ಮಲ್ಲೇಕಾವು ಅಂಚೆ ಇಲಾಖೆಯ ತುರ್ತುಸೇವೆ ಸ್ಥಗಿತ: ಕಚೇರಿಯಲ್ಲೇ ಉಳಿದ ದಾಖಲೆಗಳು, ಜನರ ಪರದಾಟ

ಅಂಚೆ ಪಾಲಕ 45 ದಿನಗಳಿಂದ ಕರ್ತವ್ಯಕ್ಕೆ ಗೈರು..

Team Udayavani, Jan 15, 2023, 5:22 PM IST

ಮಲ್ಲೇಕಾವು ಅಂಚೆ ಇಲಾಖೆಯು ತುರ್ತುಸೇವೆ ಸ್ಥಗಿತ: ತುರ್ತುಸೇವೆ ಇಲ್ಲದೇ ಗ್ರಾಮೀಣ ಜನರ ಪರದಾಟ

ಕೊರಟಗೆರೆ : ನಿಮ್ಮ ಆಧಾರ್ ಕಾರ್ಡು ಮನೆಗೆ ಇನ್ನೂ ಬಂದಿಲ್ವಾ.. ಬ್ಯಾಂಕು ಚೆಕ್ ಬುಕ್ ನಿಮ್ಮ ಕೈಗೆ ಇನ್ನೂ ಸೇರಿಲ್ವಾ.. ರಿಜಿಸ್ಟರ್ ಪೋಸ್ಟ್-ಸ್ಪೀಡ್ ಪೋಸ್ಟ್ ಮನೆಗೆ ಬರ್ತಾ ಇಲ್ವಾ.. ಕೆಲಸದ ಆಹ್ವಾನದ ತುರ್ತುಕರೆ ನಿಮಗೇ ಬರೋದೇ ಇಲ್ಲ ಬಿಡಿ.. ಯಾಕೆ ಗೋತ್ತಾ ಮಲ್ಲೇಕಾವು ಅಂಚೆ ಕಚೇರಿಯ ಅಂಚೆ ಪಾಲಕ ಕಳೆದ 45 ದಿನಗಳಿಂದ ಕಚೇರಿಗೆ ಬಂದೇ ಇಲ್ವಂತೆ..!!

ಕೊರಟಗೆರೆ ತಾಲೂಕು ಚನ್ನರಾಯನದುರ್ಗ ಹೋಬಳಿ ಸಿದ್ದರಬೆಟ್ಟ ಗ್ರಾಪಂ ವ್ಯಾಪ್ತಿಯ ಮಲ್ಲೇಕಾವು ಗ್ರಾಮದ ಅಂಚೆ ಕಚೇರಿಯ ಅಂಚೆ ಪಾಲಕ ನಾಗೇಂದ್ರ ಎಂಬಾತ ಕಳೆದ ೪೫ ದಿನಗಳಿಂದ ಕತ್ಯವ್ಯಕ್ಕೆ ಗೈರುಹಾಜರಿ. ಹತ್ತಾರು ಗ್ರಾಮಗಳಿಗೆ ತುರ್ತುಸೇವೆ ನೀಡಬೇಕಾದ ಅಂಚೆ ಪಾಲಕ ನಾಗೇಂದ್ರ ಕರ್ತವ್ಯಕ್ಕೆ ಗೈರಾಗಿ ನೂರಾರು ಸಮಸ್ಯೆಗಳು ಸೃಷ್ಟಿಯಾಗಿವೆ.

