ಮಲ್ಪೆ ಮೀನುಗಾರಿಕಾ ಬಂದರು: ಮೂಲ ಸೌಕರ್ಯಗಳ ಅಭಿವೃದ್ಧಿಗೆ ಕಾಯಕಲ್ಪ


Team Udayavani, Nov 9, 2017, 9:00 AM IST

Malpe-1.jpg

ಮಲ್ಪೆ: ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಂದರು ಮತ್ತು ಮೀನುಗಾರಿಕಾ ಉಪ ವಿಭಾಗದ ಮುಖೇನ ಸುಮಾರು 20.25 ಕೋ. ರೂ. ವೆಚ್ಚದಲ್ಲಿ ಮಲ್ಪೆ ಮೀನುಗಾರಿಕಾ ಬಂದರುಗಳ ಮೂಲಭೂತ ಸೌಕರ್ಯಗಳು, ಮೀನುಗಾರಿಕಾ ಜೆಟ್ಟಿ ವಿಸ್ತರಣೆ, ನೂತನ ಜೆಟ್ಟಿ ನಿರ್ಮಾಣ, ಕಡಲ ತೀರ ಸಮುದ್ರಕೊರೆತಕ್ಕೆ ಶಾಶ್ವತ ತಡೆಗೊಡೆ ರಚನೆ ಮೊದಲಾದ ಅಭಿವೃದ್ಧಿ ಕಾಮಗಾರಿಗಳು ಅನುಷ್ಠಾನಗೊಳ್ಳುತ್ತಿವೆ. ಸಚಿವ ಪ್ರಮೋದ್‌ ಮಧ್ವರಾಜ್‌ ಅವರ ಶಿಫಾರಾಸಿನಲ್ಲಿ ಮೇರೆಗೆ ಅನುಷ್ಠಾನಗೊಂಡು ಈಗಾಗಲೇ ಪೂರ್ಣಗೊಂಡ ಕೆಲವು ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಭೂಮಿಪೂಜೆಯನ್ನು ನ. 9ರಂದು ಸಚಿವ ಪ್ರಮೋದ್‌ ಮಧ್ವರಾಜ್‌ ಅವರು ನೆರವೇರಿಸಲಿದ್ದಾರೆ.

ಕಲ್ಮಾಡಿ ಬಬ್ಬರ್ಯ ಪಾದೆ ಬಳಿ ಜೆಟ್ಟಿ
ಮೀನುಗಾರರ ಬೇಡಿಕೆಯಂತೆ ಬಂದರಿನಲ್ಲಿ ಬೋಟ್‌ಗಳನ್ನು ನಿಲ್ಲಿಸಲು ಉಂಟಾಗುತ್ತಿರುವ ಜಾಗದ ಕೊರತೆಯನ್ನು ನೀಗಿಸಲು ಕಲ್ಮಾಡಿ ಬೊಬ್ಬರ್ಯ ಪಾದೆ ಸಮೀಪದ ಹೊಳೆಯ ಬಲಬದಿಯ ಬಾಪುತೋಟ ಸಸಿತೋಟ ಸಮೀಪ ಮೀನುಗಾರಿಕಾ ಜೆಟ್ಟಿ ನಿರ್ಮಾಣಗೊಂಡಿದ್ದು ಕಾಮಗಾರಿ ಪೂರ್ಣಗೊಂಡಿದೆ. ಸುಮಾರು 2.4 ಕೋ. ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಈ ಜೆಟ್ಟಿ  75ಮೀ. ಉದ್ದ, 8.5 ಮೀ. ಅಗಲವಿದ್ದು 18 ಮೀ. ಆಳದಲ್ಲಿ ಪಿಲ್ಲರ್‌ ನ್ನು ಅಳವಡಿಸಲಾಗಿದೆ. ಇಲ್ಲಿ ಸುಮಾರು 100 ಅಧಿಕ ಬೋಟ್‌ಗಳು ನಿಲ್ಲಲು ಅವಕಾಶವಿದೆ.  ಸುಮಾರು 4 ತಿಂಗಳ ಅವಧಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಂಡು ಮೀನುಗಾರರ ಉಪಯೋಗಕ್ಕೆ ತೆರೆದುಕೊಂಡಿದೆ.

