ರಾಯಚೂರು: ಕೋವಿಡ್ 19ಗೆ ಮತ್ತಿಬ್ಬರು ವೃದ್ಧೆಯರು ಬಲಿ
Team Udayavani, Jul 14, 2020, 11:19 AM IST
ಸಾಂದರ್ಭಿಕ ಚಿತ್ರ
ರಾಯಚೂರು: ಜಿಲ್ಲೆಯಲ್ಲಿ ಕೋವಿಡ್ ಸಾವಿನ ಸಂಖ್ಯೆ ಮುಂದುವರಿದಿದ್ದು, ಇಂದು ಮತ್ತಿಬ್ಬರು ವೃದ್ಧೆಯರು ಕೋವಿಡ್ 19ಗೆ ಪಾಸಿಟಿವ್ ಗೆ ಬಲಿಯಾಗಿದ್ದಾರೆ. ನಗರದ ಗೋಲ್ ಮಾರ್ಕೆಟ್ ಏರಿಯಾದ 65 ವರ್ಷದ ಮಹಿಳೆ ಕಳೆದ ನಾಲ್ಕು ದಿನಗಳಿಂದ ಜ್ವರ ಕೆಮ್ಮು ಉಸಿರಾಟದ (ಸಾರಿ) ಸಮಸ್ಯಯಿಂದ ಬಳಲುತ್ತಿದ್ದರು.ಶನಿವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಸೊಮವಾರ ರಾತ್ರಿ ಮೃತಪಟ್ಟಿದ್ದಾರೆ. ಸಿರವಾರದ 80 ವರ್ಷದ ಮಹಿಳೆ ಎದೆ ಮತ್ತು ಬೆನ್ನು ನೋವಿನಿಂದ ಬಳಲುತ್ತಿದ್ದು (ಸಾರಿ), ರವಿವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಂಗಳವಾರ ಬೆಳಗಿನ ಜಾವ ಮೃತಪಟ್ಟಿದ್ದಾರೆ. ಕೋವಿಡ್ 19 ನಿಯಮಾನಜಸಾರ ಅಂತ್ಯಕ್ರಿಯೆ ಕೈಗೊಳ್ಳಲು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ. ಆ ಮೂಲಕ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 10ಕ್ಕೇರಿದಂತಾಗಿದೆ.