ಬ್ಯಾಂಕು ಚೆಕ್, ಆಧಾರ್ ಕಾರ್ಡು, ಕೋರ್ಟ್ ನೊಟೀಸ್, ಎಟಿಎಂ ಕಾರ್ಡು, ರೇಷನ್‌ಕಾರ್ಡು, ಎಲ್‌ಐಸಿ ಬಾಂಡ್, ರಿಜೀಸ್ಟರ್ ಪೊಸ್ಟ್, ಸ್ಪೀಡ್ ಪೋಸ್ಟ್, ಜಾಬ್ ನೊಟೀಸ್, ಕೂರೀಯರ್, ಪಾರ್ಸಲ್‌ಗಳು ಹತ್ತಾರು ಗ್ರಾಮದ ನೂರಾರು ಜನ ಗ್ರಾಹಕರ ಕೈಸೇರದೇ ಕಳೆದ ೪೫ ದಿನಗಳಿಂದ ಮಲ್ಲೇಕಾವು ಅಂಚೆ ಕಚೇರಿಯಲ್ಲಿ ಧೂಳು ಹಿಡಿಯುತ್ತೀದ್ದು ಕರ್ತವ್ಯಲೋಪ ಪ್ರಶ್ನಿಸುವ ಅಂಚೆ ನಿರೀಕ್ಷಕರು ನಿರ್ಲಕ್ಷ ವಹಿಸಿದ್ದಾರೆ.

ಅಂಚೆ ಪಾಲಕ ಕಚೇರಿಗೆ ಬರೋದೆ ಇಲ್ವಂತೆ..
ಮಲ್ಲೇಕಾವು ಅಂಚೆ ಇಲಾಖೆಯ ಅಂಚೆ ಪಾಲಕನ ತಂದೆಯ ಕೆಲಸವನ್ನು ಮಗ ನಾಗೇಂದ್ರನಿಗೆ ನೀಡಲಾಗಿದೆ. ನಾಗೇಂದ್ರ ತನ್ನ ಕೆಲಸವನ್ನೇ ಮರೆತು ಸಂಬಳ ಪಡೆಯುವುದಕ್ಕೇ ಮಾತ್ರ ಸೀಮಿತ ಆಗಿದ್ದಾರೆ. ಅಂಚೆ ಇಲಾಖೆಯ ದಾಖಲೆಗಳು ತನ್ನ ಮನೆಯಲ್ಲಿಯೇ ಶೇಖರಣೆ ಮಾಡಿ ಕೊಂಡಿರುವ ಆರೋಪವು ಸಹ ಇದೆ. ೩೦ದಿನದ ಹಿಂದೆಯೇ ತನಿಖೆ ನಡೆಸಿರುವ ಅಂಚೆ ನಿರೀಕ್ಷಕ ಕ್ರಮ ಕೈಗೊಳ್ಳುವಲ್ಲಿ ವಿಫಲವಾದ ಪರಿಣಾಮ ಸಮಸ್ಯೆಯು ದ್ವಿಗುಣವಾಗಿದೆ.

ಮಲ್ಲೇಕಾವು ಅಂಚೆ ಉಪಕಚೇರಿಯ ಚನ್ನರಾಯನದುರ್ಗ, ಬೇಂಡೋಣಿ, ಮಲ್ಲೇಕಾವು, ಗೌರಿಗಲ್ಲು, ದೊಗ್ಗನಹಳ್ಳಿ, ಹಂಚಿಮಾರನಹಳ್ಳಿ ಸೇರಿದಂತೆ ಹತ್ತಾರು ಗ್ರಾಮಗಳಿಗೆ ತುರ್ತುಸೇವೆ ನೀಡಬೇಕಾದ ಇಲಾಖೆಯು ಮೌನಕ್ಕೆ ಶರಣಾಗಿದೆ. ಅಂಚೆ ಆಯುಕ್ತರು ಮತ್ತು ಜಿಲ್ಲಾ ಅಧಿಕ್ಷಕರು ಕೊರಟಗೆರೆ ಅಂಚೆ ನಿರೀಕ್ಷಕ ಹರ್ಷ ಮತ್ತು ಮಲ್ಲೇಕಾವು ಅಂಚೆ ಪಾಲಕ ನಾಗೇಂದ್ರ ಮೇಲೆ ಕರ್ತವ್ಯಲೋಪದ ಅಡಿಯಲ್ಲಿ ತುರ್ತು ಕ್ರಮ ಕೈಗೊಳ್ಳಬೇಕಿದೆ.

ಅಂಚೆ ನಿರೀಕ್ಷಕನ ದಿವ್ಯ ನಿರ್ಲಕ್ಷ..

