ಲಕ್ಷಾಂತರ ಕುಟುಂಬ ಕುಡಿತದಿಂದ ಮುಕ್ತ  

Team Udayavani, Jan 2, 2023, 3:37 PM IST

tdy-16

ಮಧುಗಿರಿ: ರಾಜಕೀಯ ಏನೇ ಇರಲಿ ಧರ್ಮ ಸ್ಥಳದ ಪೂಜ್ಯ ಡಾ.ವಿರೇಂದ್ರ ಹೆಗ್ಗಡೆಯವರ ಮದ್ಯವರ್ಜನ ಶಿಬಿರ ಸೇರಿದಂತೆ ಹಲವು ಕಾರ್ಯ ಕ್ರಮ ದೇವರ ಕಾರ್ಯಕ್ರಮ. ಈಗಾಗಲೇ ಲಕ್ಷಾಂ ತರ ಕುಟುಂಬಗಳನ್ನು ಕುಡಿತದಿಂದ ಮುಕ್ತವಾಗಿಸಿ ದ್ದಾರೆ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ಹೇಳಿದರು.

ಪಟ್ಟಣದ ಎಂ.ಎಸ್‌.ರಾಮಯ್ಯ ಸಮುದಾಯ ಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಹಾಗೂ ಇತರರ ಸಹಕಾರದಲ್ಲಿ ನಡೆದ ಮದ್ಯ ವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಿಮಗೆ ಶಿಬಿರದ ಮೊದಲು ಇದ್ದ ಮನಸ್ಥಿತಿ ಬದಲಾಗಿದ್ದು, ಹೊಸ ಬದುಕು ಸಿಕ್ಕಿದೆ. ನಿಮ್ಮ ಈ ಬದಲಾವಣೆಗೆ ಹಲವರು ಕಾರಣರಾಗಿದ್ದು, ನೀವೂ ಕೂಡ ಮದ್ಯಮುಕ್ತ ಸಮಾಜಕ್ಕೆ ಉತ್ತಮ ಕೊಡುಗೆ ನೀಡುವಂತೆ ಮನವಿ ಮಾಡಿದರು.

ಗೌರವ ತನ್ನಿ: ಸಾನ್ನಿಧ್ಯ ವಹಿಸಿದ್ದ ಶ್ರೀ ರಮಾನಂದ ಚೈತನ್ಯ ಸ್ವಾಮೀಜಿ ಮಾತನಾಡಿ, ಈ ಮದ್ಯವು ರಾಮಾಯಣ-ಮಹಾಭಾರತ ದಿಂದಲೂ ಉಳಿದಿದೆ. ಇದರಿಂದ ವ್ಯಕ್ತಿಯ ಬದುಕು ಹಾಳಾಗಲಿದ್ದು, ಇದನ್ನು ತ್ಯಜಿಸುವ ಆತ್ಮ ನಿಮ್ಮದಾಗಲಿ. ನಿಮ್ಮ ಮನಃಪರಿವರ್ತನೆ ಮಾಡಿದ ಕುಮಾರ್‌ ನಮ್ಮಂತ ನೂರು ಸ್ವಾಮೀಜಿಗಳಿಗೆ ಸಮ. ಅವರ ಶ್ರಮಕ್ಕೆ ನೀವೆಲ್ಲ ಗೌರವ ತರುವಂತೆ ಬಾಳಬೇಕು ಎಂದರು.

