ಬ್ರಾಹ್ಮಣ್ಯ ಮರೆಯುತ್ತಿರುವುದು ವಿಷಾದನೀಯ

ಸಾಮಾಜಿಕವಾಗಿಯಲ್ಲದೆ ಆಧ್ಯಾತ್ಮಿಕವಾಗಿಯೂ ಬ್ರಾಹ್ಮಣರಾಗುವುದು ಮುಖ್ಯ: ನ್ಯಾ| ಕುಮಾರ್‌

Team Udayavani, Apr 8, 2019, 5:30 PM IST

Udayavani Kannada Newspaper

ಶಿವಮೊಗ್ಗ: ನಮ್ಮ ಸಮಾಜವನ್ನು ಹಿಂದೆ ಬಡ ಸಮಾಜ ಎನ್ನುತ್ತಿದ್ದರು. ಆದರೆ ಇಂದು ಬ್ರಾಹ್ಮಣ ಸಮಾಜ ಬಡ ಸಮಾಜವಾಗಿದ್ದು, ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಮುಂದುವರಿದಿದ್ದೇವೆ. ಆದರೆ ಬ್ರಾಹ್ಮಣ್ಯವನ್ನು ಮರೆಯುತ್ತಿದ್ದೇವೆ ಎಂದು ನಿವೃತ್ತ ನ್ಯಾಯಾ ಧೀಶ ಎನ್‌. ಕುಮಾರ್‌ ವಿಷಾದ ವ್ಯಕ್ತಪಡಿಸಿದರು.

ನಗರದ ಶ್ರೀ ಗಾಯತ್ರಿ ಮಾಂಗಲ್ಯ ಮಂದಿರದಲ್ಲಿ ಭಾನುವಾರ ಜಿಲ್ಲಾ ಬ್ರಾಹ್ಮಣ ಮಹಾಸಭಾದಿಂದ ಹಮ್ಮಿಕೊಂಡಿದ್ದ ಮಹಾಸಭಾದ ಶತಮಾನೋತ್ಸವದ ಸಂಭ್ರಮಾಚರಣೆಯ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಇಂದು ನಾವೆಲ್ಲ ಕೇವಲ ಸಾಮಾಜಿಕವಾಗಿ ಬ್ರಾಹ್ಮಣರಾಗಿದ್ದೇವೆಯೇ ಹೊರತು ಆಧ್ಯಾತ್ಮಿಕವಾಗಿ ಒಬ್ಬ ಬ್ರಾಹ್ಮಣರಾಗಿದ್ದೇವೆಯೆ ಎಂದು ಯೋಚಿಸಬೇಕಿದೆ. ಕಳೆದ 20 ವರ್ಷದ ಹಿಂದೆ ಕರ್ನಾಟಕದಲ್ಲಿ ನಮ್ಮ ಸಮಾಜದವರು ಶೇ. 5
ರಷ್ಟು ಜನರು ಇದ್ದರು. ಆದರೆ ಆಗ ಕೇವಲ ಶೇ.2 ಜನರಿದ್ದಾರೆ. ಇದಕ್ಕೆ ಕಾರಣ ಕುಟುಂಬಕ್ಕೆ ಒಂದು ಮಗು ಸಾಕು ಎಂಬ ತೀರ್ಮಾನ. ಇದರ ಪರಿಣಾಮ ನಮ್ಮ ಜನಾಂಗದ ಸಂಖ್ಯೆ ಕಡಿಮೆಯಾಗುವಂತಾಗಿದೆ.

ಇದು ಹೀಗೆ ಮುಂದುವರಿದರೆ ಕೆಲ ತಲೆಮಾರುಗಳ ನಂತರ ಬ್ರಾಹ್ಮಣ ಸಮಾಜ ಇಲ್ಲದಂತಾಗುತ್ತದೆ ಎಂದರು. ಶತಮಾನಗಳಿಂದಲೂ ದೇಶದಲ್ಲಿ ಸಂಸ್ಕೃತಿಯನ್ನು ಉಳಿಸಿಕೊಂಡು ಬೆಳೆಸಿಕೊಂಡು ಬಂದಿದ್ದೇವೆ. ಇದು ಬ್ರಾಹ್ಮಣರ ಕರ್ತವ್ಯ. ಇದನ್ನು ಮುಂದಿನ ಪೀಳಿಗೆಗೂ ನೀಡಬೇಕಿದೆ. ಆದರೆ ಜನಸಂಖ್ಯೆಯೇ ಇಲ್ಲದೆ ಹೋದರೆ ಯಾರಿಗೆ ನೀಡಲು ಸಾಧ್ಯ. ಹಾಗಾಗಿ ಸಮಾಜದವರು ಕೇವಲ ತಮ್ಮ ಸ್ವಾರ್ಥಕ್ಕಾಗಿ ಅಲ್ಲದೆ ಸಮಾಜ, ಸನಾತನಧರ್ಮದ ಬಗ್ಗೆ ಕಾಳಜಿಯಿಂದಾಗಿ ಈ ಬಗ್ಗೆ ಯೋಚಿಸಬೇಕಿದೆ. ಆಗ ಸಮಾಜ ಹಾಗೂ ಸನಾತನ ಧರ್ಮ ಉಳಿಯುತ್ತದೆ ಎಂದರು.

