3 ತಿಂಗಳುಗಳಿಂದ ಕತ್ತಲಲ್ಲಿ ಮುಳುಗಿದ ಮಲ್ಪೆ ಬಾಪುತೋಟ ಬಂದರು ಪ್ರದೇಶ

ಉರಿಯದ ದೀಪಗಳು: ಕೋಟ್ಯಂತರ ರೂಪಾಯಿ ಮೌಲ್ಯದ ಬೋಟುಗಳು ಅಸುರಕ್ಷಿತ

Team Udayavani, Aug 28, 2021, 5:45 AM IST

3 ತಿಂಗಳುಗಳಿಂದ ಕತ್ತಲಲ್ಲಿ ಮುಳುಗಿದ ಮಲ್ಪೆ ಬಾಪುತೋಟ ಬಂದರು ಪ್ರದೇಶ

ಮೀನುಗಾರಿಕೆ ಇಲಾಖೆ ಬಂದರಿನ ಶುಚಿತ್ವ, ಬೀದಿ ದೀಪಗಳ ನಿರ್ವಹಣೆಯನ್ನು ಗುತ್ತಿಗೆದಾರ ಸಂಸ್ಥೆಗೆ ಟೆಂಡರ್‌ ನೀಡಲಾಗಿದೆ. ಬಂದರಿನ ನಿರ್ವಹಣೆಯ ಟೆಂಡರ್‌ ಪಡೆದ ಗುತ್ತಿಗೆದಾರರು ನಿಯಮಿತವಾಗಿ ಬೀದಿ ದೀಪವನ್ನು ಪರಿಶೀಲಿಸಿ ಸರಿಪಡಿಸಿಕೊಳ್ಳಬೇಕಾಗಿದೆ. ಆದರೆ ಇಲ್ಲಿ ಯಾವುದೇ ನಿರ್ವಹಣೆ ಕೆಲಸಗಳು ನಡೆಯುತ್ತಿಲ್ಲ ಎಂಬುದು ಮೀನುಗಾರರ ಆರೋಪ.

ಮಲ್ಪೆ: ಮಲ್ಪೆ ಮೀನುಗಾರಿಕೆ ಮೂರನೇ ಹಂತದ ಬಾಪುತೋಟದ ಭಾಗದ ಬಂದರಿನ ರಸ್ತೆ ಬದಿಯಲ್ಲಿ ಆಳವಡಿಸಲಾದ ದಾರಿದೀಪಗಳು ಕಳೆದ ಮೂರು ತಿಂಗಳುಗಳಿಂದ ಉರಿಯದ ಪರಿಣಾಮ ರಾತ್ರಿ ಹಾಗೂ ನಸುಕಿನ ವೇಳೆ ಮೀನುಗಾರಿಕೆ ಚಟುವಟಿಕೆಗಳನ್ನು ನಡೆಸಲು ಮೀನುಗಾರರು ತೊಂದರೆಯನ್ನು ಅನುಭವಿಸುವಂತಾಗಿದೆ.

ಬಂದರಿನ ಈ ಭಾಗದಲ್ಲಿ ಸುಮಾರು 400ಕ್ಕೂ ಅಧಿಕ ಬೋಟುಗಳನ್ನು ನಿಲ್ಲಿಸಲಾಗುತ್ತಿದ್ದು, ಕೋಟ್ಯಂತರ ರೂ. ಮೌಲ್ಯದ ಸೊತ್ತುಗಳಿವೆ. ಕತ್ತಲಾದ್ದರಿಂದ ಕಳ್ಳರಿಗೆ ಬೋಟಿನ ಬಿಡಿ ಭಾಗಗಳನ್ನು ಕದ್ದೊಯ್ಯುಲು ಅನುಕೂಲ ಮಾಡಿಕೊಟ್ಟಂತಾಗಿದೆ.

