ಧರ್ಮಸಂಸದ್‌: ಇಂದಿನಿಂದ ಭೋಜನ ವ್ಯವಸ್ಥೆ ಆರಂಭ

Team Udayavani, Nov 21, 2017, 8:31 AM IST

21-8.jpg

ಉಡುಪಿ: ಧರ್ಮಸಂಸದ್‌ನಲ್ಲಿ ಭೋಜನ ವ್ಯವಸ್ಥೆಗಾಗಿ ಸರ್ವರೀತಿಯ ಸಿದ್ಧತೆಗಳು ನಡೆಯುತ್ತಿವೆ. ನಗರದ ರೋಯಲ್‌ ಗಾರ್ಡನ್‌ನಲ್ಲಿ ಧರ್ಮಸಂಸದ್‌ ಪ್ರದರ್ಶಿನಿಯ ಎಡಭಾಗದಲ್ಲಿ ಸುಮಾರು 60×200 ಚದರ ಅಡಿಯ ಪಾಕಶಾಲೆ ನಿರ್ಮಾಣಗೊಂಡಿದೆ. ನ. 21ರಂದು ಇದರ ಕೆಲಸ ಪೂರ್ಣಗೊಂಡು ಅನ್ನದಾನ ವ್ಯವಸ್ಥೆ ಪ್ರಾರಂಭವಾಗಲಿದೆ.

ನ. 21ರಂದು ರಾಜ್ಯದ ವಿವಿಧ ಭಾಗಗಳಿಂದ ಒಂದೂವರೆ ಸಾವಿರ ಮಂದಿ ಸ್ವಯಂ ಸೇವಕರು ಆಗಮಿಸಲಿದ್ದಾರೆ.  ನ. 23ರಂದು 3,000-3,500 ಮಂದಿ ಆಗಮಿಸುವ ಸಾಧ್ಯತೆ ಇದೆ. ಅವರೆಲ್ಲರಿಗೂ ಊಟದ ವ್ಯವಸ್ಥೆ ಇದೇ ಭೋಜನ ಶಾಲೆಯಲ್ಲಿ ನಡೆಯಲಿದೆ. ಮೂರೂ ದಿನಗಳಲ್ಲಿ ಸಂತರು, ಅವರ ಶಿಷ್ಯಂದಿರು, ಗಣ್ಯ ವ್ಯಕ್ತಿಗಳು ಸೇರಿ 5,000-7,000 ಜನರಿಗೆ ಹಾಗೂ ಪ್ರದರ್ಶಿನಿ ವೀಕ್ಷಣೆಗೆ ಬರಲಿರುವ ಅಂದಾಜು 10,000 ಮಂದಿಗೆ ಭೋಜನ ತಯಾರಾಗಲಿದೆ.

ಶ್ರೀಕೃಷ್ಣ ಮಠದ ಸಮೀಪದಲ್ಲಿ ಸ್ಥಳಾವಕಾಶದ ಕೊರತೆಯಿಂದಾಗಿ ಪರ್ಯಾಯ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಸೂಚನೆಯಂತೆ ಭೋಜನ ವ್ಯವಸ್ಥೆಯನ್ನು ರೋಯಲ್‌ ಗಾರ್ಡನ್‌ ಸಮೀಪದಲ್ಲೇ ಮಾಡಲಾಗುತ್ತಿದೆ. ಊಟೋಪಚಾರದ ಎಲ್ಲ ಖರ್ಚನ್ನು ಪೇಜಾವರ ಮಠ ವಹಿಸಿಕೊಂಡಿದೆ. ಮಂಜುನಾಥ್‌ ಹೆಬ್ಟಾರ್‌ ಭೋಜನ ವ್ಯವಸ್ಥೆಯ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಆರ್‌ಎಸ್‌ಎಸ್‌ನ ಹಿರಿಯ ಮುಖಂಡ ಟಿ. ಶಂಭು ಶೆಟ್ಟಿ, ಮಾಜಿ ಶಾಸಕ ಕೆ. ರಘುಪತಿ ಭಟ್‌, ಕಡಿಯಾಳಿ ಗಣೇಶೋತ್ಸವ ಸಮಿತಿಯ ಕಾರ್ಯದರ್ಶಿ ರಾಘವೇಂದ್ರ ಕಿಣಿ ಸಮಿತಿಯಲ್ಲಿದ್ದಾರೆ. ಪ್ರತಿದಿನ ಬೆಳಗ್ಗೆ, ಮಧ್ಯಾಹ್ನ, ಸಂಜೆ ಹಾಗೂ ರಾತ್ರಿ ಹೀಗೆ ನಾಲ್ಕು ಬಾರಿ ಊಟೋಪಚಾರದ ವ್ಯವಸ್ಥೆ ಇದೆ.

ಧರ್ಮಸಂಸದ್‌: ಉಗ್ರಾಣ ಮುಹೂರ್ತ 
ಉಡುಪಿ: ಧರ್ಮಸಂಸದ್‌ನ ಉಗ್ರಾಣ ಮುಹೂರ್ತ ಸೋಮವಾರ ರೋಯಲ್‌ ಗಾರ್ಡನ್‌ನಲ್ಲಿ ನಿರ್ಮಾಣ ಗೊಳ್ಳುತ್ತಿರುವ ಭೋಜನಶಾಲೆಯಲ್ಲಿ ನಡೆಯಿತು. ಪೇಜಾವರ ಮಠದ ದಿವಾನರಾದ ರಘುರಾಮಾಚಾರ್ಯ ಉಗ್ರಾಣ ಮುಹೂರ್ತ ನೆರವೇರಿಸಿದರು.

