ಪದವಿ ಪ್ರಶ್ನೆ ಪತ್ರಿಕೆಯಲ್ಲಿ ಲೋಪ
Team Udayavani, Mar 26, 2021, 9:39 PM IST
ಶಿವಮೊಗ್ಗ: ಗುರುವಾರ ನಡೆದ ಪದವಿ ಮೂರನೇ ಸೆಮಿಸ್ಟರ್ ಇಂಗ್ಲಿಷ್ ಪರೀಕ್ಷೆ ಪ್ರಶ್ನೆ ಪತ್ರಿಕೆಯಲ್ಲಿ ಲೋಪ ಕಂಡುಬಂದಿದ್ದು ಯಾವ ಕಾಲೇಜುಗಳೂ ಈ ಬಗ್ಗೆ ಗಮನಿಸದೆ ಇದ್ದದ್ದು ಆಶ್ಚರ್ಯ ಮೂಡಿಸಿದೆ.
ಬಿಕಾಂ, ಬಿಬಿಎ, ಟಿಟಿಎಂ ವಿದ್ಯಾರ್ಥಿಗಳಿಗೆ ನೀಡಿದ್ದ ಪ್ರಶ್ನೆ ಪತ್ರಿಕೆಯಲ್ಲಿ 80 ಅಂಕಗಳಿಗೆ ಪ್ರಶ್ನೆಗಳನ್ನು ನೀಡುವ ಬದಲು 82 ಅಂಕಗಳಿಗೆ ನೀಡಲಾಗಿತ್ತು. ಐದು ಅಂಕಗಳ ಎರಡು ಪ್ರಶ್ನೆ, ಆರು ಅಂಕಗಳ ಎರಡು ಪ್ರಶ್ನೆ, ಎಂಟು ಅಂಕಗಳ ಎರಡು ಪ್ರಶ್ನೆ, ನಾಲ್ಕು ಅಂಕಗಳ ಒಂದು ಪ್ರಶ್ನೆ, ಆರು ಅಂಕಗಳ ಆರು ಪ್ರಶ್ನೆ, ಒಂದು ಅಂಕಗಳ ನಾಲ್ಕು ಪ್ರಶ್ನೆ ನೀಡಲಾಗಿತ್ತು. ಒಟ್ಟು 82 ಅಂಕಗಳಿಗೆ ಪರೀಕ್ಷೆ ಬರೆಯಲು ನೀಡಲಾಗಿತ್ತು. ಈ ಲೋಪವು ಬಹುತೇಕ ಕಾಲೇಜುಗಳ ಗಮನಕ್ಕೆ ಬಂದಿಲ್ಲ. ಕೆಲವರಿಗೆ ಪರೀಕ್ಷೆ ಮುಗಿದ ಮೇಲೆ ಗಮನಕ್ಕೆ ಬಂದಿದೆ.