ನೀರಿನ ದರ ಹೆಚ್ಚಳ ಖಂಡಿಸಿ ಧರಣಿ


Team Udayavani, Dec 24, 2017, 5:20 PM IST

ram-.jpg

ಚನ್ನಪಟ್ಟಣ: ಪಟ್ಟಣದ ಮಂಗಳವಾರಪೇಟೆಯ ನಿವಾಸಿಗಳು ಕುಡಿವ ಕಾವೇರಿ ನೀರಿನ ದರ ಹೆಚ್ಚಳ ವಿರೋಧಿಸಿ ನಗರಸಭೆ ಆಡಳಿತ ಮಂಡಳಿ ವಿರುದ್ಧ ಶನಿವಾರ ಪ್ರತಿಭಟನೆ ನಡೆಸಿ ಹಾಲಿ ದರವನ್ನು ಮುಂದುವರಿಸುವಂತೆ ಮನವಿ ಸಲ್ಲಿಸಿದರು. ಸರ್ಕಾರದ ಆದೇಶದಂತೆ ಕುಡಿವ ಕಾವೇರಿ ನೀರಿನ ದರವನ್ನು 120ರಿಂದ 220 ರೂ.ಗೆ ಹೆಚ್ಚಿಸುವಂತೆ ಕಾವೇರಿ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯು ನೀಡಿದ್ದ ಮನವಿಗೆ ಇಲ್ಲಿನ ನಗರಸಭೆಯು ಹಿಂದಿನ ಸಾಮಾನ್ಯ ಸಭೆಯಲ್ಲಿ ಅನುಮೋದನೆ ನೀಡಿದ್ದು, ಇದನ್ನು ಹಿಂಪಡೆದು ಹಾಲಿ 120 ರೂ. ದರವನ್ನೇ ನಿಗದಿ ಮಾಡುವಂತೆ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ನಗರಸಭಾ ಮಾಜಿ ಸದಸ್ಯ ಶ್ರೀನಿವಾಸ ಮಾತನಾಡಿ, ಕಾವೇರಿ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ನಿರ್ವಹಣೆ ವೆಚ್ಚ ಭರಿಸಲು ಹಣದ ಮುಗ್ಗಟ್ಟು ಇರುವುದರಿಂದ ಕುಡಿವ ಕಾವೇರಿ ನೀರಿನ ದರವನ್ನು ಹೆಚ್ಚಿಸುವುದಾಗಿ ಪ್ರಕಟಣೆ ತಿಳಿಸಿದೆ. ಸರ್ಕಾರ ಇಲ್ಲಸಲ್ಲದ ಭಾಗ್ಯಗಳಿಗೆ ಹಣ ವೆಚ್ಚ ಮಾಡುತ್ತಿದ್ದು, ಕುಡಿವ ನೀರಿನ ನಿರ್ವಹಣೆಗೆ ಹಣದ ಕೊರತೆ ನೀಗಿಸಲು ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದರು.

ಮಂಡಳಿ ಪಟ್ಟಣ ಪ್ರದೇಶದಲ್ಲಿ ನೀಡಿರುವ ನೀರಿನ ಸಂಪರ್ಕಗಳನ್ನು ಪರಿಶೀಲಿಸಿ, ಅವುಗಳಿಂದ ಬರುತ್ತಿರುವ ಆದಾಯ ಮತ್ತು ವೆಚ್ಚಗಳನ್ನು ಗಮನಿಸಿ, ಸೋರಿಕೆಯನ್ನು ತಡೆದು ಉಳಿಕೆ ಹಣವನ್ನು ನಗರಸಭೆಯಿಂದ ಭರಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಬಡವರಿಗೆ ಬರೆ: ಮಂಗಳವಾರಪೇಟೆ ನಿವಾಸಿ ನಾರಾಯಣ ಮಾತನಾಡಿ, ಪಕ್ಕದ ತಮಿಳು ನಾಡಿಗೆ ಪುಕ್ಕಟ್ಟೆ ನೀರು ನೀಡುವ ರಾಜ್ಯದಲ್ಲಿ ನಾವು ನಮ್ಮ ನೀರಿಗೆ ಹಣತೆತ್ತುವ ಪರಿಸ್ಥಿತಿ ನಿರ್ಮಾಣವಾಗಿದೆ. ಚುನಾಯಿತ ಜನಪ್ರತಿ ನಿಧಿಗಳು, ಸರ್ಕಾರಗಳು ಚುನಾವಣೆಯ ವೇಳೆ ಮಾತ್ರ ಬಡವರು, ರೈತರ ಹಿತಕಾಯು ವ ನೆಪವೊಡ್ಡಿ ಪ್ರಚಾರ ಪಡೆಯುತ್ತಾರೆ.

