Udayavni Special

ವಿಶೇಷಾಧಿಕಾರ ಬಳಸಿಕೊಳ್ಳಿ : ಹಕ್ರೆ

ಕಾಮಗಾರಿಯ ವಿಸ್ತೃತ ತನಿಖೆ ನಡೆಸಿ ಕ್ರಮಕ್ಕೆ ಶಿಫಾರಸು

Team Udayavani, Feb 26, 2020, 4:43 PM IST

26-February-24

ಸಾಗರ: ಕುಡಿಯುವ ನೀರಿನ ಕಾಮಗಾರಿಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕಾಮಗಾರಿ ಮುಕ್ತಾಯಗೊಂಡ ನಂತರ ಟೆಂಡರ್‌ ಷರತ್ತುಗಳಿಗೆ ಅನ್ವಯವಾಗಿ ನಿರ್ಮಾಣ ವಾಗಿರುವುದನ್ನು ಖಚಿತಪಡಿಸಿಕೊಂಡು ಗ್ರಾಪಂಗಳು ತಮಗೆ ಹಸ್ತಾಂತರಿಸಿಕೊಳ್ಳಲು ಈಗಾಗಲೇ ಸೂಚಿಸಲಾಗಿದೆ. ಗುಣಮಟ್ಟದಲ್ಲಿ ರಾಜಿ ಇಲ್ಲದೆ ಪರಿಶೀಲನೆ ನಡೆಸಬೇಕು. ಒಂದೊಮ್ಮೆ ಕಾಮಗಾರಿ ಸಂಪೂರ್ಣವಾಗದಿದ್ದರೂ, ಕಳಪೆಯಾಗಿದ್ದರೂ ವಹಿಸಿಕೊಂಡಿದ್ದರೆ ಅಂತಹ ಪ್ರಕರಣಗಳಲ್ಲಿ ಆಯಾ ಗ್ರಾಪಂಗಳ ಪಿಡಿಒ ಅಥವಾ ಕಾರ್ಯದರ್ಶಿಗಳೇ ಮುಂದಿನ ಶಿಸ್ತು ಕ್ರಮಗಳಿಗೆ ಜವಾಬ್ದಾರರಾಗಿರುತ್ತಾರೆ ಎಂದು ತಾಪಂ ಅಧ್ಯಕ್ಷ ಬಿ.ಎಚ್‌. ಮಲ್ಲಿಕಾರ್ಜುನ ಹಕ್ರೆ ತಿಳಿಸಿದರು.

ನಗರದ ಸಾಮರ್ಥ್ಯ ಸೌಧದಲ್ಲಿ ತಾಪಂ ಅಧಿಕಾರಿಗಳ ಮುಂದುವರಿದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಂಚಾಯತ್‌ ಗೆ ಹಸ್ತಾಂತರ ಪ್ರಕ್ರಿಯೆ ನಡೆಯದೆ ಕಾಮಗಾರಿಗಳ ಬಿಲ್‌ನ್ನು ಗುತ್ತಿಗೆದಾರರಿಗೆ ಪಾವತಿಸಿದರೆ ಆಗ ಆಯಾ ಇಲಾಖೆಯ ಅಧಿಕಾರಿಗಳು ಹೊಣೆ ಹೊರಬೇಕಾಗುತ್ತದೆ. ಈಗಾಗಲೇ ಹಳೆಇಕ್ಕೇರಿ, ತಲವಾಟ, ಅಂಬಾರಗೊಡ್ಲು ಮೊದಲಾದೆಡೆ ಕಾಮಗಾರಿಯ ಹೆಸರಿನಲ್ಲಿ ಕೆಲಸ ಆಗದಿದ್ದರೂ ಹಣ ಮಂಜೂರಾಗಿರುವುದು ಕಂಡುಬಂದಿದೆ. ಈ ಕುರಿತು ಇನ್ನಷ್ಟು ವಿಸ್ತ್ರತ ತನಿಖೆ ನಡೆಸಿ ತಪ್ಪು ಮಾಡಿದವರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದರು.

