ಜಿಲ್ಲಾಡಳಿತ ನಿಮ್ಮೊಂದಿಗೆ ಇದೆ: ನೆರೆ ಸಂತ್ರಸ್ತರಿಗೆ ಉಡುಪಿ ಡಿಸಿಗಳ ಭರವಸೆ

ಜಿಲ್ಲಾ ಮಟ್ಟದ 73ನೇ ಸ್ವಾತಂತ್ರ್ಯ ದಿನಾಚರಣೆ; ಉಡುಪಿ ಜಿಲ್ಲೆಗೆ 5 ಕೋ.ರೂ. ಬಿಡುಗಡೆ

Team Udayavani, Aug 16, 2019, 5:35 AM IST

ಉಡುಪಿ: ಜಿಲ್ಲೆಗೆ ಮಳೆಹಾನಿ ಪರಿಹಾರ ವಿತರಿಸಲು 5 ಕೋ.ರೂ. ಅನುದಾನ ಬಿಡುಗಡೆಯಾಗಿದೆ ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದರು.

ಗುರುವಾರ ಬೀಡಿನಗುಡ್ಡೆ ಬಯಲು ರಂಗ ಮಂದಿರದಲ್ಲಿ ಧ್ವಜಾರೋಹಣ ಗೈದು ಸ್ವಾತಂತ್ರ್ಯ ಸಂದೇಶ ನೀಡಿದರು. ಪ್ರಾಕೃತಿಕ ವಿಕೋಪದಿಂದ ಮೃತಪಟ್ಟವರ ಕುಟುಂಬದ ಸದಸ್ಯರಿಗೆ 4 ಲ.ರೂ. ಪರಿಹಾರ ಜತೆಗೆ ಹೆಚ್ಚುವರಿಯಾಗಿ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 1.ಲ.ರೂ. ನೀಡಲಾಗುತ್ತದೆ ಎಂದರು.

57 ಲ.ರೂ. ಪಾವತಿ
ಮಳೆಯಿಂದಾಗಿ ಜಿಲ್ಲೆಯಲ್ಲಿ ಮೂರು ಜನರು ಮೃತಪಟ್ಟಿದ್ದಾರೆ. ಮೃತರ ಕುಟುಂಬ ಸದಸ್ಯರಿಗೆ ತಲಾ 5 ಲ.ರೂ.ಗಳಂತೆ 15ಲ.ರೂ., ಜಾನುವಾರು ಜೀವ ಹಾನಿ 81,000 ರೂ., ಮನೆ ಹಾನಿ ಮೊತ್ತ 39.39 ಲ.ರೂ., ಕೃಷಿ ಹಾಗೂ ತೋಟಗಾರಿಕೆ ಬೆಳೆ ಹಾನಿ 1.80 ಲ.ರೂ., ಸೇರಿದಂತೆ ಒಟ್ಟು ಇಲ್ಲಿಯವರೆಗೆ 57 ಲ.ರೂ ಪರಿಹಾರ ಧನ ಸಂತ್ರಸ್ತರಿಗೆ ಪಾವತಿಸಲಾಗಿದೆ ಎಂದರು.

ಕೆರೆಕುಂಟೆಗಳ ಪುನಶ್ಚೇತನ
ಮುಂದಿನ ದಿನದಲ್ಲಿ ನೀರಿನ ಸಮಸ್ಯೆ ಮರುಕಳಿಸದಂತೆ ಎಚ್ಚರವಹಿಸಲಾಗಿದೆ. ಈ ನಿಟ್ಟಿನಲ್ಲಿ ಸ್ಥಳೀಯಾಡಳಿತ ಮಳೆ ನೀರು ಸಂಗ್ರಹಣೆ, ಕೆರೆಕುಂಟೆಗಳ ಪುನಶ್ಚೇತನಕ್ಕೆ ಮುಂದಾಗಿದೆ ಎಂದರು.

