Coconut ದರ ಕುಸಿತ: ಬೆಳೆಗಾರರು ಕಂಗಾಲು

Team Udayavani, Jun 19, 2023, 7:53 AM IST

coconut ದರ ಕುಸಿತ: ಬೆಳೆಗಾರರು ಕಂಗಾಲುcoconut ದರ ಕುಸಿತ: ಬೆಳೆಗಾರರು ಕಂಗಾಲು

ಉಡುಪಿ: ಉಭಯ ಜಿಲ್ಲೆಗಳಲ್ಲಿ ಮುಂಗಾರು ಅಲ್ಪ ಪ್ರಮಾಣದಲ್ಲಿ ಆರಂಭವಾಗಿದೆ. ಮಳೆಗಾಲ ಆರಂಭಕ್ಕೂ ಮೊದಲೇ ಬೆಳೆಗಾರರು ತೆಂಗಿನ ಕಾಯಿ ಕೊಯ್ಲು ಮಾಡುವುದು ರೂಢಿ. ಆದರೆ ಈ ಬಾರಿ ಕೊçಲು ಮುಗಿಸಿದ ಬೆಳೆಗಾರರಿಗೆ ಬೆಲೆ ಕುಸಿತ ಆತಂಕ ಸೃಷ್ಟಿಸಿದೆ.

2022ರ ಎಪ್ರಿಲ್‌ನಲ್ಲಿ ಸಿಪ್ಪೆ ಸಹಿತವಾದ ತೆಂಗಿನ ಕಾಯಿ ಒಂದಕ್ಕೆ ಬೆಳೆಗಾರರಿಂದ 14ರಿಂದ 16 ರೂ. ನೀಡಿ ವ್ಯಾಪಾರಿಗಳು ಖರೀದಿಸಿದ್ದರು. 2023ರ ಮೇ- ಜೂನ್‌ ತಿಂಗಳಲ್ಲಿ ತೆಂಗಿನ ಕಾಯಿ ಬೆಲೆ ಸಾರ್ವ ತ್ರಿಕ ಕುಸಿತ ಎಂಬಂತಾಗಿದೆ. ಸದ್ಯ ಸಿಪ್ಪೆ ಸಹಿತವಾದ ಒಂದು ಕಾಯಿಗೆ 8ರಿಂದ 9 ರೂ. ನೀಡಿ ಕೊಂಡೊಯ್ಯುತ್ತಿದ್ದಾರೆ. ಸಿಪ್ಪೆ ತೆಗೆದ ಕಾಯಿಗೆ (ಕಾಯಿಯ ಗಾತ್ರದ ಆಧಾರ ದಲ್ಲಿ) 12ರಿಂದ 14 ರೂ. ಇದೆ.

ಬಹುಪಾಲು ಬೆಳೆಗಾರರಲ್ಲಿ ತೆಂಗಿನ ಕಾಯಿ ಗಳನ್ನು ಶೇಖರಿಸಿಟ್ಟುಕೊಳ್ಳಲು ಸೂಕ್ತ ವ್ಯವಸ್ಥೆ ಇಲ್ಲ ದ್ದರಿಂದ ಅನಿವಾರ್ಯವಾಗಿ ಕನಿಷ್ಠ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಆದರೆ ಮಾರುಕಟ್ಟೆ ಯಲ್ಲಿ ಗ್ರಾಹಕರು ಖರೀದಿಸುವ ಅದೇ ತೆಂಗಿನ ಕಾಯಿಯ ಬೆಲೆ ಮಾತ್ರ ಕಡಿಮೆಯಾಗಿಲ್ಲ. ಒಂದು ಕೆ.ಜಿ. ಸಿಪ್ಪೆ ತೆಗೆದಿರುವ ತೆಂಗಿನಕಾಯಿಗೆ ಗಾತ್ರದ ಆಧಾರದಲ್ಲಿ 28 ರೂ.ಗಳಿಂದ 35 ರೂ.ಗಳ ವರೆಗೂ ಇದೆ.

ಉಡುಪಿ ಮತ್ತು ದ.ಕ. ಜಿಲ್ಲೆಯಲ್ಲಿ ತೆಂಗಿನ ಕಾಯಿಯನ್ನು ಸಣ್ಣ ಪ್ರಮಾಣದ ಆದಾಯದ ಮೂಲವಾಗಿ ಬೆಳೆಯುವವರೇ ಹೆಚ್ಚು. ವರ್ಷದಲ್ಲಿ ಮೂರರಿಂದ ನಾಲ್ಕು ಕೊçಲು ಮಾಡು ತ್ತಾರೆ. ಮುಂದಿನ ಮೂರ್‍ನಾಲ್ಕು ತಿಂಗಳು ಕೊಯ್ಯು ವವರು ಸಿಗುವುದಿಲ್ಲ ಮತ್ತು ಎಳ ನೀರಿಗೂ ಬೇಡಿಕೆ ಕಡಿಮೆ ಎಂಬ ಕಾರಣಕ್ಕೆ ಮಳೆಗಾಲ ಆರಂಭಕ್ಕೂ ಮುನ್ನ ದೊಡ್ಡ ಮಟ್ಟದ ಕೊçಲು ಸಾಮಾನ್ಯ.