ಬಂದರಿನ ಸ್ಲಿಪ್‌ವೇಯಿಂದ ಪಡುಕರೆ ಸೇತುವೆ ಸಂಪರ್ಕದವರೆಗೆ ಸುಮಾರು 32 ಮೆಟಲ್‌ ಲೈಟ್‌, ಸ್ಲಿಪ್‌ವೇ ಬಳಿ ಒಂದು ಹೈಮಾಸ್ಟ್‌ ದೀಪವನ್ನು ಅಳವಡಿಸಲಾಗಿದೆ. ದೀಪಗಳು ಉರಿಯದ ಕಾರಣ ರಾತ್ರಿ ವೇಳೆ ಮೀನುಗಾರಿಕೆ ಬೋಟನ್ನು ದಕ್ಕೆಯಲ್ಲಿ ಲಂಗರು ಹಾಕಲು ಅಥವಾ ತೆರವು ಗೊಳಿಸಲು ಮೀನುಗಾರರಿಗೆ ತೊಂದರೆಯಾಗುತ್ತಿದೆ. ಮಾತ್ರವಲ್ಲದೆ ಕತ್ತಲಲ್ಲಿ ದಕ್ಕೆಯಲ್ಲಿ ನಡೆದಾಡುವುದು ಕಷ್ಟ. ಆಯ ತಪ್ಪಿದರೆ ಹೊಳೆಗೆ ಬೀಳುವ ಪರಿಸ್ಥಿತಿ, ವಾಹನ ಸವಾರರು ಅಪಾಯವನ್ನು ಎದುರಿಸುವಂತಾಗಿದೆ.

ಪಡುಕರೆಗೂ ಪ್ರಮುಖ ರಸ್ತೆ
ಪಡುಕರೆ ಭಾಗವನ್ನು ಸಂಪರ್ಕಿಸುವ ಪ್ರಮುಖ ರಸ್ತೆಯೂ ಇದಾಗಿದ್ದು, ರಾತ್ರಿ ಮತ್ತು ನಸುಕಿನ ವೇಳೆ ಮೀನುಗಾರಿಕೆ ಕೆಲಸಕ್ಕೆ ಬರುವ ಮಹಿಳೆಯರು ಭಯದ ವಾತಾವರಣದಲ್ಲಿ ನಡೆದುಕೊಂಡು ಬರುವ ಪರಿಸ್ಥಿತಿ ಇದೆ. ಮಾತ್ರವಲ್ಲದೆ ವಾಹನ ಸವಾರರೂ ಇಲ್ಲಿ ತೀವ್ರ ತೊಂದರೆಯನ್ನು ಅನುಭವಿಸುವಂತಾಗಿದೆ. ಈ ಬಗ್ಗೆ ಗಮನಹರಿಸಿ ದಾರಿದೀಪದ ಸಮಸ್ಯೆಯನ್ನು ತತ್‌ಕ್ಷಣ ಬಗೆಹರಿಸುವಂತೆ ನಾಗರಿಕರು ಆಗ್ರಹಿಸಿದ್ದಾರೆ.

ಇದನ್ನೂ ಓದಿ:ನಡುರಸ್ತೆಯಲ್ಲಿ ದಂಡ ವಸೂಲಿ ಮಾಡುತ್ತಿದ್ದ ಪೊಲೀಸರಿಗೆ ಚಳಿ ಬಿಡಿಸಿದ ರಮೇಶ್ ಕುಮಾರ್

