Udayavni Special

ಕೋಟೆ ಮಾರಿಕಾಂಬಾ ಜಾತ್ರೆ ಆರಂಭ

ಬಿರು ಬಿಸಿಲಲ್ಲೂ ಸರತಿ ಸಾಲಲ್ಲಿ ದೇವರ ದರ್ಶನ ಪಡೆದ ಭಕ್ತರು ಮುಖ್ಯ ರಸ್ತೆಗಳಿಗೆ ಭವ್ಯ ಅಲಂಕಾರ

Team Udayavani, Feb 26, 2020, 1:53 PM IST

26-February-13

ಶಿವಮೊಗ್ಗ: ಕೋಟೆ ಶ್ರೀ ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವ ಮಂಗಳವಾರ ವೈಭವದಿಂದ ಆರಂಭವಾಯಿತು. ಬೆಳಗ್ಗೆಯಿಂದಲೇ ಸಾವಿರಾರು ಭಕ್ತರ ದಂಡೇ ಗಾಂಧಿ ಬಜಾರಿನಲ್ಲಿ ನೆರೆದಿತ್ತು. ತವರು ಮನೆ ಗಾಂಧಿ ಬಜಾರಿನಿಂದ ಕರ್ನಾಟಕ ಸಂಘದವರಿಗೆ ಸರದಿ ಸಾಲು ಕಂಡು ಬಂದಿತು. ಬಿಸಿಲನ್ನು ಲೆಕ್ಕಿಸದೆ ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು.

ತವರು ಮನೆ ಗಾಂಧಿ ಬಜಾರ್‌ನಲ್ಲಿ ದೇವಿ ಪ್ರತಿಷ್ಠಾಪನಾ ಕಾರ್ಯ ವೈವಿಧ್ಯಮಯವಾಗಿ ನೆರವೇರಿತು. ಬಿ.ಬಿ. ರಸ್ತೆಯಲ್ಲಿನ ಬ್ರಾಹ್ಮಣರ ಸಮುದಾಯದ ನಾಡಿಗರ ಕುಟುಂಬದವರು ಬೆಳಗ್ಗೆ 4ಕ್ಕೆ ಮೊದಲ ಪೂಜೆ ನೆರವೇರಿಸುವ ಮೂಲಕ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದರು. ಮುತ್ತೈದೆಯರು ಬೆಳಗಿನ 4ರಿಂದಲೇ ಸರತಿ ಸಾಲಿನಲ್ಲಿ ನಿಂತು ಮಡಿಲಕ್ಕಿ ನೀಡಿ ದೇವಿಯ ದರ್ಶನ ಪಡೆದರು.

ಅರ್ಚಕರು ಮಕ್ಕಳನ್ನು ದೇವಿಯ ಮೂರ್ತಿಗೆ ತಾಗಿಸಿ, ಪೋಷಕರಿಗೆ ನೀಡುತ್ತಿದ್ದರು. ಮಕ್ಕಳನ್ನು ದೇವಿಗೆ ಮುಟ್ಟಿಸಿ ಆಶೀರ್ವಾದ ಪಡೆಯಲು ಸಾವಿರಾರು ಕುಟುಂಬಗಳು ಬಹು ದೂರದವರೆಗೂ ಸರತಿಯಲ್ಲಿ ಸಾಗಿದರು. ಗಾಂಧಿ  ಬಜಾರ್‌ ಹಾಗೂ ಮಾರಿಕಾಂಬಾ ದೇವಾಲಯ ಸುತ್ತಮುತ್ತಲಿನ ಪ್ರದೇಶದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ದೇವಸ್ಥಾನಕ್ಕೆ ದರ್ಶನ ಪಡೆಯಲು ಭಕ್ತರಿಗೆ ತೊಂದರೆಯಾಗದಂತೆ ಉದ್ದಕ್ಕೂ ಬ್ಯಾರಿಕೇಡ್‌ ಅಳವಡಿಸಲಾಗಿದೆ. ಸೂಕ್ತ ಬಂದೋಬಸ್ತ್ ಗಾಗಿ ಹೆಚ್ಚಿನ ಪೊಲೀಸರನ್ನು ಯೋಜಿಸಲಾಗಿದೆ.

