಯೊಳಗೆ ಅಧಿಕಾರಿ ಅಮಾನತು ಆದೇಶ ನನ್ನ ಮೇಜಿನ ಮೇಲಿರಬೇಕು ಎಂದು ಸೂಚಿಸಿದರು.

ಈ ವೇಳೆ ಪ್ರತಿಕ್ರಿಯಿಸಿದ ಅಧಿಕಾರಿ ವೈ.ಎ.ಕಾಳೆ ಅಗತ್ಯ ದಾಖಲೆ ಸಂಗ್ರಹಿಸಲಾಗುತ್ತಿದೆ ಎಂದು ಸಮಜಾಯಿಷಿ ನೀಡಿದರು. ಇದರಿಂದ ಮತ್ತಷ್ಟು ಆಕ್ರೋಶ ವ್ಯಕ್ತಪಡಿಸಿದ ಸಚಿವರು, ದಾಖಲೆ ಸಂಗ್ರಹಿಸಲು ಎಷ್ಟು ವರ್ಷ ಬೇಕು. ಕನಿಷ್ಟ ಪಕ್ಷ ಒಂದು ಸಭೆಯನ್ನು ನಡೆಸಿಲ್ಲ. ಅಭಿವೃದ್ಧಿ ಮಾಡಲು ಮತ್ತೆ ಡಾ| ಅಂಬೇಡ್ಕರ್‌ ಹುಟ್ಟಿ ಬರಬೇಕೇ ಎಂದು ತರಾಟೆಗೆ ತೆಗೆದುಕೊಂಡರು.

ಜಿಲ್ಲೆಯ ಶಾಸಕರು, ಸಂಸದರು ಅಧಿಕಾರಿಗಳ ಪರ ವಹಿಸಿಕೊಂಡು ಬರುವುದನ್ನು ಬಿಟ್ಟುಬಿಡಿ ಎಂದು ನಗರ ಶಾಸಕ ಡಾ| ಶಿವರಾಜ ಪಾಟೀಲರಿಗೆ ಸೂಚಿಸಿದರು. ನೀವು ಅಡ್ಡಿಪಡಿಸದಿದ್ದರೆ ಇಲಾಖೆಯನ್ನು ಸೀದಾ ಮಾಡುತ್ತೇನೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ನಗರ ಶಾಸಕ, ನಮಗಂತೂ ಹೇಳಿ ಸಾಕಾಗಿದೆ. ನೀವೇ ಏನಾದರು ಮಾಡಿ ಎಂದರು.

ಜಿಲ್ಲೆಯಲ್ಲಿ ಸ್ಮಶಾನ ಸ್ಥಳದ ಬಗ್ಗೆ ಸೂಕ್ತ ಮಾಹಿತಿ ನೀಡದ್ದಕ್ಕೆ ಸಚಿವ ಕಾರಜೋಳ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಊಟ ಮಾಡಲು ಇಲ್ಲದಿದ್ದರೆ ಹೇಗೋ ಇರಬಹುದು. ಆದರೆ, ಸತ್ತವರಿಗೆ ಹೂಳಲು ಸ್ಮಶಾನ ಇಲ್ಲವೆಂದರೆ ಹೇಗೆ ಎಂದು ಪ್ರಶ್ನಿಸಿದರು. ಸ್ಥಳದಲ್ಲೇ ಸಮಾಜ ಕಲ್ಯಾಣ ಇಲಾಖೆ ಕಾರ್ಯದರ್ಶಿಗೆ ಕರೆ ಮಾಡಿ, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ದಲಿತರಿಗೆ ಮೀಸಲಾದ ಸ್ಮಶಾನ ಜಾಗದ ಬಗ್ಗೆ ಮಾಹಿತಿ ಪಡೆದು ಕೂಡಲೇ ಕಳುಹಿಸಿ ಎಂದು ಸೂಚಿಸಿದರು.

