ನಗರಸಭೆಯಿಂದ ಅಕ್ರಮ ಮಳಿಗೆಗಳ ತೆರವು


Team Udayavani, Mar 14, 2021, 11:31 AM IST

ನಗರಸಭೆಯಿಂದ ಅಕ್ರಮ ಮಳಿಗೆಗಳ ತೆರವು

ಕನಕಪುರ: ನಗರದಲ್ಲಿ ಅಕ್ರಮವಾಗಿ ತಲೆಯೆತ್ತಿದ್ದ ಅಂಗಡಿ ಮಳಿಗೆಗಳನ್ನು ನಗರಸಭೆ ಅಧ್ಯಕ್ಷ ಮುಕ್ಬೂಲ್‌ ಪಾಷಾ ನೇತೃತ್ವದಲ್ಲಿ ತೆರವುಗೊಳಿಸಲಾಯಿತು.

ಶನಿವಾರ ಬೆಳ್ಳಂಬೆಳಗ ನಗರಸಭೆ ಅಧ್ಯಕ್ಷ ಮಕ್ಭೂಲ್‌ ಪಾಷಾ ಸಿಬ್ಬಂದಿಯೊಂದಿಗೆ ತೆರವು ಕಾರ್ಯಾಚರಣೆಗೆ ಇಳಿದಿದ್ದರು. ನಗರದ ನಗರಸಭೆ ಸ್ಥಳ ಮತ್ತು ಪಾದಚಾರಿ ರಸ್ತೆಗಳನ್ನು ಆಕ್ರಮಿಸಿಕೊಂಡು ಪರವಾನಗಿ ಇಲ್ಲದೆ ಅಂಗಡಿ ಮಳಿಗೆಗಳನ್ನು ತೆರೆದು ಮತ್ತೂಬ್ಬರಿಗೆ ಬಾಡಿಗೆಗೆ ಕೊಟ್ಟು ಹಣ ಮಾಡುತ್ತಿದ್ದವ‌ರಿಗೆ ಬಿಸಿ ಮುಟ್ಟಿಸಿದ್ದಾರೆ. ಹಲವು ವರ್ಷಗಳಿಂದ ನಗರಸಭೆ ಜಾಗ ಮತ್ತು ಪಾದಚಾರಿ ರಸ್ತೆಗಳನ್ನು ಕೆಲವರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಕಬ್ಬಿಣ ಮತ್ತು ಮರದಲ್ಲಿ ನಿರ್ಮಾಣ ಮಾಡಿದ ಪೆಟ್ಟಿಗೆ ಅಂಗಡಿಗಳನ್ನು ತೆರೆದು ಕಬ್ಬಿನ ರಸ, ಎಳನೀರು ಮಾರಾಟ ಮಾಡುವ ವ್ಯಾಪಾರಿಗಳಿಗೆ ಕೊಟ್ಟು ಬಾಡಿಗೆ ಪಡೆಯುವ ದಂಧೆ ಮಾಡಿಕೊಂಡಿದ್ದರು.  ಈ ಅಂಗಡಿ ಮಳಿಗೆಗಳನ್ನು ಬಾಡಿಗೆಗೆ ಪಡೆದ ವ್ಯಾಪಾರಿಗಳು ಉತ್ಪತ್ತಿಯಾಗುವ ತಾಜ್ಯವನ್ನು ಪಕ್ಕದಲ್ಲಿದ್ದ ಚರಂಡಿಗೆ ಸುರಿಯುತ್ತಿದ್ದರು. ಇದರಿಂದ ಚರಂಡಿಗಳಲ್ಲಿ ನೀರು ಶೇಖರಣೆಯಾಗಿ ದುರ್ವಾಸನೆ ಬೀರುವುದರ ಜೊತೆಗೆ ಮಳೆಗಾಲದಲ್ಲಿ ಚರಂಡಿಗಳಲ್ಲಿ ತ್ಯಾಜ್ಯ ಕಟ್ಟಿಕೊಂಡು ನೀರು ಮುಂದೆ ಹರಿದು ಹೋಗಲು ಜಾಗವಿಲ್ಲದೆ ರಸ್ತೆಯ ಮೇಲೆ ಹರಿಯುತ್ತಿತ್ತು.

