ದುಬಾರಿ ಉಡುಗೊರೆ ಕೊಟ್ಟ ಗಾನಕೋಗಿಲೆ

ಸಮರ್ಥ ಅನ್ನಛತ್ರ ಮಂಡಳದ ಸಂಸ್ಥಾಪಕ ಅಧ್ಯಕ್ಷ ಭೋಸಲೆಗೆ ಲತಾ ಮಂಗೇಶಕರ್‌ರಿಂದ ಕಾರುಗಳ ಗಿಫ್ಟ್‌

Team Udayavani, Jun 15, 2019, 11:23 AM IST

15-June-11

ಸೊಲ್ಲಾಪುರ: ಭಾರತರತ್ನ ಲತಾ ಮಂಗೇಶಕರ್‌ ಅವರು ಮರ್ಸಿಡೀಸ್‌ ಬೆಂಜ್‌-ಕಾಂಪ್ರಸರ್‌ ಸಿ-200 ಮತ್ತು ಶೆವ್ಹರಲೆಟ್‌-ಕ್ರುಝ್ ಕಂಪನಿಯ ಕಾರುಗಳನ್ನು ಜನ್ಮೇಜಯರಾಜೆ ಭೋಸಲೆ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ.

ಸೊಲ್ಲಾಪುರ: ಗಾನ ಕೋಗಿಲೆ, ಭಾರತರತ್ನ ಲತಾ ಮಂಗೇಶಕರ್‌ ಅವರು ತಾವು ಬಳಸಿದ ಕೋಟ್ಯಂತರ ರೂ. ಬೆಲೆ ಬಾಳುವ ಎರಡು ಕಾರುಗಳನ್ನು ಅಕ್ಕಲಕೋಟೆಯ ಶ್ರೀಸ್ವಾಮಿ ಸಮರ್ಥ ಅನ್ನಛತ್ರ ಮಂಡಳದ ಸಂಸ್ಥಾಪಕ ಅಧ್ಯಕ್ಷ ಜನ್ಮೇಜಯರಾಜೆ ಭೋಸಲೆ ಅವರಿಗೆ ಉಡುಗೊರೆ ನೀಡಿದ್ದಾರೆ.

ಲತಾ ಮಂಗೇಶಕರ್‌ ಅವರು ಮುಂಬೈ ಮಹಾನಗರದ ಪೇಡರ್‌ ರಸ್ತೆಯಲ್ಲಿರುವ ತಮ್ಮ ‘ಪ್ರಭುಕುಂಜ್‌’ ನಿವಾಸದಲ್ಲಿ ಮರ್ಸಿಡೀಸ್‌ ಬೆಂಜ್‌-ಕಾಂಪ್ರಸರ್‌ ಸಿ-200, ಎಂ.ಎಚ್-01/ ಎನ್‌.ಎ./4221 ಮತ್ತು ಶೆವØರಲೆಟ್-ಕ್ರುಝ್ ಕಂಪನಿಯ ಎಂ.ಎಚ್-01/ ಎ.ಎಕ್ಸ್‌. /8584 ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.

ಭಾರತರತ್ನ ಲತಾ ಮಂಗೇಶಕರ್‌ ಕುರಿತು ಮಿನಾತಾಯಿ ಖಡಿಕರ್‌ ಬರೆದ ‘ಅವಳ ನೆರಳು’ ಕೃತಿಯಲ್ಲಿ ಮಂಡಳದ ಸಂಸ್ಥಾಪಕ ಅಧ್ಯಕ್ಷ ಜನ್ಮೇಜಯರಾಜೆ ಭೋಸಲೆ ಅವರು ಮಂಗೇಶಕರ್‌ ಕುಟುಂಬದ ಒಬ್ಬ ಸದಸ್ಯರು ಎಂದು ಉಲ್ಲೇಖೀಸಲಾಗಿದೆ. ಜನ್ಮೇಜಯರಾಜೆ ಭೋಸಲೆ ಅವರು ಅಷ್ಟೊಂದು ಮಂಗೇಶಕರ್‌ ಕುಟುಂಬದ ಪ್ರೀತಿ ಮತ್ತು ವಿಶ್ವಾಸ ಗಳಿಸಿದ್ದಾರೆ.

