ವೀಳ್ಯೆದೆಲೆಗೆ ಹೊಸರೋಗ; ಕಂಗಾಲಾದ ಬೆಳೆಗಾರ


Team Udayavani, May 18, 2023, 3:08 PM IST

tdy-11

ರಾಮನಗರ: ಇತ್ತೀಚಿಗೆ ಬಂಪರ್‌ ಬೆಲೆಯಿಂದ ಸಾಕಷ್ಟು ಖುಷಿಯಾಗಿದ್ದ ವೀಳ್ಯೆದೆಲೆ ಬೆಳೆಗಾರರಿಗೆ ಇದೀಗ ಹೊಸ ಆತಂಕ ಎದುರಾಗಿದೆ. ವೀಳ್ಯೆದೆಲೆ ಬಳ್ಳಿಗಳಿಗೆ ಹೊಸದಾದ ರೋಗ ಕಾಣಿಸಿಕೊಂಡಿದ್ದು, ದಿನೇ ದಿನೆ ವ್ಯಾಪಕವಾಗುತ್ತಿರುವ ರೋಗದಿಂದ ಇಡೀ ವೀಳ್ಯೆದೆಲೆ ತೋಟ ನಾಶವಾಗುತ್ತಿದ್ದು, ಬೆಳೆಗಾರರು ಕಂಗಾಲಾಗಿದ್ದಾರೆ.

ಪ್ರಮುಖ ವಾಣಿಜ್ಯ ಬೆಳೆ ಎನಿಸಿರುವ ವೀಳ್ಯೆದೆಲೆಯನ್ನು ಜಿಲ್ಲೆಯಲ್ಲಿ 2,500 ಎಕರೆಗೂ ಹೆಚ್ಚು ವಿಸ್ತೀರ್ಣದಲ್ಲಿ ಬೆಳೆಯಲಾಗುತ್ತಿದೆ. ಇದರಲ್ಲಿ ಚನ್ನಪಟ್ಟಣದಲ್ಲಿ ಅತಿಹೆಚ್ಚು ವೀಳ್ಯೆದೆಲೆಯನ್ನು ಬೆಳೆಯುತ್ತಿದ್ದು, ಇದೊಂದು ತಾಲೂಕಿನಲ್ಲೇ 1,200 ಎಕರೆಗೂ ಹೆಚ್ಚು ವಿಸ್ತೀರ್ಣದಲ್ಲಿ ಬೆಳೆಯಲಾಗುತ್ತಿದೆ. ಇದೀಗ ಚನ್ನಪಟ್ಟಣ ತಾಲೂಕಿನ ಭೂಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮದಲ್ಲಿ ವೀಳ್ಯೆದೆಲೆಗೆ ಹೊಸರೋಗ ಕಾಣಿಸಿಕೊಂಡಿದೆ.

ಏನಿದು ಹೊಸ ರೋಗ: ವೀಳ್ಯೆದೆಲೆಯ ಕಾಂಡಗಳ ಮೇಲೆ ಬಿಳಿಯ ಬಣ್ಣದ ಬೂಸ್ಟು ಕಾಣಿಸಿಕೊಳ್ಳುತ್ತಿದ್ದು, ಕ್ರಮೇಣ ಇದು ಇಡೀ ಬಳ್ಳಿಗೆ ಆವರಿಸಿ ಇಡೀ ಬಳ್ಳಿ ಕೊಳೆತು ಹೋಗುತ್ತದೆ. ಕಾಂಡಗಳಲ್ಲಿ ಬಿಳಿಯ ಬೂಸ್ಟು ಕಾಣಿಸಿಕೊಳ್ಳುತ್ತಿದ್ದಂತೆ ಎಲೆಗಳು ಮುರುಟಿಕೊಂಡು ಹಾಳಾಗುತ್ತಿದ್ದು, ತೋಟದಲ್ಲಿ ಬಳ್ಳಿಯೊಂದರಲ್ಲಿ ಕಾಣಿಸಿ ಕೊಳ್ಳುವ ಈ ರೋಗ ಕ್ರಮೇಣ ಇಡೀ ತೋಟಕ್ಕೆ ಹಬ್ಬಿ ಬೆಳೆಯನ್ನು ಹಾನಿ ಮಾಡುತ್ತಿದೆ. ರೈತರು ವರ್ಷಗಳ ಕಾಲ ಬೆಳೆದ ವೀಳ್ಯೆದೆಲೆ ತೋಟ ಸಂಪೂರ್ಣ ಹಾಳಾಗುತ್ತಿದೆ.