ಚಳವಳಿಯಲ್ಲಿ ಮಹಿಳೆಯ ಪಾತ್ರ
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಲಿಂಗಭೇದವಿಲ್ಲದೆ ಭಾಗವಹಿಸಿದ್ದಾರೆ. ಕರಾವಳಿಭಾಗದ ಕಮಲಾದೇವಿ ಚಟ್ಟೋಪಾಧ್ಯಾಯ, ಕುಂದಾಪುರದ ಉಮಾಬಾಯಿ, ಕೃಷ್ಣಾಬಾಯಿ ಪಂಜೇಕರ್‌, ಯಶೋಧರ ದಾಸಪ್ಪ, ತಾಯಮ್ಮ ವೀರಣ್ಣ ಗೌಡ, ಮಹದೇವಿ ತಾಯಿ ದೊಡ್ಡಮನೆ, ಬಳ್ಳಾರಿ ಸಿದ್ದಮ್ಮ, ಗೌರಮ್ಮ ವೆಂಕಟರಾಮಯ್ಯ, ಲೀಲಾವತಿ ಮಾಗಡಿ ಸೇರಿದಂತೆ ಇತರೆ ಮಹಿಳೆಯರು ಭಾಗವಹಿಸಿದ್ದಾರೆ ಎಂದು ಸ್ಮರಿಸಿದರು.

ಡಾ| ಶಿವರಾಮ ಕಾರಂತ ಅಂತಹ ಸಾಹಿತಿಗಳು ಸ್ವಾತಂತ್ರ್ಯ ಹೋರಾಟಕ್ಕೆ ನೀಡಿದ ಕೊಡುಗೆ ಸ್ಮರಣೀಯ. ಡಾ| ಟಿ.ಎಂ.ಎ. ಪೈ ಅವರು ಸಾರ್ವಜನಿಕರಿಗಾಗಿ ಸ್ಥಾಪಿಸಿದ ಕಾಲೇಜಿಗೆ ಮಹಾತ್ಮಾ ಗಾಂಧೀ ಅವರ ಹೆಸರು, ಮಣಿಪಾಲದ ಮೆಡಿಕಲ್‌ ಕಾಲೇಜಿಗೆ ಕಸ್ತೂರ್ಬಾ ಹೆಸರನ್ನು ನೀಡಿರುವುದು ಪ್ರಶಂಸನೀಯ ಎಂದು ಹರ್ಷ ವ್ಯಕ್ತಪಡಿಸಿದರು.
ಶಾಸಕ ಕೆ. ರಘುಪತಿ ಭಟ್‌, ಜಿ.ಪಂ. ಅಧ್ಯಕ್ಷ ದಿನಕರ ಬಾಬು, ತಾ.ಪಂ. ಅಧ್ಯಕ್ಷೆ ನೀತಾ ಗುರುರಾಜ್‌, ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ, ಜಿ.ಪಂ. ಸಿಇಒ ಸಿಂಧೂ ರೂಪೇಶ್‌, ಎಸ್‌ಪಿ ನಿಶಾ ಜೇಮ್ಸ್‌, ಎಎಸ್‌ಪಿ ಕುಮಾರ್‌ಚಂದ್ರ, ಪೌರಾಯುಕ್ತ ಆನಂದ ಕಲ್ಲೋಳಿಕರ್‌ ಉಪಸ್ಥಿತರಿದ್ದರು. ಕುದಿ ವಸಂತ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