ಭಾರತರತ್ನ ಲತಾ ಮಂಗೇಶಕರ್‌ ಅವರು ಮಂಡಳದ ಸಂಸ್ಥಾಪಕ ಅಧ್ಯಕ್ಷ ಜನ್ಮೇಜಯರಾಜೆ ಭೋಸಲೆ ಮತ್ತು ಅವರ ಪುತ್ರ, ಪ್ರಮುಖ ಕಾರ್ಯಕಾರಿ ವಿಶ್ವಸ್ತ ಅಮೋಲರಾಜೆ ಭೋಸಲೆ ಅವರ ನೇತೃತ್ವಕ್ಕೆ ಸಲಹೆ, ಸಹಕಾರ ಮತ್ತು ಆಶೀರ್ವಾದ ನೀಡುತ್ತ ಬಂದಿದ್ದಾರೆ. ಲತಾ ಮಂಗೇಶಕರ್‌ ಅವರು ಸ್ವಾಮಿ ಸಮರ್ಥರ ಮೇಲೆ ಅಪಾರ ಭಕ್ತಿ ಹೊಂದಿದ್ದಾರೆ. ಹೀಗಾಗಿ ಸುಮಾರು ವರ್ಷಗಳಿಂದಲೂ ಮಂಗೇಶಕರ್‌ ಮತ್ತು ಭೋಸಲೆ ಕುಟುಂಬಗಳ ಮಧ್ಯೆ ಅನ್ಯೋನ್ಯ ಸಂಬಂಧವಿದೆ.

ಮಂಡಳದ ಸಂಸ್ಥಾಪಕ ಅಧ್ಯಕ್ಷ ಜನ್ಮೇಜಯರಾಜೆ ಭೋಸಲೆ ಪರಿಶ್ರಮದಿಂದ ಆರಂಭಗೊಂಡಿರುವ ಅನ್ನಛತ್ರ ಮಂಡಳ ದೇಶ- ವಿದೇಶಗಳಲ್ಲಿ ಹೆಸರುವಾಸಿಯಾಗಿದೆ. ದಾನಗಳಲ್ಲಿ ಅನ್ನದಾನ ಶ್ರೇಷ್ಠದಾನವಾಗಿದ್ದು, ಹಸಿದು ಬಂದ ಜನರಿಗೆ ಅನ್ನ ಬಡಿಸುವುದು ಮಹಾ ದಾನವಾಗಿದೆ. ಅಂತೆಯೇ ದರ್ಶನಕ್ಕೆ ಬಂದ ಸಾವಿರಾರು ಭಕ್ತರಿಗೆ ಪ್ರಸಾದ ಮೂಲಕ ತೃಪ್ತಿ ಒದಗಿಸುತ್ತಿರುವ ಕಾರ್ಯ ಮೆಚ್ಚುವಂತದ್ದು. ಭಕ್ತರು ನೀಡಿದ ಕಾಣಿಕೆಯಿಂದ ಇಷ್ಟೊಂದು ಜನರಿಗೆ ಪ್ರಸಾದ ಬಡಿಸುತ್ತಿರುವುದು ಅದ್ಭುತವಾಗಿದೆ. ಅಲ್ಲದೇ ಲಕ್ಷಾಂತರ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.