ಇತರ ಸಮಸ್ಯೆಗಳೇನು?
ರಸ್ತೆ ಉದ್ದಕ್ಕೂ ಬೆಳೆದು ನಿಂತ ಗಿಡಗಂಟಿಗಳು

3ನೇ ಹಂತದ ಬಂದರು ಪ್ರದೇಶದ ರಸ್ತೆ ಉದ್ದಕ್ಕೂ ಗಿಡಗಂಟಿಗಳು ಎತ್ತರಕ್ಕೆ ಬೆಳೆದು ನಿಂತಿದ್ದು, ಈ ರಸ್ತೆಯ ತಿರುವಿನಲ್ಲಿ ಸಂಚರಿಸುವ ವಾಹನಗಳಿಗೆ ಎದುರು ಬದಿಯಿಂದ ಬರುವ ವಾಹನಗಳು ಕಾಣದೆ ಅಪಘಾತಗಳು ಸಂಭವಿಸುತ್ತಿವೆ. ಮಲ್ಪೆ ಮುಖ್ಯ ವೃತ್ತದಿಂದ 3ನೇ ಹಂತದ ಬಂದರು ಮತ್ತು ಪಡುಕರೆ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದ್ದು, ಪ್ರತಿನಿತ್ಯ ಇಲ್ಲಿ ಮೀನುಗಾರಿಕೆ ಸಂಬಂಧಿಸಿದಂತೆ ಸಾವಿರಾರು ಜನ ಈ ರಸ್ತೆಯಲ್ಲಿ ಸಂಚರಿಸುತ್ತಾರೆ. ಇನ್ನು ರಾತ್ರಿ ವೇಳೆ ಈ ರಸ್ತೆಯಲ್ಲಿ ವಾಹನ ಚಲಾಯಿಸುವುದು ಇನ್ನೂ ದುಸ್ತರವಾಗಿದೆ.

ಸಮಸ್ಯೆ ಪರಿಹರಿಸಿ
ಪಡುಕರೆ ಭಾಗದಿಂದ ಮಲ್ಪೆಗೆ ಮೀನಿನ ಕೆಲಸಕ್ಕೆ ಪ್ರತಿನಿತ್ಯ ಸಾವಿರಾರು ಮಹಿಳೆಯರು ಮುಂಜಾನೆ 4ಗಂಟೆಗೆ ನಡೆದುಕೊಂಡು ಬರುತ್ತಾರೆ. ದಾರಿದೀಪ ಇಲ್ಲದ್ದರಿಂದ ಭಯದಿಂದಲೇ ನಡೆದಾಡುವಂತಾಗಿದೆ. ಬೋಟಿನಿಂದ ಮೀನು ಖಾಲಿ ಮಾಡಲು ಸಮಸ್ಯೆಯಾಗುತ್ತದೆ. ಸಂಬಂಧಪಟ್ಟವರು ತತ್‌ಕ್ಷಣ ಗಮನ ಹರಿಸಿ ಸಮಸ್ಯೆ ಪರಿಹರಿಸಬೇಕಾಗಿದೆ.
– ದಯಾಕರ ವಿ. ಸುವರ್ಣ, ಅಧ್ಯಕ್ಷರು, ಕನ್ನಿ ಮೀನುಗಾರರ ಸಂಘ, ಮಲ್ಪೆ

ಶೀಘ್ರ ಕ್ರಮ
ಬಂದರಿನ ನಿರ್ವಹಣೆಯನ್ನು ಖಾಸಗಿ ಸಂಸ್ಥೆಗೆ ಗುತ್ತಿಗೆ ನೀಡಲಾಗಿದೆ. ಶುಚಿತ್ವ, ದಾರಿದೀಪವನ್ನು ಆವರೇ ನಿರ್ವಹಿಸಬೇಕಾಗಿದೆ. ಈಗಾಗಲೇ ಉಂಟಾಗಿರುವ ಸಮಸ್ಯೆಯ ಬಗ್ಗೆ ಗುತ್ತಿಗೆದಾರರ ಗಮನಕ್ಕೆ ತಂದು ಆದಷ್ಟು ಬೇಗ ಸರಿಪಡಿಸುವಂತೆ ಸೂಚನೆ ನೀಡಲಾಗುವುದು.
– ಚಂದನ್‌, ಸಹಾಯಕ ನಿರ್ದೇಶಕರು, (ಪ್ರಭಾರ )ಮೀನುಗಾರಿಕೆ ಇಲಾಖೆ