ಮಧುಗಿರಿ ವಿಕಾಸ ಸಮಿತಿ ಅಧ್ಯಕ್ಷ ಭೀಮನ ಕುಂಟೆ ಹನುಮಂತೇಗೌಡ ಮಾತನಾಡಿ, ಧರ್ಮ ಸ್ಥಳ ಸಂಘದ ಪ್ರತಿ ಕೆಲಸದಲ್ಲಿ ಭಗವಂತನಿದ್ದು, ಸರ್ಕಾರದಂತೆ ಕೆಲಸ ಮಾಡುತ್ತಿದೆ. ಲಕ್ಷಾಂತರ ಕುಟುಂಬಕ್ಕೆ ನೆರವಾದ ಇಂತಹ ಶಿಬಿರಗಳು ಯಶಸ್ವಿಯಾಗಲಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಪುರಸಭೆ ಸದಸ್ಯ ಲಾಲಪೇಟೆ ಮಂಜುನಾಥ್‌ ಮಾತನಾಡಿ, ಇಂದಿನಿಂದ ನಿಮಗೆಲ್ಲ ಹೊಸ ಬದುಕು ಸಿಕ್ಕಿದ್ದು, ಮತ್ತೆ ತಪ್ಪಾಗದಂತೆ ನಡೆದುಕೊಳ್ಳಿ. 100 ದಿನಗಳ ನಂತರ ಕ್ಷೇತ್ರಕ್ಕೆ ಬಂದು ಪೂಜ್ಯರ ಹಾಗೂ ಶ್ರೀ ಮಂಜುನಾಥನ ದರ್ಶನ ಮಾಡಬೇಕು. ನಿಮ್ಮ ಬದುಕಿಗೆ ನೆರವಾಗಲು ಪೂಜ್ಯರು ಈ ಶಿಬಿರವನ್ನು ಕಲ್ಪಿಸಿಕೊಟ್ಟಿದ್ದು. ಅವರಿಗೆ ಹಾಗೂ ಸಹಕಾರ ನೀಡಿದ ಎಲ್ಲರಿಗೂ ಗೌರವ ತರುವಂತೆ ನಡೆದುಕೊಳ್ಳಿ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಯೋಜನೆಯ ಜಿಲ್ಲಾ ನಿರ್ದೇಶಕ ದಿನೇಶ್‌, ಡಿಸಿಸಿ ಬ್ಯಾಂಕ್‌ ನಿರ್ದೇಶಕ ನಾಗೇಶ್‌ ಬಾಬು, ಶಿಬಿರದ ತರಬೇತುದಾರ ಕುಮಾರ್‌, ಗಣೇಶ್‌ ಆಚಾರ್ಯ ಮಾತನಾಡಿದರು. ಮುಖಂಡರಾದ ತುಂಗೋಟಿ ರಾಮಣ್ಣ, ಎಂ.ಜಿ.ಶ್ರೀನಿವಾಸಮೂರ್ತಿ, ಜನಜಾಗೃತಿ ವೇದಿಕೆ ಸದಸ್ಯರಾದ ಮಂಜುನಾಥ್‌, ಸಂಜೀವಗೌಡ, ಕಸಾಪ ಅಧ್ಯಕ್ಷೆ ಸಹನಾ, ತಾಲೂಕು ಯೋಜನಾಧಿಕಾರಿ ದಿನೇಶ್‌ ಕುಮಾರ್‌, ಮ್ಯಾನೇಜರ್‌ ಗಂಗಾಧರ್‌, ಕೃಷಿ ಮೇಲ್ವಿಚಾರಕ ಭಾನುಪ್ರಕಾಶ್‌, ವಲಯ ಮೇಲ್ವಿಚಾರಕಿ ಅನಿತಾ, ಸೇವಾ ಪ್ರತಿನಿಧಿಗಳು ಹಾಗೂ ವ್ಯಸನ ಮುಕ್ತರ ಕುಟುಂಬದವರು ಭಾಗವಹಿಸಿದ್ದರು.