ದಿನಕಳೆದಂತೆ ಅಕ್ರಮವಾಗಿ ರಸ್ತೆ ಬದಿ ಮತ್ತು ಫ‌ುಟ್‌ಪಾತ್‌ಗಳಲ್ಲಿ ನಾಯಿ ಕೊಡೆಗಳಂತೆ ತಲೆಯೆತ್ತಿರುವ ಅಂಗಡಿ ಮಳಿಗೆ ಮತ್ತು ಫ‌ುಟ್‌ಪಾತ್‌ ವ್ಯಾಪಾರಸ್ಥರನ್ನು ತೆರವು ಗೊಳಿಸಬೇಕು ಎಂಬ ಬೇಡಿಕೆ ಇಂದು ನಿನ್ನೆಯದಲ್ಲ ಹಲವು ಸಭೆಗಳಲ್ಲಿ ನಗರಸಭೆ ಸದಸ್ಯರು ಹಾಗೂ ಸಾರ್ವಜನಿಕರು ಹತ್ತಾರು ಬಾರಿ ಮನವಿ ಮಾಡಿದ್ದರು. ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ನಗರಸಭೆ ಅಧ್ಯಕ್ಷ ಮಕ್ಬೂಲ್‌ ಪಾಷಾ ಅಧಿಕಾರಿಗಳ ಕ್ರಮಕ್ಕೆ ಕಾಯದೆ ಅಧಿಕಾರಿಗಳಿಗೆ ಯಾವುದೇ ಸುಳಿವನ್ನು ನೀಡದೆ ಫ‌ುಟ್‌ಪಾತ್‌ ಮತ್ತು ಪಾದಚಾರಿ ರಂಗಸ್ಥಳಲ್ಲಿ ಪೆಟ್ಟಿಗೆ ಅಂಗಡಿಗಳನ್ನು ಇಟ್ಟುಕೊಂಡು ವ್ಯಾಪಾರ ನಡೆಸುತ್ತಿರುವ ಮಾಲಿಕರಿಗೆ ತೆರವುಗೊಳಿಸುವಂತೆ ನೋಟಿಸ್‌ ನೀಡಿದರೂ‌ ಯಾರೊಬ್ಬರೂ ಅಂಗಡಿಗಳನ್ನು ತೆರವುಗೊಳಿಸಿರಲಿಲ್ಲ.

ಈ ಹಿನ್ನೆಲೆಯಲ್ಲಿ ಶನಿವಾರ ಬೆಳ್ಳಂಬೆಳಗ್ಗೆ ನಗರದ ಎಂಎಚ್‌ಎಸ್‌ ರಸ್ತೆಯಲ್ಲಿರುವ ಜನತಾದಳ ಮತ್ತು ಕಾಂಗ್ರೆಸ್‌ ವಿವಾದಿತಸ್ಥಳದಲ್ಲಿ ಮತ್ತು ಮಳಗಾಳು ರಸ್ತೆಯಲ್ಲಿದ್ದ ಅಂಗಡಿಗಳನ್ನು ಜೆಸಿಬಿ ಮೂಲಕ ತೆರವುಗೊಳಿಸಿ ಬಿಸಿ ಮುಟ್ಟಿಸಿದ್ದಾರೆ.

