Udayavni Special

ಪಕ್ಷದ ಕಾರ್ಯಕರ್ತರನ್ನು ಬೆದರಿಸಿದರೆ ಶಿಸ್ತು ಕ್ರಮ


Team Udayavani, Dec 7, 2020, 7:49 PM IST

ಪಕ್ಷದ ಕಾರ್ಯಕರ್ತರನ್ನು ಬೆದರಿಸಿದರೆ ಶಿಸ್ತು ಕ್ರಮ

ಕನಕಪುರ: ನಮ್ಮ ಪಕ್ಷದ ಮುಖಂಡರು ಮತ್ತುಕಾರ್ಯಕರ್ತರಿಗೆ ಸುಖಾಸುಮ್ಮನೆ ಬೆದರಿಕೆ ಯೋಡ್ಡುವುದು ಕಂಡು ಬಂದರೆ ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂದು ಕೆಆರ್‌ಐಡಿಎಲ್‌ ಮಂಡಳಿ ಅಧ್ಯಕ್ಷ ರುದ್ರೇಶ್‌ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ನಗರದ ಬೈಪಾಸ್‌ ರಸ್ತೆಯ ತೋಟದಲ್ಲಿ ಪಕ್ಷದ ವತಿಯಿಂದ ಇತ್ತೀಚಿಗೆ ಕೆ.ಆರ್‌.ಐ.ಡಿ.ಎಲ್‌ ಮಂಡಳಿಯ ಅಧ್ಯಕ್ಷರಾದ ರುದ್ರೇಶ್‌ ಅವರಿಗೆ ಅಭಿನಂದನಾ ಸಮಾರಂಭ ಮತ್ತು ಗ್ರಾಪಂ ಚುನಾವಣೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಬಿಜೆಪಿ ಕಾರ್ಯಕರ್ತರನ್ನು ಬೆದರಿಸಿ ರೌಡಿ ಶೀಟರ್‌ ಪಟ್ಟಿಗೆ ಸೇರಿಸಿ ರೌಡಿ ಪರೇಡ್‌ ಮಾಡಿಸಿದ್ದಾರೆ. ನಮ್ಮ ಕಾರ್ಯಕರ್ತರು ಯಾರ ವಿಚಾರಕ್ಕೂ ಹೊಗುವುದಿಲ್ಲ ಆದರೆ ನಮ್ಮ ಕಾರ್ಯಕರ್ತರ ವಿಚಾರಕ್ಕೆ ಬಂದರೆ ನಾವು ಸುಮ್ಮನಿರುವವರಲ್ಲ. ಪ್ರಭಾವಿಗಳ ಮಾತಿಗೆ ಕಟ್ಟುಬಿದ್ದು ನಮ್ಮ ಕಾರ್ಯಕರ್ತರಿಗೆ ವಿನಾಕಾರಣ ತೊಂದರೆ ಕೊಟ್ಟರೆ ಅಂತಹ ಅಧಿಕಾರಿಗಳ ವಿರುದ್ಧ ಸರ್ಕಾರ ಮುಖೇನ ಸೂಕ್ತ ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂದು ಹೇಳಿದರು.

ಯಾವುದೇ ಹುದ್ದೆ ಮತ್ತು ಸ್ಥಾನ ಮಾನಗಳು ಸುಮ್ಮನೆ ಬರುವುದಿಲ್ಲ ಯಡಿಯುರಪ್ಪನವರು ಮುಖ್ಯಮಂತ್ರಿಯಾಗಲು 40 ವರ್ಷಗಳ ಸತತ ಹೊರಾಟ ಮತ್ತು ಸಂಘಟನೆ ಮಾಡಿದ್ದಾರೆ. ಅದೇ ರೀತಿ ಪಕ್ಷಕ್ಕೆ ದುಡಿದ ಸೇವೆ ಮತ್ತು ಪಕ್ಷ ಸಂಘಟನೆ ಪ್ರತಿಫ‌ಲವಾಗಿ ನನಗೆ ಕೆಆರ್‌ಐಡಿಎಲ್‌ ಮಂಡಳಿ ಅಧ್ಯಕ್ಷ ಸ್ಥಾನ ಕೊಟ್ಟಿದ್ದಾರೆ. ಪ್ರತಿಯೊಬ್ಬರು ಪ್ರಮಾಣಿಕವಾಗಿ ಮತದಾರರ ಜತೆಗಿದ್ದು ಪಕ್ಷ ಸಂಘಟನೆ ಮಾಡಿದರೆ ಮತದಾರರು ನಮ್ಮ ಪರ ನಿಲ್ಲುತ್ತಾರೆ ಜತೆಗೆ ಸೂಕ್ತ ಸ್ಥಾನಮಾನಗಳು ತಾನಾಗಿಯೇ ಒಲಿದು ಬರುತ್ತವೆ ಎಂದರು.