-ನಟರಾಜ್‌ ಮಲ್ಪೆ

ಟಾಪ್ ನ್ಯೂಸ್

4bommai

ಸಿದ್ದೇಶ್ವರ ಶ್ರೀಗಳು ನಡೆದಾಡುವ ದೇವರು – ಬೊಮ್ಮಾಯಿ

ಭಾರತದಲ್ಲಿ 8,306 ಕೋವಿಡ್ ಪ್ರಕರಣ ಪತ್ತೆ, 552 ದಿನಗಳಲ್ಲಿ ಸಕ್ರಿಯ ಪ್ರಕರಣ ಭಾರೀ ಇಳಿಕೆ

ಭಾರತದಲ್ಲಿ 8,306 ಕೋವಿಡ್ ಪ್ರಕರಣ ಪತ್ತೆ, 552 ದಿನಗಳಲ್ಲಿ ಸಕ್ರಿಯ ಪ್ರಕರಣ ಭಾರೀ ಇಳಿಕೆ

ಜಯಂತ್ ದಾಳಿಗೆ ಆಟ ಮುಗಿಸಿದ ನ್ಯೂಜಿಲ್ಯಾಂಡ್: 1-0 ಅಂತರದಿಂದ ಸರಣಿ ಗೆದ್ದ ಟೀಂ ಇಂಡಿಯಾ

ಜಯಂತ್ ದಾಳಿಗೆ ಆಟ ಮುಗಿಸಿದ ನ್ಯೂಜಿಲ್ಯಾಂಡ್: 1-0 ಅಂತರದಿಂದ ಸರಣಿ ಗೆದ್ದ ಟೀಂ ಇಂಡಿಯಾ

ಚಿಕ್ಕಮಗಳೂರಿನ ಶಾಲೆಯಲ್ಲಿ ಹೆಚ್ಚಿದ ಕೋವಿಡ್ ಆತಂಕ: ನಾಲ್ಕೇ ದಿನದಲ್ಲಿ 107 ಪ್ರಕರಣಗಳು ಪತ್ತೆ!

ಚಿಕ್ಕಮಗಳೂರಿನ ಶಾಲೆಯಲ್ಲಿ ಹೆಚ್ಚಿದ ಕೋವಿಡ್ ಆತಂಕ: ನಾಲ್ಕೇ ದಿನದಲ್ಲಿ107 ಪ್ರಕರಣಗಳು ಪತ್ತೆ!

1cow

ವಾಹನಕ್ಕೆ ಹಗ್ಗ ಕಟ್ಟಿ ಮೃತ ಗೋವುಗಳ ಸಾಗಾಟ: ಆಕ್ರೋಶ

ಡಿಸೆಂಬರ್‌ 31ರ ಮೇಲೆ ಸಿನಿಮಂದಿ ಕಣ್ಣು: ಒಂದೇ ದಿನ 4 ಸಿನಿಮಾ

ಡಿಸೆಂಬರ್‌ 31ರ ಮೇಲೆ ಸಿನಿಮಂದಿ ಕಣ್ಣು: ಒಂದೇ ದಿನ 4 ಸಿನಿಮಾ

Jacqueline Fernandez

ವಂಚನೆ ಪ್ರಕರಣ: ಜಾಕ್ವೆಲಿನ್ ಫರ್ನಾಂಡಿಸ್ ಗೆ ದೇಶ ತೊರೆಯದಂತೆ ತಡೆದ ಅಧಿಕಾರಿಗಳು!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

“ಸುಭಿಕ್ಷೆಯ ನಾಡಿಗೆ ಧರ್ಮ, ರಾಜಕೀಯ ಅಗತ್ಯ’

“ಸುಭಿಕ್ಷೆಯ ನಾಡಿಗೆ ಧರ್ಮ, ರಾಜಕೀಯ ಅಗತ್ಯ’