ಟಾಪ್ ನ್ಯೂಸ್

sunil kumar

ನಾರಾಯಣ ಗುರು, ಭಗತ್ ಸಿಂಗ್ ಪಠ್ಯ ತೆಗೆದಿಲ್ಲ: ಸಚಿವ ಸುನಿಲ್ ಸ್ಪಷನೆ

1-dsa-dasd

ಶಿವನಿಗೆ ದೇಗುಲ ರಚನೆಯ ಅಗತ್ಯವಿಲ್ಲ, ಅವನು ಪ್ರತಿ ಕಣದಲ್ಲೂ ನೆಲೆಸಿದ್ದಾನೆ: ಕಂಗನಾ ರಣಾವತ್

halappa-achar

ಆರ್ ಎಸ್ಎಸ್ ಬಗ್ಗೆ ಮಾತಾಡದಿದ್ದರೆ ಕಾಂಗ್ರೆಸ್ ಗೆ ನಿದ್ದೆ ಬರಲ್ಲ: ಹಾಲಪ್ಪ ಆಚಾರ್

ನಾನು ರಾಜ್ಯ ರಾಜಕಾರಣಕ್ಕೆ ಮರಳುತ್ತಿಲ್ಲ: ಶೋಭಾ ಕರಂದ್ಲಾಜೆ ಸ್ಪಷ್ಟನೆ

ನಾನು ರಾಜ್ಯ ರಾಜಕಾರಣಕ್ಕೆ ಮರಳುತ್ತಿಲ್ಲ: ಶೋಭಾ ಕರಂದ್ಲಾಜೆ ಸ್ಪಷ್ಟನೆ

ಭಾರತದಲ್ಲಿ 24ಗಂಟೆಯಲ್ಲಿ 2,364 ಕೋವಿಡ್ ಸೋಂಕು ಪ್ರಕರಣ ದೃಢ, ಹತ್ತು ಮಂದಿ ಸಾವು

ಭಾರತದಲ್ಲಿ 24ಗಂಟೆಯಲ್ಲಿ 2,364 ಕೋವಿಡ್ ಸೋಂಕು ಪ್ರಕರಣ ದೃಢ, ಹತ್ತು ಮಂದಿ ಸಾವು

1-ddasda

ಎಸ್‌ಎಸ್‌ಎಲ್‌ಸಿ ಫ‌ಲಿತಾಂಶ ಪ್ರಕಟ : 85.63% ವಿದ್ಯಾರ್ಥಿಗಳು ಉತ್ತೀರ್ಣ; ಹುಡುಗಿಯರೇ ಮೇಲುಗೈ

1-sddda

ಔರಂಗಜೇಬ್ ಸಮಾಧಿಗೆ 5 ದಿನಗಳ ಕಾಲ ಪ್ರವೇಶವಿಲ್ಲ: ಅಜಿತ್ ಪವಾರ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಚರಂಡಿ ಕಾಮಗಾರಿಯಲ್ಲಿ ಅಕ್ರಮ: ಆರೋಪ

ಚರಂಡಿ ಕಾಮಗಾರಿಯಲ್ಲಿ ಅಕ್ರಮ: ಆರೋಪ

ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ಬ್ರಹ್ಮರಥೋತ್ಸವ

ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ಬ್ರಹ್ಮರಥೋತ್ಸವ

ಪ್ರವಾಸಿಗರನ್ನು  ಸೆಳೆಯುವ ಸಾವನದುರ್ಗ ಬೆಟ್ಟ

ಪ್ರವಾಸಿಗರನ್ನು ಸೆಳೆಯುವ ಸಾವನದುರ್ಗ ಬೆಟ್ಟ

ರಾಷ್ಟ್ರೀಯ ಹೆದ್ದಾರಿ: ಭೂಸ್ವಾಧೀನ ಪ್ರಕ್ರಿಯೆ ಅಪೂರ್ಣ

ರಾಷ್ಟ್ರೀಯ ಹೆದ್ದಾರಿ: ಭೂಸ್ವಾಧೀನ ಪ್ರಕ್ರಿಯೆ ಅಪೂರ್ಣ

1-dfdfdsfd

ಚನ್ನಪಟ್ಟಣದ ಜೆಡಿಎಸ್ ಮುಖಂಡ, ನೂರಾರು ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆ

MUST WATCH

udayavani youtube

ಕಾರ್ಖಾನೆಯ ಗೋಡೆ ಕುಸಿದು 12 ಮಂದಿ ಕಾರ್ಮಿಕರ ಸಾವು

udayavani youtube

ಬೆಂಗಳೂರಿನಲ್ಲಿ ಹೈಸ್ಕೂಲ್ ವಿದ್ಯಾರ್ಥಿನಿಯರ ಮಾರಾಮಾರಿ ! ವಿಡಿಯೋ ವೈರಲ್ ..

udayavani youtube

ಕೊಪ್ಪಲಂಗಡಿ : ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿದ ಪಿಕಪ್

udayavani youtube

ಹೊರಟ್ಟಿ ಸೇರ್ಪಡೆಯಿಂದ ಪಕ್ಷಕ್ಕೆ ಬಲ : ಸಿಎಂ

udayavani youtube

ಹುಣಸೂರಿನಲ್ಲಿ ಭಾರೀ ಮಳೆಗೆ ಮನೆಗಳು ಜಲಾವೃತ

ಹೊಸ ಸೇರ್ಪಡೆ

sunil kumar

ನಾರಾಯಣ ಗುರು, ಭಗತ್ ಸಿಂಗ್ ಪಠ್ಯ ತೆಗೆದಿಲ್ಲ: ಸಚಿವ ಸುನಿಲ್ ಸ್ಪಷನೆ

1-dsa-dasd

ಶಿವನಿಗೆ ದೇಗುಲ ರಚನೆಯ ಅಗತ್ಯವಿಲ್ಲ, ಅವನು ಪ್ರತಿ ಕಣದಲ್ಲೂ ನೆಲೆಸಿದ್ದಾನೆ: ಕಂಗನಾ ರಣಾವತ್

halappa-achar

ಆರ್ ಎಸ್ಎಸ್ ಬಗ್ಗೆ ಮಾತಾಡದಿದ್ದರೆ ಕಾಂಗ್ರೆಸ್ ಗೆ ನಿದ್ದೆ ಬರಲ್ಲ: ಹಾಲಪ್ಪ ಆಚಾರ್

dc

ಗೋಶಾಲೆ ನಿರ್ಮಾಣಕ್ಕೆ ಶೀಘ್ರ ಭೂಮಿ ಮಂಜೂರು

honnali

ನ್ಯಾಮತಿ ತಾಲೂಕಿಗೆ ತಪ್ಪದ ಹೊನ್ನಾಳಿ ಅವಲಂಬನೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.