ಒಂದೇ ಕುಟುಂಬದ 11 ಮಂದಿ ಭಾಗಿ : ಶಿಬಿರದಲ್ಲಿ 74 ಮಂದಿ ಮದ್ಯಮುಕ್ತರಾಗಿದ್ದು, 1 ಸರ್ಕಾರಿ ನೌಕರರು ಇದ್ದರು. 21ನೇ ವಯಸ್ಸಿನಿಂದ 63 ವರ್ಷದ ವ್ಯಕ್ತಿಗಳು, ಒಂದೇ ಕುಟುಂಬದ 11 ಮಂದಿ ಭಾಗವಹಿಸಿದ್ದು ಮದ್ಯ ವ್ಯಸನ ತ್ಯಜಿಸಿದ್ದು, ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. ವ್ಯಸನಿಗಳ ಪರವಾಗಿ ಮಾತನಾಡಿದ ಹನುಮಂತರಾಜ್‌, ಹಿಂದಿನ ಜನ್ಮ ಕಳೆದು ಈಗ ಮರುಜನ್ಮ ಪಡೆದಿದ್ದೇವೆ. ಇದಕ್ಕಾಗಿ ಪೂಜ್ಯರಿಗೆ ವಂದನೆಗಳು ಎಂದರು.

ಮೊದಲ ಬಾರಿ ಎಚ್‌.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಸಾರಾಯಿ, ಲಾಟರಿ, ಜೂಜು ನಿಷೇಧ ಮಾಡಿದ್ದರು. ಎರಡನೇ ಬಾರಿ ಸಿಎಂ ಆದಾಗ ಆ ದಂಧೆಯ ಜನರೆಲ್ಲ ಸೇರಿ ಸಮ್ಮಿಶ್ರ ಸರ್ಕಾರವನ್ನು ಬೀಳಿಸಿದರು. ಎಂ.ವಿ.ವೀರಭದ್ರಯ್ಯ, ಶಾಸಕ

ಟಾಪ್ ನ್ಯೂಸ್

Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು

Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು

KKRvsPBKS; Gautam Gambhir’s Heated Argument With Official

IPL 2024; ಪಂಜಾಬ್ ವಿರುದ್ಧ ಸೋಲು; ಅಂಪೈರ್ ಜತೆ ವಾಗ್ವಾದಕ್ಕಿಳಿದ ಗೌತಮ್ ಗಂಭೀರ್

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Suvendu Adhikari

W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ

10-muddebihala

Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ

ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್‌ ಘೋಷಣೆ ಬರೆದ ವಿದ್ಯಾರ್ಥಿ ಪಾಸ್:‌ ಪ್ರಾಧ್ಯಾಪಕ ಅಮಾನತು!

ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್‌ ಘೋಷಣೆ ಬರೆದ ವಿದ್ಯಾರ್ಥಿ ಪಾಸ್:‌ ಪ್ರಾಧ್ಯಾಪಕ ಅಮಾನತು!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

1-qwewqe

Kunigal: ಸಶಸ್ತ್ರಪಡೆಯ ಪೊಲೀಸ್ ಪೇದೆಯ ಕೊಲೆಗೆ ಯತ್ನ!

11-politics

Lok Sabha Election 2024: ಕಲ್ಪತರು ನಾಡಿನಲ್ಲಿ ಬಿಜೆಪಿ-ಕಾಂಗ್ರೆಸ್‌ ಜಿದ್ದಾಜಿದ್ದಿ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು

Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು

Sindhanur; ಹಾಸ್ಟೆಲ್ ವಿದ್ಯಾರ್ಥಿನಿಯರು ಅಸ್ವಸ್ಥ: ಆಸ್ಪತ್ರೆಗೆ ದಾಖಲು

Sindhanur; ಹಾಸ್ಟೆಲ್ ವಿದ್ಯಾರ್ಥಿನಿಯರು ಅಸ್ವಸ್ಥ: ಆಸ್ಪತ್ರೆಗೆ ದಾಖಲು

KKRvsPBKS; Gautam Gambhir’s Heated Argument With Official

IPL 2024; ಪಂಜಾಬ್ ವಿರುದ್ಧ ಸೋಲು; ಅಂಪೈರ್ ಜತೆ ವಾಗ್ವಾದಕ್ಕಿಳಿದ ಗೌತಮ್ ಗಂಭೀರ್

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.