ಸ್ಥಳೀಯತೆಗೆ ಮಹತ್ವ
ಜಿಲ್ಲಾಧಿಕಾರಿ ಅವರು ಉಡುಪಿ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರು, ಜಿಲ್ಲೆಯಲ್ಲಿ ನಡೆದ ಸ್ವಾತಂತ್ರ್ಯ ಹೋರಾಟದ ವಿವರ ಹಾಗೂ ಜಿಲ್ಲೆಯ ವಿಶೇಷತೆಯನ್ನು ಸ್ವಾತಂತ್ರ್ಯ ಸಂದೇಶದಲ್ಲಿ ನೀಡಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಹೆಬ್ರಿ: ಶ್ರಾವಣ ಹಬ್ಬಗಳು ಶುರುವಾಗುವ ಮಾಸ. ಈ ಮಾಸದಲ್ಲಿ ಸಾಂಪ್ರದಾಯಿಕ ಆಚರಣೆಗಳೊಂದಿಗೆ, ಮಹಿಳೆಯರಿಗೆ ವಿಶೇಷವಾದ ವರ ಮಹಾಲಕ್ಷ್ಮೀ ಪೂಜೆ, ಚೂಡಿಪೂಜೆಗಳು ನಡೆಯುತ್ತವೆ....

  • ಶ್ರೀಕೃಷ್ಣ ಜನ್ಮಾಷ್ಟಮಿಗೆ ಇನ್ನೇನು ಕೆಲವೇ ದಿನಗಳು! ಮಳೆಯ ದೇವತೆ ಇಂದ್ರ  ಮುನಿಸಿಕೊಂಡಿದ್ದಾನೆ. ನದಿಗಳು ಉನ್ಮಾದದಿಂದ ದಡ ಮೀರಿ ಹರಿದು ಜನರನ್ನು ಕಂಗೆಡಿಸಿವೆ....

  • ಬೆಂಗಳೂರು/ವಿಜಯಪುರ: ಪ್ರವಾಹ ಪೀಡಿತ ಪ್ರದೇಶದ ಎಲ್ಲ ಗ್ರಾಮಗಳಲ್ಲಿ ಮುಂದಿನ ಒಂದು ವರ್ಷದವರೆಗೆ ತಾತ್ಕಾಲಿಕ ಇಂದಿರಾ ಕ್ಯಾಂಟೀನ್‌ ಮಾದರಿಯಲ್ಲಿ ರಿಯಾಯಿತಿ ದರದಲ್ಲಿ...

  • ಮಲಗಿದ ಮಂಚದ ಮೇಲಿನಿಂದ ಕೆಳಗೆ ಎಳೆದು ಹಾಕಿದಂತಾಗಿ ಕೂಸಜ್ಜಿ ಎದ್ದು ಕುಳಿತಳು. ಕವಿದ ಕತ್ತಲಲ್ಲಿ ಮಗ ಅಸ್ಪಷ್ಟವಾಗಿ ಕಂಡುಬಂದು ತನ್ನ ಕಿವಿಗೆ ಬಾಯಿ ಇಟ್ಟವನಂತೆ...

  • ಶ್ರೀನಗರ: ಕಾಶ್ಮೀರಕ್ಕೆ ನೀಡಲಾ ಗಿದ್ದ ವಿಶೇಷ ಸ್ಥಾನಮಾನ ರದ್ದು ನಿರ್ಧಾ ರದ ಹಿನ್ನೆಲೆ ಯಲ್ಲಿ 12 ದಿನಗಳಿಂದ ಸ್ಥಗಿತ ವಾಗಿದ್ದ ಜಮ್ಮು ಮತ್ತು ಕಾಶ್ಮೀರದಲ್ಲಿ...

  • ಹೊಸದಿಲ್ಲಿ: ದೇಶದಲ್ಲಿ ಸಂಚರಿಸುವ ಎಲ್ಲ ವೇಗದ ಎಕ್ಸ್‌ ಪ್ರಸ್‌ ರೈಲುಗಳನ್ನು 2022ರೊಳಗೆ ವಿದ್ಯುತ್‌ ಚಾಲಿತ ರೈಲುಗಳನ್ನಾಗಿ ಪರಿವರ್ತಿಸುವ ಗುರಿ ಹೊಂದಿರುವುದಾಗಿ...