ತೀವ್ರ ಉಷ್ಣಾಂಶ ಕಾರಣ: ತೋಟಗಾರಿಕಾ ಇಲಾಖೆ ಅಧಿಕಾರಿಗಳ ಪ್ರಕಾರ ಇದು ಕಾಂಡ ಕೊಳೆತ ರೋಗವಾಗಿದ್ದು, ವಾತಾವರಣದಲ್ಲಿ ತೀವ್ರ ಬಿಸಿಲು ರೋಗಕ್ಕೆ ಕಾರಣವಾಗಿದೆ. ಸೈರೋಡಿಯಮ್‌ ರೋಲ್ಟ್ಸ್ ಎಂಬ ಶಿಲೀಂಧ್ರ ಈ ರೋಗಕ್ಕೆ ಕಾರಣವಾಗಿದ್ದು, ವಾತಾವರಣದಲ್ಲಿ 35ರಿಂದ 38 ಡಿಗ್ರಿ ಸೆಂಟಿಗ್ರೇಡ್‌ ಉಷ್ಣಾಂಶವಿದ್ದಾಗ ಈ ಶಿಲೀಂಧ್ರ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಟ್ತ್ರೈಕೋಡರ್ಮಾ ಪುಡಿಯನ್ನು ಪ್ರತಿ ಗಿಡಕ್ಕೆ 5 ಗ್ರಾಂ ನಂತೆ ಹಾಕುವುದು, ರೋಗ ಕಾಣಿಸಿಕೊಂಡ ಗಿಡವನ್ನು ಬೇರು ಸಮೇತ ಕಿತ್ತು ಸುಟ್ಟು ಹಾಕುವುದು ಹಾಗೂ ರೋಗ ಕಾಣಿಸಿಕೊಂಡ ಗಿಡದ ಬುಡದಲ್ಲಿ ಬಾವಸ್ಟಿನ್‌ ಹಾಕುವುದು ಪರಿಹಾರವಾಗಿದ್ದು, ವೀಳ್ಯೆ ದೆಲೆ ಗಳನ್ನು ತಿನ್ನಲು ಬಳಸುವುದರಿಂದ ಯಾವುದೇ ಕೀಟನಾಶಕವನ್ನು ಬಳಸಬಾರದು ಎಂದು ತಿಳಿಸಿದ್ದಾರೆ.