ಕೊರಟಗೆರೆಯ ೧೬ಅಂಚೆ ಉಪಕಚೇರಿಗಳಿಗೆ ಹರ್ಷ ಎಂಬುವರೇ ಅಂಚೆ ನಿರೀಕ್ಷಕ. ತುಮಕೂರು ನಗರಕ್ಕೆ ಮಾತ್ರ ಸೀಮಿತವಾಗಿದ್ದು ಕೊರಟಗೆರೆಗೆ ಸದಾ ಗೈರು. ಇವರು ಕೊರಟಗೆರೆಗೆ ಬರೋದು ಯಾರಿಗೂ ಗೊತ್ತಾಗಲ್ಲ-ಮತ್ತೇ ಹೋಗುವ ದಿನಚರಿಯೇ ತಿಳಿಯೊಲ್ಲ. ಮಲ್ಲೇಕಾವು ಕಚೇರಿಗೆ ೩೦ದಿನದ ಹಿಂದೆಯಷ್ಟೆ ಬೇಟಿನೀಡಿ ಹತ್ತಾರು ಸಮಸ್ಯೆಯನ್ನು ಕಣ್ಣಾರೇ ಕಂಡ್ರು ಕ್ರಮ ಕೈಗೊಳ್ಳುವಲ್ಲಿ ವಿಫಲ. ಅಂಚೆ ಇಲಾಖೆಯು ಇವರ ಮೇಲೆ ಮೊದಲು ಶಿಸ್ತು ಕ್ರಮ ಜರುಗಿಸಬೇಕಿದೆ.

ಅಂಚೆ ಇಲಾಖೆ ಮೂಲಕ ಜನರಿಗೆ ತಲುಪುವ ಯಾವುದೇ ದಾಖಲೆ ನಿಗಧಿತ ಸಮಯಕ್ಕೆ ಸಿಗುತ್ತಿಲ್ಲ. ಅಂಚೆ ಪಾಲಕ ಕಳೆದ ೪೫ದಿನಗಳಿಂದ ಗೈರು ಹಾಜರಾಗಿ ಸಮಸ್ಯೆ ಸೃಷ್ಟಿಯಾಗಿದೆ. ನೂರಾರು ಜನರ ದಾಖಲೆಗಳು ಅಂಚೆ ಇಲಾಖೆಯಲ್ಲಿ ಕೊಳೆಯುತ್ತೀವೆ. ಕೊರಟಗೆರೆಯ ಅಂಚೆ ನಿರೀಕ್ಷಕರಿಗೆ ಸ್ಥಳೀಯರು ದೂರು ನೀಡಿದ್ರು ಪ್ರಯೋಜನ ಆಗಿಲ್ಲ.
– ರಾಘವೇಂದ್ರ. ಸ್ಥಳೀಯ ನಿವಾಸಿ. ಸಿ.ಎನ್.ದುರ್ಗ

ಮಲ್ಲೇಕಾವು ಅಂಚೆ ಪಾಲಕ ಗೈರು ಹಾಜರಿಯ ಬಗ್ಗೆ ಈಗಾಗಲೇ ತನಿಖೆ ನಡೆದಿದೆ. ಅಂಚೆ ಪಾಲಕ ನಾಗೇಂದ್ರಗೆ ಕಾರಣ ಕೇಳಿ ಶೋಕಾಸ್ ನೊಟೀಸ್ ಜಾರಿ ಮಾಡಲಾಗಿದೆ. ತನಿಖೆಯಲ್ಲಿ ಲೋಪ ದೋಷ ಕಂಡು ಬಂದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ. ತುರ್ತುಸೇವೆಗೆ ಸಮಸ್ಯೆ ಆಗದಂತೆ ಕ್ರಮಕ್ಕೆ ಈಗಾಗಲೇ ಅಂಚೆ ನಿರೀಕ್ಷಕರಿಗೆ ಸೂಚಿಸಿದ್ದೇನೆ.
– ಗೋವಿಂದರಾಜು. ಅಧೀಕ್ಷಕ. ಅಂಚೆ ಇಲಾಖೆ. ತುಮಕೂರು

ಇದನ್ನೂ ಓದಿ: ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂಸದೆ ಸುಪ್ರಿಯಾ ಸುಳೆ ಸೀರೆಗೆ ಬೆಂಕಿ

ಟಾಪ್ ನ್ಯೂಸ್

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು

ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.