ವಿದ್ಯಾಪೋಷಕ್‌ನಿಂದ 74.1 ಲಕ್ಷ ರೂ. ಸಹಾಯಧನ

ವಿದ್ಯಾಪೋಷಕ್‌ನಿಂದ 74.1 ಲಕ್ಷ ರೂ. ಸಹಾಯಧನ

ವಲಸೆ ಕಾರ್ಮಿಕರಿಗೆ ಯಶಸ್ವೀ ಲಸಿಕಾ ಅಭಿಯಾನ : ಜಿಲ್ಲಾಧಿಕಾರಿ

ವಲಸೆ ಕಾರ್ಮಿಕರಿಗೆ ಯಶಸ್ವೀ ಲಸಿಕಾ ಅಭಿಯಾನ : ಜಿಲ್ಲಾಧಿಕಾರಿ

12accident

ಸಾೖಬ್ರಕಟ್ಟೆ: ಸರಣಿ ಅಪಘಾತ; ಓರ್ವ ಸಾವು, ಇಬ್ಬರಿಗೆ ಗಾಯ

ಶಿಕ್ಷಣ ಸಂಸ್ಥೆಗಳಲ್ಲಿ ರ್‍ಯಾಂಡಮ್‌ ಟೆಸ್ಟ್‌ 

ಶಿಕ್ಷಣ ಸಂಸ್ಥೆಗಳಲ್ಲಿ ರ್‍ಯಾಂಡಮ್‌ ಟೆಸ್ಟ್‌ 

MUST WATCH

udayavani youtube

ಮಂಡ್ಯ ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಮೈತ್ರಿ ಇಲ್ಲ: ಬಿಎಸ್‌ವೈ

udayavani youtube

ನಾಗಾಲ್ಯಾಂಡ್ ನಲ್ಲಿ ನಾಗರಿಕರ ಮೇಲೆ ಗುಂಡಿನ ದಾಳಿ

udayavani youtube

ಕೌಟುಂಬಿಕ ಮೌಲ್ಯಗಳು ಕುಸಿಯಲು ಕಾರಣವೇನು ?

udayavani youtube

ಬೆಳ್ತಂಗಡಿ : ಅಂತೂ ಬಲೆಗೆ ಬಿತ್ತು ತೋಟದಲ್ಲಿ ಪ್ರತ್ಯಕ್ಷವಾದ ಮೊಸಳೆ

udayavani youtube

ಸಾಹೇಬ್ರಕಟ್ಟೆ ಬಳಿ ಸರಣಿ ಅಪಘಾತ; ಓರ್ವ ಸಾವು, ಇಬ್ಬರಿಗೆ ಗಾಯ

ಹೊಸ ಸೇರ್ಪಡೆ

4bommai

ಸಿದ್ದೇಶ್ವರ ಶ್ರೀಗಳು ನಡೆದಾಡುವ ದೇವರು – ಬೊಮ್ಮಾಯಿ

ಭಾರತದಲ್ಲಿ 8,306 ಕೋವಿಡ್ ಪ್ರಕರಣ ಪತ್ತೆ, 552 ದಿನಗಳಲ್ಲಿ ಸಕ್ರಿಯ ಪ್ರಕರಣ ಭಾರೀ ಇಳಿಕೆ

ಭಾರತದಲ್ಲಿ 8,306 ಕೋವಿಡ್ ಪ್ರಕರಣ ಪತ್ತೆ, 552 ದಿನಗಳಲ್ಲಿ ಸಕ್ರಿಯ ಪ್ರಕರಣ ಭಾರೀ ಇಳಿಕೆ

3patila

ಪಾಟೀಲ ಗೆಲ್ಲಿಸಿ ಪಕ್ಷ ಬಲಪಡಿಸಲು ಶ್ರಮಿಸಿ: ಸಿದ್ದಾಜಿ

ಜಯಂತ್ ದಾಳಿಗೆ ಆಟ ಮುಗಿಸಿದ ನ್ಯೂಜಿಲ್ಯಾಂಡ್: 1-0 ಅಂತರದಿಂದ ಸರಣಿ ಗೆದ್ದ ಟೀಂ ಇಂಡಿಯಾ

ಜಯಂತ್ ದಾಳಿಗೆ ಆಟ ಮುಗಿಸಿದ ನ್ಯೂಜಿಲ್ಯಾಂಡ್: 1-0 ಅಂತರದಿಂದ ಸರಣಿ ಗೆದ್ದ ಟೀಂ ಇಂಡಿಯಾ

2meet

ದನಗಳನ್ನು ಕದ್ದು ಮಾಂಸ ಮಾರುತ್ತಿದ್ದ ಇಬ್ಬರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.