5 ಕಡೆ 12.5 ಕೋ. ರೂ. ವೆಚ್ಚದಲ್ಲಿ ಸಮುದ್ರ ತಡೆಗೋಡೆ
ಮಲ್ಪೆ ಬೀಚ್‌ನಿಂದ  ಕಡೆಕಾರು ಪಡುಕರೆವರೆಗಿನ ಕಡಲತೀರದ 5 ಕಡೆಗಳಲ್ಲಿ ಸುಮಾರು 12.5 ಕೊಟಿ ರೂ. ವೆಚ್ಚದಲ್ಲಿ  ಶಾಶ್ವತ ತಡೆಗೋಡೆ ಸೇರಿದಂತೆ ತುರ್ತು ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಮಲ್ಪೆಯ ಹನುಮಾನ್‌ ವಿಠೊಭಾ ಭಜನಾ ಮಂದಿರದ ಎದುರುಗಡೆ ನಗರೋತ್ಥಾನ ಅನುದಾನದಲ್ಲಿ 3 ಕೋ. ರೂ. ವೆಚ್ಚದಲ್ಲಿ ಸುಮಾರು 
600 ಮೀ., ಶಿವಪಂಚಾಕ್ಷರಿ ಭಜನಾ ಮಂದಿರ ಸಮೀಪ 1.3 ಕೋ. ರೂ. ವೆಚ್ಚದಲ್ಲಿ 120ಮೀ ಮತ್ತು ಬೀಚ್‌ನ ಉತ್ತರ ಭಾಗದಲ್ಲಿ 1.90 ಕೋ. ರೂ. 260 ಮೀ. ಉದ್ದದ  ತಡೆಗೋಡೆಯನ್ನು ನಿರ್ಮಿಸಲಾಗಿದ್ದು ಅದರ ಕಾಮಗಾರಿ ಪೂರ್ಣಗೊಂಡಿದೆ.

ಕಿದಿಯೂರು ಪಡುಕರೆ  ಸಮೀಪ 4.20 ಕೋ. ರೂ. ವೆಚ್ಚದಲ್ಲಿ 500 ಮೀ. ಉದ್ದಕ್ಕೆ ಶಾಶ್ವತ ತಡೆಗೋಡೆ, ಮತ್ತು ಕಡೆಕಾರು ಪಡುಕರೆಯಲ್ಲಿ 1.30 ಕೋ. ರೂ. ನಲ್ಲಿ 300 ಮೀ. ಉದ್ದದ ತುರ್ತು ಸಮುದ್ರಕೊರೆತ ತಡೆ ಸಂರಕ್ಷಣೆ ಕಾಮಗಾರಿ ನಡೆಯಲಿದೆ.

5 ಕೋಟಿ ವೆಚ್ಚದಲ್ಲಿ ಬಂದರಿನ ಮೂಲಸೌಕರ್ಯ
ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಕೆಲವೊಂದು ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸುಮಾರು 5 ಕೋಟಿ ರೂ. ವೆಚ್ಚದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಬೋಟ್‌ಗಳ ನಿಲುಗಡೆಗೆ ಜೆಟ್ಟಿ ವಿಸ್ತರಣೆ ರಸ್ತೆ ನಿರ್ಮಾಣ, ಹರಾಜು ಪ್ರಾಂಗಣ ನವೀಕರಣಗೊಳಿಸಲಾಗುತ್ತದೆ. ಈಗಿರುವ 1 ಮತ್ತು 2ನೇ ಹಂತ ಬಂದರಿನ ಬೇಸಿನ್‌ಗೆ ತಾಗಿ ಕೊಂಡು ಇಲ್ಲಿಯೂ 75 ಮೀ. ಉದ್ದದ ಜೆಟ್ಟಿ, ಮೀನುಗಾರಿಕಾ ಚಟುವಟಿಕೆ ಸುಗಮ ಸಂಚಾರಕ್ಕೆ ಆಂತರಿಕ ರಸ್ತೆಗಳನ್ನು ನಿರ್ಮಿಸಲಾಗುತ್ತದೆ.

ಮಲ್ಪೆ ಬಾಪುತೋಟ ಸಸಿತೋಟದಲ್ಲಿ ಸುರಕ್ಷತಾ  ನಿಲುಗಡೆಗೆ ಅವಶ್ಯವಿರುವ ಸೂಕ್ತ ಮಾದರಿಯ 75ಮೀ ಉದ್ದದ ಆರ್‌ಸಿಸಿ ಫೈಲ್‌ ಜೆಟ್ಟಿಯನ್ನು ನಿರ್ಮಿಸಲಾಗಿದೆ. ಯೋಜನೆಯ ಅವಧಿ 18 ತಿಂಗಳು ಇದ್ದರೂ 4 ತಿಂಗಳಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ. ಶೀರೂರು, ಕೊಡೇರಿ ಬಂದರುಗಳ ಜೆಟ್ಟಿಯನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ಮುಗಿಸಿ ಮೀನುಗಾರರ ಉಪಯೋಗಕ್ಕೆ ನೀಡಲಾಗಿದೆ.
– ಎಸ್‌. ನಾಗರಾಜ್‌, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ, ಬಂದರು ಮತ್ತು ಮೀನುಗಾರಿಕಾ ಉಪ ವಿಭಾಗ ಉಡುಪಿ

ಟಾಪ್ ನ್ಯೂಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ

1-wqe-qweq

Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.