ವೈಜ್ಞಾನಿಕ ಕೃಷಿಯತ್ತ ಮುಖಮಾಡಿ

ಕೃಷಿ ಅಭಿಯಾನದಲ್ಲಿ ಪ್ರಭಾರ ಸಹಾಯಕ ಕೃಷಿ ನಿರ್ದೇಶಕ ರಾಧಾಕೃಷ್ಣ ಸಲಹೆ

Team Udayavani, Jun 20, 2019, 2:47 PM IST

ಕಲ್ಲಹಳ್ಳಿಯಲ್ಲಿ ಸಮಗ್ರ ಕೃಷಿ ಅಭಿಯಾನದ ಇಲಾಖೆಗಳ ನಡಿಗೆ ರೈತರ ಬಾಗಿಲಿಗೆ ಕಾರ್ಯಕ್ರಮವನ್ನು ಪ್ರಭಾರ ಸಹಾಯಕ ಕೃಷಿ ನಿರ್ದೇಶಕ ರಾಧಾಕೃಷ್ಣ ಉದ್ಘಾಟಿಸಿದರು.

ಕನಕಪುರ: ಕೃಷಿಯನ್ನು ಹೆಚ್ಚು ಲಾಭದಾಯಕವಾಗಿ ಮಾಡಲು ಮತ್ತು ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಆಹಾರ ಉದ್ಪಾದನೆಯ ಸವಾಲು ಎದುರಾಗಿದೆ. ಅದಕ್ಕೆ ಲಭ್ಯವಿರುವ ಸಾಗುವಳಿ ಜಮೀನಿನಲ್ಲಿ ಗರಿಷ್ಠ ಕೃಷಿ ಉತ್ಪಾದನೆ ಮಾಡಬೇಕಿದೆ. ರೈತರು ವೈಜ್ಞಾನಿಕ ಕೃಷಿಯತ್ತ ಮುಖ ಮಾಡಬೇಕು ಎಂದು ಪ್ರಭಾರ ಸಹಾಯಕ ಕೃಷಿ ನಿರ್ದೇಶಕ ರಾಧಾಕೃಷ್ಣ ತಿಳಿಸಿದರು.

ತಾಲೂಕಿನಲ್ಲಿ ಕಸಬಾ ಹೋಬಳಿ ಕಲ್ಲಹಳ್ಳಿ ಗ್ರಾಮದಲ್ಲಿ ನಡೆಯುವ ಸಮಗ್ರ ಕೃಷಿ ಅಭಿಯಾನ -2019ದ ಇಲಾಖೆಗಳ ನಡಿಗೆ ರೈತರ ಬಾಗಿಲಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದ ಅವರು ಮಾತನಾಡಿ, ಮಳೆಗಾಲ ಪ್ರಾರಂಭವಾಗುತ್ತಿರು ವುದರಿಂದ ತಾಲೂಕಿನ ರೈತರು ಕೃಷಿ ಚಟುವಟಿಕೆಗಳಲ್ಲಿ ಸಮಗ್ರ ಕೃಷಿಯನ್ನು ಮಾಡಬೇಕಿದೆ. ಕೃಷಿ ವಲಯದ ಪ್ರಸ್ತುತ ಪರಿಸ್ಥಿತಿ ಮನಗಂಡು ಉತ್ಪಾದನೆಯನ್ನು ಹೆಚ್ಚಿಸಲು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕಿದೆ ಎಂದರು.

