ಬೇಡಿಕೆ ಈಡೇರಿಕೆಗೆ ರೈತ ಸಂಘ ಪ್ರತಿಭಟನೆ

Team Udayavani, Oct 2, 2019, 5:57 PM IST

ಶಿರಾ: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ತಾಲೂಕು ರೈತ ಸಂಘ ಹಾಗೂ ಹಸಿರು ಸೇನೆ ಗ್ರೇಡ್‌ 2 ತಹಶೀಲ್ದಾರ್‌ ಕಮಲಮ್ಮಗೆ ಮನವಿ ಸಲ್ಲಿಸಿತು. ಜಿಲ್ಲಾ ರೈತ ಸಂಘದ ಅಧ್ಯಕ್ಷ ಆನಂದ್‌ ಪಟೇಲ್‌ ಮಾತನಾಡಿ, 12 ವರ್ಷದಿಂದ ಶಿರಾ ಭಾಗದಲ್ಲಿ ಮಳೆಯಿಲ್ಲದೆ ಬೆಳೆಗಳೆಲ್ಲ ಒಣಗಿದೆ. ಆದರೂ ಬರಪೀಡಿತ ಪಟ್ಟಿಯಿಂದ ಶಿರಾ ತಾಲೂಕು ಕೈ ಬಿಟ್ಟಿರುವುದು ಸರಿಯಲ್ಲ ಎಂದು ಹೇಳಿದರು. ತಹಶೀಲ್ದಾರ್‌ ಜಿಲ್ಲಾಧಿಕಾರಿ ಸಭೆಗೆ ಹೋಗಿರುವುದ ರಿಂದ ಮನವಿ ತಿಳಿಸುತ್ತೇನೆ ಎಂದು ಉಪ ತಹಶೀಲ್ದಾರ್‌ ಕಮಲಮ್ಮ ಹೇಳಿದರು.

ಇದಕ್ಕೆ ಪ್ರತಿ ಭಟನಾಕಾರರು ಸಿಟ್ಟಾದರು. ನಂತರ ದೂರವಾಣಿ ಮೂಲಕ ಸಂಪರ್ಕಿಸಿದಾಗ ಮಾತ ನಾಡಿದ ತಹಶೀಲ್ದಾರ್‌, ಅ. 4ರಂದು ರೈತ ಸಂಘದ ಪದಾಧಿಕಾರಿಗಳ ಸಭೆ ಕರೆದು ಸಮಸ್ಯೆ ಆಲಿಸುವುದಾಗಿ ಹೇಳಿದರು. ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ನಾದೂರು ಕೆಂಚಪ್ಪ ಮಾತನಾಡಿ, ಸರ್ಕಾರಿ ಮತ್ತು ಸಹಕಾರಿ ಮೈಕ್ರೋ ಫೈನಾನ್ಸ್‌ಗಳು ಸಾಲ ವಸೂಲಾತಿ ಹಾವಳಿ ನಿಲ್ಲಿಸಬೇಕು. ತಾಲೂಕಿನ ಬೆಳೆ ಸಮೀಕ್ಷೆ ಮಾಡಿ ನ್ಯಾಯ ಒದಗಿಸಬೇಕು ಎಂದರು.

ತಾಲೂಕು ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಕೆ.ಎಸ್‌. ಧನಂಜಯಾ ರಾಧ್ಯ. ತಾಲೂಕು ಅಧ್ಯಕ್ಷ ಸಣ್ಣ ದ್ಯಾಮೇಗೌಡ, ಕಾರ್ಯದರ್ಶಿ ಬಸವ ರಾಜು, ಮಹಿಳಾ ಅಧ್ಯಕ್ಷೆ ಲಕ್ಷ್ಮೀದೇವಿ, ಕೆ. ಮುಕುಂದಪ್ಪ, ಖಜಾಂಚಿ ರಂಗನಾಥ್‌, ಸಂಘಟನಾ ಕಾರ್ಯದರ್ಶಿ ಉಮೇಶ್‌, ನರಸಪ್ಪ, ಕೆ.ಸತೀಶ್‌, ನಾಗೇಶ್‌, ಯಳಿಯಪ್ಪ, ಗುರುಸಿದ್ದಪ್ಪ, ಜಯಣ್ಣ ಇತರರಿದ್ದರು.


ಈ ವಿಭಾಗದಿಂದ ಇನ್ನಷ್ಟು

  • ಕುಣಿಗಲ್‌: ತಂಬಾಕು ಸೇವನೆ ಕ್ಯಾನ್ಸರ್‌ ಉಂಟು ಮಾಡುವುದಲ್ಲದೆ ಮಾನವನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಪ್ರಾಚಾರ್ಯ ಸಿ.ಕೆ.ಗೋವಿಂದ ರಾಜು ಎಚ್ಚರಿಸಿದರು....

  • ತಿಪಟೂರು: ನಗರದ ಗಾಂಧಿನಗರದ ಬೋವಿ ಕಾಲೋನಿ ರಸ್ತೆಯು ಮಳೆಯಿಂದ ಕೊಚ್ಚೆ ಗುಂಡಿಯಾಗಿದ್ದು, ಸಾರ್ವಜನಿಕರ ಹಾಗೂ ವಾಹನಗಳ ಓಡಾಟಕ್ಕೆ ತೊಂದರೆಯಾಗುತ್ತಿದೆ. ಆದಷ್ಟು...

  • ಬರಗೂರು: ಹುಲಿಕುಂಟೆ ಹೋಬಳಿ ದೊಡ್ಡಬಾಣಗೆರೆ ಗ್ರಾಮದ ದಲಿತ ಕಾಲೋನಿಯ ಜನತೆ ಮೂಲ ಸೌಕರ್ಯಗಳಿಂದ ವಂಚಿತವಾಗಿದ್ದರೂ ಸಂಬಂಧ ಪಟ್ಟವರು ಗಮನಹರಿಸದಿರುವುದರಿಂದ...

  • ಚಿಕ್ಕನಾಯಕನಹಳ್ಳಿ: ತಾಲೂಕಿನ ಮಲ್ಲಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಪಾಳ್ಯದ ಪ್ರಾಥಮಿಕ ಶಾಲೆಯ ಛಾವಣಿ ಹಾಗೂ ಕಂಬ ಕುಸಿದು ಬಿದ್ದಿದ್ದು, ಅದೃಷ್ಟವಶಾತ್‌...

  • ಚಿಕ್ಕನಾಯಕನಹಳ್ಳಿ: ಪಟ್ಟಣದ ಸಮೀಪದ ಹೊನ್ನೇಭಾಗಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಮಸಾಲ್ತಿ ಗುಡ್ಲು ಗ್ರಾಮದಲ್ಲಿ ಚರಂಡಿ ಸ್ವಚ್ಛತೆ ಇಲ್ಲದೇ ಗ್ರಾಮಸ್ಥರು ಸಾಂಕ್ರಾಮಿಕ...

ಹೊಸ ಸೇರ್ಪಡೆ