ಧಾರ್ಮಿಕತೆಗೆ ಬದುಕು ಸವೆಸಿದ ಸುಜಯೀಂದ್ರ ಶ್ರೀ

Team Udayavani, Feb 9, 2019, 9:44 AM IST

ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠವನ್ನು ಕೇವಲ ಧಾರ್ಮಿಕವಾಗಿ ಮಾತ್ರವಲ್ಲದೇ ಆಧ್ಯಾತ್ಮಿಕ ಹಾಗೂ ಶೈಕ್ಷಣಿಕವಾಗಿಯೂ ಬೆಳೆಸಿದವರು ಶ್ರೀ ಸುಜಯೀಂದ್ರ ತೀರ್ಥರು ಎಂದು ಪೀಠಾಪತಿ ಶ್ರೀಸುಬುಧೇಂದ್ರ ತೀರ್ಥರು ಬಣ್ಣಿಸಿದರು.

ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ ಶ್ರೀ ಸುಜಯೀಂದ್ರ ತೀರ್ಥರ ಜನ್ಮಾಷ್ಟೋತ್ತರ ಶತಮಾನೋತ್ಸವ ಹಾಗೂ ಪೀಠಾರೋಹಣದ ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಿ ಅನುಗ್ರಹ ಸಂದೇಶ ನೀಡಿದರು. ಅಂಥ ಮಹಾನುಭಾವರ ಸ್ಮರಣೆ ನಿಮಿತ್ತ ಉತ್ಸವ ತ್ರಯದ ಸಮಾರಂಭ ಆಚರಿಸುತ್ತಿರುವುದು ವಿಶೇಷ ಎಂದು ಹೇಳಿದರು.

ಶ್ರೀಮಠದ 37ನೇ ಪೀಠಾಧಿಪತಿಗಳಾಗಿದ್ದ ಅವರು ಸತತ 23 ವರ್ಷ ಸಾಕಷ್ಟು ಶ್ರಮಿಸಿದ್ದರು. ಅಂದು ಅವರು ಹಾಕಿಕೊಟ್ಟ ಹಾದಿಯಲ್ಲಿಯೇ ಇಂದು ಶ್ರೀಮಠ ನಡೆಯುತ್ತಿದೆ. ದೇಶ ಮಾತ್ರವಲ್ಲದೇ ವಿದೇಶದಲ್ಲೂ ಮಠದ ಖ್ಯಾತಿ ಬೆಳೆದಿದೆ ಎಂದು ಹೇಳಿದರು.

ಶ್ರೀಸುಜಯೀಂದ್ರ ತೀರ್ಥರ ಆರ್ಶೀವಾದದಿಂದ ಆಧ್ಯಾತ್ಮಿಕ ವಿದ್ವಾಂಸರು ಸಾಕಷ್ಟು ಸಾಧನೆ ಮಾಡಿದ್ದಾರೆ. ಜ್ಞಾನಾರ್ಜನೆಗೆ ಅವರು ಸದಾ ಒತ್ತು ನೀಡಿದ್ದರು. ಅಲ್ಲದೇ ಭಜನಾ ಮಂಡಳಿಗಳ ಸಂಘಟನೆಗೂ ಶ್ರೀಮಠವು ಮುಂದಾಗಿದೆ ಎಂದು ಹೇಳಿದರು.

ಈ ನಿಮಿತ್ತ ಶ್ರೀಸುಜಯೀಂದ್ರ ತೀರ್ಥರ ಬೃಂದಾವನಕ್ಕೆ ಬೆಳಗಿನ ಜಾವ ವಿಶೇಷ ಪೂಜೆ ನೆರವೇರಿಸಲಾಯಿತು. ಸಂಸ್ಥಾನ ಶ್ರೀಮೂಲರಾಮದೇವರ ಪೂಜೆ ನಡೆಯಿತು. ವಿವಿಧ ಭಾಗಗಳಿಂದ ಆಗಮಿಸಿದ್ದ ಭಜನಾ ಮಂಡಳಿ ಸದಸ್ಯರು ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು.


ಈ ವಿಭಾಗದಿಂದ ಇನ್ನಷ್ಟು

  • ಲಿಂಗಸುಗೂರು: ಬ್ರಿಟಿಷರ ಅವಧಿಯಲ್ಲಿ ನಿರ್ಮಿಸಿದ ಅಧಿಕಾರಿಗಳ ನ್ಪೋರ್ಟ್ಸ್ ಕ್ಲಬ್‌ ಇಂದು ನಿರ್ವಹಣೆ ಕೊರತೆಯಿಂದ ಶಿಥಿಲಗೊಂಡು ಅವಸಾನದತ್ತ ಸಾಗಿದೆ. ಪಟ್ಟಣದ...

  • ರಾಯಚೂರು: ಕಳೆದ ಕೆಲ ವರ್ಷಗಳ ಹಿಂದೆ ಕೊಪ್ಪಳ ಜಿಲ್ಲೆಯಲ್ಲಿ ಕೆರೆ ಪುನರುಜ್ಜೀವನಗೊಳಿಸಿ ಸಾಕಷ್ಟು ಸದ್ದು ಮಾಡಿದ್ದ ಯಶೋಮಾರ್ಗ ತಂಡ ಈಗ ರಾಯಚೂರು ಜಿಲ್ಲೆಯಲ್ಲಿ...

  • ಗಂಗಾವತಿ: ರಾಯಚೂರು, ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಮೇ 25ರಂದು ನಿಗದಿಯಾಗಿದ್ದು, ಅಧ್ಯಕ್ಷರ ಹುದ್ದೆಗೆ...

  • ರಾಯಚೂರು: ಹೈಕೋರ್ಟ್‌ ಆದೇಶದನ್ವಯ ಕಾರ್ಮಿಕರಿಗೆ ಕನಿಷ್ಠ ಕೂಲಿ ಜಾರಿ ಸೇರಿ ವಿವಿಧ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಸೆಂಟರ್‌ ಆಫ್‌ ಇಂಡಿಯಾ ಟ್ರೇಡ್‌ ಯೂನಿಯನ್‌...

  • ದೇವದುರ್ಗ: ಸರ್ಕಾರ ಗ್ರಾಮೀಣ ಭಾಗದ ಮಕ್ಕಳು ಇಂಗ್ಲಿಷ್‌ ಮಾಧ್ಯಮದ ಶಿಕ್ಷಣ ಪಡೆಯಲಿ ಎಂಬ ಉದ್ದೇಶದಿಂದ ಸರ್ಕಾರಿ ಕನ್ನಡ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮದ ಶಿಕ್ಷಣ...

ಹೊಸ ಸೇರ್ಪಡೆ