ಆದರೆ ಅವರು ಅಧಿಕಾರಕ್ಕೆ ಬಂದ ಬಳಿಕ 5 ವರ್ಷ ಬಡವರು, ರೈತರನ್ನು ಮರೆಯುತ್ತಾರೆ. ಸರ್ಕಾರ ಯಾವಾಗಲೂ ಬಡವರ ಮೇಲೆ ಬರೆ ಎಳೆಯುತ್ತಾ ನಮ್ಮನ್ನು ಗಿರವಿ ಆಭರಣ ಮಾಡಿಕೊಂಡಿದ್ದಾರೆ ಎಂದು ದೂರಿದರು. 

ನೀರಿನ ಭಾಗ್ಯ ನೀಡಿ: ಬಿಟ್ಟಿ ಅಕ್ಕಿ, ಬಿಟ್ಟಿ ಊಟ, ಬಿಟ್ಟಿ ಹಾಲು, ನೀಡುವ ಸರ್ಕಾರ ಜನರಿಗೆ ಕುಡಿಯುವ ನೀರನ್ನು ಬಿಟ್ಟಿಯಾಗಿ
ನೀಡಬಹುದಲ್ಲವೇ. ಹಾಗಯೇ ರೈತರ ಸಾಲಮನ್ನಾ ಮಾಡುವ ಸರ್ಕಾರ ನೀರಿನ ಹಳೆ ಬಾಕಿ ಹಣವನ್ನು ಮನ್ನಾ ಮಾಡಬೇಕು.

ಸರ್ಕಾರ ಯಾವುದೇ ಭಾಗ್ಯ ನೀಡಲಿ, ಯಾವುದೇ ಸಾಲ ಮನ್ನಾ ಮಾಡಲಿ ಎಲ್ಲಾ ಹಣ ನಮ್ಮ ತೆರಿಗೆಯ ಹಣವೇ ಹೊರತು, ಯಾವ ಸರ್ಕಾರದ ಹಣವೂ ಅಲ್ಲ ಎಂದು ನಾರಾಯಣ ಆಕ್ರೋಶ ವ್ಯಕ್ತಪಡಿಸಿದರು.

10 ನಿಮಿಷ ನೀರಿಗೆ 220 ರೂ. ಬಿಲ್‌: ನಮ್ಮ ಬಡಾವಣೆಗಳಲ್ಲಿ ಕೇವಲ 10 ನಿಮಿಷ ಮಾತ್ರ ಕಾವೇರಿ ಕುಡಿವ ನೀರನ್ನು
ಸರಬರಾಜು ಮಾಡುತ್ತಾರೆ. ಹಿಂದೆಯೇ ಬೋರ್‌ ನೀರು ಸರಬರಾಜು ಮಾಡುತ್ತಾರೆ. ತಿಂಗಳಿಗೆ 220 ರೂ. ಶುಲ್ಕ ವಿಧಿಸುತ್ತಾರೆ. ಹಿಂದೆ ಪೈಪ್‌ ಜೋಡಣೆ ಶುಲ್ಕವಾಗಿ 6 ಸಾವಿರ ಶುಲ್ಕ ನೀಡಿದ್ದರು. ಆದರ ಬಾಕಿ ಉಳಿದಿದ್ದು, ಇದೀಗ ಆ ಹಣಕ್ಕೆ ಬಡ್ಡಿ ಸೇರಿ 20 ಸಾವಿರ ಬಿಲ್‌ ನೀಡಿದ್ದಾರೆ. ದಿನನಿತ್ಯದ ಆದಾಯವನ್ನು ನಂಬಿ ಬದುಕುತ್ತಿರುವ ನಾವು ತಿಂಗಳಿಗೆ 20 ಸಾವಿರ ಕಟ್ಟುವುದು ಸಾಧ್ಯವೇ ಎಂದು ಪ್ರಶ್ನಿಸಿದ ಗೌರಮ್ಮ, ನಾವು ನೀಡುವ ತಿಂಗಳ ಶುಲ್ಕವನ್ನು ಬಡ್ಡಿ ಹಣಕ್ಕೆ ವಜಾ ಮಾಡುತ್ತಿದ್ದಾರೆ. ನಮ್ಮ ನೀರಿಗೆ ನಾವೇ ಬಡ್ಡಿ ಕಟ್ಟಬೇಕೆ ಎಂದು ಖಂಡಿಸಿದರು.