ಇನ್ನು ಸಮರ್ಪಕವಾಗಿ ಕಾರ್ಯನಿರ್ವಹಿಸದ ಜಿಲ್ಲೆಯ ಅಧಿಕಾರಿಗಳಿಗೆ ವರ್ಗಾವಣೆಯ ಎಚ್ಚರಿಕೆ ನೀಡಿದರು. ಎಂಟು ದಿನದೊಳಗೆ ಮಾಹಿತಿ ನೀಡದಿದ್ದರೆ, ಸರಿಯಾಗಿ ಕೆಲಸ ಮಾಡದಿದ್ದರೆ ಕೋಲಾರಕ್ಕೆ ವರ್ಗಾವಣೆ ಮಾಡುತ್ತೇನೆ ಎಂದು ರಾಯಚೂರಿನ ಅಧಿಕಾರಿಗಳಿಗೆ ಖಡಕ್‌ ವಾರ್ನಿಂಗ್‌ ನೀಡಿದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಏ.15ರ ನಂತರ ರೈಲು ಸಂಚಾರ ವರದಿ ಸತ್ಯಕ್ಕೆ ದೂರ: ಭಾರತೀಯ ರೈಲ್ವೆ ಇಲಾಖೆ

ಏ.15ರ ನಂತರ ರೈಲು ಸಂಚಾರ ವರದಿ ಸತ್ಯಕ್ಕೆ ದೂರ: ಭಾರತೀಯ ರೈಲ್ವೆ ಇಲಾಖೆ

ಸಚಿವರು, ಶಾಸಕರ ವೇತನದಲ್ಲಿ ಶೇ.30ರಷ್ಟು ಕಡಿತ; ಸುಗ್ರಿವಾಜ್ಞೆ ಮೂಲಕ ಆದೇಶ

ಸಚಿವರು, ಶಾಸಕರ ವೇತನದಲ್ಲಿ ಶೇ.30ರಷ್ಟು ಕಡಿತ; ಸುಗ್ರಿವಾಜ್ಞೆ ಮೂಲಕ ಆದೇಶ

ಮೂವರು ಮಕ್ಕಳಿಗೆ ಕೋವಿಡ್-19 ಸೋಂಕು; ರಾಜ್ಯದಲ್ಲಿ 191ಕ್ಕೇರಿದ ಸೋಂಕಿತರ ಸಂಖ್ಯೆ

ಮೂವರು ಮಕ್ಕಳಿಗೆ ಕೋವಿಡ್-19 ಸೋಂಕು; ರಾಜ್ಯದಲ್ಲಿ 191ಕ್ಕೇರಿದ ಸೋಂಕಿತರ ಸಂಖ್ಯೆ

ಕೋವಿಡ್ 19 ವಿರುದ್ಧ ಹೋರಾಟ; ಏ.30ರವರೆಗೆ ಲಾಕ್ ಡೌನ್ ಮುಂದುವರಿಕೆ: ಒಡಿಶಾ ಸಿಎಂ

ಕೋವಿಡ್ 19 ವಿರುದ್ಧ ಹೋರಾಟ; ಏ.30ರವರೆಗೆ ಲಾಕ್ ಡೌನ್ ಮುಂದುವರಿಕೆ: ಒಡಿಶಾ ಸಿಎಂ ಘೋಷಣೆ

ನೀರು ತರಲು ಹೋಗಿ ಕಾಲು ಜಾರಿ ಕೆರೆಗೆ ಬಿದ್ದು ಮೂರು ಮಕ್ಕಳ ದುರ್ಮರಣ

ನೀರು ತರಲು ಹೋಗಿ ಕಾಲು ಜಾರಿ ಕೆರೆಗೆ ಬಿದ್ದು ಮೂರು ಮಕ್ಕಳ ದುರ್ಮರಣ

Leopard-climbs-tree

ವಿಡಿಯೋ: ಬೇಟೆಯೊಂದಿಗೆ ಅನಾಯಾಸವಾಗಿ ದೈತ್ಯಗಾತ್ರದ ಮರ ಏರಿದ ಚಿರತೆ, ನೆಟ್ಟಿಗರು ಫುಲ್ ಫಿದಾ

ಲಾಕ್ ಡೌನ್ ಜೊತೆ ನೋ ಮ್ಯಾನ್ ಝೋನ್

ಲಾಕ್ ಡೌನ್ ಜೊತೆ ನೋ ಮ್ಯಾನ್ ಝೋನ್: ಮಂಗನ ಕಾಯಿಲೆ ತಡೆಗೆ ಮಲೆನಾಡಿನಲ್ಲಿ ಕ್ರಮ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಾಜ್ಯದಲ್ಲಿ ಲಾಕ್‌ಡೌನ್‌ ತೆರವಾದರೂ ಮೃಗಾಲಯಗಳು ಲಾಕ್‌?

