ಶಾಸಕ ಜ್ಯೋತಿಗಣೇಶ್‌ ನೇತೃತ್ವದಲ್ಲಿ ದೇಣಿಗೆ ಸಂಗ್ರಹ

Team Udayavani, Aug 13, 2019, 3:53 PM IST

ತುಮಕೂರು: ರಾಜ್ಯದ ಹಲವು ಭಾಗಗಳಲ್ಲಿ ಕಳೆದ ಕೆಲವು ದಿನಗಳಿಂದ ಧಾರಾಕಾರ ಮಳೆಯಿಂದ ಜನ ಜೀವನ ಅಸ್ತವ್ಯಸ್ತವಾಗಿರುವ ಹಿನ್ನೆಲೆಯಲ್ಲಿ ನೆರವು ನೀಡಲು ಅ. 13ರಂದು ಶಾಸಕ ಜಿ.ಬಿ. ಜ್ಯೋತಿಗಣೇಶ್‌ ನೇತೃತ್ವದಲ್ಲಿ ಅಗತ್ಯ ವಸ್ತು ಸಂಗ್ರಹಿ ಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸಂಕಷ್ಟದಲ್ಲಿರುವ ಜನರು ನೆರೆ ಹಾವಳಿ ಯಿಂದ ಮನೆಗಳಲ್ಲಿ ವಾಸಿಸುವುದು ಅಸಾಧ್ಯವಾಗಿದ್ದು, ಮನೆ ಬಿಟ್ಟು ಕಾಳಜಿ ಕೇಂದ್ರ, ತಮ್ಮ ಸಂಬಂಧಿಕರ ಮನೆ ಹಾಗೂ ಇತರೆ ಸ್ಥಳಗಳಲ್ಲಿ ಆಶ್ರಯ ಪಡೆದಿದ್ದಾರೆ. ಇವರ ನೋವು ಹಾಗೂ ಕಷ್ಟಗಳಿಗೆ ಸ್ಪಂದಿಸಬೇಕಾಗಿರು ವುದು ನಮೆಲ್ಲರ ಆದ್ಯ ಕರ್ತವ್ಯವಾಗಿದೆ. ಆದ್ದರಿಂದ ಬಿಸ್ಕೆಟ್, ರಸ್ಕ್, ಚಪಾತಿ, ಗುಡ್‌ಲೈಫ್ ಹಾಲು, ಹಣ್ಣುಗಳು, ಹಾಸಿಗೆ ಚಾಪೆ, ಪ್ಲಾಸ್ಟಿಕ್‌ ಶೀಟ್, ಹೊದಿಕೆ, ಕಂಬಳಿ, ರಗ್ಗು, ಸ್ತ್ರೀ, ಪುರಷ, ಮಕ್ಕಳ ಒಳ ಉಡುಪುಗಳು, ಸ್ಯಾನಿಟರಿ ಪ್ಯಾಡ್‌, ಬಾತ್‌ ಟವೆಲ್ಗಳು, ಪಂಚೆ, ಸೀರೆ, ಪ್ಯಾಂಟ್, ಶರ್ಟ್‌, ಮಕ್ಕಳ ಉಡುಪು, ಬೆಚ್ಚಗಿನ ಉಡುಪು, ಜಾನುವಾರುಗಳಿಗೆ ಮೇವು ಹಾಗೂ ಪಶು ಆಹಾರ ನೆರವು ನೀಡಬೇಕು ಎಂದು ತಿಳಿಸಿದೆ.

ವಸ್ತು ಕಳುಹಿಸುವವರು: ತುಮಕೂರು ಕೇಂದ್ರದಲ್ಲಿ ರುದ್ರೇಶ್‌: 9844260280 ಹನುಮಂತರಾಜು: 9449421913 ರಕ್ಷಿತ್‌.ವಿ: 9164642777 ರಮೇಶ ಮುಗದೂರ : 9986771992 ಸಾಧನ ಆರ್‌ಎಸ್‌ಎಸ್‌ ಕಚೇೕರಿ ಪೇಟ್ರೋಲ್ ಬ್ಯಾಂಕ್‌ ಎದುರು, ಕೋತಿ ತೋಪು ರಸ್ತೆ ತುಮಕೂರು ಸಂಪರ್ಕಿಸಬಹುದು.

ಹಣಕಾಸಿನ ನೆರವು ನೀಡುವವರು ನಗದು ರೂಪದಲ್ಲಿ ನೀಡಬಾರದು. ಚೆಕ್‌ ಮುಖಾಂತರ ಹಣ ಸಂಗ್ರಹ ಮಾಡತಕ್ಕದ್ದು. ಚೆಕ್‌ನ ಜೊತೆಗೆ ಅವರ ಹೆಸರು, ವಿಳಾಸ ಹಾಗೂ ಮೊಬೈಲ್ ಸಂಖ್ಯೆ ಹಾಗೂ ಪಾನ್‌ ನಂಬರ್‌ ಕಡ್ಡಾಯವಾಗಿ ಪಡೆಯಬೇಕು.

ಚೆಕ್‌ ನೀಡುವವರು SS Sanchalita Santrasta Parihara Nidhi ಈ ಹೆಸರಿಗೆ ಕೆನರಾ ಬ್ಯಾಂಕ್‌, ಸ್ಟೇಷನ್‌ ರಸ್ತೆ ಶಾಖೆ, ಹುಬ್ಬಳಿಯ SB A/c No. 0514101042880 CNRB 0000514IFSC Code 0000514 ಖಾತೆಗೆ ಪಾವತಿಸಬೇಕು. ಇದಕ್ಕೆ ಸಂಬಂಧಪಟ್ಟ ಮಾಹಿತಿಗೆ ಗಿರೀಶ್‌ – 8123632684 ಅಥವಾ 0836- 2232972ಗೆ ಸಂಪರ್ಕಿಸಬೇಕೆಂದು ಹೇಳಿದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