ಇದಕ್ಕೂ ಮುನ್ನ ಪಟ್ಟಣದ ಮಂಗಳವಾರಪೇಟೆಯಿಂದ ಮೆರವಣಿಗೆ ಹೊರಟ ಸಾರ್ವಜನಿಕರು ಬಿ.ಎಂ.ರಸ್ತೆ ಮೂಲಕ ಸಾಗಿ ಪಟ್ಟಣದ ಎಂ.ಜಿ ರಸ್ತೆ ಮೂಲಕ ನಗರಸಭೆ ಆವರಣದಲ್ಲಿ ಸಮಾವೇಶಕೊಂಡರು. ನಗರಸಭೆ ಮಾಜಿ ಅಧ್ಯಕ್ಷ ಕೃಷ್ಣಪ್ಪ, ಸದಸ್ಯರಾದ ಮುದ್ದುಕೃಷ್ಣ, ಎಸ್‌.ಉಮಾಶಂಕರ್‌, ಶಶಿಕುಮಾರ್‌, ಶ್ವೇತಾ, ಅರುಣ್‌ಕುಮಾರ್‌, ಎಂ.ವಿ.ಸಂತೋಷ್‌, ಎಂಟಿಆರ್‌ ತಿಮ್ಮರಾಜು, ಎಂ.ಪಿ.ರವಿಕುಮಾರ್‌, ಡಿ.ಕೃಷ್ಣ, ದೊಡ್ಡಯ್ಯ, ಕೆ.ವೇಣುಗೋಪಾಲ, ರವಿ, ಕೆಂಪಯ್ಯ, ಸಿ.ಚಂದ್ರಪ್ಪ, ಬೋರಲಿಂಗೇಗೌಡ, ಬಾಬು, ಪುಟ್ಟರಾಮಣ್ಣ, ಮುತ್ತಯ್ಯ, ಸಿ.ರೋಹಿತ್‌ಕುಮಾರ್‌ ಸೇರಿದಂತೆ ನೂರಾರು ಮಂದಿ ಉಪಸ್ಥಿತರಿದ್ದರು.