ಈ ದೇಶಕ್ಕೆ ಮರಾಠ ಕೊಡುಗೆ ಅಪಾರವಾಗಿದೆ ಅದನ್ನು ಮರೆಯಬಾರದು ಪೋಡಿ ಪಹಣಿ ಎಂಬ ಪದಗಳೂ ಮರಾಠರ ಭಾಷೆಯೇ ಆಗಿದೆ ಆನೇಕ ವರ್ಷಗಳಿಂದ ಮರಾಠರು ನಮ್ಮ ರಾಜ್ಯದಲ್ಲಿದ್ದಾರೆ ನಮ್ಮ ಸರ್ಕಾರ ಮರಾಠ ಭಾಷೆಗೆ ಕೊಟ್ಟಿಲ್ಲ ಮರಾಠ ಸುಮುದಾಯಕ್ಕೆ ಕೊಟ್ಟಿದ್ದೆ ತಪ್ಪು ಕಲ್ಪನೆ ಬೇಡ ಎಂದರು.

ಹೆಚ್ಚು ಸ್ಥಾನ ಗಳಿಸಲು ಪಣ: ಜಿಲ್ಲೆಯಲ್ಲಿ ಜೆಡಿಎಸ್‌ ನಿರ್ನಾಮವಾಗುತ್ತಿದೆ. ಜೆಡಿಎಸ್‌ ಮುಖಂಡರು ವಿಶ್ವಾಸ ಕಳೆದುಕೊಂಡು ಸ್ವಾರ್ಥಸಾಧನೆಗೆ ಇಳಿದಿದ್ದಾರೆ. ಇದರಿಂದ ಜೆಡಿಎಸ್‌ ನಾಯಕರು ನಂಬಿಕೆ ದ್ರೋಹಿಗಳೆಂದು ಜನರೇ ತಿರ್ಮಾನಿಸಿದ್ದಾರೆ. ಇವರ ನಡೆಯಿಂದಬೆಸತ್ತಿರುವ ಮತದಾರರನ್ನುಕಾರ್ಯಕರ್ತರನ್ನು ನಮ್ಮ ಪಕ್ಷಕ್ಕೆ ಕರೆತಂದು ಪಕ್ಷದಿಂದ ಸ್ಪರ್ಧೆ ಮಾಡಲು ಅವಕಾಶ ಕೊಡಿ ಸದೃಢವಾಗಿ ಪಕ್ಷ ಸಂಘಟನೆ ಮಾಡೋಣ ಈ ಬಾರಿ ಗ್ರಾಪಂ ಚುನಾವಣೆಯಲ್ಲಿ 2 ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳನ್ನು ಗೆಲ್ಲಿಸಲು ಪಣ ತೊಡಬೇಕು ಎಂದರು. ಬಿಜೆಪಿ ನಗರ ಮಾಜಿ ಅಧ್ಯಕ್ಷ ನಾಗಾನಂದ್‌ ಮಾತನಾಡಿ, ಜಿಲ್ಲೆಯಲ್ಲಿ ಪಕ್ಷವನ್ನು ಸಂಘಟಿಸಿ ಬೆಳೆಸುವುದರಲ್ಲಿ ರುದ್ರೇಶ್‌ ಅವರ ಪಾತ್ರ ಮುಖ್ಯವಾಗಿದ್ದು, ಇದನ್ನು ಪಕ್ಷ ಗುರತಿಸಿ ಹೆಚ್ಚಿನ ಅಧಿಕಾರ ನೀಡಿರುವುದ ಸ್ಥಳೀಯ ಕಾರ್ಯಕರ್ತರಲ್ಲಿ ಬಲತುಂಬಿದಂತಾಗಿದೆ ಎಂದರು.

