ಬೇಳಂಜೆ: ಉಪಯೋಗಕ್ಕೆ ಬಾರದ ರಿಕ್ಷಾ ತಂಗುದಾಣ

Team Udayavani, May 17, 2019, 6:20 AM IST

ಹೆಬ್ರಿ: ಕುಚ್ಚಾರು ಗ್ರಾ.ಪಂ.ವ್ಯಾಪ್ತಿಯ ಬೇಳಂಜೆಯಲ್ಲಿ ತಾ.ಪಂ. ಅನುದಾನದಲ್ಲಿ 3 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾದ ರಿಕ್ಷಾ ತಂಗುದಾಣ ಉಪಯೋಗವಿಲ್ಲದಂತಾಗಿದೆ.

ಬೇಳಂಜೆ ಬಸ್ಸು ನಿಲ್ದಾಣದ ಸಮೀಪ ರಿಕ್ಷಾ ಸ್ಟಾಂಡ್‌ ಬೇಕೆನ್ನುವುದು ಇಲ್ಲಿನ ರಿಕ್ಷಾ ಚಾಲಕರ ಬೇಡಿಕೆಯಾಗಿತ್ತು. ಆದರೆ ನಿರ್ಮಾಣವಾದ ಸ್ಟಾಂಡ್‌ ಬಸ್ಸು ನಿಲ್ದಾಣಕ್ಕಿಂತ ಸ್ವಲ್ಪದೂರದಲ್ಲಿದೆ. ಈ ಕಾರಣ ರಿಕ್ಷಾದವರು ಹೋಗುತ್ತಿಲ್ಲ ಎನ್ನಲಾಗಿದೆ.

ಆರೋಪ
ಕಳೆದ 2 ವರ್ಷದ ಹಿಂದೆ ರಿಕ್ಷಾ ಸ್ಟಾÂಂಡ್‌ನ‌ ತಗಡಿನ ಮಾಡು ನಿರ್ಮಾಣ ಮಾಡಿದ್ದು ಕಳೆದ 3 ತಿಂಗಳ ಹಿಂದೆ ಇಂಟರ್‌ಲಾಕ್‌ ಅಳವಡಿಸಲಾಗಿದೆ.ಆದರೆ ಇನ್ನೂ ಕೂಡ ಇದರ ಉಪಯೋಗ ಮಾತ್ರ ಆಗಿಯೇ ಇಲ್ಲ. ಈ ಬಗ್ಗೆ ಗ್ರಾಮ ಸಭೆಯಲ್ಲಿ ಸಾರ್ವಜನಿಕರು ಪ್ರಶ್ನಿಸಿದ್ದು ರಿಕ್ಷಾ ಚಾಲಕರ ಸಭೆ ಕರೆದು ಸಮಸ್ಯೆ ಬಗೆಹರಿಸುವ ಬಗ್ಗೆ ಭರವಸೆ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಇತ್ಯರ್ಥಪಡಿಸುತ್ತೇವೆ
ಈ ಬಗ್ಗೆ ಈಗಾಗಲೇ ಪಂಚಾಯತ್‌ನಲ್ಲಿ ಚರ್ಚೆ ನಡೆಸಿದ್ದು ಶೀಘ್ರ ರಿಕ್ಷಾ ಚಾಲಕರ ಸಭೆ ಕರೆದು ನಿರ್ಮಾಣವಾದ ರಿಕ್ಷಾ ಸ್ಟಾಡ್‌ನ‌ಲ್ಲಿ ರಿಕ್ಷಾ ನಿಲ್ಲಿಸುವಂತೆ ಸೂಚಿಸಲಾಗುವುದು.
-ಆನಂದ ಕುಮಾರ್‌ ಬಿ.ಕೆ., ಪಿ.ಡಿ.ಒ. ಕುಚ್ಚಾರು ಗ್ರಾ.ಪಂ.