ದರ್ಶನಕ್ಕೆ ಸೂಕ್ತ ವ್ಯವಸ್ಥೆ: ಭಕ್ತರಿಗೆ ತೊಂದರೆಯಾಗದಂತೆ ದೇವಾಲಯ ಆಡಳಿತ ಮಂಡಳಿಯಿಂದ ಸೂಕ್ತ ವ್ಯವಸ್ಥೆ ಮಾಡಿತ್ತು. ಮಧ್ಯಾಹ್ನದ ವೇಳೆಗೆ ಜನದಟ್ಟಣೆ ಹೆಚ್ಚಾಗಿ ಸರತಿ ಸಾಲು ಬಿ.ಎಚ್‌. ರಸ್ತೆಯ ಬೆಕ್ಕಿನ ಕಲ್ಮಠವರೆಗೂ ಬೆಳೆದಿತ್ತು. ಜನರು ಬಿಸಿಲನ್ನೂ ಲೆಕ್ಕಿಸದೆ ದೇವಿಯ ದರ್ಶನ ಮಾಡಲು ಮುಂದಾಗಿದ್ದರು. ಸರತಿ ಸಾಲಿನಲ್ಲಿ ಬರುವ ಭಕ್ತರಿಗೆ ಕೋಟೆ ಶ್ರೀ ಮಾರಿಕಾಂಬಾ ಜಾತ್ರಾ ಸಮಿತಿ ಮತ್ತು ಸಂಘ-ಸಂಸ್ಥೆಗಳು ನೀರು, ಮಜ್ಜಿಗೆ ವ್ಯವಸ್ಥೆ ಮಾಡಿದ್ದರು. ದರ್ಶನಕ್ಕೆ ಬರುವ ಭಕ್ತರು ಹಣ್ಣು, ಸೀರೆ, ಬಳೆ, ಅಕ್ಕಿ ಮತ್ತಿತರ ಹರಕೆ ವಸ್ತುಗಳನ್ನು ಹಾಕಲು ಒಟ್ಟು 34 ಡಬ್ಬಿಗಳ ವ್ಯವಸ್ಥೆ ಮಾಡಲಾಗಿತ್ತು. ಜಾತ್ರಾ ಮಹೋತ್ಸವದ ಹಿನ್ನೆಲೆ ಯಲ್ಲಿ ನಗರದಾದ್ಯಂತ ಸಡಗರದ ವಾತಾವರಣ ಇದ್ದರೆ, ಜಾತ್ರೆಗೆ ಶುಭ ಕೋರುವ ಫ್ಲೆಕ್ಸ್‌ ಗಳು ಎಲ್ಲೆಡೆ ಕಂಡುಬಂದಿದೆ.

ವಿದ್ಯುದ್ದೀಪಗಳಿಂದ ಸಿಂಗಾರಗೊಂಡ ನಗರ: ನಗರದ ಎಲ್ಲಾ ಮುಖ್ಯ ರಸ್ತೆ, ಕೋಟೆ ರಸ್ತೆ, ಗಾಂಧಿ ಜಜಾರ್‌ ರಸ್ತೆಯನ್ನು ಜಗಮಗಿಸುವ ವಿದ್ಯುತ್‌ ದೀಪಗಳಿಂದ ಸಿಂಗರಿಸಲಾಗಿದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಅಮೆರಿಕ ಕೋವಿಡ್-19 ಸಮರ: ಮಾವನಿಗೆ ಅಳಿಯನ ಸಾಥ್‌