ಟಾಪ್ ನ್ಯೂಸ್

ಬಿಡಿಎ ಅಧಿಕಾರಿಗಳ ಭ್ರಷ್ಟಾಚಾರ: ಇಬ್ಬರು ಬಿಡಿಎ ಸಿಬ್ಬಂದಿ ಸೇರಿ ಆರು ಮಂದಿ ಬಂಧನ

ಬಿಡಿಎ ಅಧಿಕಾರಿಗಳ ಭ್ರಷ್ಟಾಚಾರ: ಇಬ್ಬರು ಬಿಡಿಎ ಸಿಬ್ಬಂದಿ ಸೇರಿ ಆರು ಮಂದಿ ಬಂಧನ

ಲತಾ ಮಂಗೇಶ್ಕರ್‌ ಆರೋಗ್ಯ ಸ್ಥಿರ

ಲತಾ ಮಂಗೇಶ್ಕರ್‌ ಆರೋಗ್ಯ ಸ್ಥಿರ

5ಜಿ ತಂತ್ರಜ್ಞಾನಕ್ಕೆ ವಿರೋಧ: ನಟಿ ಜೂಹಿ ಚಾವ್ಲಾ ದಂಡ 2 ಲಕ್ಷ ರೂ.ಗೆ ಇಳಿಕೆ

5ಜಿ ತಂತ್ರಜ್ಞಾನಕ್ಕೆ ವಿರೋಧ: ನಟಿ ಜೂಹಿ ಚಾವ್ಲಾ ದಂಡ 2 ಲಕ್ಷ ರೂ.ಗೆ ಇಳಿಕೆ

ಲಖನ್‌ ಜಾರಕಿಹೊಳಿಯನ್ನು ಕಾಂಗ್ರೆಸ್‌ಗೆ ಕರೆಯಲ್ಲ: ಸತೀಶ್ ಜಾರಕಿಹೊಳಿ

ಲಖನ್‌ ಜಾರಕಿಹೊಳಿಯನ್ನು ಕಾಂಗ್ರೆಸ್‌ಗೆ ಕರೆಯಲ್ಲ: ಸತೀಶ್ ಜಾರಕಿಹೊಳಿ

500 ರೂ.ಗೆ ಕೊಂಡ ಕುರ್ಚಿಗೆ ಈಗ 16 ಲಕ್ಷ ರೂ.!

500 ರೂ.ಗೆ ಕೊಂಡ ಕುರ್ಚಿಗೆ ಈಗ 16 ಲಕ್ಷ ರೂ.!

7 ಕೋಟಿ ರೂ. ನಕಲಿ ನೋಟು ವಶ: 7 ಮಂದಿ ಬಂಧನ

7 ಕೋಟಿ ರೂ. ನಕಲಿ ನೋಟು ವಶ: 7 ಮಂದಿ ಬಂಧನ

covid-1

ರಾಜ್ಯದಲ್ಲಿ ಕಡಿಮೆಯಾಗುತ್ತಿರುವ ಕೋವಿಡ್ ಪ್ರಕರಣಗಳು : ಇಂದು 49 ಸಾವುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಾಮನಗರ: ಪತಿಯ ಕಿರುಕುಳ ತಾಳಲಾರದೆ ಗರ್ಭಿಣಿ ಆತ್ಮಹತ್ಯೆಗೆ ಶರಣು

ರಾಮನಗರ: ಪತಿಯ ಕಿರುಕುಳ ತಾಳಲಾರದೆ ಗರ್ಭಿಣಿ ಆತ್ಮಹತ್ಯೆಗೆ ಶರಣು

ಮಾರ್ಚ್ ತಿಂಗಳಲ್ಲಿ ಆರೋಗ್ಯ ವಿವಿ ಕ್ಯಾಂಪಸ್, ವೈದ್ಯಕೀಯ ಕಾಲೇಜಿಗೆ ಅಡಿಗಲ್ಲು:ಅಶ್ವತ್ಥನಾರಾಯಣ

ಮಾರ್ಚ್ ನಲ್ಲಿ ಆರೋಗ್ಯ ವಿವಿ ಕ್ಯಾಂಪಸ್, ವೈದ್ಯಕೀಯ ಕಾಲೇಜಿಗೆ ಅಡಿಗಲ್ಲು: ಅಶ್ವತ್ಥನಾರಾಯಣ

ಏಳು ಮಂದಿ ದರೋಡೆಕೋರರ ಬಂಧನ

ಏಳು ಮಂದಿ ದರೋಡೆಕೋರರ ಬಂಧನ

ಪ್ರೇಮ ಪ್ರಕರಣ: ಕುಡುಗೋಲಿನಿಂದ ಕೊಲೆ

ಪ್ರೇಮ ಪ್ರಕರಣ: ಕುಡುಗೋಲಿನಿಂದ ಕೊಲೆ

ವಾರಾಂತ್ಯ ಕರ್ಫ್ಯೂ ತೆರವಾದ್ರೂ ಹೊರಬಾರದ ಜನ

ವಾರಾಂತ್ಯ ಕರ್ಫ್ಯೂ ತೆರವಾದ್ರೂ ಹೊರಬಾರದ ಜನ

MUST WATCH

udayavani youtube

ತುಳುನಾಡಿನ ರಾಜಧಾನಿ ಬಾರ್ಕೂರನ್ನು ಆಳಿದ ರಾಜರ ಹೆಸರೇನು ಗೊತ್ತೇ ?

