ದರೋಡೆಕೋರನನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಸ್ಥಳೀಯರು
Team Udayavani, May 26, 2021, 9:24 PM IST
ಶಿವಮೊಗ್ಗ : ನಗರದ ಹೊರವಲಯದ ಪೊಲೀಸ್ ಲೇಔಟ್ ನಲ್ಲಿ ಸುಲಿಗೆ ನಡೆಸುತ್ತಿದ್ದ ದರೋಡೆಕೋರನನ್ನು ಸ್ಥಳೀಯರೇ ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.
ಇಂದು ಸಂಜೆ ಪೊಲೀಸ್ ಲೇ ಔಟ್ ಬಳಿ ಬೈಕ್ ಗಳನ್ನು ಅಡ್ಡಗಟ್ಟಿ ಬೈಕ್ ಸವಾರರನ್ನು ದರೋಡೆ ಮಾಡುತ್ತಿದ್ದರು. ಈ ವೇಳೆ ಸ್ಥಳಕ್ಕಾಗಮಿಸಿದ ಸ್ಥಳೀಯರು ದರೋಡೆಕೋರರನ್ನು ಹಿಡಿಯಲು ಮುಂದಾದರು. ಆಗ ಸ್ಥಳೀಯರ ಕಾರನ್ನು ಜಖಂ ಮಾಡಿದ ದುಷ್ಕರ್ಮಿಗಳು ಮನೆಗಳಿಗೆ ನುಗ್ಗಿ ಮಹಿಳೆಯರ ಮೇಲೆಯೂ ಹಲ್ಲೆ ನಡೆಸಿದ್ದಾರೆ. ಈ ವೇಳೆ ಸ್ಥಳೀಯರೆಲ್ಲಾ ಒಂದಾಗಿ ಓರ್ವ ದರೋಡೆಕೋರನನ್ನು ಸೆರೆ ಹಿಡಿದಿದ್ದಾರೆ.
ಯಾವಾಗ ಎಲ್ಲ ಸ್ಥಳೀಯರು ಒಟ್ಟಾಗಿ ಬಂದರೋ ಆಗ ಇನ್ನುಳಿದ ನಾಲ್ವರು ದರೋಡೆಕೋರರು ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ. ಸೆರೆಹಿಡಿದ ದರೋಡೆಕೋರನನ್ನು ಸ್ಥಳೀಯರು ತುಂಗಾನಗರ ಪೊಲೀಸರ ವಶಕ್ಕೊಪ್ಪಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕೆಪಿಟಿಸಿಎಲ್: ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮಗಳು ನಡೆದಿಲ್ಲ: ಪ್ರಾಧಿಕಾರ
ಬಾಂಗ್ಲಾದೇಶಿಯರ ಆಧಾರ್ ದಾಖಲೆ ಪರಿಶೀಲನೆಗೆ ಹೈಕೋರ್ಟ್ ಅನುಮತಿ
ವಿವಾಹಿತ ಹೆಣ್ಮಕ್ಕಳು ಅಪಘಾತ ವಿಮೆ ಪರಿಹಾರಕ್ಕೆ ಅರ್ಹರು: ಹೈಕೋರ್ಟ್
ರಾಯರಿಗೆ ಶ್ರೀರಂಗಂ ದೇವಸ್ಥಾನದಿಂದ ಶೇಷವಸ್ತ್ರ: ಮೊದಲ ಬಾರಿ ತಮಿಳುನಾಡು ಸರ್ಕಾರದಿಂದ ಸೇವೆೆ
ರಾಜ್ಯದಲ್ಲಿಂದು 2032 ಮಂದಿಗೆ ಕೋವಿಡ್ ಸೋಂಕು ದೃಢ; ಐವರ ಸಾವು