ಪಂಚಾಯತ್‌ ಪಿಡಿಒಗಳು ಕಚೇರಿಯಲ್ಲಿ ಕುಳಿತರೆ ಕಾಮಗಾರಿಗಳ ಕುರಿತು ಮಾಹಿತ ಸಿಗುವುದಿಲ್ಲ. ಕುಡಿಯುವ ನೀರು ಸರಬರಾಜು ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಕೈಗೆತ್ತಿಕೊಳ್ಳುವ ಪ್ರತಿಯೊಂದು ಯೋಜನೆಯ ಮಾಹಿತಿಯನ್ನು ಗ್ರಾಪಂಗಳು ಪಡೆದುಕೊಳ್ಳಬೇಕು. ಮಾಹಿತಿ ಹಕ್ಕಿನ ಮೂಲಕ ಸಾಮಾನ್ಯ ನಾಗರಿಕ ಇಂತಹ ದಾಖಲೆ ಪಡೆದುಕೊಳ್ಳುವಾಗ ನಮಗೆ ಮಾಹಿತಿ ಇಲ್ಲ ಎಂದು ಗ್ರಾಪಂಗಳು ಸಬೂಬು ಹೇಳುವುದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಲಿಖೀತವಾಗಿ ಮನವಿ ಸಲ್ಲಿಸಿ ಯೋಜನೆಯ ವಿವರ ಪಡೆದು ತಮ್ಮ ಪಂಚಾಯತ್‌ ಮಟ್ಟದಲ್ಲಿ ನಡೆಯುವ ಪ್ರತಿ ಕೆಲಸದ ಯೋಜನಾ ವಿವರವನ್ನು ಪಂಚಾಯತ್‌ ಅಧಿಕಾರಿಗಳು ಪಡೆದು ವಿಶ್ಲೇಷಣೆ ನಡೆಸಬೇಕು. ಈಗ ಪಂಚಾಯತ್‌
ಮಟ್ಟದಲ್ಲಿ ಕೂಡ ಅಧಿ ಕಾರಿಗಳ ಪ್ರಗತಿ ಪರಿಶೀಲನಾ ಸಭೆ ಮಾಡುವ ಅವಕಾಶ ಕೊಡಲಾಗಿರುವುದರಿಂದ ಈ ಕೆಲಸವನ್ನು ಇನ್ನಷ್ಟು ಸಮರ್ಥವಾಗಿ ಮಾಡಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ಗ್ರಾಪಂ ಪಿಡಿಒಗಳು, ಉಪಾಧ್ಯಕ್ಷ ಅಶೋಕ್‌ ಬರದವಳ್ಳಿ, ಪ್ರಭಾರಿ ಕಾರ್ಯ ನಿರ್ವಾಹಕ ಅಧಿಕಾರಿ ಬಾಲಸುಬ್ರಮಣ್ಯ ಇದ್ದರು. ಫೆ. 18ರಂದು ನಡೆದ ಮಾಸಿಕ ಕೆಡಿಪಿಯ ಕಲಾಪ ಪಟ್ಟಿ ಪೂರೈಸಿಲ್ಲದ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಯುಕೆ

ಬ್ರಿಟನ್ ನಲ್ಲಿ ಕೋವಿಡ್ ಗೆ ಭಾರತೀಯ ಮೂಲದ ಹೃದ್ರೋಗ ತಜ್ಞ ಡಾ.ಜಿತೇಂದ್ರ ಕುಮಾರ್ ಸಾವು

ಭಾರತದಲ್ಲಿ ಕಳೆದ 24 ಗಂಟೆಯಲ್ಲಿ ಕೋವಿಡ್ ಗೆ 13 ಮಂದಿ ಸಾವು, 508 ಹೊಸ ಪ್ರಕರಣ ಪತ್ತೆ

ಭಾರತದಲ್ಲಿ ಕಳೆದ 24 ಗಂಟೆಯಲ್ಲಿ ಕೋವಿಡ್ ಗೆ 13 ಮಂದಿ ಸಾವು, 508 ಹೊಸ ಪ್ರಕರಣ ಪತ್ತೆ

ದೇಶ ಕಟ್ಟಿದವರು ಮಾಡದ ತಪ್ಪಿಗೆ ಸಾವಿಗೆ ಶರಣಾಗುತ್ತಿರುವುದು ವಿಧಿಯ ಕ್ರೂರ ವ್ಯಂಗ್ಯ: HDK

ದೇಶ ಕಟ್ಟಿದವರು ಮಾಡದ ತಪ್ಪಿಗೆ ಸಾವಿಗೆ ಶರಣಾಗುತ್ತಿರುವುದು ವಿಧಿಯ ಕ್ರೂರ ವ್ಯಂಗ್ಯ: HDK

ರೈತರು ಹತಾಶರಾಗದಿರಿ, ಆತ್ಮಹತ್ಯೆಗೆ ಯೋಚಿಸದಿರಿ:

ರೈತರು ಹತಾಶರಾಗದಿರಿ, ಆತ್ಮಹತ್ಯೆಗೆ ಯೋಚಿಸದಿರಿ: ಕೃಷಿ ಸಚಿವ ಬಿ.ಸಿ.ಪಾಟೀಲ ಮನವಿ

ಕಲ್ಲಂಗಡಿ ಹಣ್ಣು ಮಾರಲಾಗದೆ ರೈತನ ಆತ್ಮಹತ್ಯೆ: ಕುಟುಂಬಕ್ಕೆ ಪರಿಹಾರ ಚೆಕ್ ವಿತರಿಸಿದ ಸಚಿವರು

ಕಲ್ಲಂಗಡಿ ಹಣ್ಣು ಮಾರಲಾಗದೆ ರೈತನ ಆತ್ಮಹತ್ಯೆ: ಕುಟುಂಬಕ್ಕೆ ಪರಿಹಾರ ಚೆಕ್ ವಿತರಿಸಿದ ಸಚಿವರು

ಫ್ಲಾಷ್‌ಮಾಬ್‌ ಆಫ್‌ “ಲೈಟ್ಸ್‌’ ಆರಂಭವಾಗಿದ್ದು ಇಟಲಿಯಲ್ಲಿ

ಫ್ಲಾಷ್‌ಮಾಬ್‌ ಆಫ್‌ “ಲೈಟ್ಸ್‌’ ಆರಂಭವಾಗಿದ್ದು ಇಟಲಿಯಲ್ಲಿ

ಯಾದಗಿರಿ ತೀವ್ರ ಜ್ವರ, ಕೆಮ್ಮಿನಿಂದ ಬಾಲಕಿ ಸಾವು: ಕೋವಿಡ್-19 ಶಂಕೆ

ಯಾದಗಿರಿಯ ತೀವ್ರ ಜ್ವರ, ಕೆಮ್ಮಿನಿಂದ ಬಾಲಕಿ ಸಾವು: ಕೋವಿಡ್-19 ಶಂಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

07-April-27

ಅಂತರ ಕಾಪಾಡಿ ಕೊರೊನಾ ಓಡಿಸಿ: ಮಹಾಂತೇಶ್‌

07-April-11

ವಲಸೆ ಕಾರ್ಮಿಕರ ನಿರಾಶ್ರಿತ ಶಿಬಿರಗಳ ಪರಿಶೀಲನೆ

ಕೋವಿಡ್ ಸಂಕಷ್ಟದಲ್ಲೂ ಅನ್ನ ಭಾಗ್ಯ ಯೋಜನೆಯ ಅಕ್ಕಿ ಕಳ್ಳಸಾಗಣೆ!

ಕೋವಿಡ್ ಸಂಕಷ್ಟದಲ್ಲೂ ಅನ್ನ ಭಾಗ್ಯ ಯೋಜನೆಯ ಅಕ್ಕಿ ಕಳ್ಳಸಾಗಣೆ!

