ಗ್ರಾಮಗಳಲ್ಲಿ ಮತ್ತೆ ನೆರೆ ಭೀತಿ

ನವಿಲು ತೀರ್ಥ ಜಲಾಶಯದಿಂದ 70 ಸಾವಿರಕ್ಕೂ ಹೆಚ್ಚು ಕ್ಯೂಸೆಕ್‌ ನೀರು ಬಿಡುಗಡೆ

Team Udayavani, Aug 12, 2019, 1:00 PM IST

ರೋಣ: ಹೊಳೆಆಲೂರು ಕಡೆಗೆ ನಿಧಾನವಾಗಿ ಏರ ತೊಡಗಿದ ಮಲಪ್ರಭಾ ನದಿ ನೀರು

ರೋಣ: ನವಿಲು ತೀರ್ಥ ಜಲಾಶಯದಿಂದ ಶನಿವಾರ ಮತ್ತೆ 70 ಸಾವಿರಕ್ಕೂ ಹೆಚ್ಚು ಕ್ಯೂಸೆಕ್‌ ನೀರು ಹೊರ ಬಿಟ್ಟಿದ್ದು, ನದಿಗೆ ಹೊಂದಿಕೊಂಡಿರುವ ಹೊಳೆಆಲೂರು, ಹೊಳೆಹಡಗಲಿ, ಅಮರಗೋಳ, ಬಸರಕೋಡ, ಬಿ.ಎಸ್‌. ಬೇಲೇರಿ ಗ್ರಾಮಗಳಿಗೆ

ನಿಧಾನಗತಿಯಲ್ಲಿ ನೀರು ಧಾವಿಸುತ್ತಿದ್ದು, ಸಂತ್ರಸ್ತರಿಗೆ ಮತ್ತೆ ಆತಂಕ ಮೂಡಿಸಿದೆ.

ಆ. 5-6ರಿಂದ ನವಿಲು ತೀರ್ಥ ಜಲಾಶಯದಿಂದ ಕ್ರಮೇಣ ಅಧಿಕ ಪ್ರಮಾಣದಲ್ಲಿ ನೀರು ಬಿಟ್ಟಿದ್ದರಿಂದ ಮಲಪ್ರಭಾ ನದಿ ಅಕ್ಕಪಕ್ಕದಲ್ಲಿದ್ದ ಗ್ರಾಮಗಳು ಮುಳಗಿ ಸಾವಿರಾರು ಜನರು ಪ್ರವಾಹದಲ್ಲಿ ಸಿಲಿಕೊಂಡಿದ್ದರು. ಹೆಲಿಕಾಪ್ಟರ್‌, ಬೋಟ್ ಸೇರಿದಂತೆ ರಕ್ಷಣಾ ಇಲಾಖೆ ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಜನರನ್ನು ರಕ್ಷಣೆ ಮಾಡಲಾಯಿತು. ಶುಕ್ರವಾರ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದರಿಂದ ನೆರೆ ಗ್ರಾಮಸ್ಥರು ತುಸು ನಿಟ್ಟುಹುಸಿರು ಬಿಟ್ಟಿದ್ದರು. ಆದರೆ ರವಿವಾರ ನದಿಯಲ್ಲಿ ಕ್ರಮೇಣವಾಗಿ ನೀರು ಹೆಚ್ಚಾಗುತ್ತಿರುವುದನ್ನು ನೋಡಿದರೆ ಮತ್ತೆ ನೆರೆ ಹಾವಳಿ ಸಂಭಂವಿಸಬಹುದು ಎಂದು ಸಂತ್ರಸ್ತರು ಮಾತನಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ನದಿಯಿಂದ ಬಿಟ್ಟಿರುವ 70 ಸಾವಿರ ಕ್ಯೂಸೆಕ್‌ ನೀರು ನರಗುಂದ ತಾಲೂಕು ಕೊಣ್ಣೂರು ತಲುಪಿದ್ದು, ಯಾವ ಸಮಯದಲ್ಲಾದರೂ ಮತ್ತೆ ಗ್ರಾಮಗಳಿಗೆ ನೀರು ನುಗ್ಗಬಹುದು. ಆದ್ದರಿಂದ ಹೊಳೆಆಲೂರು ಸೇರಿದಂತೆ ಸುತ್ತ ಮುತ್ತಲಿನ ನೆರೆ ಹಾವಳಿಗೆ ತುತ್ತಾಗಿರುವ ಗ್ರಾಮಗಳ ಜನರು ಊರಲ್ಲಿರುವ ಮನೆಗೆಳಿಗೆ ತೆರಳದಂತೆ ಸೂಚನೆ ನೀಡಲಾಗಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಉಡುಪಿ: ಮಹಿಳೆಯ ರಿಂದಾಗಿ ಭಾರತ ದೇಶದ ಸಂಸ್ಕೃತಿ ಗುರುತಿಸಲ್ಪಟ್ಟಿದೆ. ವಿದೇಶಿಯರು ಕೂಡ ಭಾರತೀಯ ಸಂಸ್ಕೃತಿಗೆ ಮಾರುಹೋಗಿ ಅದನ್ನು ಅನುಕರಣೆ ಮಾಡುತ್ತಿದ್ದಾರೆ....

  • ಅವನು ಕಲ್ಲನ್ನೇ ನೋಡುತ್ತ ಕೂತುಕೊಂಡಿದ್ದಾನೆ. ತದೇಕಚಿತ್ತದಿಂದ ನೋಡುತ್ತಿರುವ ಅವನಿಗೆ ಅದು ಏನೇನೋ ಆಗಿ ಕಾಣುತ್ತಿದೆ. ಅವನು ಅವೊತ್ತು ಮಾತ್ರ ಹಾಗೆ ಕೂತು...

  • ಉಡುಪಿ: ನೂತನ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್‌ ನಾಯಕ್‌ ಅವರ ಪದಗ್ರಹಣ ಸಮಾರಂಭ ಫೆ. 24ರ ಸಂಜೆ 4 ಗಂಟೆಗೆ ಹೊಟೇಲ್‌ ಕಿದಿಯೂರಿನ ಶೇಷಶಯನ ಸಭಾಭವನದಲ್ಲಿ...

  • ಕಡಬ: ರಾಜ್ಯದಲ್ಲಿ ಘೋಷಣೆಯಾಗಿರುವ ಎಲ್ಲ 50 ನೂತನ ತಾಲೂಕುಗಳು ಅನುದಾನದ ಕೊರತೆಯಿಂದ ಕಾರ್ಯಾರಂಭ ಮಾಡಿಲ್ಲ. ಆರು ದಶಕಗಳ ಹೋರಾಟದ ಫಲವಾಗಿ ಘೋಷಣೆಯಾದ ಕಡಬ ತಾಲೂಕಿನ...

  • ಒಂದು ದಿನ ಮಧ್ಯಾಹ್ನ ಮರವೊಂದು ತಿಳಿಗಾಳಿಗೆ ತಾನೇ ತೂಗಿಕೊಳ್ಳುತ್ತ ನಿದ್ರಿಸುತ್ತಿತ್ತು. ಅಷ್ಟರಲ್ಲಿ ಮಹಾನ್‌ ಪಂಡಿತನಾದ ಡಾಂಗೌಜಿ ತನ್ನ ಸ್ನೇಹಿತನೊಡನೆ...