ಪಂಡಿತ ಹೃದಯನಾಥ ಮಂಗೇಶಕರ್‌, ಭಾರತಿತಾಯಿ ಮಂಗೇಶಕರ್‌, ರಾಧಾತಾಯಿ ಮಂಗೇಶಕರ್‌, ಆದಿನಾಥ ಮಂಗೇಶಕರ್‌, ಕೃಷ್ಣಾತಾಯಿ ಮಂಗೇಶಕರ್‌, ಉಷಾತಾಯಿ ಮಂಗೇಶಕರ್‌, ಮೀನಾತಾಯಿ ಖಡಿಕರ್‌, ಯೋಗೇಶ ಖಡಿಕರ್‌, ಮಹೇಶ ರಾಠೊರ್‌ ಹಾಗೂ ಜನ್ಮೆಜಯರಾಜೆ ಭೋಸಲೆ, ಅಲಕಾ ಭೋಸಲೆ, ಅಮೋಲರಾಜೆ ಭೋಸಲೆ, ಅರ್ಪಿತಾರಾಜೆ ಭೋಸಲೆ, ಅನುಯಾ ಫುಗೆ, ಅಂಜನಾ ಪವಾರ, ಪದ್ಮಾಕರ ಡಿಗ್ಗೆ, ಮಹಾಂತೇಶ ಸ್ವಾಮಿ, ಪ್ರಶಾಂತ ಸಾಠೆ, ಸಂತೋಷ ಭೋಸಲೆ, ಗಣೇಶ ಭೋಸಲೆ, ರಮೆಶ ಶಿಂದೆ, ಮೈನುದ್ದೀನ್‌ ಕೋರಬು, ಸ್ವಾಮಿನಾಥ ಗುರವ, ಬಾಬು ಮಣೂರೆ, ಬಲಭೀಮ ಪವಾರ ಹಾಗೂ ಇನ್ನಿತರರು ಈ ಸಂದರ್ಭದಲ್ಲಿದ್ದರು.

ಅಕ್ಕಲಕೋಟ ತೀರ್ಥಕ್ಷೇತ್ರದಲ್ಲಿ ಆರಂಭಿಸಿದ ಅನ್ನಛತ್ರದಲ್ಲಿ ಪ್ರತಿದಿನ ಸಾವಿರಾರು ಭಕ್ತರಿಗೆ ಪ್ರಸಾದ ಮೂಲಕ ತೃಪ್ತಿ ಒದಗಿಸುವ ಕಾರ್ಯ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ. ನನ್ನ ಮೇಲೆ ಇಟ್ಟಿರುವ ಭಕ್ತಿಯಿಂದ ಮಂಡಳದ ಸಂಸ್ಥಾಪಕ ಅಧ್ಯಕ್ಷ ಜನ್ಮೇಜಯರಾಜೆ ಭೋಸಲೆ ಅವರಿಗೆ ಪ್ರೀತಿ ಮತ್ತು ಗೌರವದಿಂದ ನನ್ನೆರಡು ಕಾರುಗಳನ್ನು ಉಡುಗರೆಯಾಗಿ ನೀಡಿದ್ದೇನೆ.
ಲತಾ ಮಂಗೇಶಕರ್‌, ಗಾಯಕಿ

ಭಾರತರತ್ನ ಲತಾ ಮಂಗೇಶಕರ್‌ ಅವರ ಮೇಲೆ ಬಹಳ ಭಕ್ತಿ ಮತ್ತು ಶ್ರದ್ಧೆ ಇಟ್ಟಿದ್ದೇನೆ. ನಾನು ಯಾವುದೇ ಕಾರ್ಯ ಕೈಗೊಂಡರೂ ಮೊದಲು ಅವರ ಆಶೀರ್ವಾದ ಪಡೆಯುತ್ತೇನೆ. ಹೀಗಾಗಿ ಅವರು ನನಗೆ ಉಡುಗೊರೆಯಾಗಿ ಕಾರು ನೀಡಿರುವುದು ನನ್ನ ಜೀವನದಲ್ಲಿ ಎಂದೂ ಮರೆಯುವುದಿಲ್ಲ.
•ಜನ್ಮೇಜಯರಾಜೆ ಭೋಸಲೆ, ಸಂಸ್ಥಾಪಕ ಅಧ್ಯಕ್ಷ ಶ್ರೀಸ್ವಾಮಿ ಸಮರ್ಥ ಅನ್ನಛತ್ರ ಮಂಡಳ, ಅಕ್ಕಲಕೋಟ

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

1-ewewqewq

Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.