ಕೋವಿಡ್ ಭೀತಿ ನಡುವೆ ಮಂಗನ ಖಾಯಿಲೆಗೆ ಶಿವಮೊಗ್ಗದಲ್ಲಿ ಮತ್ತೊಂದು ಬಲಿ

ಕೋವಿಡ್ ಭೀತಿ ನಡುವೆ ಮಂಗನ ಖಾಯಿಲೆಗೆ ಶಿವಮೊಗ್ಗದಲ್ಲಿ ಮತ್ತೊಂದು ಬಲಿ

ಮಾರಾಟಕಿದ್ದ ನಿರ್ಬಂಧ ತೆರವು -ದರ ದುಬಾರಿ!

ಮಾರಾಟಕಿದ್ದ ನಿರ್ಬಂಧ ತೆರವು -ದರ ದುಬಾರಿ!

MUST WATCH

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

udayavani youtube

ಒಂದೆರಡು ದಿನಗಳಲ್ಲಿ ರೈತರ ಎಲ್ಲಾ ಸಮಸ್ಯೆ ಸರಿಹೋಗಲಿದೆ : ಕೃಷಿ ಸಚಿವರಿಂದ ರೈತರಿಗೆ ಅಭಯ

ಹೊಸ ಸೇರ್ಪಡೆ

ಯುಕೆ

ಬ್ರಿಟನ್ ನಲ್ಲಿ ಕೋವಿಡ್ ಗೆ ಭಾರತೀಯ ಮೂಲದ ಹೃದ್ರೋಗ ತಜ್ಞ ಡಾ.ಜಿತೇಂದ್ರ ಕುಮಾರ್ ಸಾವು

ಭಾರತದಲ್ಲಿ ಕಳೆದ 24 ಗಂಟೆಯಲ್ಲಿ ಕೋವಿಡ್ ಗೆ 13 ಮಂದಿ ಸಾವು, 508 ಹೊಸ ಪ್ರಕರಣ ಪತ್ತೆ

ಭಾರತದಲ್ಲಿ ಕಳೆದ 24 ಗಂಟೆಯಲ್ಲಿ ಕೋವಿಡ್ ಗೆ 13 ಮಂದಿ ಸಾವು, 508 ಹೊಸ ಪ್ರಕರಣ ಪತ್ತೆ

ದೇಶ ಕಟ್ಟಿದವರು ಮಾಡದ ತಪ್ಪಿಗೆ ಸಾವಿಗೆ ಶರಣಾಗುತ್ತಿರುವುದು ವಿಧಿಯ ಕ್ರೂರ ವ್ಯಂಗ್ಯ: HDK

ದೇಶ ಕಟ್ಟಿದವರು ಮಾಡದ ತಪ್ಪಿಗೆ ಸಾವಿಗೆ ಶರಣಾಗುತ್ತಿರುವುದು ವಿಧಿಯ ಕ್ರೂರ ವ್ಯಂಗ್ಯ: HDK

ಕೋವಿಡ್ 19 ಲಾಕ್ ಕ್‌ಡೌನ್‌: ಕಷ್ಟದಲ್ಲಿ  ರೈತಾಪಿ ವರ್ಗ

ಕೋವಿಡ್ 19 ಲಾಕ್ ಕ್‌ಡೌನ್‌: ಕಷ್ಟದಲ್ಲಿ ರೈತಾಪಿ ವರ್ಗ

ರೈತರು ಹತಾಶರಾಗದಿರಿ, ಆತ್ಮಹತ್ಯೆಗೆ ಯೋಚಿಸದಿರಿ:

ರೈತರು ಹತಾಶರಾಗದಿರಿ, ಆತ್ಮಹತ್ಯೆಗೆ ಯೋಚಿಸದಿರಿ: ಕೃಷಿ ಸಚಿವ ಬಿ.ಸಿ.ಪಾಟೀಲ ಮನವಿ