ಜಾಗೃತಿಗಾಗಿ ಕೃಷಿ ಅಭಿಯಾನ: ಸಮಗ್ರ ಕೃಷಿ ಮಾಹಿತಿಯನ್ನು ವಿವಿಧ ಅಭಿವೃದ್ಧಿ ಇಲಾಖೆಗಳ ಸಹಯೋಗದೊಂದಿಗೆ ಸಮೂಹ ಜಾಗೃತಿ ಕಾರ್ಯಕ್ರಮವಾಗಿ ಸಮಗ್ರ ಕೃಷಿ ಅಭಿಯಾನದ ಮೂಲಕ ತಾಲೂಕಿನ ರೈತರಿಗೆ ತಿಳಿಸಿಕೊಡಲಾಗುತ್ತಿದೆ. ಕೃಷಿ ಮಾಹಿತಿ ರಥವು ತಾಲೂಕಿನ 6 ಹೋಬಳಿ ಕೇಂದ್ರಗಳಾದ ಕಸಬಾ ಹೋಬಳಿ, ಕೋಡಿಹಳ್ಳಿ, ದೊಡ್ಡ ಆಲಹಳ್ಳಿ, ಸಾತನೂರು, ಮರಳವಾಡಿ, ಹಾರೋಹಳ್ಳಿ ಹೋಬಳಿ ಕೇಂದ್ರ ವ್ಯಾಪ್ತಿಯ ಗ್ರಾಪಂಗಳಲ್ಲಿ ಸಂಚರಿಸಲಿದೆ ಎಂದು ತಿಳಿಸಿದರು.

ಕಲ್ಲಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಫರೀನಾ, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಸೋಮಶೇಖರ್‌, ಕೃಷಿ ಅಧಿಕಾರಿ ಸುಂದರೇಶ್‌.ಬಿ.ಆರ್‌, ಸಹಾಯಕ ಕೃಷಿ ಅಧಿಕಾರಿ ವೆಂಕಟೇಶ್‌.ಎಂ, ಬಿಟಿಎಂ ಅರ್ಜುನೇಗೌಡ ಸೇರಿದಂತೆ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.

ವಿವಿಧೆಡೆ ಕೃಷಿ ರಥ ಸಂಚಾರ, ಸಂವಾದ:

ಜೂ.20ರಂದು ಕಲ್ಲಹಳ್ಳಿ, ಟಿ.ಬೇಕುಪ್ಪೆ, ಬೂದುಗುಪ್ಪೆ, ಚಾಕನಹಳ್ಳಿ, ನಾರಾಯಣಪುರ, ಶಿವನಹಳ್ಳಿ, ಅಳ್ಳಿಮಾರನಹಳ್ಳಿ, ಚಿಕ್ಕಮುದುವಾಡಿ, ಸೋಮಂದ್ಯಾಪನಹಳ್ಳಿ, ಕಲ್ಲಹಳ್ಳಿ ಗ್ರಾಪಂನಲ್ಲಿ ಸಂಚರಿಸಿಲಿದೆ. ಚಿಕ್ಕಮುದುವಾಡಿ ದೇವಸ್ಥಾನದ ಆವರಣದಲ್ಲಿ ರೈತರ ಸಂವಾದ ಕಾರ್ಯಕ್ರಮ ಹಾಗೂ ವಸ್ತು ಪ್ರದರ್ಶನ ನಡೆಯಲಿದೆ. ಜೂ.21 ಮತ್ತು 22 ರವರೆಗೆ ಅರಕೆರೆ, ಹೇರಿಂದ್ಯಾಪನಹಳ್ಳಿ, ಕೊಳಗೊಂಡನಹಳ್ಳಿ, ಹುಣಸನಹಳ್ಳಿ, ಬನ್ನಿಮುಕ್ಕೋಡ್ಲು, ಹೊಸದುರ್ಗ ಗ್ರಾಮಗಳಲ್ಲಿ ಕೃಷಿ ರಥ ಯಾತ್ರೆ ನಡೆದು, ಕೋಡಿಹಳ್ಳಿ ಬಸ್‌ ನಿಲ್ದಾಣದ ಹಿಂಭಾಗದ ಆವರಣದಲ್ಲಿ ಜೂ.21ರಂದು ರೈತರ ಸಂವಾದ ಹಾಗೂ ವಸ್ತು ಪ್ರದರ್ಶನ ನಡೆಯಲಿದೆ. ಜೂ.23- 24ರವರೆಗೆ ದೊಡ್ಡ ಆಲಹಳ್ಳಿ, ಉಯ್ಯಂಬಳ್ಳಿ, ಮರಳೇಬೇಕುಪ್ಪೆ, ನಲ್ಲಹಳ್ಳಿ, ಮುಳ್ಳಹಳ್ಳಿ, ಐ.ಗೊಲ್ಲಹಳ್ಳಿ, ಹೂಕುಂದ ಗ್ರಾಪಂನಲ್ಲಿ ರಥಯಾತ್ರೆ ನಡೆಯಲಿದೆ. ಜೂ.24ರಂದು ಹೂಕುಂದ ಗ್ರಾಮದಲ್ಲಿ ರೈತರ ಸಂವಾದ ಕಾರ್ಯಕ್ರಮ ಹಾಗೂ ವಸ್ತು ಪ್ರದರ್ಶನ ನಡೆಯುತ್ತದೆ. ಜೂ.25ರಿಂದ 26ರ ವರೆಗೆ ಸಾತನೂರು, ಅಚ್ಚಲು, ಚೂಡಹಳ್ಳಿ, ಕಬ್ಟಾಳು, ಅರೆಕಟ್ಟೆದೊಡ್ಡಿ ಗ್ರಾಪಂ ವ್ಯಾಪ್ತಿಯಲ್ಲಿ ಕೃಷಿ ರಥಯಾತ್ರೆ ನಡೆಸಿ, ಜೂ26ರಂದು ಕಬ್ಟಾಳಮ್ಮನ ದೇವಾಲಯದ ಆವರಣದಲ್ಲಿ ರೈತರ ಸಂವಾದ ಕಾರ್ಯಕ್ರಮ ಮತ್ತು ವಸ್ತು ಪ್ರದರ್ಶನ ನಡೆಯಲಿದೆ. ಜೂ.27ರಿಂದ 28ರ ವರೆಗೆ ಮರಳವಾಡಿ, ಯಲಚವಾಡಿ, ಬನವಾಸಿ, ತೋಕಸಂದ್ರ, ಟಿ.ಹೊಸಹಳ್ಳಿ, ಚೀಲೂರು ಗ್ರಾಪಂನಲ್ಲಿ ರಥಯಾತ್ರೆ ನಡೆಸಿ, ಜೂ.28ರಂದು ಮರಳವಾಡಿ ಎಂಇಎಸ್‌ ಶಾಲಾ ಆವರಣದಲ್ಲಿ ರೈತರ ಸಂವಾದ ಮತ್ತು ವಸ್ತು ಪ್ರದರ್ಶನ ನಡೆಯಲಿದೆ. ಜೂ.28ರಿಂದ 30ರವರೆಗೆ ಹಾರೋಹಳ್ಳಿ, ಕೊಟ್ಟಗಾಳು, ಕೊಳ್ಳಿಗನಹಳ್ಳಿ, ದೊಡ್ಡಮುದುವಾಡಿ, ಕಗ್ಗಲಹಳ್ಳಿ, ದ್ಯಾವಸಂದ್ರ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಕೃಷಿ ರಥಯಾತ್ರೆ ನಡೆಸಿ, ಹಾರೋಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ರೈತರ ಸಂವಾದ ಮತ್ತು ವಸ್ತು ಪ್ರದರ್ಶನ ಕಾರ್ಯಕ್ರಮ ನಡೆಯಲಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಸಮಸ್ಯೆ ಯಾವುದೇ ಇರಲಿ, ಇಷ್ಟಾರ್ಥ ಕಾರ್ಯವಿರಲಿ, ಕೇವಲ 5 ದಿನಗಳಲ್ಲಿ ಪರಿಹಾರಕ್ಕಾಗಿ ಇಂದೇ ಭೇಟಿ ನೀಡಿ
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