ಅಮೆರಿಕ ಕೋವಿಡ್-19 ಸಮರ: ಮಾವನಿಗೆ ಅಳಿಯನ ಸಾಥ್‌

1720 To 2020! ಪ್ರತಿ 100 ವರ್ಷಕ್ಕೊಮ್ಮೆ ಮನುಷ್ಯ ಜನಾಂಗಕ್ಕೆ ಭೀತಿ ಹುಟ್ಟಿಸೋ ಮಹಾಮಾರಿ

1720 To 2020! ಪ್ರತಿ 100 ವರ್ಷಕ್ಕೊಮ್ಮೆ ಮನುಷ್ಯ ಜನಾಂಗಕ್ಕೆ ಭೀತಿ ಹುಟ್ಟಿಸೋ ಮಹಾಮಾರಿ

ಕೋವಿಡ್ ಕಳವಳ: ಜಾಂಪಾ, ಡಿ ಶಾರ್ಟ್ ಸೇರಿ ಎಂಟು ಆಸೀಸ್ ಕ್ರಿಕೆಟಿಗರ ಮದುವೆ ಮುಂದೂಡಿಕೆ

ಕೋವಿಡ್ ಕಳವಳ: ಜಾಂಪಾ, ಡಿ ಶಾರ್ಟ್ ಸೇರಿ ಎಂಟು ಆಸೀಸ್ ಕ್ರಿಕೆಟಿಗರ ಮದುವೆ ಮುಂದೂಡಿಕೆ

ಸ್ವತಃ ಮಾಸ್ಕ್ ಧರಿಸದೆ ಜನರಿಗೆ ಮಾಸ್ಕ್ ವಿತರಿಸಿದ ಸಚಿವ ಶ್ರೀರಾಮುಲು

ಸ್ವತಃ ಮಾಸ್ಕ್ ಧರಿಸದೆ ಜನರಿಗೆ ಮಾಸ್ಕ್ ವಿತರಿಸಿದ ಸಚಿವ ಶ್ರೀರಾಮುಲು

ಸ್ಮಾರ್ಟ್‌ಫೋನ್‌ ಭವಿಷ್ಯ ಸ್ಮಾರ್ಟಾಗಿಲ್ಲ

ಸ್ಮಾರ್ಟ್‌ಫೋನ್‌ ಭವಿಷ್ಯ ಸ್ಮಾರ್ಟಾಗಿಲ್ಲ; 2 ಬಿ. ಡಾಲರ್‌ ನಷ್ಟದ ಭಯ

ಕೋವಿಡ್ ಆತಂಕದ ನಡುವೆ ಗಡಿಯಲ್ಲಿ ಒಳನುಸುಳಲು ಯತ್ನಿಸಿದ 9 ಉಗ್ರರ ಹತ್ಯೆಗೈದ ಸೇನಾಪಡೆ

ಕೋವಿಡ್ ಆತಂಕದ ನಡುವೆ ಗಡಿಯಲ್ಲಿ ಒಳನುಸುಳಲು ಯತ್ನಿಸಿದ 9 ಉಗ್ರರ ಹತ್ಯೆಗೈದ ಸೇನಾಪಡೆ

‘ಸೋಂಕು ಬಂದಿದೆ’ ಎಂದು‌ ಆಸ್ಪತ್ರೆಯಲ್ಲಿ ನಗುತ್ತ ಡ್ಯಾನ್ಸ್ ಮಾಡಿದ‌ ತಬ್ಲಿಘಿ ಶಂಕಿತ ವ್ಯಕ್ತಿ

‘ಸೋಂಕು ಬಂದಿದೆ’ ಎಂದು‌ ಆಸ್ಪತ್ರೆಯಲ್ಲಿ ನಗುತ್ತ ಡ್ಯಾನ್ಸ್ ಮಾಡಿದ‌ ತಬ್ಲಿಘಿ ಶಂಕಿತ ವ್ಯಕ್ತಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಲಾಕ್‌ಡೌನ್‌; ಔಷಧ ಅಭಾವ ಸಾಧ್ಯತೆ