ಬ್ರಾಹ್ಮಣ ಸಮಾಜ ಉತ್ತಮ ಹಾಗೂ ಮುಂದುವರಿದ ಸಮಾಜ ಎಂದು ಹೇಳಿಕೊಳ್ಳುತ್ತೇವೆ. ಬೇರೆ ಸಮಾಜದವರು ಸಹ ನಮ್ಮನ್ನು ಮೀರಿ ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ಪ್ರಬಲರಾಗಿದ್ದಾರೆ. ಉನ್ನತ ಹುದ್ದೆಗಳಲ್ಲಿದ್ದಾರೆ. ಹಾಗಾದರೆ ನಮ್ಮ ಸಮಾಜ ಹೇಗೆ ಮುಂದುವರಿದ ಸಮಾಜ. ನಮಗೂ ಬೇರೆ ಸಮಾಜದವರಿಗೂ ಏನು ವ್ಯತ್ಯಾಸ ಎಂದು ಪ್ರಶ್ನಿಸಿದ ಅವರು, ನಮ್ಮ ಸಮಾಜದವರು ಬ್ರಾಹ್ಮಣತ್ವವನ್ನು ಉಳಿಸಿಕೊಂಡಾಗ ಮಾತ್ರ ಬೇರೆಯವರಿಗೂ
ನಮಗೂ ವ್ಯತ್ಯಾಸ ತಿಳಿಯುತ್ತದೆ. ಇಲ್ಲವಾದರೆ ಬಹಳ ಹಿಂದುಳಿದ ಸಮಾಜದವರಾಗುತ್ತೇವೆ ಎಂದರು.

ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಕೆ.ಸಿ. ನಟರಾಜ ಭಾಗವತ್‌ ಮಾತನಾಡಿ, ಶತಮಾನೋತ್ಸವ ಆಚರಿಸುತ್ತಿರುವ ಮಹಾಸಭಾ ಸಂಘಟನೆ ಕಟ್ಟುವಲ್ಲಿ ಅನೇಕ ಮಹನೀಯರ ಶ್ರಮವಿದೆ. ಹಣವನ್ನು ಸಮಾಜಕ್ಕಾಗಿ ವಿನಿಯೋಗಿಸುತ್ತ ಸಾರ್ಥಕ ಕಾರ್ಯ
ನಡೆಸುತ್ತಿದೆ. ಆಧುನಿಕ ಶಿಕ್ಷಣದ ಜತೆ ಸಂಸ್ಕಾರ ಕಲಿಸುವ ಆಶಯದಲ್ಲಿ ವಿದ್ಯಾರ್ಥಿ ನಿಲಯ ಸ್ಥಾಪಿಸಿದೆ. ವೈವಾಹಿಕ ಕಾರ್ಯಕ್ರಮಗಳಿಗೆ ಅನುಕೂಲ ಒದಗಿಸಲು ಸಮುದಾಯ ಭವನ ಕಟ್ಟಲಾಯಿತು ಎಂದು ತಿಳಿಸಿದರು.

ಕರ್ನಾಟಕ ಬ್ಯಾಂಕ್‌ನ ಆಡಳಿತ ನಿರ್ದೇಶಕ ಹಾಗೂ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಎಂ.ಎಸ್‌. ಮಹಾಬಲೇಶ್ವರ ಮಾತನಾಡಿ, ನಾನು ಎಂಬುದರ ಬದಲಿಗೆ ನಾವು ಎಂಬ ಎರಡು
ಅಕ್ಷರವನ್ನು ಅಳವಡಿಸಿಕೊಳ್ಳುವ ಮೂಲಕ ಜಿಲ್ಲಾ ಬ್ರಾಹ್ಮಣರು ಸಂಘಟಿತರಾಗಿ ಶತಮಾನವನ್ನು ಪೂರೈಸಿ ಬ್ರಾಹ್ಮಣರು ಸಂಘಟಿತರಾಗುತ್ತಾರೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದ ಅವರು, ಬ್ರಾಹ್ಮಣ ಎನ್ನುವುದು ಹುಟ್ಟಿನಿಂದ ಬರುವುದಲ್ಲ, ಕರ್ಮದಿಂದ ಬರಬೇಕು. ಹೆಣ್ಣು ಮಕ್ಕಳಿಗೆ ವಿದ್ಯಾರ್ಥಿನಿ ನಿಲಯ,
ಹಿರಿಯ ನಾಗರಿಕರಿಗೆ ವೃದ್ಧಾಶ್ರಮ ಹಾಗೂ ಮಹಾಸಭಾದಿಂದ ಗೋಶಾಲೆ ನಿರ್ಮಿಸುವ ಉದ್ದೇಶವಿದೆ. 4-5 ವರ್ಷಗಳಲ್ಲಿ ಯೋಜನೆ
ಪೂರ್ಣಗೊಳಿಸುವ ಆಶಯವಿದೆ ಎಂದರು.

ಇದೇ ಸಂದರ್ಭದಲ್ಲಿ ಸಮಾಜದ ಅರಸಾಳು ರಂಗನಾಥ್‌ ರಾವ್‌, ಬೆನಕ ಭಟ್ಟರು, ಚಂದ್ರಶೇಖರ್‌ ಭಟ್‌ ಅವರನ್ನು ಸನ್ಮಾನಿಸಲಾಯಿತು. ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಾಯಿತು. ಅಶೋಕ್‌ ಹಾರ್ನಳ್ಳಿ, ಡಾ| ಎಚ್‌.ವಿ ಸುಬ್ರಹ್ಮಣ್ಯ ಮತ್ತಿತರರು ಇದ್ದರು.

ಟಾಪ್ ನ್ಯೂಸ್

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

SHriramulu (2)

BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.