ಬಿಜೆಪಿಗೆ ಸೇರ್ಪಡೆಗೊಂಡ ಅನೇಕ ಕಾರ್ಯಕರ್ತರನ್ನು ಈ ವೇಳೆ ರುದ್ರೇಶ್‌ ಬರಮಾಡಿಕೊಂಡರು. ರಾಮನಗರ ತಾಲೂಕು ಮಾಜಿ ಅಧ್ಯಕ್ಷ ಪ್ರವೀಣ್‌, ಪ್ರಾಧಿಕಾರದ ಅಧ್ಯಕ್ಷ ಮುರುಳಿ, ಆನೇಕಲ್‌ ಜಯಣ್ಣ, ಮಾಗಡಿ ರಂಗಧಾಮಯ್ಯ, ಮಾಜಿ ನಾಗರಾಜು, ಕನಕಪುರ ಪ್ರಾಧಿಕಾರದ ಅಧ್ಯಕ್ಷ ಜಗನ್ನಾಥ್‌, ಮಲೇವೇಗೌಡ, ಮಾಲತಿ ಆನಂದ್‌ ಪೈ, ಮೋಹನ್‌, ಗೋಪಿ, ರಾಜೇಶ್‌,ಪವಿತ್ರ, ತಹಸೀನಾಖಾನ್‌, ಮಂಜು, ಶ್ರೀನಿವಾಸ್‌ ಸೇರಿದಂತೆ ಕಾರ್ಯಕರ್ತರಿದ್ದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

siddramiha

ಹುಣಸೋಡು ದುರಂತ: ಅಕ್ರಮ ಗಣಿಗಾರಿಕೆಗಳನ್ನು ಈ ಕೂಡಲೇ ಸ್ಥಗಿತಗೊಳಿಸಿ; ಸಿದ್ದು ಆಗ್ರಹ

kulapati

ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಉಪಕುಲಪತಿಯಾಗಿ ಪ್ರೊ. ಬಿ.ಕೆ ತುಳಸಿಮಾಲಾ ನೇಮಕ

shankar

ನನಗೆ ಯಾವುದೇ ಅಸಮಾಧಾನ ಇಲ್ಲ: ಆರ್. ಶಂಕರ್ ಮನವೊಲಿಸುವಲ್ಲಿ ಸಿಎಂ BSY ಯಶಸ್ವಿ

Honor V40 5G launched, first post-Huawei phone brings curved OLED display

ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಹಾನರ್ V40 5G ಸ್ಮಾರ್ಟ್ ಪೋನ್ ವೈಶಿಷ್ಟ್ಯತೆಗಳೇನು?

madhuswamy’