ನಮಗೆ ಅನುಕೂಲವಿಲ್ಲ
ಈಗ ನಿರ್ಮಾಣವಾದ ರಿಕ್ಷಾ ಸ್ಟಾ¤ಂಡ್‌ ಬಸ್ಸು ತಂಗುದಾಣದಿಂದ ದೂರವಿದ್ದು ಅಲ್ಲಿ ರಿಕ್ಷಾ ನಿಲ್ಲಿಸಿದರೆ ಜನ ಬರುವುದಿಲ್ಲ.ಈ ಬಗ್ಗೆ ಮುಂಚೆಯೇ ಪಂಚಾಯತ್‌ ಗಮನಕ್ಕೆ ತಂದಿದ್ದು ಬಸ್ಸುತಂಗುದಾಣ ಸಮೀಪ ಜಾಗ ಸಮತಟ್ಟು ಮಾಡಿದ್ದಾರೆ.ಆದರೆ ಬಳಿಕ ಬೇರೆ ಜಾಗದಲ್ಲಿ ನಿಲ್ದಾಣ ಮಾಡಿದ್ದಾರೆ. ಇದರಿಂದ ಅನುಕೂಲವಿಲ್ಲ.
-ಬಸವರಾಜ್‌, ರಿಕ್ಷಾ ಚಾಲಕರು


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಬ್ಯಾಡಗಿ: ವೀರಯೋಧ ಶಿವಲಿಂಗೇಶ ಪಾಟೀಲ ನಿಧನದ ಸುದ್ದಿ ಗುಂಡೇನಹಳ್ಳಿ ಗ್ರಾಮವೇ ಶೋಕ ಸಾಗರದಲ್ಲಿ ಮುಳುಗಿದ್ದು, ಇದೀಗ ಸ್ಮಶಾನ ಮೌನ ಆವರಿಸಿದೆ. ಯೋಧ ಶಿವಲಿಂಗೇಶ...

  • ಹಾವೇರಿ: ಮಳೆ ಆರಂಭಕ್ಕೂ ಮುನ್ನವೇ ಡೆಂಘೀ ಜ್ವರ ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳ ಕುರಿತಂತೆ ಆರೋಗ್ಯ, ಶಿಕ್ಷಣ, ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ...

  • ಸಕಲೇಶಪುರ: ತಾಲೂಕಿನಲ್ಲಿ ಅನುಷ್ಠಾನಗೊಳಿಸ ಲಾಗುತ್ತಿರುವ ಎತ್ತಿನಹೊಳೆ ಸಮಗ್ರ ನೀರಾವರಿ ಯೋಜನೆಯಿಂದ ಮಲೆನಾಡಿನ ಪರಿಸರ ಹದಗೆಡಲು ಕಾರಣವಾಗಿದೆ ಎಂಬ ಮಾತುಗಳು...

  • ಹಾಸನ: ನಗರದ ಎಪಿಎಂಸಿ ಪ್ರಾಂಗಣದಲ್ಲಿ ಬಿತ್ತನೆ ಆಲೂಗಡ್ಡೆ ವ್ಯಾಪಾರ ಆರಂಭವಾಗಿ ಎರಡು ವಾರ ಗಳಾಗುತ್ತಾ ಬಂದರೂ ಆಲೂಗಡ್ಡೆ ಖರೀದಿಗೆ ರೈತರಿಂದ ನೀರಸ ಪ್ರತಿಕ್ರಿಯೆ...

  • ನರೇಗಲ್ಲ: ಪಟ್ಟಣದ ಪೊಲೀಸ್‌ ಠಾಣೆಯಲ್ಲಿ ಸಂಚಾರಿ ಸುರಕ್ಷಾ ಸಪ್ತಾಹ ಅಡಿಯಲ್ಲಿ ರವಿವಾರ ವಿಶೇಷ ಕಾರ್ಯಾಚರಣೆ ನಡೆಸಿ ಆಟೋಗಳ ದಾಖಲೆಗಳನ್ನು ನರಗುಂದ ಡಿವೈಎಸ್‌ಪಿ...

  • ಗದಗ: ಸರಕಾರಿ ಶಾಲೆಗಳಿಗೆ ಮಕ್ಕಳನ್ನು ಸೆಳೆಯುವುದು, ಮೊದಲ ದಿನದಿಂದಲೇ ಮಕ್ಕಳು ಶಾಲೆಗೆ ಹಾಜರಾಗುವಂತೆ ಪ್ರೇರೇಪಿಸುವ ಉದ್ದೇಶದಿಂದ ಕೆಲ ವರ್ಷಗಳಿಂದ ಶಾಲಾ ಆರಂಭೋತ್ಸವ...