udayavani youtube

ಉತ್ತರಪ್ರದೇಶ ಚುನಾವಣೆ ಭಾರತದ ಭವಿಷ್ಯವನ್ನು ನಿರ್ಧರಿಸಲಿದೆ

udayavani youtube

ಮನೆಯಿಂದ ಹೊರ ಬಂದ್ರೆ ತಲೆಗೇ ಕುಕ್ಕುತ್ತೆ ಈ ಕಾಗೆ.!

udayavani youtube

ದೇಶದ ಧ್ವಜದ ಜೊತೆ ಘೋಷಣೆ ಕೂಗಿದ್ದಕ್ಕೆ ಬಂಧನ!

udayavani youtube

ಮೈಕೊರೆಯುವ ಚಳಿಯನ್ನೂ ಲೆಕ್ಕಿಸದೇ ವಾರದಿಂದ ಭಕ್ತರು ಯಲ್ಲಮ್ಮನ ಕ್ಷೇತ್ರಕ್ಕೆ ಬರುತ್ತಿದ್ದಾರೆ

ಹೊಸ ಸೇರ್ಪಡೆ

ಬಿಡಿಎ ಅಧಿಕಾರಿಗಳ ಭ್ರಷ್ಟಾಚಾರ: ಇಬ್ಬರು ಬಿಡಿಎ ಸಿಬ್ಬಂದಿ ಸೇರಿ ಆರು ಮಂದಿ ಬಂಧನ

ಬಿಡಿಎ ಅಧಿಕಾರಿಗಳ ಭ್ರಷ್ಟಾಚಾರ: ಇಬ್ಬರು ಬಿಡಿಎ ಸಿಬ್ಬಂದಿ ಸೇರಿ ಆರು ಮಂದಿ ಬಂಧನ

ಲತಾ ಮಂಗೇಶ್ಕರ್‌ ಆರೋಗ್ಯ ಸ್ಥಿರ

ಲತಾ ಮಂಗೇಶ್ಕರ್‌ ಆರೋಗ್ಯ ಸ್ಥಿರ

5ಜಿ ತಂತ್ರಜ್ಞಾನಕ್ಕೆ ವಿರೋಧ: ನಟಿ ಜೂಹಿ ಚಾವ್ಲಾ ದಂಡ 2 ಲಕ್ಷ ರೂ.ಗೆ ಇಳಿಕೆ

5ಜಿ ತಂತ್ರಜ್ಞಾನಕ್ಕೆ ವಿರೋಧ: ನಟಿ ಜೂಹಿ ಚಾವ್ಲಾ ದಂಡ 2 ಲಕ್ಷ ರೂ.ಗೆ ಇಳಿಕೆ

ಲಖನ್‌ ಜಾರಕಿಹೊಳಿಯನ್ನು ಕಾಂಗ್ರೆಸ್‌ಗೆ ಕರೆಯಲ್ಲ: ಸತೀಶ್ ಜಾರಕಿಹೊಳಿ

ಲಖನ್‌ ಜಾರಕಿಹೊಳಿಯನ್ನು ಕಾಂಗ್ರೆಸ್‌ಗೆ ಕರೆಯಲ್ಲ: ಸತೀಶ್ ಜಾರಕಿಹೊಳಿ

500 ರೂ.ಗೆ ಕೊಂಡ ಕುರ್ಚಿಗೆ ಈಗ 16 ಲಕ್ಷ ರೂ.!

500 ರೂ.ಗೆ ಕೊಂಡ ಕುರ್ಚಿಗೆ ಈಗ 16 ಲಕ್ಷ ರೂ.!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.