ನನಗೆ ಮತ್ತೆ ಖಾತೆ ಬದಲಾಯ್ತಾ? ಯಾವುದು ತೆಗೆದು, ಯಾವುದು ಕೊಟ್ರು?: ಮಾಧುಸ್ವಾಮಿ ಅಚ್ಚರಿ

sudhakar

ರಾಜ್ಯದಲ್ಲಿ ಈವರೆಗೆ 1.38 ಲಕ್ಷ ಮಂದಿಗೆ ಕೋವಿಡ್ ಲಸಿಕೆ ನೀಡಲಾಗಿದೆ: ಡಾ.ಕೆ.ಸುಧಾಕರ್

vijaya-final

2023ರ ವಿಧಾನಸಭಾ ಚುನಾವಣೆಗೆ ಈಗಲೇ ಸಿದ್ಧತೆ: ಬಿ.ವೈ. ವಿಜಯೇಂದ್ರ







ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

THALUK-PANCHAYATH

ತಾಪಂ ಇರಲಿ, ಗ್ರಾಪಂಗೆ ಮಾರ್ಗದರ್ಶಕವಾಗಲಿ

Ambedkar Bhavan to be held tomorrow: Kumaraswamy

ನಾಳೆ ಅಂಬೇಡ್ಕರ್‌ ಭವನ ಲೋಕಾರ್ಪಣೆ: ಕುಮಾರಸ್ವಾಮಿ

ವಿಸಿಟಿಂಗ್‌ ಕಾರ್ಡ್‌ಗಾಗಿ ಅವಕಾಶ ಕೊಡಬೇಕಿತ್ತಾ : ಜಿ.ಟಿ ದೇವೇಗೌಡ ಅವರಿಗೆ HDK ಪ್ರಶ್ನೆ

ವಿಸಿಟಿಂಗ್‌ ಕಾರ್ಡ್‌ಗಾಗಿ ಅವಕಾಶ ಕೊಡಬೇಕಿತ್ತಾ : ಜಿ.ಟಿ ದೇವೇಗೌಡ ಅವರಿಗೆ HDK ಪ್ರಶ್ನೆ

ಉದ್ಧವ್‌ ಠಾಕ್ರೆ ಹೇಳಿಕೆ ಹಿಂಪಡೆಯಬೇಕು : ಸಾಮ್ರಾಟ್‌ ಗೌಡ ಎಚ್ಚರಿಕೆ

ಉದ್ಧವ್‌ ಠಾಕ್ರೆ ಹೇಳಿಕೆ ಹಿಂಪಡೆಯಬೇಕು : ಸಾಮ್ರಾಟ್‌ ಗೌಡ ಎಚ್ಚರಿಕೆ

ಕ್ಷುಲ್ಲಕ ವಿಚಾರಕ್ಕೆ ಸ್ನೇಹಿತನ ತಂದೆಯನ್ನ ಕೊಲೆಗೈದ ಆರೋಪಿಗೆ ಜೀವಾವಧಿ ಶಿಕ್ಷೆ

ಕ್ಷುಲ್ಲಕ ವಿಚಾರಕ್ಕೆ ಸ್ನೇಹಿತನ ತಂದೆಯನ್ನ ಕೊಲೆಗೈದ ಆರೋಪಿಗೆ ಜೀವಾವಧಿ ಶಿಕ್ಷೆ

MUST WATCH

udayavani youtube

ತಲೆಕೂದಲು, ಮೀಸೆ ಬೋಳಿಸುವಂತೆ ರಾಗಿಂಗ್: ಮಂಗಳೂರಿನಲ್ಲಿ 9 ವಿದ್ಯಾರ್ಥಿಗಳ ಬಂಧನ

udayavani youtube

ನೇತಾಜಿಯವರ ಜನ್ಮ ದಿನದಂದು ಅವರ ಆಪ್ತರ ಪುತ್ರಿಯಾದ ಜೊತೆ ಉಡುಪಿಯಲ್ಲಿ ಮಾತುಕತೆ,

udayavani youtube

ಮಂಗಳೂರು ಪೊಲೀಸರ ಭರ್ಜರಿ ಬೇಟೆ: 44 ಕೆಜಿ ಗಾಂಜಾ ವಶ, ಏಳು ಆರೋಪಿಗಳ ಬಂಧನ

udayavani youtube

ಬಸ್ ನೊಳಗೆ ಯುವತಿಗೆ ಕಿರುಕುಳ: ಘಟನೆ ಬಗ್ಗೆ ಯುವತಿ ಹೇಳಿದ್ದೇನು?

udayavani youtube

ಬಸ್ ನಲ್ಲಿ ಕಿರುಕುಳ ಪೋಸ್ಟ್: ಆರೋಪಿಯ ಬಂಧನ, ಪೊಲೀಸರೆದುರೇ ಕಪಾಳ ಮೋಕ್ಷ ಮಾಡಿದ ಯುವತಿ

ಹೊಸ ಸೇರ್ಪಡೆ

Worship of Kumbhaleshwar Swamy

ಸಂಸ್ಮರಣೆ: ಕುಂಭಳೇಶ್ವರ ಸ್ವಾಮಿಗೆ ಪೂಜೆ

siddramiha

ಹುಣಸೋಡು ದುರಂತ: ಅಕ್ರಮ ಗಣಿಗಾರಿಕೆಗಳನ್ನು ಈ ಕೂಡಲೇ ಸ್ಥಗಿತಗೊಳಿಸಿ; ಸಿದ್ದು ಆಗ್ರಹ

12 lake filling to the end of the month

ಮಾಸಾಂತ್ಯಕ್ಕೆ 12 ಕೆರೆ ಭರ್ತಿ: ನಿರಂಜನ್‌

Shivamoggha

ಮ್ಯಾನುವಲ್‌ ಸ್ಕ್ಯಾವೆಂಜರ್‌ ಗುರುತಿಸಲು ಸಮೀಕ್ಷೆ ನಡೆಸಿ

Shivamogga Protest

ಕೃಷಿ ಕಾಯ್ದೆ ವಿರೋಧಿಸಿ 26 ರಂದು ರೈತರ ಪರೇಡ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.