ವೀಳ್ಯೆದೆಲೆಗೆ ತಪ್ಪದ ಗಂಡಾಂತರ: ವೀಳ್ಯೆದೆಲೆ ಬೆಳೆಗೆ ಒಂದಿಲ್ಲೊಂದು ಗಂಡಾಂತರ ಎದುರಾಗುತ್ತಲೇ ಇದೆ. ಕಳೆದ ಮುಂಗಾರು ಅವಧಿಯಲ್ಲಿ ಸುರಿದ ಬಾರಿ ಮಳೆಯಿಂದ ಜಿಲ್ಲೆಯಲ್ಲಿ ಸಾಕಷ್ಟು ವೀಳ್ಯೆದೆಲೆ ತೋಟಗಳು ಹಾನಿಯಾಗಿದ್ದವು. ಇನ್ನು ನವೆಂಬರ್‌ನಿಂದ ಜನವರಿವರೆಗೆ ಮೋಡ ಹಾಗೂ ತುಂತುರು ಮಳೆ ಸುರಿದ ಪರಿಣಾಮ ವೀಳ್ಯೆದೆಲೆ ಬಳ್ಳಿಗಳು ಸರಿಯಾಗಿ ಬೆಳವಣಿಗೆ ಹೊಂದಲಿಲ್ಲ. ಇನ್ನು ಜನವರಿಯಿಂದ ಮಾರ್ಚ್‌ ಮೊದಲ ವಾರದವರೆಗೆ ಮಳೆ ಇದ್ದ ಕಾರಣ ವೀಳ್ಯೆದೆಲೆ ಸರಿಯಾಗಿ ಚಿಗುರಲು ಸಾಧ್ಯವಾಗಲಿಲ್ಲ. ಇದೀಗ ಬಿಸಿಲಿನ ತೀವ್ರತೆಯಿಂದ ಕಾಂಡ ಕೊಳೆತ ರೋಗ ಕಾಣಿಸಿಕೊಂಡಿದ್ದು ಬೆಳೆಗೆ ಒಂದಿಲ್ಲೊಂದು ಗಂಡಾಂತರ ಎದುರಾಗಿದೆ.

ಬೆಲೆ ಇದ್ದರೂ ಪ್ರಯೋಜನವಿಲ್ಲ ವೀಳ್ಯೆದೆಲೆಗೆ ಸಾರ್ವಕಾಲಿಕ ದಾಖಲೆ ಬೆಲೆ ದೊರೆಯುತ್ತಿದೆ. ಮಾರ್ಚ್‌ ತಿಂಗಳಲ್ಲಿ ವೀಳ್ಯೆದೆಲೆ ಪ್ರತಿ ಪಿಂಡಿಗೆ(100 ಕಟ್ಟುಗಳು) 22 ಸಾವಿರ ರೂ.ವರೆಗೆ ತಲುಪಿತ್ತು. ಈಗಲೂ ಪ್ರತಿ ಪಿಂಡಿ ಎಲೆಗೆ 6ರಿಂದ 8ಸಾವಿರ ರೂ.ವರೆಗೆ ಬೆಲೆ ಇದೆ. ವೀಳ್ಯೆದೆಲೆಗೆ ಬಂಪರ್‌ ಬೆಲೆ ಸಿಗುತ್ತಿದೆಯಾದರೂ, ರೋಗ ಹಾಗೂ ಉತ್ಪಾದನೆ ಕಡಿಮೆಯಾಗಿ ರುವ ಪರಿಣಾಮ ರೈತರಿಗೆ ಯಾವುದೇ ಪ್ರಯೋಜನ ವಿಲ್ಲದಂತಾಗಿದೆ.

ರೋಗದ ಬಗ್ಗೆ ಮಾಹಿತಿ ಪಡೆದಿದ್ದು, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಿಗೆ ಮಾಹಿತಿ ನೀಡಲಾಗಿದೆ. ವೀಳ್ಯೆದೆಲೆಯನ್ನು ನೇರವಾಗಿ ತಿನ್ನಲು ಬಳಸುವ ಕಾರಣ ಇದಕ್ಕೆ ಯಾವುದೇ ರೀತಿಯ ಔಷಧ ಸಿಂಪಡಣೆ ಮಾಡಲು ಅವಕಾಶವಿಲ್ಲ. ವಿಜ್ಞಾನಿಗಳನ್ನು ರೈತರ ತೋಟಕ್ಕೆ ಭೇಟಿ ಮಾಡಿಸಿ ಸೂಕ್ತ ಪರಿಹಾರ ಕೊಡಿಸಲಾಗುವುದು. ● ವಿವೇಕ್‌, ಹಿರಿಯ ತೋಟಗಾರಿಕಾ ನಿರ್ದೇಶಕ, ತೋಟಗಾರಿಕಾ ಇಲಾಖೆ

– ಸು.ನಾ.ನಂದಕುಮಾರ್‌

ಟಾಪ್ ನ್ಯೂಸ್

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು

Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.