ನಕಲಿ ಕೀ ಬಳಸಿ ಮನೆಗಳ್ಳತನ
Team Udayavani, Feb 7, 2021, 4:14 PM IST
ಕನಕಪುರ: ನಕಲಿ ಕೀ ಬಳಸಿ ಮನೆ ಬೀಗ ತೆರೆದು ನಗದು ಮತ್ತು ಚಿನ್ನಾಭರಣ ದೋಚಿರುವ ಘಟನೆ ನಗರದ ವಿವೇಕಾನಂದ ನಗರದಲ್ಲಿ ನಡೆದಿದೆ. ವಿವೇಕಾನಂದ ನಗರದ 3ನೇ ಅಡ್ಡರಸ್ತೆ ಯಲ್ಲಿ ವಾಸವಿರುವ ಭಾಗ್ಯಮ್ಮ ಎಂಬುವರ ಮನೆಯಲ್ಲಿ ಈ ಘಟನೆ ನಡೆದಿದೆ.
ಭಾಗ್ಯಮ್ಮ ಶುಕ್ರವಾರ ಸಂಬಂಧಿಕರ ಮನೆಗೆ ಹೋಗಿ ರಾತ್ರಿ ಅಲ್ಲಿಯೇ ಉಳಿದಿದ್ದರು. ಶನಿವಾರ ಬೆಳಗ್ಗೆ ಭಾಗ್ಯ ಮ್ಮನ ಸಂಬಂಧಿಯೊಬ್ಬರು ಮನೆ ಬಳಿ ಬಂದು ನೋಡಿದಾಗ ದುಷ್ಕರ್ಮಿಗಳು ಮನೆ ಬೀಗ ತೆಗೆದಿರುವುದು ಕಂಡು ಬಂದಿದ್ದು, ಭಾಗ್ಯಮ್ಮರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ನಗರ ಠಾಣೆಯ ಎಸ್ಐ ಲಕ್ಷ್ಮಣಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಇದನ್ನೂ ಓದಿ :ರೈತರ ಸಮಸ್ಯೆ ಬಗೆಹರಿಯದಿದ್ರೆ ಆಹಾರ ಸಮಸ್ಯೆ ಉದ್ಭವ: ಮುದಿಯಪ್ಪ
ಈ ವೇಳೆ ಬೀರುವಿನಲ್ಲಿದ್ದ 50 ಸಾವಿರ ರೂ. ನಗದು 25 ಗ್ರಾಂನ ಚಿನ್ನಾಭರಣ ಕಳ್ಳತನ ಮಾಡಿದ್ದಾರೆ ಎಂದು ಭಾಗ್ಯಮ್ಮ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಗರ ಠಾಣೆ ಯಲ್ಲಿ ಕೇಸು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.