ಲಾಕ್‌ಡೌನ್‌; ಔಷಧ ಅಭಾವ ಸಾಧ್ಯತೆ

ಜಿಂಕೆ ಬೇಟೆಯಾಡಿ ಮಾಂಸ ಮಾರಾಟ ಮಾಡುತ್ತಿದ್ದ ದುಷ್ಕರ್ಮಿಗಳು: ಓರ್ವನ ಸೆರೆ

ಜಿಂಕೆ ಬೇಟೆಯಾಡಿ ಮಾಂಸ ಮಾರಾಟ ಮಾಡುತ್ತಿದ್ದ ದುಷ್ಕರ್ಮಿಗಳು: ಓರ್ವನ ಸೆರೆ

ಪ್ರಾಣಿಗಳಿಗೂ ಈಗ ಕೋವಿಡ್ 19 ಸಂಕಷ್ಟ

ಪ್ರಾಣಿಗಳಿಗೂ ಈಗ ಕೋವಿಡ್ 19 ಸಂಕಷ್ಟ

ಲಾಕ್ ಡೌನ್ ಆದೇಶ ಉಲ್ಲಂಘಿಸಿ ನಮಾಜ್: ಲಾಕ್ ಮಾಡಿದ ಪೊಲೀಸರು

ಲಾಕ್ ಡೌನ್ ಆದೇಶ ಉಲ್ಲಂಘಿಸಿ ನಮಾಜ್: ಲಾಕ್ ಮಾಡಿದ ಪೊಲೀಸರು

ನೂರಾರು ಮಂದಿ ಭೇಟಿ ನೀಡುವ ಎಟಿಎಂಗಳಲ್ಲಿ  ಸ್ಯಾನಿಟೈಜರೇ ಇಲ್ಲ!

ನೂರಾರು ಮಂದಿ ಭೇಟಿ ನೀಡುವ ಎಟಿಎಂಗಳಲ್ಲಿ ಸ್ಯಾನಿಟೈಜರೇ ಇಲ್ಲ!

MUST WATCH

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

udayavani youtube

ಒಂದೆರಡು ದಿನಗಳಲ್ಲಿ ರೈತರ ಎಲ್ಲಾ ಸಮಸ್ಯೆ ಸರಿಹೋಗಲಿದೆ : ಕೃಷಿ ಸಚಿವರಿಂದ ರೈತರಿಗೆ ಅಭಯ

ಹೊಸ ಸೇರ್ಪಡೆ

ಕಾಲುಜಾರಿ ಕಾಲುವೆಗೆ ಬಿದ್ದು ಮಹಿಳೆ ಸಾವು

ಕಾಲುಜಾರಿ ಕಾಲುವೆಗೆ ಬಿದ್ದು ಮಹಿಳೆ ಸಾವು

ಮಾಸ್ಕ್ ವಿತರಣೆಗೆ ಚಾಲನೆ

ಮಾಸ್ಕ್ ವಿತರಣೆಗೆ ಚಾಲನೆ

ಕೋವಿಡ್ 19 ವೈರಸ್ ಸೋಂಕಿತರ ಸಾವಿನ ಪ್ರಮಾಣ: ಜಾಗತಿಕ ದಾಖಲೆ ಬರೆದ ಅಮೆರಿಕ

ಕೋವಿಡ್ 19 ವೈರಸ್ ಸೋಂಕಿತರ ಸಾವಿನ ಪ್ರಮಾಣ: ಜಾಗತಿಕ ದಾಖಲೆ ಬರೆದ ಅಮೆರಿಕ

ಗ್ರಾಮಸ್ಥರು ಸಹಕರಿಸಿ: ಖಾದರ್‌ ಮನವಿ

ಗ್ರಾಮಸ್ಥರು ಸಹಕರಿಸಿ: ಖಾದರ್‌ ಮನವಿ

ಸುಳ್ಯ: ಒಟಿಪಿ ಇಲ್ಲದೆ ನೀಡುತ್ತಿಲ್ಲ ಪಡಿತರ

ಸುಳ್ಯ: ಒಟಿಪಿ ಇಲ್ಲದೆ ನೀಡುತ್ತಿಲ್ಲ ಪಡಿತರ