ವಿಹಿಂಪ ಕ್ಷೇತ್ರಿಯ ಸಂಘಟನ ಕಾರ್ಯದರ್ಶಿ ಗೋಪಾಲ್‌ ಜಿ., ವಿಹಿಂಪ ಪ್ರಾಂತ ಅಧ್ಯಕ್ಷ ಪ್ರೊ| ಎಂ.ಬಿ. ಪುರಾಣಿಕ್‌, ವಿಷ್ಣುಮೂರ್ತಿ ಆಚಾರ್ಯ, ಆರ್‌ಎಸ್‌ಎಸ್‌ನ ಹಿರಿಯ ಮುಖಂಡ ಟಿ. ಶಂಭು ಶೆಟ್ಟಿ, ಮಾಜಿ ಶಾಸಕ ಕೆ. ರಘುಪತಿ ಭಟ್‌, ಸೋಮಶೇಖರ್‌ ಭಟ್‌, ಪ್ರದೀಪ್‌ ಕುಮಾರ್‌ ಕಲ್ಕೂರ, ಮನೋಹರ್‌ ತುಳಜಾರಾಮ್‌, ಡಾ| ತನ್ಮಯ  ಗೋಸ್ವಾಮಿ, ಮಂಜುನಾಥ ಹೆಬ್ಟಾರ್‌, ಸುನೀಲ್‌ ಕೆ.ಆರ್‌., ರಾಘವೇಂದ್ರ ಕಿಣಿ, ಭಾಗ್ಯಶ್ರೀ ಐತಾಳ ಉಪಸ್ಥಿತರಿದ್ದರು.

ಏನೇನು ಖಾದ್ಯಗಳು…
ಪ್ರತಿದಿನವೂ ವಿವಿಧ ಬಗೆಯ ಖಾದ್ಯಗಳು ಈ ಪಾಕಶಾಲೆಯಲ್ಲಿ   ತಯಾರಾಗಲಿವೆ. ಉತ್ತರ ಭಾರತದ ಅನೇಕ ಸಾಧು ಸಂತರು ಆಗಮಿಸುವರಾದ್ದರಿಂದ ಉತ್ತರ ಹಾಗೂ ದಕ್ಷಿಣ ಭಾರತದ ಖಾದ್ಯಗಳೂ ಇರುತ್ತವೆ. ಬೆಳಗ್ಗಿನ ಉಪಾಹಾರಕ್ಕೆ ಇಡ್ಲಿ, ದೋಸೆ, ಶೀರಾ, ವಡೆ ಚಟ್ನಿ, ದೋಸೆ, ಉಪ್ಪಿಟ್ಟು, ಕಾರ್ಕಳ ಕೇಕ್‌ ಹಾಗೂ ಮಧ್ಯಾಹ್ನದ ಭೋಜನಕ್ಕೆ ಉಪ್ಪಿನಕಾಯಿ, ರೋಟಿ, ದಾಲ್‌, ಮಿಕ್ಸಿಂಗ್‌ ವೆಜ್‌ ಕರಿ, ಚಪಾತಿ, ಸಬ್ಜಿ, ಕೂರ್ಮ, 2 ಬಗೆಯ ಸ್ವೀಟ್ಸ್‌, ಪಾಯಸ, ಮೊಸರು, ಮಜ್ಜಿಗೆ ಇರಲಿದೆ.

ನ. 26: ಅಲ್ಲಲ್ಲಿ ಊಟದ ವ್ಯವಸ್ಥೆ
ಧರ್ಮಸಂಸದ್‌ನ ಕೊನೆಯ ದಿನ ನ. 26ರಂದು ಎಂಜಿಎಂ ಮೈದಾನದಲ್ಲಿ ನಡೆಯಲಿರುವ ಬೃಹತ್‌ ಹಿಂದೂ ಸಮಾಜೋತ್ಸವಕ್ಕೆ ಮೂರು ಕಡೆಗಳಲ್ಲಿ ಭೋಜನ ವ್ಯವಸ್ಥೆ ಮಾಡಲಾಗಿದೆ. ಕುಂದಾಪುರ, ಬೈಂದೂರು ಮೊದಲಾದ ಭಾಗಗಳಿಂದ ಬರುವವರಿಗೆ ಅಂಬಾಗಿಲು ಎಲ್‌ವಿಟಿ ಮುಂಭಾಗದಲ್ಲಿ, ಕಾರ್ಕಳ, ಬೆಳ್ತಂಗಡಿ, ಮೂಡಬಿದಿರೆ ಕಡೆಯಿಂದ ಬರುವವರಿಗೆ ಹಿರಿಯಡಕದಲ್ಲಿ ಹಾಗೂ ಮಂಗಳೂರು ಭಾಗದಿಂದ ಆಗಮಿಸುವವರಿಗೆ ಉದ್ಯಾವರದಲ್ಲಿ ಭೋಜನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಟಾಪ್ ನ್ಯೂಸ್

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

1-weweqwe

Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Brahmavar

Padubidri: ಅಪಘಾತದ ಗಾಯಾಳು ಸಾವು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.