ಖರ್ಚು ಹೆಚ್ಚಿದೆ
ತೆಂಗಿನ ಕೊಯ್ಲು ಸದ್ಯ ದುಬಾರಿಯಾಗಿದೆ. ಒಂದು ಮರ ಏರಲು ವಿಭಿನ್ನ ದರ ಇದೆ. ತೀರಾ ಗ್ರಾಮೀಣ ಭಾಗದಲ್ಲಿ ಒಂದು ಮರಕ್ಕೆ 40ರಿಂದ 50 ರೂ. ಇದ್ದರೆ ನಗರ ಪ್ರದೇಶಕ್ಕೆ ಹೊಂದಿಕೊಂಡಿರುವ ಗ್ರಾ.ಪಂ. ವ್ಯಾಪ್ತಿಯಲ್ಲಿ 60ರಿಂದ 80 ರೂ. ಇದೆ. ಆದ್ದರಿಂದ ಕೊçಲಿಗೆ ಆಗುವ ಖರ್ಚು ಕೆಲವೊಮ್ಮೆ ತೆಂಗಿನ ಕಾಯಿ ಮಾರಾಟದಿಂದ ಬರುವುದಿಲ್ಲ. ಮಳೆಗಾಲ ಹೊರತು ಬೇರೆ ತಿಂಗಳಲ್ಲಿ ದಿನಬಿಟ್ಟು ದಿನ ಅಥವಾ ಮೂರು ದಿನಕ್ಕೆ ಒಮ್ಮೆಯಾದರೂ ಮರಕ್ಕೆ ನೀರು ಹಾಯಿಸಬೇಕು. ಕಟ್ಟೆ ಕಟ್ಟಿ ಗೊಬ್ಬರ ಹಾಕಬೇಕು. ಸಾಕಷ್ಟು ವೆಚ್ಚ ಮಾಡಬೇಕಾಗುತ್ತದೆ. ಆದರೆ ಕೊçಲು ಆದಾಗ ಮಾತ್ರ ದರ ಇರುವುದಿಲ್ಲ ಎಂದು ಬೆಳೆಗಾರರು ಬೇಸರ ವ್ಯಕ್ತಪಡಿಸುತ್ತಾರೆ.

ಸರಕಾರದ ಸ್ಪಂದನೆ ಅಗತ್ಯ
ಶುದ್ಧ ತೆಂಗಿನ ಎಣ್ಣೆ (ಗಾಣದಿಂದ ಮಾಡಿದ ಎಣ್ಣೆ) ಒಂದು ಲೀಟರ್‌ಗೆ ವಿವಿಧ ದರವಿದೆ. ಕನಿಷ್ಠ 280, 300ರಿಂದ 350 ರೂ.ಗಳ ವರೆಗೂ ಇವೆ. ಸಾಮಾನ್ಯ ತೆಂಗಿನ ಎಣ್ಣೆ 180ರಿಂದ 210 ರೂ. ವರೆಗೂ ಇದೆ. ತೆಂಗಿನ ಕಾಯಿಗೆ ದರ ಕಡಿಮೆ ಯಾದರೂ ಎಣ್ಣೆಯ ಬೆಲೆ ಮಾತ್ರ ಕಡಿಮೆಯಾಗಿಲ್ಲ. ಬೆಳಗಾರರಿಂದ ಕನಿಷ್ಠ ಬೆಲೆ ನೀಡಿ ಕಾಯಿ ಕೊಂಡೊಯ್ದರೂ ಎಣ್ಣೆ ಬೆಲೆ ಕಡಿಮೆ ಮಾಡುವುದಿಲ್ಲ. ಅಲ್ಲದೆ ಮಾರುಕಟ್ಟೆಯಲ್ಲೂ ಕಾಯಿ ದರ ಕಡಿಮೆಯಾಗುವುದಿಲ್ಲ. ಮಳೆಗಾಲದಲ್ಲಿ ಕೊಬ್ಬರಿ ಮಾರಾಟ ಕಷ್ಟ. ಸರಕಾರ ತೆಂಗು ಬೆಳೆಗಾರರ ಕಷ್ಟಕ್ಕೆ ಸ್ಪಂದಿಸಬೇಕು ಮತ್ತು ಕಾಯಿಯನ್ನು ಕನಿಷ್ಠ ಬೆಂಬಲ ಬೆಲೆಯಡಿಗೆ ತರಬೇಕು ಎಂಬುದು ಬೆಳೆಗಾರರ ಆಗ್ರಹವಾಗಿದೆ.

– ರಾಜು ಖಾರ್ವಿ ಕೊಡೇರಿ

ಟಾಪ್ ನ್ಯೂಸ್

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Brahmavar

Padubidri: ಅಪಘಾತದ ಗಾಯಾಳು ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.