ರಾಜ್ಯದಲ್ಲಿ ಲಾಕ್‌ಡೌನ್‌ ತೆರವಾದರೂ ಮೃಗಾಲಯಗಳು ಲಾಕ್‌?

ಸಚಿವರು, ಶಾಸಕರ ವೇತನದಲ್ಲಿ ಶೇ.30ರಷ್ಟು ಕಡಿತ; ಸುಗ್ರಿವಾಜ್ಞೆ ಮೂಲಕ ಆದೇಶ

ಸಚಿವರು, ಶಾಸಕರ ವೇತನದಲ್ಲಿ ಶೇ.30ರಷ್ಟು ಕಡಿತ; ಸುಗ್ರಿವಾಜ್ಞೆ ಮೂಲಕ ಆದೇಶ

state-news-tdy-1

ಮಾಡದ ತಪ್ಪಿಗೆ ಕೂಲಿ ಕಾರ್ಮಿಕರು ಬಂಧಿ

ಮೂವರು ಮಕ್ಕಳಿಗೆ ಕೋವಿಡ್-19 ಸೋಂಕು; ರಾಜ್ಯದಲ್ಲಿ 191ಕ್ಕೇರಿದ ಸೋಂಕಿತರ ಸಂಖ್ಯೆ

ಮೂವರು ಮಕ್ಕಳಿಗೆ ಕೋವಿಡ್-19 ಸೋಂಕು; ರಾಜ್ಯದಲ್ಲಿ 191ಕ್ಕೇರಿದ ಸೋಂಕಿತರ ಸಂಖ್ಯೆ

ಲಾಕ್‌ಡೌನ್‌ ಬಿಗಿಗೊಳಿಸಲು ಸಿಎಂ ಸೂಚನೆ

ಲಾಕ್‌ಡೌನ್‌ ಬಿಗಿಗೊಳಿಸಲು ಸಿಎಂ ಸೂಚನೆ

MUST WATCH

udayavani youtube

Coronavirus Lockdown : ಮಟ್ಟುಗುಳ್ಳ ಮಂದಗತಿಯ ಮಾರುಕಟ್ಟೆ Saddens Muttugulla Growers

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

ಹೊಸ ಸೇರ್ಪಡೆ

“ಸ್ಮಾರ್ಟ್‌ ಮಾರುಕಟ್ಟೆ’ ನಿರ್ಮಾಣಕ್ಕೆ ಸಜ್ಜು

“ಸ್ಮಾರ್ಟ್‌ ಮಾರುಕಟ್ಟೆ’ ನಿರ್ಮಾಣಕ್ಕೆ ಸಜ್ಜು

09-April-18

ಅಧಿಕಾರಿಗಳ ಕಾರ್ಯವೈಖರಿಗೆ ಬೇಸರ

ಆರ್ಥಿಕತೆ ಪುನಶ್ಚೇತನಕ್ಕೆ ಜರ್ಮನಿ ಚಿಂತನೆ

ಆರ್ಥಿಕತೆ ಪುನಶ್ಚೇತನಕ್ಕೆ ಜರ್ಮನಿ ಚಿಂತನೆ

ಏ.15ರ ನಂತರ ರೈಲು ಸಂಚಾರ ವರದಿ ಸತ್ಯಕ್ಕೆ ದೂರ: ಭಾರತೀಯ ರೈಲ್ವೆ ಇಲಾಖೆ

ಏ.15ರ ನಂತರ ರೈಲು ಸಂಚಾರ ವರದಿ ಸತ್ಯಕ್ಕೆ ದೂರ: ಭಾರತೀಯ ರೈಲ್ವೆ ಇಲಾಖೆ

09-April-17

ನಗರದಲ್ಲೇ ಸಿದ್ಧಗೊಳ್ಳುತ್ತಿವೆ ವೈದ್ಯರಿಗೆ ಪಿಪಿಇ ಕಿಟ್‌